ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಸುಕೃತವ ಮಾಡಿ ಜನಿಸಿದಳೊ ಯಶೋದೆ ದೀನಪಾಲಕ ನಿನ್ನ ಮಗನೆಂದು ಮನದಣಿಯೆ ಸೇವಿಪೆಳೊ ಪ. ಅನುದಿನ ಜಪತಪಾನುಷ್ಠಾನದಿಂದಿರುತಾ ಪಾದ ಸೇವಿಪ ಮುನಿಗಳಿಗೆ ದೊರೆಯುವ ವನಜನಾಭನೆ ನಿನ್ನ ವನರುಹಾನನ ನೋಡಿ ದಿನದಿನದಿ ಸುಖಿಸುವ ಘನ ಪುಣ್ಯ ಗಳಿಸಿದಳೋ 1 ದುಷ್ಟರನು ಸಂಹರಿಸಿ ಮೈ ಎಷ್ಟು ನೋವೊ ಎಂದು ದಿಟ್ಟೆ ಬಿಸಿನೀರೆರೆಯುವಳೊ ಇಷ್ಟ ಮೂರುತಿ ನಿನ್ನ ಶ್ರೇಷ್ಠತರ ಆಭರಣ ದಿಟ್ಟ ಕೃಷ್ಣ ನಿನಗಿಟ್ಟು ನೋಡುವಳೊ 2 ಕಸ್ತೂರಿ ತಿಲಕವನು ಶಿಸ್ತಿನಲಿ ಶೃಂಗರಿಸಿ ಕಸ್ತೂರಿರಂಗ ಶ್ರೀ ಶ್ರೀನಿವಾಸ ನಿನ್ನೆತ್ತಿ ತೊಡೆಯಲ್ಲಿ ಸ್ವಸ್ಥದೊಳು ಮಲಗೆಂದು ಪೊಂಬಟ್ಟಲೊಳು ಕ್ಷೀರವನು ಹಸ್ತಿವರದನೆ ಕುಡಿಯೆಂದು ಜೋಗುಳವ ಪಾಡುವಳೊ 3
--------------
ಸರಸ್ವತಿ ಬಾಯಿ
ಓಡಿ ಬಾರೋ ರಂಗಯ್ಯ ಓಡಿ ಬಾರೋ ಕೃಷ್ಣಯ್ಯ ಪ. ನೋಡಿ ನಿನ್ನ ಮುತ್ತನೀಡುವೆ ಹಾಡಿ ಜೋಗುಳವ ಪಾಡುವೆ ಅ.ಪ. ಮೊಸರು ಭಾಂಡ ಒಡೆದು ಬೆಣ್ಣೆ ಹಸುಳೆ ಮೆದ್ದು ಬಾಯೆಲ್ಲಾ ರಸಿಕಸಿಯಾಗಿರುವ ಮೈಗೆ ಬಿಸಿ ನೀರೆರೆವೆನೊ ರಂಗ 1 ಬಿಸಿ ದೋಸೆಯ ಕೊಡುವೆನೆ ಮೊಸರೋಗರವ ಉಣಿಸಿ ನಿನಗೆ ಹಸುರಂಗಿಯ ತೊಡಿಸುವೆ ಕೃಷ್ಣಾ 2 ಮುದ್ದು ಮುದ್ದಾದ ಪಾದ ಹೆಜ್ಜೆನಿಟ್ಟು ಬಾರೆಲೊ ಮುದ್ದೆ ಬೆಣ್ಣೆ ಹಣ್ಣು ಕೊಟ್ಟು ಮುದ್ರೆಯುಂಗುರವನಿಟ್ಟು ನೋಡುವೆ 3 ಅಣ್ಣ ಬಲರಾಮನೊಡನೆ ಚಿಣ್ಣ ಆಡಬಾರೆಲೊ ಚಿಣ್ಣಿಕೋಲು ಚಂಡು ಬುಗುರಿ ಚಿಣ್ಣ ಕೊಡುವೆನೋ ಕೃಷ್ಣಾ 4 ಶೃಂಗಾರವ ಮಾಡುವ ಶ್ರೀ ಶ್ರೀನಿವಾಸ ಬಾರೆಲೊ ಮುದ್ದು ಕಂಗಳಿಗೆ ಕಪ್ಪನ್ಹಚ್ಚಿ ರಂಗ ನಿನ್ನ ನೋಡುವೆದಣಿಯ5
--------------
ಸರಸ್ವತಿ ಬಾಯಿ
ಜೋ ಜೋ ಜೋ ಜೋ ಎನ್ನಿ ನಿರ್ವಿಕಾರಗೆಜೋ ಎಂದು ತೂಗಿರಿ ಚಿದಾನಂದ ದೊರೆಗೆ ಪ ಚಿದ್ಬಯಲಿನೊಳು ಹೃದಯ ತೊಟ್ಟಿಲ ಮಾಡಿಬದ್ಧ ವೇದಾಂತದ ನೇಣ ಬಿಗಿದುಸದ್ಭಾವವೆಂಬ ಹಾಸಿಗೆಯ ಹಾಸಿಶುದ್ಧಾತ್ಮನನು ಭಾವದಿ ತಂದು ನೀಡಿ 1 ಅದ್ವೈತವೆಂಬ ಆಭರಣ ತೊಡಿಸಿಸಿದ್ಧ ಭೂಮಿಕೆ ಎಂಬ ಅಡವನಿಡಿಸಿಬುದ್ಧಿ ನಿರ್ಮಳವಾದ ತಲೆದಿಂಬನಿಡಿಸಿನಿದ್ದೆ ಮಾಡೋ ಬ್ರಹ್ಮಾನಂದ ಬೋಧದಲಿ 2 ಚಿತ್ಪ್ರಭೆಯ ದೀಪವನು ಎಡಬಲದಿ ಹಚ್ಚಿಮೊತ್ತವಹ ದಶನಾದ ಭೇರಿಯರವ ಹಚ್ಚಿಮತ್ತೆ ಓಂಕಾರ ಮಂತ್ರ ಘೋಷದಿ ಮುಚ್ಚಿನಿತ್ಯಾತ್ಮನನು ನೋಡಿ ಹರುಷ ತುಂಬುತಲಿ 3 ವಸ್ತು ಸಾಕ್ಷಾತ್ತೆಂಬ ಮುತ್ತೈದೆಯರೆಲ್ಲಸ್ವಸ್ಥ ಚಿತ್ತೆಂಬುದನೆ ಸಿಂಗರಿಸಿಕೊಂಡುನಿಸ್ಸಂಗನಹ ಆತ್ಮ ಶಿಶುವನೊಡತಂದುಸುಸ್ವರದ ನಾದದಲಿ ಜೋಗುಳವ ಪಾಡುತಲಿ 4 ಜೋ ಜೋ ಕಾಮಸ್ತಂಭವ ಎನ್ನಿ ನರರೆಲ್ಲಜೋ ಜೋ ಕ್ರೋಧ ಸ್ತಂಭನ ಎನ್ನಿ ನರರೆಲ್ಲಜೋ ಜೋ ಮೋಹ ಸ್ತಂಭನ ಎನ್ನಿ ನರರೆಲ್ಲಜೋ ಜೋ ವಿಷಯ ಸ್ತಂಭನ ಎನ್ನಿ ನರರೆಲ್ಲ5 ಜೋ ಜೋ ಯಮನಿಯಮಾಸನ ಅರುಹಿದವನೆಜೋ ಜೋ ಜೋ ಜೋ ಖೇಚರ ಮುದ್ರೆ ನಿಲಿಸಿದವನೆಜೋ ಜೋ ಜೋ ಜೋ ಅವಿದ್ಯೆ ಖಂಡಿಸಿದವನೆಜೋ ಜೋ ಜೋ ಜೋ ಜೀವನ್ಮುಕ್ತಿದಾತನೆ 6 ಜೋ ಜೋ ಪರಮಾರೂಢನೆ ಪರಮೇಶಜೋ ಜೋ ಪರಮ ಪರೇಶನೆ ಪಂಡಿತಜೋ ಜೋ ನಿರುತ ವಸ್ತು ವ್ಯಕ್ತ ಅವ್ಯಕ್ತಜೋ ಜೋ ಶರಣ ರಕ್ಷಕ ರಾಜ ಯೋಗೀಂದ್ರ ಜೋ ಜೋ 7 ಸತ್ಯ ಸನಾಥ ವಿಶ್ವೋತ್ಪತ್ತಿ ಜೋ ಜೋಪ್ರತ್ಯಗಾತುಮ ಪರಬ್ರಹ್ಮನೆ ಜೋ ಜೋನಿತ್ಯ ಸಹಜಾನಂದ ಚಿನ್ಮಾತೃ ಜೋ ಜೋಭಕ್ತರ ಭಂಡಾರಿ ಭಾಗ್ಯನೆ ಜೋ ಜೋ 8 ಮಿಹಿರ ಶತಕಳೆಯೆಂಬ ಮಂತ್ರಪುಷ್ಪವ ಚೆಲ್ಲಿಮಹಾ ಬೆಳಕಿನ ಮಂಗಳಾರತಿಯ ಬೆಳಗುತಲ್ಲಿಅಚಲ ಸಮಾಧಿಯೆ ಆದ ಯೋಗನಿದ್ರೆಯಲಿಮಹಾ ಚಿದಾನಂದಾವಧೂತ ಮಲಗಿರು ಸುಖದಲ್ಲಿ 9
--------------
ಚಿದಾನಂದ ಅವಧೂತರು
ತ್ರಿಮೂರ್ತಿಗಳ ಲಾಲಿ ಜೋಜೋ ಬಾಲಕೃಷ್ಣ ಜೋಗುಳವ ಹಾಡುತ್ತ ತೂಗುವೆ ನಾ ಪ. ನವರತ್ನ ಖಚಿತದ ತೊಟ್ಟಿಲ ಕಟ್ಟಿ ನಾಗಸಂಪಿಗೆ ಜಾಜಿ ಮಾಲೆಯನ್ಹಾಕಿ ನಾಲ್ಕುವೇದದ ಸರಪಣಿ ಬಿಗಿದು ನಾಗಶಯನನ ಮಲಗಿಸಿ ಬೇಗ ರಾಗದಿ ಅನುಸೂಯ ಪಾಡಿ ತೂಗಿದಳು ಜೋ 1 ಮುತ್ತು ಮಾಣಿಕ್ಯದ ತೊಟ್ಟಿಲ ಕಟ್ಟಿ ಮುತ್ತು ಪವಳದ ಸರಪಣಿ ಬಿಗಿದು ಮುದದಿ ಮಲ್ಲಿಗೆ ಜಾಜಿ ಪುಷ್ಪವ ಕಟ್ಟಿ ಮುಕ್ತ ಬ್ರಹ್ಮನ ಮಲಗಿಸಿ ಬೇಗ ಅರ್ತಿಲಿ ಅನಸೂಯ ತೂಗಿದಳಾಗ 2 ನೀಲ ಮಾಣಿಕ್ಯದ್ವಜ್ರತೊಟ್ಟಿಲ ಕಟ್ಟಿ ಮೇಲೆ ಕೆಂಪಿನ ಸರಪಳಿ ಬಿಗಿದು ಮಾಲತಿ ಮಲ್ಲಿಗೆ ಮಾಲೆಯ ಕಟ್ಟಿ ನೀಲಕಂಠನ ಮಲಗಿಸಿ ಬೇಗ ಬಾಲನ ಅನಸೂಯ ತೂಗಿದಳಾಗ 3 ಈ ಪರಿಯಿಂದಲಿ ತೂಗುತಿರೆ ತಾಪಸ ಅತ್ರಿಋಷಿಯಾಗ ಬರೆ ಭೂಪರ ತೊಟ್ಟಿಲು ಕಾಣ ಬರೆ ಪರಿ ಶಿಶುಗಳು ಯಾರೆನ್ನುತಾ ಶ್ಚರ್ಯದಲಿ ಸತಿಯ ಕೇಳುತಾ 4 ನಮ್ಮ ಪುಣ್ಯದ ಫಲ ವದಗಿತೆಂದು ಮುನ್ನ ತ್ರಿಮೂರ್ತಿಗಳು ಶಿಶುರೂಪದಿ ಬಂದು ತನ್ನ ಪತಿಯ ಕೂಡ ಅರುಹುತಲೆ ಚಿನ್ನರ ತೂಗುತ್ತ ಹರುಷದಿ ಚೆನ್ನ ಶ್ರೀ ಶ್ರೀನಿವಾಸನ್ನ ತೂಗಿದಳು 5
--------------
ಸರಸ್ವತಿ ಬಾಯಿ
ಮಲಗು ಮಲಗೆಲೊ ಸುಮ್ಮನೆ ಸುಕುಮಾರ ಚೆಲುವ ಜೋಗುಳವ ಪಾಡುವೆ ಗೋಪಾಲ ಪ ಲಲನಾಮಣಿಯರು ಸುಲಭದಿ ನಿನ್ನನು ಕಲಭಾಷಣದಿಂದ ಸೆಳೆಯ ಬಯಸುತಿಹರೋ ಅ.ಪ ಭೋಗಿಶಯನ ಹರಿ ಈ ಜಗದೊಳಗೆ ಈಗ ಬಂದಿರುವ ಜಾಗವನರಿಯದೆ ಯೋಗಿ ಜನರು ಅನುರಾಗದಿಂದ ನಿನ್ನ ಸಾಗಿಸಲಿರುವರೊ ಕೂಗದೆ ಸುಖದಲಿ 1 ದುರುಳ ಶಕಟನನು ಮುರಿದ ಕೋಮಲದ ಚರಣ ಕಮಲಗಳು ಉರಿಯುತಲಿದ್ದರು ಮರೆಯಲದನು ಸುವಿನೋದವೀಯುವ ಸರಸಪದಗಳನು ಪರಿಪರಿಯರುಹುವೆನೊ 2 ಎನ್ನಯ ಕರಗಳು ನೋಯುತಲಿರುವುವು ಚಿನ್ಮಯ ರೂಪನೆ ನಿದ್ರೆಯ ಮಾಡೊ ದಧಿ ಪಯ ಬೆಣ್ಣೆಯ ಕೊಡುವೆ ಪ್ರಸನ್ನ ಸುಹೃದಯದಲಿ 3
--------------
ವಿದ್ಯಾಪ್ರಸನ್ನತೀರ್ಥರು
ಆವ ಪುಣ್ಯವೊ ಗೋಪಿಗಾವ ಪುಣ್ಯವೊ ಪ.ಆವ ಪರಬೊಮ್ಮನಾವಾವ ಪರಿಯಲಾಡಿಸುವ ಅ.ಪ.ಮಾರನನ್ನ ಪೆತ್ತನ ಕುಮಾರನೆಂದು ಕರೆದು ತನ್ನಮಾರಬೀಸಿ ಬಿಗಿದಪ್ಪಿ ಮೋರೆ ನೋಡಿ ಮೊಲೆಯ ಕೊಡುವ1ಕಾಲನಾಗಿ ಜಗವ ತತ್ಕಾಲದಲ್ಲಿ ನುಂಗುವಂಗೆಕಾಲಮೇಲೆ ಮಲಗಿಸಿ ತ್ರಿಕಾಲದಲ್ಲಿ ಹಾಲನೆರೆವ2ನೀತ ಪ್ರಭು ವಿಶ್ವಕೆ ವಿನೀತನಾಗಿ ಕೈಯ ಒಡ್ಡೆನೀತಿ ಹೇಳಿ ನವನವನೀತವಿತ್ತು ರಂಜಿಸುವ 3ಆನೆಗೊಲಿದು ಎಂಟುದಿಕ್ಕಿನಾನೆಯಾಳ್ದ ಅಪ್ರತಿಮ ದಯಾನಿಧಿಯ ಕುಳ್ಳಿರಿಸಿ ಆನೆ ಬಂತಂತಾನೆಯೆಂಬ 4ತೋಳನೋಡುಧೈರ್ಯದೀರ್ಹತ್ತು ತೋಳಿನವನ ಹೋರುವ ನಳಿತೋಳವಿಡಿದು ವಾರಂವಾರ ತೋಳನ್ನಾಡೊ ಮಗನೆ ಎಂಬ 5ತಾರಕೋಪದೇಶಕಗೆತಾರಕರಂಗನಳಲುತಾರಕಪತಿಯ ತೋರಿ ತಾರಕ್ಕ ಬಿಂದಿಗೆಯೆಂಬ 6ದಟ್ಟವಾದ ಜೀವಜಾಲದಅಟ್ಟುಳಿನಿವಾರಣಂಗೆದಟ್ಟು ದಟ್ಟು ಎಂದು ರಂಗನ ದಟ್ಟ ಸಾಲನಿಕ್ಕಿಸುವ 7ಚಿನ್ಮಯಾತ್ಮ ಮುಕ್ತಾಮುಕ್ತ ಚಿನ್ನರನಾಡಿಸುವಂಗೆಚಿನ್ನ ತಾ ಹೊನ್ನ ಗುಬ್ಬಿ ಚಿನ್ನ ಗುಬ್ಬಿಯಾಡಿಸುವ 8ದೃಷ್ಟಾದೃಷ್ಟದೇಹಿಗಳದೃಷ್ಟ ನಿಯಾಮಕಂಗೆದೃಷ್ಟಿ ತಾಕಿತೆಂದು ತೆಗೆದು ದೃಷ್ಟಿ ದಣಿಯೆತುಷ್ಟಿಬಡುವ9ಅನ್ನಮಯನು ಬ್ರಹ್ಮಾದ್ಯರಿಗೆ ಅನ್ನಕಲ್ಪತರುಪರಮಾನ್ನ ಚಿನ್ನಿಪಾಲಿನಿಂದ ಅನ್ನಪ್ರಾಶನ ಮಾಡಿಸುವ 10ನಿತ್ಯತೃಪ್ತ ನಿತ್ಯಾನಂದ ನಿತ್ಯಭೋಗಿ ನಿತ್ಯತಂತ್ರನಿತ್ಯಕರ್ಮನ್ನೆತ್ತಿಕೊಂಡುನೆತ್ತಿಮೂಸಿ ಮುದ್ದಿಸುವ11ಆ ಲಯದಲ್ಲಾಲದೆಲೆ ಆಲಯಗೆ ತೊಟ್ಟಿಲು ಉಯ್ಯಾಲೆಯಿಟ್ಟು ಮುದ್ದು ಮಾತನಾಲಿಸಿ ಜೋಗುಳವ ಪಾಡುವ 12ಅಂಜಲಿಪುಟದಿ ಸುರರಂಜಿಕೆಯ ಬಿಡಿಸುವ ನಿರÀಂಜನಗಭ್ಯಂಜನಿಸಿ ಅಂಜನಿಟ್ಟುಅಮ್ಮೆಕೊಡುವ13ಸಪ್ತ ಸಪ್ತಭುವನಜನಕೆಸುಪ್ತಿಎಚ್ಚರೀವನಿಗೆಸುಪ್ತಿಕಾಲವೆಂದು ತಾನು ಸುಪ್ತಳಾಗಿ ಸ್ತನವ ಕೊಡುವ14ತನ್ನ ಮಗನ ನಡೆಯ ನುಡಿಯ ತನ್ನ ಪತಿಗೆ ಹೇಳಿ ಹಿಗ್ಗಿತನ್ನ ಭಾಗ್ಯ ಲಕ್ಷ್ಮೀಶ ಪ್ರಸನ್ನವೆಂಕಟ ಕೃಷ್ಣಯೆಂಬ 15
--------------
ಪ್ರಸನ್ನವೆಂಕಟದಾಸರು