ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರ್ಪೂರದಾರತಿಯ ತಂದೆತ್ತಿರೆ ಚೆಲ್ವಸುಪ್ರಕಾಶಗೆ ಸುಜನರ ಕಾಯ್ವಗೆಪಾಂಡವಭಾವಗೆ ದೇವರ ದೇವಗೆನಿರ್ಜರೇಂದ್ರನ ಬಲಿ ಗರ್ಜಿಸುತಿರೆ ಕಂಡುಅರ್ಜುನಪ್ರಿಯ ತಾನು ಕುಬ್ಜನಾಗಿಹೆÉಜ್ಜೆ ಭೂಮಿಯ ಬೇಡಿ ಬಲಿಯ ಗರ್ವವನುನಿರ್ಜಿಸಲು ಬಂದ ವಾಮನಗೆ ನಿಸ್ಸೀಮನಿಗೆ ಪೂರ್ಣ ಕಾಮನಿಗೆ 1 ನಳಿನನಾಭನೆಂದು ತಿಳಿದು ಬೇಗನೆ ಬಲಿಕೆಳದಿಯ ಕರೆದುದಕವತರಿಸಿಚಲುವ ಪಾದವ ತೊಳೆದಿಳೆಯ ದಾನವ ಮಾಡೆನಳಿನಜಾಂಡಕ್ಕಾಗಿ ಬೆಳೆದವಗೆ ಬಹು ತಳೆದವಗೆ-ಭೂಮಿಯಳೆದವಗೆ 2 ಬಲಿಯ ಭಕ್ತಿಗೆ ಮೆಚ್ಚಿ ಚೆಲುವ ಉಡುಪಿನ ಕೃಷ್ಣಉಳಿದ ಭೂಮಿಯ ತೋರೆನ್ನುತ ನುಡಿಯೆಸತಿ ನಾಚಿಕೆಯಿಂದ ತನ್ನಳೆದುಕೋ ಎನ್ನತಲೆಯ ಮೆಟ್ಟಿದ ಬಹು ವಿಕ್ರಮಗೆ ಪರಾಕ್ರಮಗೆ ತ್ರಿವಿಕ್ರಮಗೆ3
--------------
ವ್ಯಾಸರಾಯರು
ಚೆಲ್ವೇರಾರತಿಯ ತಂದೆತ್ತಿರೆ ಪ ಹುಟ್ಟಿದಳಾ ಕ್ಷೀರಸಾಗರದಲಿ ಸ- ಮಸ್ತ ಜನರಿಗೆ ಸುಖವ ನೀಡುತ ಶ್ರೇಷ್ಠರೊಳಗೆ ಜೇಷ್ಠಾದೇವಿ ಶ್ರೀನಾಥನ ಪಟ್ಟದರಸಿ ಮುದ್ದು ಮಾಲಕ್ಷ್ಮಿಗೆ 1 ಮುದ್ದು ಮೋರೆಗೆ ತಕ್ಕ ಮುಖುರ್ಯ ಬುಲಾಕ- ನಿಟ್ಟ ್ವಜ್ರದ ಬುಗುಡಿ ವೈಯಾರದಿಂದ ತಿದ್ದಿ ಬೈತಲು ಜಡೆಬಂಗಾರ ರಾಗಟೆ ಪದ್ಮನಾಭನ ರಾಣಿ ಮಾಲಕ್ಷ್ಮಿಗೆ 2 ವಾಲೆ ಸರಪಳಿ ಚಳತುಂಬು ಚಿನ್ನದ ಸರಿಗೆ ಮೋಹನ್ನಮಾಲೆ ಕಣ್ಣಕಾಡಿಗೆ ಹಚ್ಚಿ ಕಸ್ತೂರಿ ಕುಂಕುಮ ಚೆನ್ನಾರ ಚೆಲುವೆ ಶ್ರೀ ಮಾಲಕ್ಷ್ಮಿಗೆ 3 ಸೆಳೆನಡುವಿಗೆ ತಕ್ಕ ಬಿಳಿಯ ಪೀತಾಂಬರ ನಳಿತೋಳಿನಲಿ ನಾಗಮುರಿಗೆ ವಂಕಿ ಕಮಲ ದ್ವಾರ್ಯ ಹರಡಿ ಕಂಕಣನಿಟ್ಟು ಕಳೆಯ ಸುರಿವ ಚೆಲ್ವೆ ಮಾಲಕ್ಷ್ಮಿಗೆ 4 ಗರುಡವಾಹನನ್ಹೆಗಲಿಳಿದು ಶ್ರೀನಾಥನ ಹರಡಿ ಕಂಕಣ ಕರವ್ಹಿಡಿದುಕೊಂಡು ಮುಡಿದ ಮಲ್ಲಿಗೆ ಪಾರಿಜಾತಗಳುದುರುತ ನಡೆದು ಬರುವೊ ಮುದ್ದು ಮಾಲಕ್ಷ್ಮಿಗೆ 5 ಪಾದದಿ ರುಳಿ ಗೆಜ್ಜೆ ನಾದ ಝೇಂಕರಿಸುತ ಆದರದಿಂದೆನ್ನ ಮನೆಗೆ ಬಂದು ಶ್ರೀಧರ ಭೀಮೇಶಕೃಷ್ಣನೆದೆಯ ಮ್ಯಾಲ್ವಿ- ನೋದದಿ ಕುಳಿತಿದ್ದ ಮಾಲಕ್ಷ್ಮಿಗೆ 6
--------------
ಹರಪನಹಳ್ಳಿಭೀಮವ್ವ
ಮಂಗಳಾರತಿಯ ತಂದೆತ್ತಿರೆ ಶುಭಮಂಗಳ ಜಗದಾದಿದೇವಿಗೆ ಪ ಮಧುಕೈಟಭಾಸುರ ಮರ್ದನ ದೇವಿಗೆಮದನ ಕೋಟಿ ರೂಪ ಮಹಾದೇವಿಗೆಸದಮಲ ಬ್ರಹ್ಮರ ಹೃದಯದ ಆತ್ಮಗೆಮದನಾರಿ ಭೂತೆಗೆ ಆರತಿ ಎತ್ತಿರೆ 1 ಭಾನು ಸಾಸಿರ ಕೋಟಿ ತೇಜ ಮಹಾತ್ಮಳಿಗೆದಾನವಾಂತಕಳಾದ ದಯಾಶೀಲಗೆಮಾನನಿಧಿ ಭಕ್ತರನು ಮರೆಯದೇ ರಕ್ಷಿಪಬಾಣಾರಿ ಜನನಿಗೆ ಆರತಿಯನೆತ್ತಿರೆ 2 ರಕ್ಷಬೀಜಾರಿಗೆ ರಾಕ್ಷಸಧ್ವಂಸಿಗೆಭಕ್ತರ ಸಲಹುವ ಬಗಳಾಂಬೆಗೆಮುಕ್ತಿ ಸದ್ಗುರು ಚಿದಾನಂದವಧೂತಗೆಮುತ್ತಿನಾರತಿಯನೆತ್ತಿರೆ3
--------------
ಚಿದಾನಂದ ಅವಧೂತರು
ಮಂಗಳಾರತಿಯ ತಂದೆತ್ತಿರೆ ಹೇಮಾಂಗನೆಯರು ವೆಂಕಟಪತಿಗೆ ಪ.ಪೊಂಗಿಂಡಿಯುದಕ ಕಂಗಳಿಗೊತ್ತಿ ಪೊಸಬಗೆರಂಗು ಮಾಣಿಕದಕ್ಷತೆಯನಿಟ್ಟುಪೊಂಗಂಕಣ ಪೊಳೆವಿನ ಪ್ರಭೆಯಲಿ ಮರಿಭೃಂಗಕುಂತಳೆಯರೆಡಬಲದಿ 1ಅನುದಿನಮಂಗಳ ಮನಸಿಜನಯ್ಯಗೆವನಮಾಲಿ ಕೌಸ್ತುಭಹಾರನಿಗೆಘನಮಹಿಮೆಯ ಜಗ( ದ?) ವರಿಗೆ ತೋರುವನಿಗೆಮುನಿ ಸನಕಾದಿ ವಂದಿತ ಪಾದಗೆ 2ವಿಕ್ರಮಕೆ ಎದುರಾರಿಲ್ಲವೆಂದುಬಲಿಚಕ್ರನು ಸುರರ ಬಾಧಿಸುತಿರಲುಶಕ್ರನ ಪೊರೆದವನುಕ್ಕ ತಗ್ಗಿಸಿ ತ್ರಿವಿಕ್ರಮನೆನಿಸಿದ ದೇವನಿಗೆ 3ವ್ರಜದ ಗೋಪಾಂಗನೆಯರ ಮನೋಹರಗೆಭುಜಗಶಾಯಿ ಭಕ್ತ ಭಯದೂರಗೆನಿಜ ಭಕ್ತ ಪಾರ್ಥರ ಪಥಿಕರಿಸಿದವನಿಗೆಗಜವನುದ್ಧರಿಸಿದ ದನುಜಾರಿಗೆ 4ಕಡುಮೂರ್ಖ ಸೀತಾಕೃತಿಯನೊಯ್ದಸುರನಬಿಡದೆ ಮರ್ದಿಸಿದ ಶ್ರೀ ರಘುಪತಿಗೆಸಡಗರದಲಿ ಶೇಷಾದ್ರಿಲಿ ನಿಂತ ಎನ್ನೊಡೆಯ ಪ್ರಸನ್ನವೆಂಕಟಪತಿಗೆ 5
--------------
ಪ್ರಸನ್ನವೆಂಕಟದಾಸರು