ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಪ್ಪರಿಸಲು ಬೇಕಾದವರು ಬನ್ನಿ ಇಷ್ಪೊದು ಮಧ್ವಾಚಾರ್ಯರಲ್ಲಿದು ಪೆಪ್ಪರ್ ಮೆಂಟ್ ಪ. ಚೀಪೂತಲಿದ್ದರು ಸವೆಯುವದಲ್ಲವು ಜಾತಿ ಭೇದವಿಲ್ಲ ಇದಕೆ ಭಕ್ತಿ ಕಾರಣ ನೀತಿ ಶಾಸ್ತ್ರಾಮೂಲಾಧಾರದ ಪೆಪ್ಪರ್ ಮೆಂಟ್ 1 ಸಾಸಿವೆಯಷ್ಟೊತ್ತು ನೆನದರೆ ಸಾಕೆಂಬ ಕÀಲಿಯುಗ ಮಹಿಮೆಯ ಪೆಪ್ಪರ್ ಮೆಂಟ್ 2 ಆಕುಲ ಈಕುಲ ಇಲ್ಲವೆಂಬುದನರಿಸಲು ನಾಲ್ಕು ವೇದವನೊಂದೇ ಬಾರಿಗೆ ನಾಲ್ಕು ಹಸ್ತದಿ ತಂದ ಪೆಪ್ಪರ್ ಮೆಂಟ್ 3 ನಾಕಚಾರವಂದ್ಯನ ಸ್ತುತಿಗೊದಗುವ ಸಾಕುವ ಭಕ್ತರಿಗಮೃತನೆರೆವ ಸಾಕಾರ ರೂಪದ ಪೆಪ್ಪರ್ ಮೆಂಟ್ 4 ಭೂಮಿಯ ತಂದ ಸೂಕರÀ ರೂಪ ಮೊರೆಯ ತೋರಿದ ಪೆಪ್ಪರ್ ಮೆಂಟ್ 5 ಧರುಣಿಯ ಪಾದದಿಂದಾಕಾಶಾಪಾತಾಳಾತ್ವರ ಧರುಣಿ ಪಾಲರ ಉರುಳಿಸಿ ಕೆಡಹಿದ ಕೊಡಲಿ ಮಹಿಮೆಯ ಪೆಪ್ಪರ್ ಮೆಂಟ್ 6 ಮಂಗನ ಜೊತೆಯಲಿ ಸೇರಿ ನಾರಿಯ ಭೂಜಂಗುಳಿ ನಡುಗಲು ಭೋರ್ಗರೆಯಲು ಮಳೆ ಮಂದರ ನೆಗÀಹಿದ ಪೆಪ್ಪರ್ ಮೆಂಟ್ 7 ರುಚಿ ಪೆಪ್ಪರ್ ಮೆಂಟ್ 8 ಕತ್ತಲೆಯನ್ನು ಹರಿಸುವ ದಿವ್ಯಸೂರ್ಯತೇಜ ಅರ್ಥಿಲಿ ಬುಧರು ಚಪ್ಪರಿಪ ದಿವ್ಯ ಪೆಪ್ಪರ್ ಮೆಂಟ್ 9
--------------
ಸರಸ್ವತಿ ಬಾಯಿ
ದಯದಿ ಎಮ್ಮನು ಸಲಹ ಬೇಕಯ್ಯ | ಮಳಖೇಡ ನಿಲಯ ದಯದಿ ಎಮ್ಮನು ಸಲಹ ಬೇಕಯ್ಯ ಪ ದಯದಿ ಎಮ್ಮನು ಸಲಹ ಬೇಕೈ | ವಿಯದಧಿಪ ಸದ್ದಂಶ ಸಂಭವ ಭಯ ವಿದೂರನ ತೋರು ಎನುತಲಿ | ಜಯ ಮುನೀಂದ್ರನೆ ಬೇಡ್ವೆ ನಿನ್ನನು ಅ.ಪ. `ಇಂದ್ರಸ್ಯನು ವೀರ್ಯಾಣ’ ಎಂದೆನುತ | ಇತ್ಯಾದಿಋಕ್ಕುಗಳಿಂದ ಬಹುತೆರೆ ನೀನು ಪ್ರತಿಪಾದ್ಯ ||ಅಂದು ಮೇಘದ ಜಲವು ಬೀಳದೆ | ಬಂಧಗೈದಹಿನಾಮ ದೈತ್ಯನಕೊಂದು ಉದ್ಧರಿಸಿರುವ ಪರಿಯಲಿ | ಮುಂದೆ ದುರ್ವಾದಿಗಳ ಖಂಡಿಪೆ 1 ವಾಲಿಯಂದದಿ ದೃಷ್ಟಿಮಾತ್ರದಲಿ | ಶತೃಗತಬಲಲೀಲೆಯಿಂದಪಹರಿಪೆ ನಿಮಿಷದಲಿ ||ಕಾಲ ತ್ರೇತೆಯಲಂದು ದುಷ್ಟರ | ವಾಲಿರೂಪದಿ ವಾರಿಸಿದ ಪರಿಕಾಲ ದ್ವಾಪರದಲ್ಲಿ ಪ್ರಾರ್ಥನೆ | ಲೀಲೆ ರೂಪಿಯು ಕೃಷ್ಣಸೇವಕ 2 ದೃಷ್ಟಿ ಮಾತ್ರದಿ ಕರ್ಣಗತ ಬಲವ | ಅಪಹರಿಸಿ ನೀನುಕ್ಲಿಷ್ಟ ಯುದ್ಧದಿ ಗಳಿಸಿ ನೀ ಜಯವ ||ಶ್ರೇಷ್ಠ ಕರ್ಣನ ಅಸುವ ಕೊಳ್ಳುತ | ಸುಷ್ಠು ಅರಿಬಲ ನಾಶಮಾಡುತಭ್ರಷ್ಟ ಕೌರವನೀಗೆ ದುಃಖದ | ಕೃಷ್ಣಗರ್ಪಿಸಿ ಕೈಯ್ಯ ಮುಗಿದೆಯೊ 3 ಕಾಲ ಕಲಿಯುಗದಲ್ಲಿ ಬಲ ಭೀಮ | ಮಧ್ವಾಭಿಧಾನದಿಮೂಲ ಮೂವತ್ತೇಳು ಸೂನಾಮ ||ಭಾಳ ಗ್ರಂಥಗಳನ್ನೆರಚಿಸೀ | ಕಾಲಟಿಜಕೃತಮಾಯಿ ಮತವನುಲೀಲೆಯಿಂದಲಿ ಖಂಡಿಸುತ್ತ | ಪಾಲಿಸುತ್ತಿರೆ ಸುಜನರನ್ನು 4 `ವೃಷಾಯ ಮಾಣೆಂಬ` ಋಕ್ಕಿನಲಿ ದೇವ ಇಂದ್ರಗೆವೃಷಭದಾಕೃತಿ ಪೇಳಿಹುದು ಅಲ್ಲಿ ||ವೃಷಭ ನೀನಾಗಂತೆ ಕಲಿಯಲಿ | ಎಸೆವ ಶ್ರೀ ಮನ್ಮಧ್ವ ಗ್ರಂಥದಹಸಿಬೆ ಚೀಲವ ಹೊತ್ತು ತಿರುಗುತ | ಅಸುಪತಿಯ ಸೇವಿಸಿದ ಮಹಿಮ5 ಅಗಸ್ತ್ಯ ಮುನಿ ಸಕಲ ತೀರ್ಥಗಳ | ಸಂಗ್ರಹಿಸಿ ಕರದಿಸಾಗಿ ಗಿರ್ಯಾನಂತ ಕಮಂಡೂಲ ||ವೇಗ ಕೆಳಗಿಟ್ಟಾಚಮನ ಅಲ್ಪ | ಕಾಗಿ ಸ್ವಲ್ಪವುದೂರ ಪೋಗಲುಕಾಗೆ ರೂಪದಿ ಬಂದು ಇಂದ್ರನು | ವೇಗ ಉರುಳಿಸೆ ಜಲವು ಹರಿಯಿತು 6 ದೆವರಾಜನು ಕಾಣಿಸಿ ಕೊಳಲು | ಮುನಿಯು ಆಕ್ಷಣದೇವ ಕಾರ್ಯದ ಭಾವ ತಿಳಿಯಲು ||ಓವಿ ತತ್ಕಾಗಿಣಿಯ ನಾಮದಿ | ಭೂವಲಯದೊಳ್ಬಾತಿಸಲಿ ಎನೆತೀವರಾಶೀರ್ವಾದ ದಿಂದಲಿ | ಪಾವನವು ತತ್ ಕ್ಷೇತ್ರ ವಾಯಿತು 7 ಪಾಂಡು ಮಧ್ಯಮನಾದ ಅರ್ಜುನನು | ಇಲ್ಯುದಿಸಿ ಪೊತ್ತಧೋಂಡು ರಘುನಾಥ ಪೆಸರನ್ನು || ಗೊಂಡು ನಾಯಕ ತನವ ಅಶ್ವಕೆ | ಅಂಡಲೆದು ಬರುತಿಲ್ಲಿ ಬಿಸಿಲಲಿ ಉಂಡು ಉಂಬುದ ಜಲವ ಪಶುಪರಿ | ಕಂಡು ಮುನಿ ಅಕ್ಷೋಭ್ಯ ಬೆಸಸಿದ 8 ಸ್ವಪ್ನ ಸೂಚಿಸಿದಂತೆ ಮುನಿಶ್ರೇಷ್ಠ | ನೀರ್ಗುಡಿದವ ನರೆ ಬಪ್ಪುವನು ತಮ ಪೀಠಕೆನ್ನುತ್ತ || ಸ್ವಲ್ಪ ಹಾಸ್ಯದಿ ಪಶುವು ಪೂರ್ವದಿ | ಒಪ್ಪುವೆಯಾ ನೀನೆನ್ನ ಸಾದಿಗೆ ನೆಪ್ಪು ಬಂದುದು ವೃಷಭ ಜನ್ಮದಿ | ಕೃಪ್ಪೆಗೈದಿಹ ಮಧ್ವರನುಗ್ರಹ 9 ಸಾದಿ ಭೂಪನು ಕಳುಹಿ ತನ್ನ ಸೈನ್ಯ | ಅಕ್ಷೋಭ್ಯ ಮುನಿಪರ ಪಾದಕೆರಗುತ ಆಶ್ರಮವು ತುರ್ಯ ||ಮೋದದಿಂದ್ಯಾಚಿಸಲು ಮುನಿವರ | ಆದಿಯಿಂದಲಿ ಬಂದ ಪೀಠಕೆಸಾದರದಿ ಪಟ್ಟಾಭಿಷಕ್ತನ ಗೈದು ಆಶೀರ್ವಾದ ಮಾಡಿದ 10 ಸುತನು ತುರ್ಯಾಶ್ರಮವ ಪೊತ್ತುದನ | ಕೇಳುತ್ತ ತಂದೆಅತುಳ ಕೋಪದಿ ನಿಂದಿಸಿದ ಮುನಿವರನ |ಸುತನ ಗೃಹ ಕೆಳತಂದು ಪತ್ನಿಯ | ಜೊತೆಯಲಿಡೆ ಏಕಾಂತ ಗೃಹದಲಿಅತುಳ ಸರ್ಪಾ ಕೃತಿಯ ಕಾಣುತ | ಭೀತಿಯಲಿ ಚೀರಿದಳು ಕನ್ಯೆಯು11 ಸೋಜಿಗದ ತನಯನ್ನ ಕೊಳ್ಳುತ್ತ | ಮುನಿವರರ ಬಳಿಗೆ ಯೋಜಿಸೀದನು ಕ್ಷಮೆಯ ಬೇಡುತ್ತ ||ಆರ್ಜವದ ಮುನಿ ಕ್ಷಮಿಸಿ ತಂದೆಯ | ಮಾಜದಲೆ ತಮ್ಮ ಶಿಷ್ಯಭೂಪಗೆಯೋಜಿಸಿದರನ್ವರ್ಥನಾಮವ | ಶ್ರೀ ಜಯಾಭಿಧ ತೀರ್ಥರೆನ್ನುತ 12 ಪರ ಕರಿ ಹರ್ಯಕ್ಷರಾದಿರಿ 13 ಮಧ್ವಭಾಷ್ಯಕೆ ಟೀಕೆ ರಚಿಸುತ್ತ | ಯರಗೋಳ ಗುಹೆಯಲಿಶುದ್ಧ ಭಾವದಿ ಇರಲು ಮದಮತ್ತ ||ವಿದ್ಯ ಅರಣ್ಯಭಿಧ ನೋಡೀ | ಮಧ್ವಕೃತ ಸನ್ಮಾನ ಲಕ್ಷಣಬುದ್ಧಿಗೇ ನಿಲುಕದಲೆ ಟೀಕೆಯ | ಪದ್ಧತಿಯ ಕಂಢರ್ಷಪಟ್ಟನು 14 ಮಾಧ್ವಭಾಷ್ಯವ ನೇರಿಸಿ ಗಜವ | ತಟ್ಟೀಕೆ ಅಂತೆಯೆಅದ್ಧುರೀಯಲಿ ಗೈದು ಉತ್ಸವವ ||ವಿದ್ಯವನ ಮುನಿಪೋತ್ತುಮನು ಬಹು | ಶುದ್ಧಭಾವದಿ ಗೈದು ಸಂತಸಬುದ್ಧಿಯಲಿ ಪರಿವಾರ ಸಹಿತದಿ | ಸದ್ದುಯಿಲ್ಲದೆ ಪೋದನಂದಿನ 15 ಹತ್ತೆರಡು ಮತ್ತೊಂದು ಕುಭಾಷ್ಯ | ವಿಸ್ತರದಿ ಖಂಡಿಸೆಕೃತ್ಯವೂ ಮಧ್ವಕೃತವನುವ್ಯಾಖ್ಯಾ ||ಮತ್ತಿದಕೆ ಸೂಧಾಖ್ಯ ಟೀಕವ | ವಿಸ್ತøತವು ನಿಮ್ಮಿಂದ ಜಯಮುನಿಮೊತ್ತದಿಂಧ್ಹತ್ತೆಂಟು ಗ್ರಂಥಕೆ | ಕೃತ್ಯವಾಯಿತು ನಿಮ್ಮ ಟೀಕೆಯು16 ಪಾದ ಪಾದ ತೋರ್ವುದು ||
--------------
ಗುರುಗೋವಿಂದವಿಠಲರು
ನಳಿನಿಯ ಬಳಿಯಲಿ ಕುಳಿತ ಮರಾಳಾ ಕೊಳಲಿನ ಬಾಲನು ಬಂದರೆ ಹೇಳಾ ಪ ಪುಳಿನದ ಕೊಳದಲಿ ಕುಳಿತು ಕಾಯುವಳಾ ಗೆಳತಿಯೆ ರಾಧೆಯು ಅವಳನು ಕೇಳಾ ಅ.ಪ ತರುಗಳ ಮರೆಯಲಿ ತುರುಗಳ ನೆರೆಯಲಿ ಕರುಗಳ ಜೊತೆಯಲಿ ನಲಿಯುತಲಿ ಅರಳಿದ ಹೂಗಳ ಪರಿಮಳ ಭಾರದಲಿ ಮೆರೆವಲತೆಯ ಬಳಿ ಇರುವನು ಒಲವಿನಲಿ 1 ಮುರಳಿಯ ನಾದವನೆಲ್ಲೆಡೆಗೆರೆವ ತರುಣಿಯರೀವಾ ಬೆಣ್ಣೆಯ ಮೆಲುವಾ ಮೆರೆವಪೀತಾಂಬರ ಉಡಿಗೆಯೊಳೆಸೆವ ಶರಣೆಂದೊಡೆ ನವಚೇತನವೀವ 2 ಪಾಡಿಪೊಗಳುವರ ಕೂಡ ನರ್ತಿಸುವಾ ನಾಡೆ ನರ್ತಿಸುವರ ನೋಡುತ ನಗುವ ಬೇಡಿದ ವರಗಳ ನೀಡುತ ನಗುವ ಮಾಡೆ ವಂದನೆಗಳ ಓಡಿಬಂದಪ್ಪುವ 3 ಜೊನ್ನದ ಬಣ್ಣವ ಹಳಿಯುತೆ ಬೆಳಗುವ ಚೆನ್ನ ಮರಾಳವೆ ನಿನ್ನೆಡೆ ಬರುವ ಅನ್ನೆಗಮೆನ್ನನೀ ಕರೆಯಲು ಮಾಡುವ ಸನ್ನೆಯ ಕಂಡೋಡಿ ಪಿಡಿಯುವೆ ಚರಣವ 4 ಬಾಲೆಯರೊಡನೆ ಕೋಲಾಟವನಾಡುವ ನೀಲಾಂಬರ ಘನ ಶ್ಯಾಮನವ ಮೇಲೆನಿಸುವ ವನಮಾಲೆಯಿಂದೆಸೆವ ಬಾಲನವನು ಮಾಂಗಿರಿಗೆ ಬಾರೆನುವ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮುಯ್ಯದ ಹಾಡುಗಳು ನೋಡೆ ಧರಣಿ ನಿನ್ನ ಬೀಗರೋಡಿ ಬರುವುದಾ ಕಾಡು ಜನರು ನಗುವ ರೀತಿ ಮಾಡಿ ಮೆರೆವುದಾ ಪ. ಸುತ್ತ ನಾಲ್ಕು ಮುಖದಿ ವೇದ ತತ್ವ ಪೇಳ್ವ ಹಂಸ ಪಕ್ಷಿ ಹತ್ತಿಕೊಂಡು ಬಂದ ಹಳಬ ಮುತ್ಯನೊಬ್ಬನು ಹಸ್ತದೊಳಗಕ್ಷಮಾಲೆಯೆತ್ತಿ ಮಣಿಗಳೆಣಿಸುವಗಿ ನ್ನೆತ್ತ ಪೂಜೆಯಿಲ್ಲವೆಂಬರತ್ಯಾಶ್ಚರ್ಯವರಿಯೆಯ 1 ಮತ್ತೊಬ್ಬನ ನೋಡೆ ಮುದಿಯೆತ್ತನೇರಿ ಬರುವನಿವನ ಜೊತೆಯಲಿರುವ ಭೂತಗಣವು ಸುತ್ತ ಮೆರೆವುದ ಬತ್ತಲಿದ್ದು ಭಸ್ಮ ಪೂಸಿ ಕೃತ್ತಿವಾಸನನಾದ ಫಾಲ ನೇತ್ರ ರುಂಡಮಾಲಶೂಲವೆತ್ತಿ ಕುಣಿವ ಮುತ್ಯತನವ 2 ಗರುವದಿಂದ ಗಜವನೇರಿ ಬರ್ವನ ನೋಡಮ್ಮ ಶತ ಪರ್ವವನ್ನು ಪಿಡಿದ ಸಕಲ ಗೀರ್ವಾಣೀಶನ ಸರ್ವಾವಯವದಲ್ಲಿ ಕಣ್ಣಾಗಿರ್ವದೇನೊ ತಿಳಿಯದು ನಿ ಗರ್ವಿ ಶಿರೋಮಣಿಯೆ ಈತ ಪರ್ವತಾರಿಯೆಂಬುವುದನು 3 ಠಗರು ಕೋಣನೆಗಳ ಮೇಲೆ ಸೊಗಸಿನಿಂದಲೇರ್ದ ಕೆಲಸ ಬಗೆ ಬಗೆ ಬೈರೂಪ ವರ್ಣನೆಗಳು ಸಾಕಿನ್ನು ಸುಗುಣೆ ಮೊದಲೆ ತಿಳಿಯದೆ ನೀ ಮಗಳನೀವ ಭಾಷೆ ಕೊಟ್ಟ ಬಗೆಯ ಪೇಳೆ ಭಾಗ್ಯದ ಹಮ್ಮಿಗೆ ತಕ್ಕಂಥ ನಗೆಯ ಕೇಳೆ 4 ಎರಡು ಮಗುಗಳದರಳೊಂದು ಬಿರುದ ಹೊಟ್ಟೆ ಮೇಲೆ ಕಟ್ಟಿ ದುರಗ ಬೆಳೆವ ಪೋರ ನೋಡೆ ಕರಿಯ ಕುವರನು ಕಿರಿಯ ಕೂಸಿನೊಂದು ನವಿಲ ಮರಿಯನೇರುತ್ತಾರು ಮುಖದಿ ಮೆರೆವ ಛಂದವೇನನೆಂಬೆ ಥರವೆ ನಿನಗೆ ಮಿಸುಣಿ ಗೊಂಬೆ 5 ಅಳಿಯನ ಸಂಸ್ಥಿತಿಯ ನೋಡಿ ತಿಳಿವದೆಂತು ಸುಲಭವಲ್ಲ ಹಲವು ಜನರ ಕೂಡಿಕೊಂಡು ಸುಳಿವರೆ ಬಲ್ಲ ನೆಲೆಯ ಕಾಣದಖಿಳ ವೇದ ಕುಲವು ಭ್ರಮೆಯ ತಾಳ್ವದಿಂಥಾ ಕುಲವೆಂದರಿಯಳಾಗಿ ಲೋಕ ಚೆಲುವೆ ಮಗಳನಿತ್ತೆಯಲ್ಲೆ 6 ಆದರೀತ ಭಕ್ತಜನರ ಕಾದುಕೊಳುವನೆಂಬ ಗುಣವ ಶೋಧಿಪರಿಗೆ ಸಕಲಾನಂದ ಸಾಧಕನೆಂದು ಬೋಧಗೊಳದೆ ನುಡಿದ ಸ್ವಾಪರಾಧವೆಲ್ಲ ಕ್ಷಮಿಸಿ ನಮ್ಮ ಶ್ರೀದ ವೆಂಕಟಾದ್ರಿನಾಥ ಕಾದುಕೊಳಲಿ ಕರುಣವಿಡಲಿ 7
--------------
ತುಪಾಕಿ ವೆಂಕಟರಮಣಾಚಾರ್ಯ