ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಬಲ್ಲಿದನೋ ಹನುಮಂತ ನೀನು ಏನು ಬಲ್ಲಿದನೋ ಪ ಏನು ಬಲ್ಲಿದನಯ್ಯ ನೀನು ಜ್ಞಾನಮೂರುತಿ ಜಾನಕೀಶನ ಧ್ಯಾನ ಸುಖಸಾಮ್ರಾಜ್ಯದಲ್ಲಿ ಲೀನನಾಗಿ ಸುಖಿವೆ ಬಲವಂತ ಅ.ಪ ಶರಧಿ ಜಿಗಿದವನೋ ಭರದಿ ದುರುಳನ ಪುರವ ಸೇರಿದನೋ ನಿರುತ ದೊರೆಮಾತೆ ದರುಶನಾದನವನೋ ಪರಮವೀರನೋ ಧರೆಯ ಮಾತೆ ಕೃಪಾಪಾತ್ರನಾಗಿ ಪರಮಪಾವನ ವರವ ಪಡೆದು ಮರಳಿ ದುರುಳನ ವನವ ಸೇರಿ ಧುರವ ಜೈಸಿದಿ ಧೀರಮಾರುತಿ 1 ತಿರುಗಿ ಅಂಗದನ ಬಲವನ್ನು ಸೇರಿ ಸಾರ ಕಥನವನ್ನು ಅರುಹಿ ಮುಂದೆ ಪರಮಪಾವನನ ಚರಣಕಂಡಿನ್ನು ಇರಿಸಿ ಹರಿಯಾಜ್ಞಂಗೀಕರಿಸಿ ತ್ವರದಿ ದಕ್ಷಿಣಶರಧಿ ಹೂಳಿಸಿ ಭರದಿ ಲಂಕೆಗೆ ಮುತ್ತಿಗಿತ್ತಯ್ಯ 2 ಬುದ್ಧದೇಹದ ಕುಂಭಕರ್ಣನ ಕ್ಷುದ್ರ ಇಂದ್ರಜಿತುನ ಮತ್ತವನ ತಂದೆ ಬುದ್ಧಿಹೀನನ್ನ ಹತ್ತು ತಲೆಯವನ ಯುದ್ಧದಿಂದ ಬದ್ಧರಕ್ಕಸ ರೊದ್ದು ಬೇಗನೆ ಛಿದ್ರ ಮಾಡಿ ಜ ಗದ್ರಕ್ಷ ಶ್ರೀರಾಮ ಪಾದಪದ್ಮಕ್ಕೆ ಮುದ್ದು ಮುಖಿಯನು ತಂದುಕೊಟ್ಟೆಯ್ಯ 3
--------------
ರಾಮದಾಸರು
ದಾಸಜನಕೆ ಸಹಯನಾಗಬಾರದೆ ಪಾದ ಪ ಕಾಸಿನ ಋಣಕಂಜಿ ಆಶಿಸಿ ಪರರಿಂದಾ ಯಾಸದಿ ಬೇಡುವ ಭೋಗ ತಪ್ಪಿಸಲಿಕ್ಕೆ 1 ಎಂದಿಗಾದರಿದು ಒಂದಿನ ನಿಜವಾಗಿ ಕುಂದುವ ಈ ಭವಬಂಧ ತಪ್ಪಿಸಲಿಕ್ಕೆ 2 ಜ್ಞಾನಿಗಳಾಸ್ಪದ ಜ್ಞಾನಮೂರುತಿ ಮಮ ಪ್ರಾಣ ಶ್ರೀರಾಮ ನಿನ್ನ ಧ್ಯಾನ ನಿಲ್ಲಿಸಲಿಕ್ಕೆ 3
--------------
ರಾಮದಾಸರು
ನೀನೆ ದಯಮಾಡಲು ನಾನುದ್ಧಾರಾಗುವೆನು ಏನೇನು ಪರಲೋಕ ನಾನರಿಯೆ ಶ್ರೀಹರಿಯೆ ಪ ಹೀನಸಂಸಾರದೊಳಗೆ ಮುಳುಗಿ ಶ್ವಾನನಂದದಿ ಕರಗಿ ಕೊರಗಿ ಜ್ಞಾನಶೂನ್ಯನಾಗಿ ಬಳಲುವೆ ಜ್ಞಾನಮೂರುತಿ ಅಭಯ ಪಾಲಿಸು ಅ.ಪ ಉದಯದಲ್ಲೇಳುತ ಸದಮಲ ತವಪಾದ ಮುದದಿಂದ ನೆನೆಯದೆ ಅಧಮತನದಿ ವಿಧವಿಧದಿ ಅಧಮಜನರ ಸುದ್ದಿ ವದನದಿಂದಾಡುತ ಮುದಿಕೋಣನಂದದಿ ಮದಮುಚ್ಚಿ ನಡೆದೆ ಎಡಬಿಡದೆ ಕುದಿದೆನನುದಿನ ಪರರ ಮನೆ ಸಂ ಪದವ ನೋಡಿ ಸಹಿಸದವರ ಸದನ ಮುರಿಯುವ ಬುದ್ಧಿ ಹುಡುಕಿದೆ ಪದುಮನಾಭಪರಾಧ ಕ್ಷಮಿಸಿ1 ಒಂದು ನಾನರಿಯದೆ ಮುಂದೆ ಭಲಾಯೆಂದು ಹಿಂದೆ ನಿಂದಿಸಿ ನಕ್ಕೆ ದ್ವಂದ್ವಕರ ಬಡಿದು ಬಲು ಜರಿದು ಹಂದ್ಯಮೇದ್ಯಕಂಡಾನಂದಿಪತೆರದನ್ಯ ಸುಂದರಿಯರ ನಯನದಿಂದ ನೋಡಿದೆ ಎವೆಯಿಕ್ಕದೆ ಇಂದಿರೇಶನೆ ನಿಮ್ಮ ಪಾದವ ಒಂದೆ ಮನದಿಂ ಭಜಿಸದೆ ಭವ ದಂದುಗದಲಿ ಬಿದ್ದು ನೊಂದವ ಕಂದನೊಳು ಕೃಪಾದೃಷ್ಟಿಯಿತ್ತು 2 ದಾಸಜನರ ಆವಾಸ ನಾ ಬಯಸದೆ ಈಷಣ ಪ್ರಪಂಚದ್ವಾಸನದಲ್ಲಿ ಬಹು ತೊಳಲಿ ಆಸೆಯೆಂಬುವ ಮಹಪಾಶದಬಲೆಯೊಳು ಘಾಸಿಯಾಗುವೆ ಸಿಲ್ಕಿ ಸೋಸಿ ನೋಡದಲೆ ಮರೆ ಮೋಸದಲಿ ದಾಸ ಬುದ್ಧಿಯಿಂದ ಮಾಡಿದ ಬಲು ದೋಷರಾಶಿಗಳೆಲ್ಲ ನಾಶಿಸಿ ಶ್ರೀಶ ಶ್ರೀರಾಮ ನಿಮ್ಮ ಪಾದ ದಾಸನಿಗೆ ನಿಜಧ್ಯಾಸ ನಿಲ್ಲಿಸು 3
--------------
ರಾಮದಾಸರು
ಮರವೆ ಮರವೆ ಮಾಡಿತೋಅಂತರಂಗದಲಿ ಭೋರೆಂದು ತುಂಬಿಅಂತು ಅಂತೆನಲು ಕೂಡದು ಪ್ರಣವನಾದ ಪ ಹೊಟ್ಟೆಗುಣ್ಣುವುದನೆ ಮರೆಸಿತು ಈ ಪ್ರಣವನಾದಮುಟ್ಟು ಚಟ್ಟನೆ ಮರೆಸಿತುಕೆಟ್ಟಕೇಡನೇನ ಹೇಳಲಿಉಟ್ಟ ಬಟ್ಟೆಯ ಅರಿವೇ ಇಲ್ಲ 1 ಆಸೆಯೆಂಬುದ ಮರೆಸಿತು ಈ ಪ್ರಣವನಾದದ್ವೇಷವೆಂಬುದು ತೊರೆಸಿತುನಾಶವಾಯಿತು ಜಪತಪವೆಲ್ಲಮೋಸವೆನಗಿಂತು ಮಾಡಿತು2 ಧ್ಯಾನವೆಂಬುದು ಮರೆಸಿತು ಈ ಪ್ರಣವನಾದಓಂಕಾರವೆಂಬುದು ಕಲಿಸಿತುಜ್ಞಾನಮೂರುತಿ ಚಿದಾನಂದತಾನೆ ತಾನೆ ತಾನೆ ಎಂಬ 3
--------------
ಚಿದಾನಂದ ಅವಧೂತರು
ಸಾಕು ಸಂಸಾರದ ವ್ಯಾಕುಲ ತೀರಿಸಿ ಲೋಕೇಶ ಸುಖ ಕರುಣಿಸೊ ಪ ಸಾಕು ಸಜ್ಜಾಗಿಲ್ಲ ಸಂಸಾರ ಶೋಕದಬ್ಧಿಲಿ ಬಿದ್ದು ಬಲುಬಲು ನೂಕುನುಗ್ಗಾಗಿ ಖೋಡಿಯೆನಿಪ ಲೌಕಿಕದ ಘನತಾಪದಿರುವ ಅ.ಪ ಮೂಢಮತಿಯಿಂದತಿ ರೂಢಿಸಂಪದ ನೆಚ್ಚಿ ನೋಡಿನೋಡಸೂಯೆ ಪಡುತ ಆಡಬಾರದ ನಾಡಮಾತುಗ ಳಾಡಿ ಮುಖವನು ಬಾಡಿ ಪರರನು ಹೇಡಿತನದಿಂ ಮಾಡಿಸ್ತೋತ್ರವ ಬೇಡಿಬದುಕುವ ಖೋಡಿದುರ್ಭವ 1 ಏನು ಎನ್ನುವರೆಂದು ಗೋಣುಮೇಲೆತ್ತದೆ ಪ್ರಾಣ ಕರದಲ್ಲಿ ಪಿಡಿದು ಹೀನ ಸ್ಥಿತಿಯಿಂ ನೀನೆ ಗತಿ ಎನ್ನ ಮಾನವುಳಿಸೆಂದು ನಾನಾ ಪರಿಯಲಿ ದೀನಸ್ವರದಿಂ ತ್ರಾಣಗುಂದಿ ದೈನ್ಯಬಡುವಂಥ ಹೀನಬವಣೆ 2 ಕಾನನಸಂಸಾರದ್ಹಾನಿಮಾಡದೆ ಎನ್ನ ಜ್ಞಾನಬೆಳಗಿನನೊಳಾಡಿಸೊ ಜ್ಞಾನಮೂರುತಿ ದೀನದಯಾಳು ಭಾನುಕೋಟಿಪ್ರಭೆ ಜಾನಕೀಶ ನಾನಾಲೋಕವ ನೀನೆ ಒಳಗೊಂಡು ಮಾಣದಿಹಿ ಮಮಪ್ರಾಣ ಶ್ರೀರಾಮ 3
--------------
ರಾಮದಾಸರು