ಪಾಲಿಸೋ ಕೃಷ್ಣ - ಇವಳ ಪಾಲಿಸೋ ಪ
ಪಾಲಿಸೊ ಪಾಲಿಸೊ - ಭಕ್ತ ಪರಿಪಾಲಪೇಳಬೇಕೇನೋ - ಸರ್ವಜ್ಞ ಸುಶೀಲ ಅ.ಪ.
ಸಂತಾನ ಕಾಂಕ್ಷಿತೆ - ಸಂತತ ನಿನ ಪಾದಚಿಂತಿಲಿಹಳ ಲಕ್ಷ್ಮೀ - ಕಾಂತನೆ ಪಾಲಿಸೊ 1
ಸಾಂದೀಪ ಗುರುವಿಗೆ - ಕಂದನ ತಂದಿತ್ತೆನಂದ ಗೋಪನ ಕಂದ - ಕಂದನ ಪಾಲಿಸೊ 2
ಕಂದಿ ಕುಂದಿಹಳು ಸು - ನಂದಳು ಚಿಂತೇಲಿಕಂದನ ಕೊಡು ಗುರು - ಗೋವಿಂದ ವಿಠಲ 3