ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪ್ಪಾ ಕೇಳೊ ನಿನ್ನ ಗುರುತ ನೀನೆ ತಪ್ಪಿದೆಪ್ಪ | ತುಪ್ಪ ಹಾಲು ಬಿಟ್ಟು ನೀ ಅಡವಿಯ ಸೊಪ್ಪು ಮೆಲಬ್ಯಾಡಪ್ಪ ಪ ಅನುದಿನ ನೆನೆದು ಮಾಡುವ ಕರ್ಮವು ನಿನಗಿಲ್ಲಪ್ಪ | ಚಿನುಮಯಾತ್ಮಕ ಬ್ರಹ್ಮನು ನೀನು ಅನುಮಾನ ಇದಕಿಲ್ಲಪ್ಪ 1 ನಿತ್ಯ ಬೋಧಾಮೃತವ ಕುಡಿಯಪ್ಪ | ನಾದ ಬಿಂದು ಕಲಾತೀತರು ಹಾಡುವ ಪದವ್ಯಾಕಪ್ಪ | ಸಾಧು ಪುರುಷರು ಹೋದ ಹಾದಿಯ ಹಿಡಿದು ಮುಕ್ತಿ ಪಡೆಯಪ್ಪ 2 ಇಂದು ನಾಳೆ ಎಂಬುವದೊಂದು ಸಂಶಯ ನಿನಗೆ ಬ್ಯಾಡಪ್ಪ | ಕುಂದು ಕೊರತೆಯು ಇಲ್ಲಾತನಿಗೆ ಆನಂದವೆ ಸ್ವಾದವಪ್ಪ | ಬಂದು ಹೋಗಿ ನೀ ಭವಸಾಗರದೊಳು ಬಹು ಪರಿಯಿಂದಲಿ ನೊಂದೆಪ್ಪ | ತಂದೆಯಾದ ಭವತಾರಕನ ಹೊಂದಿ ದಿನವ ಕಳೆಯಪ್ಪ 3
--------------
ಭಾವತರಕರು
ನೋಡಿ ದಣಯೆನೊ ರಂಗ ನಾ ಹಾಡಿ ದಣಿಯೆನೊ ನಾ ಜೋಡು ಕುಂಡಲಧರ ನೀನಾಡಿದಾಟಗಳೆಲ್ಲ ಪ. ದೇವಕಿ ನಿನ್ನ ಬಾಲಲೀಲೆ ತೋರೆನಲಾದೇವ ಮೊಸರ ಭಾಂಡವನೊಡೆದ ಭಾವಜನ್ನಯ್ಯ ಕಡೆಗೋಲು ನೇಣಿನ ಸಹ ರುಕ್ಮಿಣೀದೇವಕಿಗ್ಹರುಷವನಿತ್ತು 1 ಅಂದು ಯಶೋದೆ ನಿನ್ನ ಅಂದದ ಮದುವೆಯ ತಂದು ತೋರೆನೆ ವೇಂಕಟನಾಗಿ ಕಂದನೆನಿಸಿ ಬಕುಳೆಗೆ ಮದುವೆಯ ಅಂದದಿ ತೋರಿದೆ ತಂದೆಯಾದವ ಕೃಷ್ಣ 2 ತೊಡೆಯಲೆತ್ತಿ ನಿನ್ನ ಸಡಗರದಿಂದಲಿ ಇಡುವಳೊ ಸಕಲಾಭರಣಗಳ ಮೃಢಸಖ ಶ್ರೀ ಶ್ರೀನಿವಾಸನೆ ಎನ್ನನು ಕಡೆಹಾಯಿಸೆಂದು ಬಿಡದೆ ಧ್ಯಾನಿಪಳೊ 3
--------------
ಸರಸ್ವತಿ ಬಾಯಿ
ಮರೆಯದೆ ನೆನೆ ಚಿನ್ಮಯನ ಹರಿನಾರಾಯಣ ಅಚ್ಯುತನ ಪ ಮಗಳ ತಾನೆ ಮದುವೆಯಾದವನಮಗಳ ಮಗನ ಮೊಮ್ಮಗನಮಗಳ ಗಂಡನ ಮೇಲೆ ಮಲಗಿದ ಜಾಣನಮಗಳ ಮಾವನಿಗೆ ಮೈದುನನ1 ತಂದೆಗೆ ತಾನೆ ತಂದೆಯಾದವನ ತಂದೆಗೆ ತಾಯಿಯ ತಂದವನತಂದೆಗೆ ಪೂರ್ವದಿ ತಾ ಪುಟ್ಟಿಹನತಂದೆಗೆ ತಂದೆಗೆ ತಂದೆಯಹನ 2 ರಾಮನ ಸಮರೋದ್ಧಾಮನ ಸುಗುಣಾಭಿರಾಮನ ಸೀತಾನಾಯಕನರಾಮನ ಪೆತ್ತನ ಕಮಲದಳಾಕ್ಷನಪ್ರೇಮದಿ ನೆಲೆಯಾದಿಕೇಶವನ3
--------------
ಕನಕದಾಸ
ರಂಗ ಬಾರನ್ಹ್ಯಾಗೆ ಮಾಡಲಂಬುಜಾಕ್ಷಿಯೆ ರಂಗ ಬಾರನ್ಹ್ಯಾಗೆ ಮಾಡಲೆ ಪ ತಾಪ ಹೋಗದು ಶೀತ ಕಳೆವೊ ಸೂರ್ಯನಂತೆ ದ್ವಾರಾವತಿಯ ನಿಲಯನಮ್ಮ 1 ಅಕ್ಕ ರುಕ್ಮಿಣಿಯಲ್ಲಿ ನಕ್ಷತ್ರಮಧ್ಯಚಂದ್ರನಂತೆ ಪೊಕ್ಕಳಿಂದಲಜನ ಪಡೆದ ಚಕ್ರಧಾರಿ ಅಕ್ಕರ ಪಡುವೊ 2 ಕರೆದುತಾಹೋರೊಬ್ಬರಿಲ್ಲ ಕರುಣಾನಿಧಿಯೆಂಬುವುದು ಸಲ್ಲ ತರುಣಿ ಸತ್ಯಭಾಮೆಗಧಿಕ ತಿಳಿದು ತನ್ನ ರುಕ್ಮಿಣಿಯಲ್ಲಿರುವ 3 ಉಂಗುರದ ಹರಳಿನಂತೆ ಹೊಂದಿಕೊಂಡು ರುಕ್ಮಿಣಿಯನ್ನು ಇಂದಿರೇಶ ಬಿಟ್ಟಿನ್ನೊಬ್ಬರ ಮಂದಿರಕ್ಕೆ ಬಂದಿಹನ್ಹ್ಯಾಗೆ 4 ಮಂದಮತಿಯು ಆದನೇನೆ ತಂದೆಯಾದ ಸತ್ರಾಜಿತನು ತಂದುಕೊಟ್ಟನೆನ್ನ ಈ ಸುಂದರಳಾದ ಸೌ(ಸವ?) ತಿ ಕೆಳಗೆ 5 ಅಕ್ರೂರಜಮಿಳಂಬರೀಷ ಚಿಕ್ಕಧ್ರುವ ಪ್ರಹ್ಲಾದ ಗಜನು ಭಕ್ತಿಯಿಂದ ಕರೆಯೆ ಕಣ್ಣೆತ್ತಿ ನೋಡನವರನೀಕಾಲಕ್ಕೆ 6 ಗಾಯನದಿ ಗಂಧರ್ವ ಬಂದು ನಾರದ ಸುದಾಮ ಬಂದು ಬೇಡಿಕೊಂಡು ಕರೆಯಲವರ ನೋಡಿ ಮುಂದಕೆ ಬರುವನಲ್ಲ 7 ಸೋಳ ಸಾವಿರ ಸತಿಯರೆಲ್ಲ ಭಾಳ ಚಿತ್ರಭೂಷಿತರಾಗಿ ಏಳು ಕೃಷ್ಣೇಳೆಂದು ನಾಲ್ಕು ತೋಳು ಪಿಡಿದು ಕರೆವೋಣೇನೆ 8 ನೀಲ ಜಾಂಬವಂತಿ ಹಚ್ಚಿದ್ಹಗಲು ಬತ್ತಿಯಂತೆ ಸುತ್ತುಗಟ್ಟಿ ಕರೆವೋಣೇನೇ 9 ಪುತ್ಥಳ್ಯಂತ ರುಕ್ಮಿಣಿ ತೊಡೆಯಲಿಟ್ಟು ಕುಳಿತನಿಂದಿರೇಶ ಬಿಟ್ಟರಾಕೆ ನಮ್ಮನು ಕಣ್ಣೆತ್ತಿ ನೋಡೋದಷ್ಟೆ ಹೊರತು 10 ಗೊಲ್ಲ ಸತಿಯರೆಲ್ಲ ತಮ್ಮಲ್ಲಿ ದಧಿಬೆಣ್ಣೆಗಳ ತಂದು ಮೆಲ್ಲು ಕೃಷ್ಣಯೆಂದು ಕರೆಯೆ ಫುಲ್ಲನೇತ್ರ ತೆಗೆದುಕೊಂಡ11 ಕುಬ್ಜೆ ಕರದಿ ಗಂಧ ಹಚ್ಚೇನೆಂದು ಕರೆಯೆ ಬೆನ್ಹತ್ತಿ ಬರುವನೇನೆ ಕೃಷ್ಣ 12 ಸಾಸಿರ್ಹೆಡೆಯ ಮಂಚವಿಳಿದು ಸರಸವಾದ ವಚನದಿಂದ ಭೀಷ್ಮೆ ಭಿಡಿಯವೇನೆ ಭೀಮೇಶಕೃಷ್ಣನ ಕರೆವೋದಕ್ಕೆ13
--------------
ಹರಪನಹಳ್ಳಿಭೀಮವ್ವ
ಕಂಡು ಕಂಡೆಂತು ಕೈ ಬಿಡುವೆ ಹರಿಯೆ |ಪುಂಡರೀಕಾಕ್ಷನಿನ್ನ ನಂಬಿದ ಮೇಲೆಪಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ |ಬಣಗುದಾರಿದ್ರ್ಯದಲಿ ಬಲು ನೊಂದೆನಯ್ಯ ||ಫಣಿಶಾಯಿ ಪ್ರಹ್ಲಾದವರದನೇ ನೀನೆನಗೆ |ಹೊಣೆಯಾದ ಮೇಲಿನ್ನು ಮರುಳು ಗೊಳಿಸುವರೆ? 1ಒಂದು ದಿನ ಅತಿಥಿಗಳನುಪಚರಿಸಿದವನಲ್ಲ |ಬೆಂದೊಡಲ ಹೊರೆದು ಬೇಸತ್ತೆನಯ್ಯ ||ಕುಂದು-ಕೊರತೆಯು ಏಕೆ ? ನಿನ್ನ ನಂಬಿದೆ ದಯಾ-|ಸಿಂಧುಗೋವಿಂದನೇ ತಂದೆಯಾದ ಮೇಲೆ2ಬಂಧು ಬಳಗ ಮುನ್ನಿಲ್ಲ ಬದುಕಿನಲ್ಲಿ ಸಖವಿಲ್ಲ |ನಿಂದ ನೆಲ ಮುನಿಯುತಿದೆನೀರಜಾಕ್ಷ||ತಂದೆ-ತಾಯಿಯು ನೀನೆ ಬಂಧು ಬಳಗವು ನೀನೆ |ಕುಂದದೇ ರಕ್ಷಿಸೈ ನಂದನಂದನನೆ 3ಆಶೆಯನು ಬಿಡಲಿಲ್ಲ ಅತಿ ಹರುಷವೆನಗಿಲ್ಲ |ದೇಶದೇಶವ ತಿರುಗಿ ದೆಸೆಗೆಟ್ಟೆನಯ್ಯ ||ವಾಸವಾರ್ಚಿತನಾದ ವೈಕುಂಠನಿಲಯ ಲ-|ಕ್ಷ್ಮೀಶ ನೀಯೆನ್ನ ಕಣ್ಣಾರೆ ಕಂಡ ಮೇಲೆ 4ಭಕುತವತ್ಸಲನೆಂಬ ಬಿರುದು ಹೊತ್ತಿದ ಮೇಲೆ |ಭಕುತರಾಧೀನನಾಗಿರ ಬೇಡವೆ ||ಮುಕುತಿದಾಯಕನೆ ಬೇಲೂರು ಪುರಾಧೀಶ್ವರ |ಸಕಲ ದೇವರದೇವಪುರಂದರವಿಠಲ5
--------------
ಪುರಂದರದಾಸರು