ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಶ್ರೀ ಲಕ್ಷ್ಮೀಸ್ತುತಿಗಳು ಅಂಗನೆ ನಿನ್ನ ಮುಖದಿರುವಿಂತು ನೆರೆ ದಿಂಗಳ ಸೋಲಿಸುವಂತೆ ತೋರುತಿದೆ ಪ ಮಿಸುಪ ಕೆಂಪಿನೊಳಸಿತಗಳೇನೇ ಯೀ ಎಸೆವಚ್ಚಬಿಳಿದರೊಳು ರಾಗವೇಕೇ ಮಿಸುನಿವೋಲೆಯ ಮೇಲೆ ಮುಸುಳಿತೇ ಯೀಗ ಪೊಸತಾವರೆಯ ಮೇಲೆ ಮಳೆ ಸೂಸಿತೇ 1 ಅಂಬರ ಅಳಿದಿಹುದೇನೆ ಮರಿ ದುಂಬಿಯ ಹಂಬಲು ಪೊಸತಾಗಿದೆ ತಂಬೆಲರಳತೆಗೆ ಪೇರ್ಚಿದೆಯೇನು ಪೊಂಬಟ್ಟೆ ಸೋಂಕಲು ಮುನ್ನ ಕಿರಿದಾದುದೇ 2 ಬಾಲೆ ನೀಕರೆಯ ಹೋಗಿ ನೆರದೆಯೇ ಈಗ ಮೂಲೋಕ ಮೋಹನ ಸುರಪುರವ ಪಾಲಿಸುವ ಮಹಾಲಕ್ಷ್ಮೀಪತಿ ಬಂದು ಯೆನ್ನ ಮೇಲಿಕ್ಕಿ ನೆರದುದಾ ಯೇನೆಂಬೆನೇ 3
--------------
ಕವಿ ಲಕ್ಷ್ಮೀಶ
ಕೇಳಿದೆ ಏನೇ ಕೊಳಲ ದನಿಯ ಬಾಳಿಗೆ ಅಮೃತವ ಬೀರುವ ಸವಿಯ ಪ ಬೃಂದಾವನದಲಿ ನಂದಯಶೋದ ಕಂದನು ಮುರಳಿಯನೂದುತಿರೆ ಸುಂದರಿಯರು ಆನಂದದಿ ನರ್ತಿಸಿ ಇಂದಿರೆಯರಸನ ಹೊಗಳುವರು 1 ಕಿರುಗೆಜ್ಜೆಯ ದನಿ ಕಿಣಿಕಿಣಿಸುತಿರೆ ಕರದ ಕಂಕಣಬಳೆ ಗಣಗಣರೆನಲು ಚರಣದ ಕಡಗ ಝಣ್ ಝಣಿ ಝಣಿರೆನುತಿರೆ ಪರಮ ಸಂತೋಷದಲಿ ಹರಿಯರುಳುತಿರೆ 2 ಮರುಗ ಮಲ್ಲಿಗೆ ಪಾದರಿ ಸುಮ ಪರಿಮಳ ಭರಿತ ತಂಬೆಲರು ಪರಿಚರಿಸುತಿರೆ ಪರಮಾನಂದವೆ ಪುರುಷನಾಗಿರುವ ಮಾಂ ಗಿರಿಪತಿಯೊಲವನು ಪಡೆಯುವ ಗೆಳತಿ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೆರೆ ಪ್ರಚಂಡ ಬರತಕದ ನಿರಗೊಡದ ಮನ್ಮಥನ ಪರಿಯನೆಲ್ಲ ಕೇಳು ಕೆಳದಿ ಸುರಪುರದ ಕರಿವರದ ಗರುಹಿದಡೆ ಮುತ್ತಿನ ಸರದ ಹಾರವ ನೀವೆ ಕೆಳದೀ ಪ ಸಸಿ ಬಿಂಬ ದೆಸೆ ತುಂಬಿ ಪಸರಿಸಿತೆಂಬುದನು ಪಿಕ ಕುಸುಮಾಂಬರಗೆ ಪೇಳೆ ಕೆಳದೀ ಮಸರೆಳೆಯದಸು ಬಿಳಿ ಯೆಸಳು ಕೇದಗೆಯಲರ ಹಸಮಾಡಿದನು ನಲಿದು ಕೇಳದಿ 1 ಅಸಿನನೆಯ ಹೊಸಮನೆಯ ಬಿಸುಗಣೆಯೆಂದಳೆಸೆಯೆಮಣಿಸಲುತರಹರಿಸುವುದುಕೆಳದಿ ಬಿಸಜಾಕ್ಷನ ನುಶಿಕ್ಷಣದಿ ತನು ಉಚ್ಚಿಕಡುಸುಡುತಲಿದೆ ನೀ ಸಾಕ್ಷಿ ಕೆಳದೀ 2 ತಂಬೆಲರ ಮುಂಬೆಲರ ಪಂಬೆಲರನುಳಿದು ಮರಿ- ದುಂಬಿಗಳ ಸಂಭ್ರಮದಿ ಕೇಳದ ಕೆಳದೀ ಬೆಂಬಿಡದೆ ಇಂಬುಗೊಂಡಂಬುಜಾಸ್ತ್ರವ ತುಡುಕಿ 3 ಪೊಂಬಲಕೆ ಕೊಳಗಾದೆ ಕೆಳದೀ ಪಣೆ ಯೆಂಬುವಗೆ ಕುಂಬಿನಿಯೊಳೇ ಮಣಿಹ- ದೆಂಬುದನು ಕೊಡಬಹುದೆ ಕೆಳದೀ 4 ನಂಬಿದಳು ಕಂಬನಿಯ ತುಂಬಿರಲು ಸಖಿಯರೊಳು ಗಾಂಭೀರ್ಯತನವಹುದೇ ಕೆಳದಿ ಕಂತುಶರವಂತಿರದೆಂತೊರೆಯಬಹುದೆನಗೆ ಚಿಂತೆ ತಲ್ಲಣ ಕೆಳದೀ 5 ದಂತಿ ನಡೆಯಂತೆ ಬೆಡಗಿಂತವಳ ಕಾಣೆ ಗುಣ ವಂತೆ ವಿಧಾನ್ಯಾಯದಲಿ ಸಂತೈಸಿ ಯೆನ್ನ ನೆರೆವಂತೆ ಸುರಪುರದ ಲಕ್ಷ್ಮೀ ಕಾಂತನಿಗೆ ಬಿನ್ನಯಿಸು ಕೆಳದೀ 6
--------------
ಕವಿ ಲಕ್ಷ್ಮೀಶ