ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಗಾಭೋಗ ಐದೊಂದು ಅರಿಯ ಬಿಡಿಸೊ ಐದೆರೆಡು ಹೊದಿಕೆ ಹರಿಸೊ ಐದು ಮೂರು ಕಡಿಸೊ ಐದು ನಾಲ್ಕು ಕೊಡಿಸೊ ಐದು ಐದು ಒಂದು ನಿನ್ನ ಪಾದದೊಳಿಡಿಸೊ ಐದರಿಂದಾದ ದೇಹ ಎನ್ನದಲ್ಲವೆನಿಸೊ ಐದು ಐದು ಅಧಿಪತಿಗಳ ಎನಗೊಲಿಸೊ ಐದೊಂದು ವನಜಗಳ ತತ್ವಗಳನೆ ತಿಳಿಸೊ ಐದು ಮೂರುದಳ ಪದ್ಮದಿ ಕಾಣಿಸೊ ಐದೇಳು ದಳ ಪದ್ಮ ಹಾದಿಯ ತೋರಿಸೊ ಐದು ಜನರ ಕಾಯ್ದ ಗೋಪಾಲಕೃಷ್ಣವಿಠ್ಠಲ ಪಾದ ಧ್ಯಾನದಿ ನಿರುತಾ
--------------
ಅಂಬಾಬಾಯಿ
ಹನುಮನ ಮನೆಯವರು ನಾವೆಲ್ಲರು ಹನುಮನ ಮನೆಯವರು ಪ ಅನುಮಾನಪಡದೆಲೆ ಸ್ಥಳವ ಕೊಡಿರಿ ಎಮಗೆ ಅ.ಪ ಊಧ್ರ್ವ ಪುಂಡ್ರವ ನೋಡಿ ಶ್ರದ್ಧೆ ಭಕುತಿ ನೋಡಿ ಹೃದ್ಗತವಾದೆಮ್ಮ ತತ್ವಗಳನೆ ನೋಡಿ ಇದ್ದುದನಿಲ್ಲೆಂಬ ಅಬದ್ಧ ನುಡಿವರಲ್ಲಾ ಮಧ್ವಮುನಿಯು ನಮ್ಮ ತಿದ್ದಿರುವುದ ನೋಡಿ 1 ಸತ್ಯ ಮಿಥ್ಯಗಳಿಗೆ ಅಂತರ ಬಲ್ಲೆವು ಉತ್ತಮ ನೀಚರೆಂಬುವ ಭೇದ ಬಲ್ಲೆವು ಸುತ್ತಲು ಕಂಡು ಕಾಣದೆ ಇಹ ಎಲ್ಲಕೂ ಉತ್ತಮನೊಬ್ಬನೇ ಹರಿಯೆಂದು ಬಲ್ಲೆವು 2 ಹಲವು ಲೋಕಗಳುಂಟೆಂಬುದ ಬಲ್ಲೆವು ಹಲವು ಯೋನಿಗಳಲ್ಲಿ ಜನ್ಮಗಳೊಲ್ಲೆವು ಅಲವಭೋಧರು ನಮ್ಮ ಕಳುಹಿದರಿಲ್ಲಿಗೆ ತಿಳಿಸಿ ಪ್ರಸನ್ನ ಶ್ರೀ ಹರಿಗೆ ವಿಚಾರವ 3
--------------
ವಿದ್ಯಾಪ್ರಸನ್ನತೀರ್ಥರು