ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಳವೆ ಯೋಗದಭ್ಯಾಸ ಹರಿಯೇ ಎನ್ನಕೈ ನೀ ಪಿಡಿಯದಿಹುದು ಸರಿಯೇ ಪ ದಿವ್ಯಯೋಗದ ಬಗೆಯ ಪೇಳಿದೈ ಗೋಪಾಲ ಸವ್ಯಸಾಚಿಯ ಧನ್ಯನೆನಿಸಿದೈ ಶ್ರೀಲೋಲ ಭವ್ಯವಾದಾಕೃತಿಯ ತೋರ್ದೆ ಗೋಪಿಬಾಲಾ ಅವ್ಯಯಾನಂದ ಮಾಂಗಿರಿರಂಗ ವಿಠಲ 1 ನಿರ್ಮಮತೆಯೇ ಬೀಜ ಸರ್ವಸೇವೆಯೇ ಬೇರು ಕರ್ಮದೊಳಗುತ್ಸಾಹವಿರಲದೇ ಸುರಿನೀರು ಮರ್ಮವಿಲ್ಲದ ಹೃದಯವೈಶಾಲ್ಯವೇ ಕುಸುಮ ನಿರ್ಮಲತೆಯೇ ಫಲವು ಇದು ಕರ್ಮಯೋಗ 2 ಭಕ್ತಿಯೆಂಬುದೆ ಬೀಜ ಸಮ್ಮತಿಯೆ ತಾಬೇರು ಭಕ್ತಜನರ ಸೇವೆಯೇ ಮೇಲೆರೆವ ನೀರು ಏಕಾಗ್ರಚಿತ್ತವೇ ಸರಸಪರಿಮಳಪುಷ್ಪ ಮುಕ್ತಿಯೇ ಫಲಮಿದೆ ಭಕ್ತಿಯೋಗ3 ಆಸನವೇ ಬೀಜ ಪ್ರಾಣಾಯಾಮವೇ ಬೇರು ಆಸೆಯಿಂ ಗೈವ ದಿನಚರ್ಯೆಯೇ ನೀರು ಮಾಸದಿರುವಾರೋಗ್ಯ ಪುಷ್ಪತಾನೊಮ್ಮನಮೆ ಭಾಸಿಪಾ ಫಲಮಿದೆ ಹಟಯೋಗವಯ್ಯ 4 ಯಮನಿಯಮಗಳೆ ಬೀಜಧಾರಣವೆ ತಾಂಬೇರು ಕ್ರಮಮಾದಘ್ರಣಿದಾನ ಮೇಲೆರೆವ ನೀರು ವಿಮಲಮಾಗಿಹ ಧ್ಯಾನ ಪೂರ್ವಸಂಪ್ರಜ್ಞತಾ ಕ್ರಮಸಮಾಧಿಯೆ ಫಲವು ಇದು ರಾಜಯೋಗ 5 ವರವಿವೇಕ ಬೀಜ ವೈರಾಗ್ಯವೇ ಬೇರು ಗುರುಕರುಣಮೆಂಬುದೇ ಮೇಲೆರೆವ ನೀರು ಪರಬ್ರಹ್ಮ ಜ್ಞಾನವೇ ಪರಿಮಳಿಸುವ ಪುಷ್ಪ ವರಮೊಕ್ಷವೇ ಫಲವು ಇದು ಜ್ಞಾನಯೋಗ 6 ಯೋಗಮಾರ್ಗವ ತಿಳಿದು ಅನುಸಂಧಿಯಿಂ ಸಕಲ ತ್ಯಾಗ ಮಾಡುವ ನಿಯಮವೆನಗಸಾದ್ಯ ಆಗಾಗ ನಿನ್ನ ನಾಮಂಗಳನು ಪೇಳ್ವುದೇ ಯೋಗವೆಂದೆನಿಸುವ ಮಾಂಗಿರಿರಂಗ ನೀಲಾಂಗ 7
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಂದು ನಿಲ್ಲೋ ಶ್ರೀಹರೇ-ಬಂದುನಿಲ್ಲೊ ಪ ಇಂದು ಹಿಂದು ನೀನೆಂದಿಗು ತಂದೆ ಗೋ- ವಿಂದ ಅನಿಮಿತ್ತಬಂಧು ಕಣ್ಣಮುಂದೆ ಅ.ಪ ಸ್ವಾಂಶದಿಂದ ಅಭಿವ್ಯಕ್ತಿಯಾದೆ ಪಂ- ಚಾಂಶತೋರಿ ಸರಸ ಜನನ ಮಾಡಿದೆ ಸ್ವಾಂಶನಾಗಿ ಅವತರಿಸಿ ಮೆರೆವ ಸ- ರ್ವಾಂಶದಿಂದಿಹ ತ್ರಿಂಶ ರೂಪನೇ 1 ಸ್ವಗತಭೇದವಿವರ್ಜಿತನೆನಿಸಿ ತ್ರಿಗುಣಮಯದಿ ಬ್ರಹ್ಮಾಂಡ ನಿರ್ಮಿಸಿ ಅಗಣಿತಮಹಿಮಾಧಾರನಾಗಿ ನಿಂದು ಮಿಗೆ ಶೋಭಿಸುವ ವಿರಾಟಮೂರುತಿಯೆ2 ಕಾರಣನೆನಿಸಿದ ಕರ್ಮನಿವೃತ್ತಿಗೆ ಸಾರವಾದ ಜ್ಞಾನಯೋಗ ಮಾರ್ಗವ ನಾರದಾದಿ ಮಹಾಮುನಿಗಳಿಗರುಹಿದ ನರನಾರಾಯಣ ಬದರಿ ಆಶ್ರಯನೇ 3 ಹಂಸಕಪಿಲ ದತ್ತಾತ್ರೇಯ ರೂಪನೆ ಹಂಸರಹಸ್ಯಗಳೆಲ್ಲವ ಪೇಳಿ ಸಂಶಯ ಬಿಡಿಸಿದೆ-ಜೀವಪರಮಾತ್ಮರ ಅಂಶಗಳರುಹಿದ ಹಂಸಮೂರುತಿಯೆ4 ಅಜಪಿತ ನೀ ಗಜರಾಜನ ಸಲಹಿದೆ ಭಜಿಸಿದ ವಾಲಖಿಲ್ಯರ ಕಾಯ್ದೆ ಅಜಹತ್ಯವು ವೃತ್ರವಧೆಯಿಂದ ಕಾಯ್ವ ಬಿ- ಡೌಜನ ಸಲಹಿದ ಗಜರಾಜ ವರದಾ5 ಪುರುಹೂತನ ಅಹಂಕಾರ ಖಂಡಿಸಿ ಕಿರುಬೆರಳಲಿ ಗೋವರ್ಧನಗಿರಿ ಎತ್ತಿ ಪರಿಪಾಲಿಸಿ ಗೋಬೃಂದವನೆಲ್ಲವ ಸುರರಿಂದ ಪೊಗಳಿಸಿಕೊಂಡೆ ಗೋವಿಂದ6 ಬುಧರರಿಯುಲು ಆ ವೇದ ವಿಭಾಗಿಸೆ ಉದಯಿಸಿ ಮುದದಿಂದ ಬದರಿಯ ಸದನದಿ ಬೋಧಿಸುತ್ತಲಿಹ ಬಾದರಾಯಣನೇ7 ಅಖಿಳಾಂಡಕೋಟಿಬ್ರಹ್ಮಾಂಡನಾಯಕ ವಿಕುಂಠಳೆಂಬೊ ಉದರದಿ ಜನಿಸಿ ಲಕುಮಿರೂಪಿಯಾದ ಸುಂದರಿಯ ಕೂಡ ಭೂ- ವೈಕುಂಠ ನಿರ್ಮಿಸಿದ ವೈಕುಂಠಮೂರುತಿಯೆ 8 ಸತ್ಯವ್ರತನೆಂಬೊ ಮನುವಿನುದ್ಧರಿಸಿ ಉತ್ತಮ ಔಷಧಿಗಳೆಲ್ಲವ ಸಲಹಿದೆ ದೈತ್ಯನಾದ ಉನ್ಮತ್ತನ ಕೊಂದು ಶ್ರುತಿಯ ತಂದಿತ್ತ ಮತ್ಸ್ಯಮೂರುತಿಯೆ 9 ಸುರಭಿನೆವನದಿ ಶರಧಿಮಥಿಸೆ ತಾ ಭರದಿ ಬೆನ್ನೊಳು ಧರಿಸಿಹೆ ಮಂದರ ಗಿರಿಧರನೆನಿಸಿದೆ ಕಮಠರೂಪನೆ 10 ಪ್ರಳಯ ಜಲಧಿಯೊಳು ಇಳೆಯನು ಕದ್ದಾ ಖಳಹಿರಣ್ಯನಾ ಶಿರವ ಚೆಂಡಾಡಿ ಜಲಧಿಯ ಶೋಧಿಸಿ ಇಳೆಯನು ತಂದು ಜಲಜಸಂಭವಗಿತ್ತ ಕ್ರೋಢರೂಪನೆ 11 ದುರುಳತನದಿ ತನ್ನ ತರಳನ ಬಾಧಿಪ ಹಿರಣ್ಯಕಶಿಪುವಿನ ಉದರವ ಬಗೆದು ಶರಣನಿಗಭಯವ ಕರುಣಿಸಿ ತೋರಿದ ಸರ್ವವ್ಯಾಪ್ತನೆಂದರುಹಿದ ನರಹರಿಯೇ12 ಬಲಿಯಿಂದಪಹೃತವಾದ ಸಾಮ್ರಾಜ್ಯವ ಸುಲಭದಿಂದಲಿ ಪುರಂದರಗಿತ್ತು ಸಲಹಿದೆ ಒಲಿದು ಬಲಿಯ ಭಕ್ತಿಗೆ ನೀ ಬಾ- ಗಿಲ ಕಾಯ್ದ ವಟು ವಾಮನನೆ 13 ದುರುಳತನದಿ ಆ ಹೈಹಯರೆಂಬ ನರಪರದುರ್ಮದ ಮರ್ದಿಸಲೋಸುಗ ನೃಪರ ಶಿರವನೆಲ್ಲ ತರಿದು ನಿಗ್ರಹಿಸಿದ ಭಾರ್ಗವ ಮೂರ್ತೇ 14 ಶರಧಿ ಬಂಧಿಸಿ ಸೇತುಕಟ್ಟಿ ಕಪಿ- ವೀರರೊಡನೆ ಆ ರಾವಣನಡಗಿಸಿ ಭೂ ಭಾರವನಿಳುಹಿಸಿ ಭೂಮಿಜೆಯನು ತಂದ ಅ- ಸುರ ಮರ್ದನ ದಾಶರಥಿ ರಾಘವ 15 ವಸುಮತಿಭಾರವನಿಳುಹಲೋಸುಗ ವಸುದೇವಸುತ ಶ್ರೀಕೃಷ್ಣನೆನುತಲಿ ಶಿಶುಪಾಲಾದಿಗಳಾಂತಕನೆನಿಸಿದ ಶಶಿಮುಖಿರುಕ್ಮಿಣಿ ಸಹಿತ ಶ್ರೀಕೃಷ್ಣ 16 ವೇದ ಕರ್ಮಗಳಿಗನರ್ಹರೆಲ್ಲರು ಸಾದರದಿಂದಲಿ ಅಧಮರೆಸಗುತಿರೆ ವೇದವಿರುದ್ದವಾದಗಳಿಂದಲೇ ಮೋಹವ ತೋರಿದೆ ಬುದ್ಧಸ್ವರೂಪನೆ17 ದುರುಳತನದಿ ಇಳೆಯಾಣ್ಮರುಗಳು ಕ್ರೂರತನದಿ ಪರಪೀಡಕರಾಗಿರೆ ಪರಿಹರಿಸಲು ಭೂಭಾರಕ್ಕಾಗಿ ಅವ- ತರಿಸಿ ಮೆರೆಯುವ ಕಲ್ಕಿರೂಪನೆ 18 ಏಕರೂಪ ಅನೇಕರೂಪನೆ ಏಕಮೇವ ನೀ ಪ್ರಕಟ ಮಾಡುವೆ ಪಿನಾಕಿ ಪ್ರಮುಖರು ಏಕದೇಶದಿ ಸಾಕಲ್ಯವ ತಿಳಿಯರೊ 19 ದೋಷದೂರ ಶೇಷಾಚಲವಾಸ ಪೋಷಿಸೊ ನಿನ್ನಯ ದಾಸಜನರ ಸರ್ವ ದೋಷಕಳೆದು ಮನೋಕಾಶದಲಿ ನಿಲ್ಲೊ ಶೇಷಗಿರೀಶ ಶ್ರೀ ವೆಂಕಟೇಶನೆ 20
--------------
ಉರಗಾದ್ರಿವಾಸವಿಠಲದಾಸರು
ಹಯಾನನ ವಿಠಲಾ ನೀ ದಯದಿ ಸಲಹೊ ಇವಳಾ |ದಯಾಪಯೋನಿಧಿ ಎಂದು ನಿನಗೆ ಭಿನ್ನೈಪೇ ಪ ಕುಕ್ಷಿಯೊಳು ಜಗಧರಿಪ ಪಕ್ಷಿವಾಹನದೇವಲಕ್ಷಿಸದಲೇ ದೋಷ | ಲಕ್ಷವನು ಇವಳಾಈಕ್ಷಿಪುದು ಕರುಣಾಕಟಾಕ್ಷದಲ್ಲೆಂದೆನುತಲಕ್ಷ್ಮೀರಮಣನೆ ಹರಿಯೆ ಪ್ರಾರ್ಥಿಸುವೆ ನಿನಗೇ 1 ವಿನುತ | ಬಾಗಿ ಬೇಡುವೆನೋ |ಜಾಗುಮಾಡದೆಲೆ ವೈ | ರಾಗ್ಯ ಭಕ್ತಿಜ್ಞಾನಯೋಗ ಕೊಟ್ಟುದ್ದರಿಸು | ಸಾಗರಜೆ ರಮಣಾ 2 ವಾಚಾಮ ಗೋಚರನೆ | ನೀಚೋಚ್ಚಕ್ರಮ ತಿಳಿಸಿಮೋಚ ಕೇಚ್ಛೆಯ ಮಾಡೊ | ಪಾಚಕಸುವಂದ್ಯಾಪ್ರಾಚೀನ ಕರ್ಮಾಳಿ ಯೋಚಿಸಲು ಅಳವಲ್ಲಆಚರಿತ ಸಂಚಿತವ | ಮೋಚಿಸಾಗಾಮೀ 3 ಸಿರಿ | ನಲ್ಲ ನಿನಗೀಪರಿಯಸೊಲ್ಲ ಪೇಳುವುದುಚಿತೆ | ಚೆಲ್ವ ಹಯವದನಾಬಲ್ಲಿದನೆ ನೀನಾಗಿ | ಚೆಲ್ವ ರೂಪವ ತೋರೆಸಲ್ಲಲಿತ ಅಂಕಿತವ | ಸಲ್ಲಿಸಿಹೆ ದೇವಾ 4 ಭಾವುಕಾರ್ಜುನ ಬಂಡಿ | ಬೋವನಾಗುತ್ತ ಭವನೋವಕಳೆವೋಪಾಯ | ನೀವಲಿದು ಪೇಳೀತಾವಕರ ಪೊರೆದಂತೆ | ಭಾವುಕರ ಪೊರೆ ಬೇಡ್ವೆಗೋವುಗಳ ಪಾಲ ಗುರು ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು