ಪಾಲಿಸಬೇಕಯ್ಯ ಪವಮಾನ ದೂತಾ ಪ.
ಬಾಲಕನು ಮಾಡಿರುವ ಅಪರಾಧವೆಣಿಸದೆಲೆ ಅ.ಪ.
ಕಾಲ ಶಿಷ್ಟರೊಡೆಯಮುಟ್ಟಿ ಭಜಿಸುವ ನಿನ್ನ ಘಟ್ಟಿ ಜ್ಞಾನಮೃತವಕೊಟ್ಟು ಸಲಹಲಿ ಬೇಕು ದಿಟ್ಟ ಪುರುಷ 1
ಮಧ್ವ ದಾಸರೊಳ್ ನಿಂದು ತಾರತಮ್ಯ ಪಂಚಭೇದಪದ್ಧತಿಗಳನುಸರಿಸಿ ತಿದ್ದಿ ತಿಳುಹಿದೆಯೋ ಶ್ರೀಮಧ್ವರಾಯರೇ ಜಗಕೆಲ್ಲ ಗುರುವೆಂಬಶ್ರದ್ಧೆಯನು ಪುಟ್ಟಿಸಿದೋ ಶೇಷಪದ ಯೋಗ್ಯ 2
ಮಂದಮತಿಯೆಂದು ನಾ ನಿಂದ್ಯ ಮಾಡದೆ ಮನಮಂದಿರದಿ ಛಂದದಲಿ ಪೊಳೆಯಬೇಕುಮಂದರೋದ್ಧರನ ಪದ ಕುಂದದಲೆ ಭಜಿಸುವಸಿಂಧುಶಯನ ತಂದೆವರದವಿಠಲದಾಸ 3