ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಕ್ಷೇತ್ರ ವರ್ಣನೆ 1. ಬೇಲೂರು ಚನ್ನಕೇಶವರಾಯ ಚೆಲುವ ಚೆನ್ನಿಗರಾಯಾ ನಿನ್ನ ಕಾಣದೇ ನಿಲ್ಲಲಾರೆ ಬೇಲೂರ ಪ ವಜ್ರ ಪದುಮ ಪತಾಕಾಂಕುಶಗಳು ನಿಜಸತಿ ಲಕುಮಿದೇವಿಯರಾ ಭುಜ ಕುಚ ಕುಂಕುಮಾಂಕಿತ ಧರಾಂಕಿತ ಭಜಕರ ಭಾಗ್ಯೋದಯ ಪಾದಯುಗಳದಾ 1 ಸುರ ವೈರಿಗಳೆದೆ ಥಲ್ಲಣವೆನಿಸುವಾ ಬಿರುದಿನ ಖಡ್ಡೆಯಪ್ಪ ಚರಣಂಗಳಾ ಗರುಡನ ಹೆಗಲೇರಿ ಉದರದಿ ವಿರಿಂಚಿಯು ಉದುಭವಿಸಿದ ವರನಾಭಿಯ ಚೆಲುವಿನಾ 2 ಪೊಂಬಟ್ಟೆಯಿಂದೆಸೆವ ಪೀತಾಂಬರ ಚೆಂಬೊನ್ನದ ಕಾಂಚಿಯದಾಮದಾ ಅಂಬುಜ ಕೌಮೋದಕಿ ಸುದರುಶನ ಕಂಬುವ ಧರಿಸಿಹ ಚತುರುಭುಜಂಗಳಾ 3 ಶ್ರೀಯಾಲಿಂಗಿಸಿ ಸುಖವ ಕಾಮಿನಿಯರ ಶ್ರೀಯೋಗವ ತೋರಿಸೆನಗೊಮ್ಮೆ ಹಾಯೆಂದು ಬಿಗಿದಪ್ಪಿ ನಂಬಿಸಿ ಚುಂಬಿಸಿ ಬಾಯ ತಂಬುಲವಿತ್ತು ಬಂದೆನ್ನ ನೆರೆಯಾ 4 ಕರೆವೆನ್ನ ಮನದಲ್ಲಿ ಕರೆವ ನಾಲಿಗೆಯಲ್ಲಿ ಕರೆವೆನ್ನ ಕಣ್ಣುಸನ್ನೆಯಲೀ ಕರೆವೆ ನೆರೆವೆ ನಿನ್ನ ಚರಣಕೆರಗುವೆ ನಾ ವರವೈಕುಂಠಕೇಶವ ಬೇಲೂರ 5
--------------
ಬೇಲೂರು ವೈಕುಂಠದಾಸರು
ಎದ್ದಳೀಗಿದಕೋ ಶ್ರೀರಮಣಿ || ಎದ್ದಳೀಗಿದಕೋ ಪ ಮುದ್ದು ಶ್ರೀ ಹರಿಯಾ ತೋಳ ತೆಕ್ಕೆಯಾನುಸಳಿ ಶುದ್ಧ ರಾತ್ರಿಲಿ ಹರಿ ರತಿಯೊಳು ಮಲಗಿ ಅ.ಪ. ಸರಸಿಜ ಸಖನ ಮುಂಬೆಳಗವ ಹರಿಯಲು | ಭರದಲಿ ಹಕ್ಕಿಯು ಕಲಕಲವೆನಲು 1 ನಾರದ ತುಂಬುರ ಮಾಡುವ ಪ್ರಾತ:| ಸ್ಮರಣೆಯ ಗಾಯನ ಧ್ವನಿಯನು ಕೇಳಿ 2 ಕರತಳದಲಿಯವಿಗಳನು - ವರೆಸುತಲಿ | ತೆರೆವುತ ಮುಚ್ಚುತ ಅರೆಗಣ್ಣ ನೋಟದಿ 3 ಬಾಯೊಳಗಿನ ತಂಬುಲವ ನುಗುಳುತ | ಅಧರ ವಕೆಂಪವ ನಡಗಿಸುತ 4 ಕಿರಿಬೆಮರವ ಕೊನೆ ಯುಗುರದಿ ಹಾರಿಸಿ | ಕುರುಳು ಗೂದಲು ಬೈತಲು ನೀಟಾಮಾಡುವ5 ಸಡಲಿದ ಅಲರ ಮುಡಿಯಾತಿದ್ದಿ ಬಿಗಿವುತಾ | ಒಡನೆ ಕೊರಳಾ ಭರಣವ ತಿರುಹುತಲಿ 6 ಎಡಬಲ ಕೊಲದ ವಡ್ಯಾಣ ಸರಿಸಿ ಉಟ್ಟಾ | ಉಡಿಗಿಯಾ ನಿರಯಾ ಮುಂದಕ sಸಾಂವರಿಸುತ7 ಪ್ರಕಟದಿದೋರ್ವ ಕುಚದ ನಖಕ್ಷತಗಳ | ಯುಕುತಿಲಿ ಅಡಗಿಸಿ ಪುಟವನು ಬಿಗಿವುತ 8 ತನ್ನನಂಬಿದ ಬಾಲರ ಹೊರಿಯಲುದಯ | ಕಮಠ ನ್ಯಾಯದಲಿ9 ಈರೇಳು ಜಗದ ಜೀವನ ಪಡೆದ ಜನನಿ | ಗುರುಮಹಿ ಪತಿಸುತ ಪ್ರಭುವಿನ ಅರಸಿ10
--------------
ಕಾಖಂಡಕಿ ಶ್ರೀ ಕೃಷ್ಣದಾಸರು