ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೇ ಸುಮ್ಮನೆ ಇರಬೇಡ ಅರೆನಿಮಿಷವಾದರುಮನವೇ ಸುಮ್ಮನೆ ಇರಬೇಡಪ ಕನಸಿನಂತಿಹ ಸಂಸಾರವ ನೆಚ್ಚಿಘನತರ ಪಾಪಕೆ ಗುರಿಯಾಗಬೇಡ ಅ ರೊಕ್ಕದಾಸೆಯ ಬಿಡಬೇಕು ಸ್ತ್ರೀ ಮೋಹಕೆಸಿಕ್ಕದೆ ನಡಕೊಳಬೇಕುಅಕ್ಕರು ದೇಹದೊಳಿರದಿರಬೇಕುಶಕ್ತಿಯ ಮೀರಿ ಧರ್ಮವ ಮಾಡಬೇಕುಮುಕ್ಕಣ್ಣ ಹರನ ಪೂಜಿಸಬೇಕುಮುಕ್ತಿ ಮಾರ್ಗವ ಪಡಕೊಳಬೇಕು 1 ಸರ್ವನಿಸ್ಪøಹನಾಗಬೇಕು ಸಂಸಾರದಿಚರಿಸುತಲೂ ಇರಬೇಕುಗುರುಹಿರಿಯರ ಕಂಡು ನಡೆಯಲು ಬೇಕುಪರರ ನಿಂದಿಸಿ ನುಡಿಯದೆ ಇರಬೇಕುಬರೆ ಸುಖ ದುಃಖವು ಸಮಗಾಣಬೇಕುಇರುಳು ಹಗಲು ಶಿವ ಶಿವ ಎನ್ನಬೇಕು2 ತನ್ನ ತಾನೆ ತಿಳಿಯಬೇಕು ತೋರುವ ಲೋಕವನ್ನು ದೃಶ್ಯವೆಂದಿರಬೇಕುತನ್ನಂತೆ ಸಕಲರ ನೋಡಲು ಬೇಕುಮಾನ್ಯರ ಕಂಡರೆ ಮನ್ನಿಸಬೇಕುಅನ್ಯನಾದರು ಹಿತವನೆ ಮಾಡಬೇಕುಪ್ರಸನ್ನ ರಾಮೇಶನನೆನಹಿರಬೇಕು 3 ವಣಗಿದ ಕಂಭದೊಳೊಗೆದುಬಣಗು ದಾನವನ ಗೆಲಿದುಕುಣಿಕುಣಿದಾಡಿದೆಯಂತೆ ಯಾಕಯ್ಯ ಶ್ರೀಕೃಷ್ಣಸೆಣಸಿದ ರಾಕ್ಷಸನ ಗೆಲಿದುವಿನಯದೆ ಪ್ರಹ್ಲಾದಗೊಲಿದುಅಣಿಯರ ಲೋಕವ ಕಾಯ್ದೆ ಎಲೆಸತ್ಯಭಾಮೆ 4 ಬಲು ಚಂದವಾಯಿತಯ್ಯ ಲೋಕಾ-ವಳಿಯೊಳು ದೊಡ್ಡವನಯ್ಯಬಲಿಯ ಕೂಡೆ ದಾನವ ಬೇಡುವರೆ ಕೃಷ್ಣಬಲಿಯ ದಾನವನ್ನೇ ಬೇಡಿಇಳೆಯ ಮೂರಡಿಯ ಮಾಡಿಸಲಹಿದೆ ಸರ್ವಸುರರ ಎಲೆ ಸತ್ಯಭಾಮೆ 5 ಧರಣೀಪಾಲಕರ ಗೆಲಿದಗರ್ವವಿರಲಿ ಹೆತ್ತತಾಯಶಿರವನರಿದ ದುರುಳರುಂಟೆ ಹೇಳಯ್ಯ ಕೃಷ್ಣಗುರುವಚನವನ್ನು ಮೀರೆನರಕಲೋಕವೆಂದು ಕಾಯಶಿರವನರಿದು ಮರಳಿ ಪಡೆದ ಎಲೆ ಸತ್ಯಭಾಮೆ6 ಮೂರು ಲೋಕವರಿಯೆ ಸೀತಾನಾರಿಯ ಕಳೆದುಕೊಂಡುಊರೂರ ತಿರುಗಿದೆಯಂತೆ ಯಾಕಯ್ಯಾ ಕೃಷ್ಣನೀರೊಳು ಸೇತುವ ನಿಲಿಸಿವೀರ ರಾವಣನ ಜಯಿಸಿವಾರಿಜಾಕ್ಷಿಯ ತಂದೆನೆ ಎಲೆ ಸತ್ಯಭಾಮೆ 7 ದುರುಳ ಪರಮಹಂಸರಂತೆಕರದಿ ನೇಗಿಲ ಹಿಡಿದೆಶರಖಡ್ಗಗಳಿಲ್ಲವೇನೋ ಶ್ರೀಕೃಷ್ಣರಾಯಸುರರಿಪು ಪ್ರಲಂಬಾದಿಗಳಶಿರವನರಿದು ಜೈಸಿದಂಥಾಗುರುತಿನ ಆಯುಧ ಕಾಣೆ ಎಲೆ ಸತ್ಯಭಾಮೆ8 ಮಂದಿಯ ಮುಂದೆ ಬತ್ತಲೆನಿಂದು ಓಡಾಡಿದೆಯಂತೆಚಂದವಾಯ್ತು ನಿನ್ನ ನಡತೆ ಹೇಳೆಲೋ ಕೃಷ್ಣಹಿಂದೆ ತ್ರಿಪುರದ ನಾರೀವೃಂದವ ಮೋಹಿಸಿ ಸರ್ವವೃಂದಾರಕರ ಪೊರದೆ ಎಲೆ ಸತ್ಯಭಾಮೆ 9 ದೊರೆತನವು ನಿನ್ನದೆಂದುಧರಣೀದೇವತೆಯು ಬಂದುಮೊರೆಯಿಟ್ಟಳದೇಕೋ ಪೇಳೋ ಶ್ರೀಕೃಷ್ಣರಾಯತುರಗವನೇರಿ ಖಡ್ಗವಧರಿಸಿ ಯವನ ಸೈನ್ಯವನ್ನುಮುರಿದು ಧರೆಯ ಪೊರೆದೆ ಕಾಣೆ ಎಲೆ ಸತ್ಯಭಾಮೆ 10 ಇಂತು ಕೇಳ್ದ ಸತ್ಯಭಾಮಾಕಾಂತೆಯ ಮಾತಿಗೆ ಮೆಚ್ಚಿಕಾಂತೆಯರೊಳು ಕಟ್ಟಾಣಿ ಬಾರೆಂದು ಕರೆದುಕಂತುಜನಕ ಕೆಳದಿಪುರದಕಾಂತ ಗೋಪಾಲಕೃಷ್ಣನುಸಂತಸವ ಮಾಡಿದನಿನ್ನೆಂತು ಪೇಳ್ವೆನೆ11
--------------
ಕೆಳದಿ ವೆಂಕಣ್ಣ ಕವಿ
ಶಾರದೇಂದುಮುಖಿ ನೀರಜನಯನಳೆ ಬಾರೆಲೆ ಬಾಗಿಲ ತೆಗಿಯಲೆ ಭಾಮೆ ಪ ಯಾರಯ್ಯ ಬಾಗಿಲ ಹೊರಗೆ ನಿಂತಿರುವನು ಜಾರ ಪುರುಷನಂತೆ ತೋರುವೆ ನೀನು ಅ.ಪ ಜಾರನಾದರೆ ನಿಂಗೆ ಜಾರನಲ್ಲವೆ ಮೀನಾ ಕಾರ ಧರಿಸಿರುವ ಹರಿಯಲೆ ಭಾಮೆ ಮೀನನಾದರೇ ಬಲು ಮೌನದಲಿರದಂತೆ ಮಾನವರಂತೆ ಮಾತು ಯಾವುದೋ ನಿನಗೆ 1 ಮಂದರಗಿರಿಯ ಬೆನ್ನಿಂದ ಧರಿಸಿರುವ ಅಂದ ಕೂರ್ಮನಲ್ಲವೇನೆ ಭಾಮೆ ಕೂರ್ಮ ನೀನಾದರೆ ಕೂಪದೊಳಿರುವುದೆ ಧರ್ಮವೆಂಬುವುದನು ಮರೆತೆಯಾ ನೀನು 2 ನೀಲವೇಣಿಯೆ ಕೇಳೆ ಕೋಲರೂಪದಿ ಬಂದು ಕ್ಷಿತಿ ತಂದೆನೆ ಭಾಮೆ ಪೋತರೂಪನೇ ನಿಜ ಧಾತ್ರಿಯ ಭೇದಿಸಿ ಗಾತ್ರ ರಕ್ಷಣೆ ಮಾಡು ಹೋಗೆಲೊ 3 ಸ್ತಂಭ ಭೇದಿಸಿ ರಿಪು ಡಿಂಭನ ಕಾಯಲು ಜಂಭದಿ ಖಳನನು ಕೊಂದೆನೇ ಭಾಮೆ ಸ್ಥಂಭ ಭೇದಿಸಿದ ನಾ ನಂಬುವುದಿಲ್ಲವೊ ಡಂಭದಿ ಬಾಗಿಲು ಭೇದಿಸಿ ಬಾರೊ 4 ವಾಮನನೆಂದು ವಟುರೂಪದಿ ಬಂದು ಸಾರ್ವ ಭೌಮನಲ್ಲಿ ಭೂಮಿ ಬೇಡಿದೆ, ಭಾಮೆ ವಟುರೂಪನಾದರೆ ಕುಟಿಲಾಕ್ಷಿಯರಲಿಂಥ ಚಾಟುವಚನಗಳು ಯಾಕೆಲೊ 5 ದುರುಳನೃಪರ ಪರಿಹರಿಸಿದ ಭೃಗುಮುನಿ ವರಕುಲಜಾತ ಶ್ರೀ ರಾಮನೇ ಭಾಮೆ ಮುನಿವರಸುತನಾಗಿ ಸ್ವನಿಯಮಗಳ ಬಿಟ್ಟು ವನಿತೆಯರಲ್ಲಿಂಥಾ ಸರಸವೆ ನಿನಗೆ 6 ದಶರಥ ನೃಪತಿಯ ಮನೆಯೊಳವತರಿಸಿ ದಶಶಿರರನು ಕೊಂದ ರಾಮನೆ ಭಾಮೆ ಪರ ಕಾಮಿನಿಯರೊಳಿಂಥಾ ಪ್ರೇಮ ಮಾಡುವುದುಂಟೆ ಯೋಚಿಸೊ ನೀನು 7 ನೀರಜಾಕ್ಷಿ ಕೇಳೆ ಜಾರಚೋರತೆಯಲ್ಲಿ ಸಿರಿ ಕೃಷ್ಣನೇ ಭಾಮೆ ಚೋರನಾದ ಮೇಲೆ ಸೇರಿಸುವುದು ಹೇಗೆ ಭಾರಿ ಆಭರಣಗಳಿರುವುವೊ 8 ಮುಗ್ಧೆ ಕೇಳೆ ಇದಬದ್ಧವಲ್ಲದೆ ಅತಿ ಶುದ್ಧನಾದ ಬುದ್ಧರೂಪನೆ ಬುದ್ಧರೂಪನೆ ನಿನ್ನ ನಡತೆಯ ಕೇಳಲು ಶುದ್ಧಿಯು ಲೋಕಪ್ರಸಿದ್ಧವು9 ಸರಸಿಜಮುಖಿ ವರತುರಗವನೇರಿದ ನೃಪರ ಗೆಲ್ವ ಕಲ್ಕಿಯೇ ಭಾಮೆ ದುರುಳ ಜನರು ಇಲ್ಲಿ ಸೇರುವುದಿಲ್ಲವೊ ತರಳೆಯರಲಿ ದುಷ್ಟ ಕಾರ್ಯವೇ ಪೋಗೊ10 ಪರಿ ಸರಸವನಾಡುವ ನಾಮಗಿರಿ ನರಹರಿ ರೂಪ ರಮಾ ರಮೇಶರು ವಿಹರಿಪ ಬಗೆಯನು ಸ್ಮರಿಸುವ ಸುಜನರ ಪರಮಪುರುಷ ಹರಿ ಪೊರೆವುದು ನಿಜ 11
--------------
ವಿದ್ಯಾರತ್ನಾಕರತೀರ್ಥರು
ಹೀಗೆ ಮಾಡಬೇಕೋ-ವಿಠಲ ತಂದೆಹೀಗೆ ಮಾಡಬೇಕೋ ಪಹೇಗಾದರು ದುರಿತಗಳೆನ್ನ ಕಾಡದಹಾಗೆ ಮಾಡ ಬೇಕೋ ಅ.ಪಹಿಂದಿನ ಸುಕೃತಗಳ ಫಲದಿಂದ ಬಂದೀ ನರಜನುಮಮುಂದೆ ನಾ ತಾಯ ಉದರದಲಿ ಜನಿಸದಹಾಗೆ ಮಡಬೇಕೋ ವಿಠಲ ತಂದೆ 1ದಾನಿ ನಿನ್ನನು ಬೇಡುವೆ ದುಷ್ಕರ್ಮದ -ಹಾನಿಯೊಂದೇ ಸಾಲದೆಹೀನ ಮಾನವರಿಗೆ ನಾನು ಕೈಯಾನದಹಾಗೆ ಮಾಡಬೇಕೋ - ವಿಠಲ ತಂದೆ 2ಕರುಣಿಪುರಂದರವಿಠಲ ತಂದೆನೆರೆನಂಬಿದೆ ನಿನ್ನಶರಣ ರಕ್ಷಕನೆಂಬ ಬಿರುದು ಬೇಕಾದರೆಹೀಗೆ ಮಾಡಬೇಕೋ - ವಿಠಲ ತಂದೆ 3
--------------
ಪುರಂದರದಾಸರು