ಒಟ್ಟು 7 ಕಡೆಗಳಲ್ಲಿ , 4 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶ್ರೀ ಜಯತೀರ್ಥರು) ಜಯತೀರ್ಥರೇ ನಮ್ಮ ಸುಮತೋದ್ಧಾರಕರು ಮಳಖೇಡ ನಿಲಯರು ಪ ಪೂರ್ಣಪ್ರಜ್ಞರಲಿ ಪಶುರೂಪ ತಾಳಿ ಭಾಷ್ಯಗಳ ಪೇಳಿ ಜೀರ್ಣಮಲಿನ ಮೂಢಮತಗಳಿಗೆ ದಾಳಿ ಈ ಗ್ರಂಥಗಳ್ಹೇಳಿ ಪೂರ್ಣಬೋಧ ಗುರುಮತವಾರ್ವವ ಪೇಳಿ ಸುಜ್ಞರಾದರು ಮುದ ತಾಳಿ 1 ಇದೇ ದೇಶಪಾಂಡೆರೊಳುದ್ಭವಿಸೆ ನರಜನ್ಮ ವಹಿಸಿ ಪದಪಿನಿಂದ ಗೃಹಸ್ಥಾಶ್ರಮವನುಸರಿಸಿ ಸಂಸಾರದಿ ಬೆರಸಿ ಕುದರಿ ಏರಿ ಪೊಳೆ ನೀರಿಗೆ ಬಾಯಿ ಸರಿಸಿ ಬಹು ನೀರಡಿಸಿ ಸದಮಲಕ್ಷೋಭ್ಯರು ಪಶುವೆಂದುಚ್ಚರಿಸಿ ಪೂರ್ವ ಜನ್ಮ ಸ್ಮರಿಸಿ 2 ಕ್ಷಿಪ್ರದಿ ಯತ್ಯಾಶ್ರಮವೆ ತಾಳಿದರು ಟೀಕವ ಕೈಗೊಂಡರು ಸುಪ್ರಸಿದ್ಧ ಹರಿಮತವನುದ್ಧರಿಸಿದರು ವ್ರತಗಳ ಪೇಳಿದರು ವಿಪ್ರವರ್ಗಕೆ ಹರಿಮಾರ್ಗವ ತೋರಿದರು ಹರಿಮತ ತತ್ವಜ್ಞರು ಸುಪ್ರಸಿದ್ಧ ನರಸಿಂಹವಿಠಲತರು ಶತಪತ್ರ ಶೇಷಾಲಂಕೃತರು 3
--------------
ನರಸಿಂಹವಿಠಲರು
ಕಾಯೊ ಕಾಯೊ ಜಿತಕಾಯ ಗುರು ಬಾದ ರಾಯಣ ತತ್ವಜ್ಞರಾಯ ಪ ನಾ ಯಾರಿಗೆ ಬಿನ್ನೈಪೆ | ಹೇಯಸಂಸಾರದ ಎರಡೊಂದು ಮಠದಲಿ ಧರಿಸಿ ತೂರ್ಯಾಶ್ರಮ ಸಿರಿಯರಸನ ದಿವ್ಯ ಮೂರ್ತಿಗಳ ಕರದಿಂದ ಪೂಜಿಸಿ | ಮರುತ ದೇವನ ಮತ ಪರಮಾನಂದವೆಂದು ಧರೆಗೆ ಬೀರಿದ ಕರುಣಿ 1 ಜ್ಷಾನಿಗಳರಹುವ | ವಾಣಿಯಿಂದಲಿ ದೇ ಮೌನಿವರಿಯ ಎನ್ನ | ಹೀನಪಾತಕವೆಂಬ ಕಾನನ ದಹಿಸೆಂದು | ಸಾನುರಾಗದಿ ನೋಡಿ 2 ಭೂಸುರ ಪರಿಪಾಲ | ಶ್ರೀ ಶಾಮಸುಂದರನ ಲೇಸಾಗಿ ಒಲಿಸುತಲಿ ಕಿಟಜದಲಿ ಭಾಸುರ ಘನವೇಣಿ | ಭೇಶಪುರದಿ ನೆಲಸಿ ದಾಸರ ಮನದಭಿಲಾಷೆ ನೀಡುವ ದಾನಿ 3
--------------
ಶಾಮಸುಂದರ ವಿಠಲ
ತೆರಳಿದರು ವ್ಯಾಸತತ್ವಜ್ಞರಿಂದು ಪುರುಷೋತ್ತಮನ ಗುಣಗಳರುಪಿ ಸುಜನರಿಗೆ ಪ ವರ ರೌದ್ರಿನಾಮ ಸಂವತ್ಸರದ ಶ್ರಾವಣ ಪರಪಕ್ಷ ಅಷ್ಟಮಿ ಭಾನುವಾರ ಭರಣಿ ನಕ್ಷತ್ರ ಪ್ರಾತಃಕಾಲದಲಿ ಸೋಮ ಪಾದ ಸನ್ನಿಧಿಗೆ 1 ಭಾಗವತ ಮೊದ ಲಾದ ಶಾಸ್ತ್ರಗಳ ಕೀರ್ತನೆಗೈಯುತಾ ಪಾದೋದಕವ ಶಿರದಿ ಧರಿಸುತಿಪ್ಪ ವರಘತಿ ರೋಧಾನಗೈಸಿ ಪರಗತಿ ಮಾರ್ಗವನು ತೋರಿ 2 ಸೋಜಿಗವಿದಲ್ಲ ಸಜ್ಜನರನುದ್ಧರಿಸುವುದು ನೈಜ ಜಗನ್ನಾಥ ವಿಠ್ಠಲನ ಪಾದ ರಾಜೀವಯುಗಳ ನಿವ್ರ್ಯಾಜದಲಿ ಭಜಿಪ ಪ್ರ ಯೋಜನನೊರೆದಿತರ ವ್ಯಾಪಾರ ತೊರೆದು 3
--------------
ಜಗನ್ನಾಥದಾಸರು
ನಿತ್ಯ ವ್ಯಾಸತತ್ವಜ್ಞರಂಘ್ರಿ ಭಜಿಸೊ | ಕೃತ ಕೃತ್ಯನೆಂದೆನಿಸೊ | ಮಾನವ ಜನ್ಮ ಸಾರ್ಥಕೆನಿಸೊ | ಪುರುಷಾರ್ಥವಗಳಿಸೊ ಪ ಮೂರುವತಾರನ ಮತದೊಳು ಜನಿಸಿದರು ಮೂರನು ತ್ಯಜಿಸಿದರು ಮೂರು ಹತ್ತರಿಗೆ ಮುಖವಾಗಿರುತಿಹರು ಇವರಿಗೆ ಸಮರ್ಯಾರೊ 1 ಮಾನವ ಸ್ಮøತಿ ಮೊದಲಾದ ಗ್ರಂಥಗೈದ ದ್ವಿಜರಿಗೆ ಬೋಧಿಸಿದ || ಸಾನುರಾಗದಲಿ ಜ್ಞಾನಾಮೃತವೆರೆದ ದಶದಿಕ್ಕಿಲಿ ಮೆರೆದ | ಏನು ಪೇಳಲಿ | ಇವರ ದಿವ್ಯಪಾದ | ಮೋದ 2 ಶಾಮಸುಂದರನ ಕವನದಿ ಕೊಂಡಾಡಿ ಬಹಿರಂತರ ನೋಡಿ || ಸೋಮಪುರದಿ ದ್ವಿಜ ಸ್ತೋಮದಿಂದ ಕೂಡಿ ಇರುವರು ಮನೆ ಮಾಡಿ ಈ ಮಹಾತ್ಮರನು ನರನೆಂದವ ಖೋಡಿ ಸಂದೇಹ ಬ್ಯಾಡಿ3
--------------
ಶಾಮಸುಂದರ ವಿಠಲ
ಪಾಂಡುನಂದನರಂತೆ ತೋರುತಿಹರು ಪಂಡಿತೋತ್ತುಮ ಸತ್ಯಧ್ಯಾನ ತೀರ್ಥರು ಪ ನಿಜಜ್ಞಾನ ಚಿಹ್ನದಿ ವಿಜಯಾದಿ ಸುದ್ಣುಣದಿ ಸುಜನ ಗಣದಿ | ವೃಜಿನ ವರ್ಜಿತರಾಗಿ ಗಜವರದನಂಘ್ರಿಯುಗ ಭಜನ ತತ್ಪರರಾಗಿ 1 ಧರಮ ಬಲ್ಲವರಾಗಿ ಗುರುಭಕ್ತಿ ಯುತರಾಗಿ ವರ ಸುಗೀತಾರ್ಥ ತತ್ವಜ್ಞರಾಗಿ ಧರಣಿ ಮೇಲುಳ್ಳ ಸುಕ್ಷೇತ್ರ ತತ್ತೀರ್ಥ ಚರಿಸುತಲಿ ಕರಿತುರಗ ಪರಿಪಾಲಿಸುವರಾಗಿ 2 ಋಷಿ ವ್ಯಾಸರುಕ್ತಿಯಲಿ ನಿಶೆಹಗಲು ಮನವಿರಿಸಿ ವಸುಧಿ ಸುರರಿಗೆ ಸನ್ಮೋದಗೊಳಿಸಿ ವಸುದೇವಸುತ ಶಾಮಸುಂದರನ ವಶಗೊಳಿಸಿ ದಶ ದಿಶದಿ ಜಯಭೇರಿ ಅಸಮರೆಂಡೊಡೆಸುತಲಿ 3
--------------
ಶಾಮಸುಂದರ ವಿಠಲ
ವ್ಯಾಸ ತತ್ವಜ್ಞರ ಚರಿಯಾ ಮನಕಾಶ್ಚರಿಯಾ ಪರಮಹಂಸ ಕುಲಜ ಭುವನೇಂಧ್ರರ ತನಯಾ ಪ ಶೇಷಗಿರೀಶ್ವರ ಕೃಪಯಾ ಐಜಿ ವ್ಯಾಸವೆಂಕಟ ನರ- ಸಿಂಹಾಭಿಧೇಯ ಭೂಸುರೋತ್ತಮರಿಗೆ ತನಯಾ ನೆನಿಸಿ ಭಾಸುರ ಕೀರ್ತಿಯ ಪಡೆದ ರಾಮಾರ್ಯ 1 ವೇಣಿ ಸೋಮಪುರ ನಿಲಯ ಪಾಹಿ ಆನತ ಜನಸುರಧೇನೋ ಮಾಂಕೃಪಯಾ ವೇಣು ಗೋಪಾಲನ ಪ್ರೀಯ ಎಂದು ಸೂರ್ಯ 2 ಕೇಳಿವರ ಮಹಿಮೆ ಅಪಾರ ಗದ್ ವಾಲ ಭೂಪಗೆ ಬಂದ ಭಯ ಪರಿಹಾರ ಪೇಳಲು ಶ್ಲೋಕಾರ್ಥಸಾರ ಕೃಷ್ಣಾ ಮೇಲೆ ಪ್ರವಹಿಸಲು ಓಡಿತು ಶತೃನಿಕರ 3 ಭೃಂಗ ತನ್ನ ನೇಮದಿಂದಲಿ ಶೇವಿಪರ ಭವಭಂಗ ಪರ ಬ್ರಹ್ಮ ನಾನೆಂಬೊ ದುರ್ಮತ ಗಜಸಿಂಗ4 ನಂದ ನಂದನ ಗುಣಸ್ತವನ ಮಾಳ್ಪ ನಂದ ತೀರ್ಥರ ಮತಾಂಬುದಿ ಶೀತ ಕಿರಣ ಒಂದಾರು ಜನರೊಳು ಕರುಣ ಕೃತ ಮಂದ ನಂದಿನಿ ವ್ಯಜನಾದಿ ವ್ಯಾಖ್ಯಾನ 5 ಘನ್ನ ಮಹಿಮ ಜಿತಕಾಮಾ ಅ- ರಣ್ಯ ಕಾಚಾರ್ಯ ಸೇವಿತ ಪದ ಪದುಮ ಶುಭ ಗುಣಸ್ತೋಮ ಮನವೇ ಬಣ್ಣಿಸಲೊಶವೆ ಪಂಚಾಮೃತ ಮಹಿಮಾ 6 ವಾಸುದೇವನ ಗುಣತತಿಯ ಪೇಳಿ ದಾಸ ಜನರಿಗೆ ಪಾಲಿಸಿದಿ ಸನ್ಮತಿಯಾ ಭಾಸುರ ಕುಸುಮೂರ್ತಿರಾಯ ನೆನಿಸಿ'ಶ್ರೀಶಕಾರ್ಪರ ನರಹರಿ’ ಗತಿ ಪ್ರೀಯ 7
--------------
ಕಾರ್ಪರ ನರಹರಿದಾಸರು
ಸುಕೃತ ಫಲಿಸಿತೆನಗೆ ಕೋವಿದಾಗ್ರಣಿ ವ್ಯಾಸತತ್ವಜ್ಞರ ಕಂಡೆ ಪ ಜೀವ ಸಾಮಾನ್ಯವೆಂದರಿಯದಿಲಿ ಶಾಸ್ತ್ರಗಳ ನಾವಲೋಕನದಿ ಪೇಳ್ವರು ನಿತ್ಯದಿ ದೇವಾಂಶರಿವರು ಸಂಶಯವು ಬಡಸಲ್ಲ ಮಾ ಯಾ ವಲ್ಲಭನು ಇವರ ಹೃದಯದೊಳಗಿರುತಿಪ್ಪ 1 ಕವಿ ಭರಿಡಿತ ಮಹಾಮುನಿ ವ್ಯಾಸಕೃತ ಸುಭಾ ಗವತಾದಿ ಗ್ರಂಥ ವ್ಯಾಖ್ಯಾನ ನೋಡಿ ಭುವನೇಂದ್ರರಾಯರ ಕರುಣದಲಿ ತುರೀಯಾ ಶ್ರ ಮನವಿತ್ತು ವ್ಯಾಸತತ್ವಜ್ಞ ರಹುದೆಂದು 2 ಈ ಜಗತ್ರಯ ದೊಳಗೆ ಪೂಜ್ಯ ಪೂಜಕರ ನಿ ವ್ರ್ಯಾಜದಲಿ ತಳುಪಿದನು ಭಕ್ತಜನಕೆ ಶ್ರೀ ಜಗನ್ನಾಥ ವಿಠಲನೊಬ್ಬ ಪೂಜ್ಯ ಪಂ ಭವ ಭವರು ಪೂಜಕರೆಂಬುವರ ನೋಡ್ಡೆ 3
--------------
ಜಗನ್ನಾಥದಾಸರು