ಒಟ್ಟು 6 ಕಡೆಗಳಲ್ಲಿ , 2 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿದ್ರ್ಯಾ ಕಂಡಿದ್ರ್ಯಾ ಶ್ರೀಸುಬ್ಬರಾಯ ದಾಸರ್ಯರಾ ಪ ಕಾಡೂವ ಭವದ ದೂರೋಡಿಪ ಮಾರ್ಗದಜಾಡನೆ ತಿಳಿಸುವಾಗಾಢ ಮಹಿಮರ ಅ.ಪ. ಪುರಂದರ | ದಾಸರ ಪೀಳಿಗೆ ಶರಧಿಗಾಶಶಿಗೊಪ್ಪುವ ದಾಸವರ್ಯರನ 1 ಮುದ್ದು ಮೋಹನ ಗುರು | ಮುದ್ದು ಶಿಷ್ಯರು ತಂದೆಮುದ್ದು ಮೋಹನರು | ಪ್ರಸಿದ್ಧರಾಗಿಹರಾ 2 ಪರ | ಮಾರ್ಥ ಚಂದಿರ ಹರಿಕೀರ್ತನೆ ಗೈವ ಸ | ತ್ಪಂಥ ಬೀರಿದರಾ 3 ಅಂಕಿತರಹಿತ ನಿ | ಷಿದ್ಧ ದೇಹವು ಎಂದುಅಂಕನಗೈಧರಿ | ಲೆಂಕತನವ ಬೀರ್ದರ 4 ಸಹಸ್ರಾರು ಅಂಕಿತ | ವಿಹಿತೋಪದೇಶ ಸ-ನ್ನಿಹಿತರ ಗೈದೂ | ದ್ಧರಿಸಿದ ಗುರುಗಳ5 | ದಾಸಕೂಟಾಬ್ಧಿ ತಾ | ರೇಶನ ಪರಿಯಲಿಭಾಸಿಸಿ ಶರಣರ | ಪೋಷಿಸಿದವರನು 6 ಸಾರ ಶಾಸ್ತ್ರದ ಸವಿ | ಆರು ಮೊಗನ ಪರಿಆರು ಬಗೇಯಲಿ | ಬೀರಿದ ವರನ 7 ಸುಂದರೇಶ ಪ್ರಾಣ | ಅಂದ ಪ್ರತೀಕವಅಂದೇಭ ಗಿರಿಯಲ್ಲಿ | ಚಂದದಿ ನಿಲಿಸಿದರ 8 ಪ್ರಥಮ ಮಾಸವು ವರ | ಸಿತ ನವಮಿ ಮಧ್ಯಾಹ್ನಪೃಥುವಿ ಸಂಬಂಧವ | ಮತಿಯಿಂದ ತ್ಯಜಿಸಿದರ 9 ಇಂದು ಕರಿಗಿರಿಲಿಹರ 10 ಗೋವಿದಾಂಪತಿ ಗುರು ಗೋವಿಂದ ವಿಠಲ ಪರಾವರೇಶನು ಎಂದು | ಓವಿ ತುತಿಸುತ್ತಿಹರ11
--------------
ಗುರುಗೋವಿಂದವಿಠಲರು
ಪಾಲಿಸೊ | ಗುರುವರನೇ ಪಾಲಿಸೋ ಪ ಪಾಲಿಸೊ ಗುರುವರ ಎನ್ನ | ಬಲುಬಾಲ ಭಾಷೆಗೆ ಒಲಿದಿನ್ನ | ಆಹ |ಕಾಲ ಕಾಲಕೆ ಹೃದ | ಯಾಲಯದಲಿ ನಿಂತುಶೀಲ ಗೋಪಾಲನ | ಲೀಲ ಧ್ಯಾನವನಿತ್ತು ಅ.ಪ. ತಂದೆ ವೆಂಕ್ಟನಾ ಕೃಪಾ ಬಲದೀ | ಸಾರಿಬಂದೆನೋ ಪೊಗಳುತ್ತ ಮುದದೀ | ನಿನ್ನದ್ವಂದ್ವ ಪಾದವ ನೋಡೆ ಜವದೀ | ಭವಬಂಧವ ಕಳೆಯಲೋಸುಗದೀ | ಆಹ |ಮಂದಾನ ಕರೆ ತಂದು | ಸಂದೇಶ ಎನಗಿತ್ತುಛಂದಾದಿ ಸಲಹಿದ್ಯೋ | ಸಿಂಧೂರ ಗಿರಿವಾಸ 1 ಅಹಿನವಾಭಿಧ ಕಾಯೋಯನ್ನಾ | ಮನಮೋಹ ಜಾಲವ ನೀಗೋ ಘನ್ನಾ | ಬಲುಕುಹಕ ಬುದ್ಧಿಯ ಬಿಡಿಸೆನ್ನಾ | ನಿನ್ನನೇಹ ಕರುಣೀಸೆನಗೆ ಮುನ್ನ | ಆಹವಿಹಗವಾಹನ ದೂತ | ಮಹಭಯ ವಾರಣಸಹನಾದಿ ಗುಣವಂತ | ಪ್ರಹಿತಾದಿ ಸಲಹೆನ್ನ 2 ಮುದ್ದು ಮೋಹನ ಗುರು ಬಾಲಾ ತಂದೆಮುದ್ದು ಮೋಹನ್ನ ವಿಠ್ಠಲ್ಲಾ | ಸಿರಿಮುದ್ದು ನೃಸಿಂಹನ ಲೀಲಾ | ಬಲುಮುದ್ದಿಸಿ ಪಾಡುವೆ ಬಹಳಾ | ಆಹಮಧ್ವಾಂತರ್ಗತ ಗುರು | ಗೋವಿಂದ ವಿಠಲನೆಹೆದ್ದ್ಯವ ವೆಂತೆಂಬ | ಶುದ್ಧ ಮತಿಯನಿತ್ತು 3
--------------
ಗುರುಗೋವಿಂದವಿಠಲರು
ಗುರುವಿನ ಮರೆಯಾದಿರಮ್ಮ ಪಅಂಕಿತವನೆ ಇತ್ತಸಿರಿ ಗುರುವಿನ ನೀನುಮನದೊಳು ನೆನೆಯಬÉೀಕಮ್ಮ ತಂಗಿ ಅ.ಪಗುರುವಿನ ಮರೆತರೆ ನಿನಗೆ ಥರಥರ ನರಕಥರಥರನರಕವ ಅನುಭವಿಸಬೇಕಮ್ಮ ತಂಗೀ 1ಜ್ಞಾನಾನಂದಾತ್ಮಕನಾದ ಶ್ರೀಹರಿಯನ್ನುಗುರುವಿನದ್ವಾರಾ ನೀ ತಿಳಿ ಮಂಗಳಾಂಗಿ 2ಗುರುವೆ ತಂದೆಯು ಬಂಧು ಬಳಗಾವೆಂದು ಅಕ್ಕರೆಯಿಂದ ನೀ ನೆನೆಯಬೇಕಮ್ಮಾ 3ಗುರುವಿನ ಸೇವೆಯ ಮಾಡುತ್ತ ಗುರುಗಳಕೃಪೆಗೆ ಪಾತ್ರರಾಗಿ ಬಾಳಬೇಕಮ್ಮಾ 4ಮಂಗಳ ಮಹಿಮ ಶ್ರೀ ತಂದೆಮುದ್ದುಮೋಹನ್ನವಿಠಲ ದಾಸರೆನಿನಗೆ ಸದ್ಗುರು ಎಂದು ತಿಳಿಯಮ್ಮ ತಂಗಿಈ ಮಾತು ಪುಸಿಯಲ್ಲ ಮರೆಯಬೇಡಮ್ಮ ತಂಗೀ 5
--------------
ತಂದೆ ಮುದ್ದುಮೋಹನ ವಿಠಲರು
ಚೂರ್ಣಿಕೆಶ್ರಿ ಹರಿಯೇ ನಿನ್ನುಪಕೃತಿಯು ಮರೆಯದಂತಿರಿಸೆಮ್ಮಉರಗಾಧಿಶಯನಾ ಕೃಷ್ಣಾ ದ್ವಿಜರಾಜಗಮನಾಕಾಳಿಯ ದಮನಾ ಭುವನತ್ರಯಾಕ್ರಮಣಪದ್ಮಾಲಯಾ ರಮಣ 1ಧನದಮಾತಿರಲಿ ಗೋಧನದ ಮಾತಿರಲಿಭೂಧನದಮಾತಿರಲಿ ಶೌರೀಧನವೆಲ್ಲವೂ ಕರ್ಮವನು ಬೆನ್ಹಿಡಿದುಬಹದೆನುತಾಡುವರೊ ಮುರಾರಿತನುವು ನಿನ್ನಯ ಸೇವೆಯನು ಮಾಡುತಿರಲಿಕಂಸಾರಿಮನವು ನಿನ್ನಯರೂಪವನು ನೆನೆಯುತಿರಲಿ ದುರಿತಾರಿಈ ಕೃಪೆಯಭೂರೀ ದುರ್ಜನವಿದಾರೀಸುಜನೋಪಕಾರೀ ಗಿರಿನಾಥ ಧಾರೀಪಾಪಹಾರಿದಿತಿಜಾರಿನಿರ್ವಿಕಾರಿ ಉದಾರಿ2ನಾಕದೊಳಗಿರಲಿ ಭೂಲೋಕದೊಳಗಿರಲಿಅಧೋಲೋಕದೊಳಗಿರಲಿ ನಾನೂಶ್ರೀಕಾಂತ ನಿನಗೆ ಬೇಕಾದವನೆನುತ್ತಸಾಕಬೇಕೆನ್ನ ನೀನೂ ಭಕ್ತಜನಕಾಮಧೇನುಹೇಳಬೇಕಾದುದಿನ್ನೇನು 3ಬಿದ್ದಿರುವೆನೈ ರಜೋಗುಣದಿಒದ್ಯಾಡುತಿಹೆನೊ ಸಂಕಟದಿಇದ್ದು ಫಲವೇನೊ ಈ ಭವದಿಉದ್ಧರಿಸು ಕೃಪಾಜಲಧಿ 4ಬದ್ಧನಾನಯ್ಯ ಈ ಜಗದಿಶುದ್ಧಬುದ್ಧಿಯ ನೀಯೊ ಮುದದಿಕೃದ್ಧನಾಗದಿರೆನ್ನ ದುಷ್ಕøತದಿಎದ್ದು ಬಾರೆನ್ನಡಿಗೆ ದಯದಿಶ್ರೀ ತಂದೆಮುದ್ದುಮೋಹನ್ನವಿಠಲ ಭಾಗ್ಯನಿಧಿ 5
--------------
ತಂದೆ ಮುದ್ದುಮೋಹನ ವಿಠಲರು
ನಿಜವಿರಬೇಕು ಸಜ್ಜನರಿಗೆ ಒಂದು ಪಅಜಜನಕಾನೆ ಈ ತ್ರಿಜಗಕೆ ಒಡೆಯನೆಂದು ಅ.ಪಉದಯಾಸ್ತಮಾನ ಮಾಡುವ ವ್ಯಾಪಾರವುಪದುಮಾಕ್ಷ ಕೃಷ್ಣನ ಸೇವೆಯೆಂದುಸುದತಿಯೊಡನೆ ಕೂಡಿ ಮಧುರ ಮಾತುಗಳಾಡಿಮಧುವೈರಿಚರಿತೆಯ ಮುದದಿ ಕೇಳುವಂಥ1ಮಡದಿ ಮಕ್ಕಳು ತನ್ನ ಒಡಹುಟ್ಟಿದವರೆಲ್ಲಒಡೆಯನ ಅಡಿಗೆ ಸೇವಕರು ಎಂದುದೃಢದಿ ತಿಳಿದು ಮೃಡನೊಡೆಯನ ಪಾದವಬಿಡದೆ ಭಜಿಸುವಂಥ ದೃಢ ಬುದ್ಧಿ ಎಂಬುವ 2ಮಾತಾಪಿತರು ಸುತ ಭ್ರಾತರಿಷ್ಟಾಬಂಧುವ್ರಾತರೆಲ್ಲರು ಹರಿಗೆ ದೂತರೆಂದುಮಾತುಳಾಂತಕತಂದೆಮುದ್ದುಮೋಹನವಿಠಲಖ್ಯಾತಾನೆಂದು ಪ್ರೀತಿ ಪೊಂದುವುದಕ್ಕೆ 3
--------------
ತಂದೆ ಮುದ್ದುಮೋಹನ ವಿಠಲರು
ಪತ್ಯಂತರ್ಗತ ನಾರಸಿಂಹ ಎನುತಾಸಕ್ತಿಯಿಂ ಜಪಿಸಬೇಕಮ್ಮ ಪಬತ್ತಿಯ ಮಾಳ್ಪಾಗ ಬಾಲರಾಡಿಸುವಾಗಪ್ರತ್ಯಾಹದಲಿಗೃಹಕೃತ್ಯವಾಚರಿಸುವಾಗಅ.ಪಪೊಡವಿಯೊಳ್ ನರಜನ್ಮಪಡೆದೂ ಕೆಟ್ಟನಡತೆಯವರ ಕೂಟ ಮರೆದೂದೃಢ ಭಕ್ತಿಯಿಂ ಲಜ್ಜೆ ತೊರೆದೂನುಡಿನುಡಿಗ್ಹರಿ ಎಂದು ಬಾಯ್ದೆರೆದುಅಡುಗೆಯ ಮಾಡಿ ಕಾರೊಡೆಯಗರ್ಪಿಸುವಾಗಒಡೆಯಾದಿಗಳಿಗನ್ನ ಬಡಿಸುವಾಗಲುನಿತ್ಯ1ಪತಿದೈವವೆಂದು ಭಾವಿಸುವಸತಿಗತಿಶಯ ಗತಿಸಲ್ಲಿಸುವಪತಿತರ ಪಾವನ ಗೈವ ಲಕ್ಷ್ಮೀಪತಿಯೆ ಸದ್ಭಕ್ತರಕಾವಅತಿಹಿತದಿಂದ ಸಂತತ ಹರಿದಾಸರಿಗತಿಸೇವಾರತಿಯಿಂದ ಕೃತಕೃತ್ಯಳಾಗುತ 2ಪದ್ಮಸಂಭವೆ ಪದ್ಮಜಾತವಾತಪದ್ಮಜವಲ್ಲಭಎನುತಕದ್ರುಜರುದ್ರಾದಿವಿನುತತಂದೆಮುದ್ದುಮೋಹನ ವಿಠಲ ನೀತಾಅದ್ವಿತೀಯನು ಎಂದು ಬುದ್ಯಾದಿಂದ್ರಿಯದಲ್ಲಿನಿದ್ರೆಯೊಳ್ಞದರು ನೀ ಮರೆಯ ಬ್ಯಾಡ 3
--------------
ತಂದೆ ಮುದ್ದುಮೋಹನ ವಿಠಲರು