ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

373ಶಿವನು ನೀನಾದರೆ ಶಿವನ ರಾಣಿ ನಿನಗೇನೊ ಅವಿವೇಕ ಮನುಜ ಈ ಮಾತು | ಈ ಮಾತು ಕೇಳಿದರೆ ಕವಿಜನರು ನಗರೆ ಕೈ ಹೊಡೆದು 1 374ಎಲ್ಲ ಬಂದೇ ಎಂಬ ಖುಲ್ಲ ಮಾನವ ನಿನ್ನ ವಲ್ಲಭೆಯ ಬೆರೆದು ಸಂತಾನ | ಸಂತಾನ ಪಡೆವೇಕೆ ಇಲ್ಲವೇ ಜನನಿ ಭಗಿನೇರು 2 375ಬಿಂಬವೊಂದೆ ಪ್ರತಿಬಿಂಬ ವೊಂದೆಂಬಿ ಈಶು ದ್ಧಾಂಬರದ ನೆರಳು ಕಪ್ಪಾಗೆ | ಕಪ್ಪಾದ ಬಳಿಕ ನೀ ನೆಂಬೊ ಈ ಮಾತು ಪುಸಿಯಲ್ಲಿ 3 376 ಎಲ್ಲ ಒಂದೆ ಎಂಬ ಸೊಲ್ಲು ಖರೆಯೆಂತೆನಲು ಖರೆಯೆಂಬ ಮಾತುಗಳು ಸುಳ್ಳೆನ್ನರೇನೊ ಸುಜನಾರು 4 377 ನಿಮ್ಮ ನಾ ಬೈದರೆ ನಮ್ಮ ನೀವ್ ಬೈದರೆ ಅದ್ವೈತ ಸುಮ್ಮನಿರಬೇಕು ಎಲೊ ಭ್ರಾಂತ 5 378 ಶುದ್ಧ ಬ್ರಹ್ಮನ ಸುಂಗುಣವ ಕದ್ದ ಪ್ರಯುಕ್ತ ಪ್ರ ಸಿದ್ಧ ಚೋರತ್ವ ನಿನ್ನಲ್ಲಿ | ನಿನ್ನಲ್ಲಿ ಪೊದ್ದಿತೊ ಉದ್ಧಾರವೆಲ್ಲೊ ಭವದಿಂದ 6 379 ಮಾಯವಾದಿಯ ಮತವು ಹೇಯವೆಂಬುದು ಸಿದ್ದ ತಾಯಿತಂದೆಗಳು ಸತಿಪುತ್ರ | ಸತಿಪುತ್ರರಗಲಿದರೆ ಬಾಯಿ ಬಿಟ್ಯಾಕೊ ಆಳುತಿದ್ದಿ 7 380 ಸುಳ್ಳಿಗಿಂತಧಿಕ ಮತ್ತಿಲ್ಲವೋ ಮಹಪಾಪ ಸುಳ್ಳು ಕಳ್ಳತನವು ನಿನ್ನಲ್ಲಿ | ನಿನ್ನಲ್ಲಿ ಉಂಟಾಯಿ ತಲ್ಲೊ ಜಾರತ್ವ ಇದರಂತೆ 8 381ಮೇ ಮಾತೆ ವಂಧ್ಯೆಯೆಂಬ ಈ ಮಾತಿನಂತೆ ಮು ಅಪುಸಿಯಿಂಬೀ ಮಾತುಗಳು ಭ್ರಾಮಕವೆ ಖರೆಯೊ ನಿಜವಲ್ಲ 9 382 ಶಶವಿಷಾಣಗಳೆಂದು ಒಪ್ಪುವರೆ ಬಲ್ಲವರು ಮೊಲೆಹಾಲು ಉಂಡಿತೋ ರಿಸೊ ಮಿಥ್ಯೆ ಸತ್ಯವಹುದೇನೊ 10 383ಸತ್ಯವೆಂದರೆ ಖರೆಯು ಮಿಥ್ಯೆಯೆಂದರೆ ಸುಳ್ಳು ನ್ಮತ್ತ ಈ ಮಾತು ನಿಜವೆಲ್ಲಿ 11 384ಭೀತಿ ನಿರ್ಭೀತಿ ಶೀತತಾಪಗಳೊತ್ತಟ್ಟು ನೀತವಾಗಿಹವೆ ಜಗದೊಳು |ಜಗದೊಳಿದ್ದರೆ ತೋರು ಜಾತಿ ಭೇದಗಳು ಇರಲಾಗಿ 12 385 ಜೀವೇಶರೊಂದೆಂಬ ಈ ಮಾತು ಕೇಳ್ವರಿಗೆ ಕೇವಲ ಶ್ರಾವ್ಯವೆಂದೆಂದು | ಎಂದೆಂದು ಬುಧರು ಪಶು ಗಾವಿ ನೀನೆಂದು ಕರೆಯಾರೆ 13 386 ಗುಣವಂತನೆಂಬ ಈ ಮಾತನು ಕೇಳಿ ಸುಖಿಸದವ ಮನುಜ ಪಶುಸಿದ್ಧ ಪುಸಿಯಲ್ಲ | ಪುಸಿಯಲ್ಲ ನಿನ್ನ ಮತ ಗಣನೆ ಮಾಡದಲೆ ಬಯ್ವೋರ 14 387ಮಲದ ಗರ್ತಕೆ ಶುದ್ಧ ಜಲಧಿ ಸಮಯವೆಂತೆಂಬಿ ಕಲುಷವರ್ಜಿತಕೆ ತೃಣಜೀವ | ತೃಣಜೀವ ಸರಿಯೆ ಸಿಂ ಬಳಕ ಗೋಘೃತವು ಸಮವಹುದೆ 15 388 ಐರಾವತಕೆ ಸರಿಯೆ ಕೂರಿಹೇನಿನ ಮರಿಯು ತೋರಿತೊ ನಿನ್ನ ಅಜ್ಞಾನ 16 389 ದ್ವಾಸುಪರ್ಣಾ ಎಂಬ ಈ ಶ್ರುತಿಗಳಲ್ಲಿ ವಿ ಶ್ವಾಸ ಮಾಡದಲೆ ಜೀವೇಶ | ಜೀವೇಶಕೈಕ್ಯೋಪ ದೇಶ ಮಾಡಿದವ ಚಂಡಾಲ 17 390ಅಜರಾಮರಣ ಬ್ರಹ್ಮ ಭುಜಗಭೂಷಣ ಪೂಜ್ಯ ತ್ರಿಜಗ ದೇವೇಶ ಹರಿಯೆತ್ತ | ಹರಿಯೆತ್ತ ನೀನೆತ್ತ ಅಜಗಜನ್ಯಾಯ ಪುಸಿಯಲ್ಲ 18 391 ಪಾಲುಗಡಲೊಳಗಿಪ್ಪ ಶ್ರೀ ಲೋಲ ಹರಿಯೆಲ್ಲಿ ಹೇಲುಚ್ಚೆವೊಳಗೆ ಹೊರಳುವ | ಹೊರಳಾಡಿ ಬಳಲುವ ಖೂಳ ಮಾನವನೆ ನೀನೆಲ್ಲಿ 19 392 ಕ್ಷೀರಾಂಬುಧಿಗೆ ಸರಿಯೆ ಕಾರಿಕೆಯ ಶ್ಲೇಷ್ಮ ಭಾ ಗೀರಥಿಗೆ ಸಮವೆ ಖರಮೂತ್ರ | ಖರಮೂತ್ರ ಜೀವ ಲ ಕ್ಷ್ಮೀರಮಣಗೆಣೆಯೆ ಜಗದೊಳು 20 393ಗುಣಪೂರ್ಣ ಸರ್ವಜ್ಞ ಅಣುಮಹದ್ಗತನ ನಿ ರ್ಗುಣ ಅಲ್ಪನೆನುತಿದ್ದಿ | ಎನುತಿದ್ದಿ ಹರಿಗೆ ದೂ ಷಣೆಯು ಬೇರುಂಟೆ ಇದಕಿಂತ 21 394 ಈಶ ನಾನೆನಲು ಕೀನಾಶನಿಂದಲಿ ದಣಿಪ ದಾಸನೆಂಬುವಗೆ ದಯದಿಂದ | ದಯದಿಂದ ತನ್ನಯಾ ವಾಸದೊಳಿಟ್ಟು ಸಲಹೂವ 22 395ಈಶತ್ವ ವೆಂಬುದು ಲಕುಮೀಶಗಲ್ಲದೆ ಜೀವ ರಾಶಿಗಳಿಗುಂಟೆ ಈ ಶಕ್ತಿ | ಈ ಶಕ್ತಿ ಸತ್ವಗುಣ ಈಶ ಬಿಟ್ಟಿಹನೆ ಜಗದೊಳು 23 396 ಉದ್ಗೀಥಶ್ರೀ ಪ್ರಾಣ ಹೃದ್ಗತನು ಜಗದೇಕ ಸದ್ಗುರುವರೇಣ್ಯನೆನುತಿಪ್ಪ | ಎನುತಿಪ್ಪರಿಗೆ ಯಮ ಗದ್ಗದನೆ ನಡುಗಿ ನಮಿಸುವ 24 397 ಸ್ವಾಮಿ ಭೃತ್ಯನ್ಯಾಯ ಈ ಮಾತಿನೊಳಗುಂಟು ಗ್ರಾಮಧಾಮಗಳು ಇದರಂತೆ | ಇದರಂತೆ ನೋಡಿಕೊ ನೀ ಮಾತ್ರ ನುಡಿಯೆ ಸಾಕೆಂಬೆ 25 398ಈಶ ನಾನೆಂದವನ ಶ್ವಾಸ ಬಿಡಗೊಡದೆ ಯಮ ಸೆಳೆದೊಯಿದು ನರಕದೊಳು ಘಾಸಿಗೊಳಿಸುವನೊ ಬಹುಕಾಲ 26 399 ಮಾತಾ ಪಿತರ ದ್ರೋಹಿ ಬಂಧು ಘಾತಕ ಬ್ರಹ್ಮ ಘಾತಕನು ನೀನು ಪುಸಿಯಲ್ಲ | ಪುಸಿಯಲ್ಲ ಶ್ರೀ ಜಗ ನ್ನಾಥ ವಿಠಲನೆ ನಾನೆಂಬಿ 27
--------------
ಜಗನ್ನಾಥದಾಸರು
ನಿನ್ನ ಚಿತ್ತಕೆ ಬಂದುದನು ಮಾಡು ಸರ್ವೇಶ ಎನ್ನ ಸ್ವಾತಂತ್ರ್ಯ ಲವಮಾತ್ರ ಉಂಟೇ ಸ್ವಾಮಿ ಪ ಅನಂತಾನಂತ ಜನ್ಮ ಕಾದರು ಒಮ್ಮೆ ಚೆನ್ನ ಗೋಪಾಲ ಕೃಷ್ಣದೇವ ಅ.ಪ. ಛೀ ಎನಿಸು ಜನರಿಂದ ನಿಂದ್ಯವನು ಮಾಡಿಸು ಬಾಯದೆರೆಸೊ ಹೊಟ್ಟೆಗಾಗಿ ಗಾಯನವ ಮಾಡಿಸು ಗುಪ್ತದಲ್ಲೇ ಇರಿಸು ದಾಯಾದಿಗಳಿಗೊಪ್ಪಿಸು ರಾಯಪದವಿಯ ಕೊಡಿಸು ರಾಜ್ಯವೆಲ್ಲವ ಮೆರೆಸು ಕಾಯಕ್ಲೇಶವನು ಪಡಿಸು ಮಾಯಾಧವನೆ ನಿನ್ನ ಮಹಿಮೆ ತಿಳಿದವರಾರು ನ್ಯಾಯ ಅನ್ಯಾಯವಾಗಿ ಶ್ರೀಶ 1 ಧನವನ್ನೆ ಕೊಡಿಸು ದಾನವನೆ ಮಾಡಿಸು ಗುಣವುಳ್ಳ ಮನುಜನೆನಿಸು ಮನಸು ಚಂಚಲನೆನಿಸು ಮಾತುಗಳ ಪುಸಿಯೆನಿಸು ಕ್ಷಣದೊಳಗೆ ಶುದ್ಧನೆನಿಸು ಋಣದ ಭಯವನೆ ಹೊರಿಸು ರಿಕ್ತ ನಾನೆಂದೆನಿಸು ತೃಣದಂತೆ ಮಾಡಿ ನಿಲಿಸು ನಿತ್ಯ ಮನದಿಚ್ಛೆಗಾರನೆ ದಿನ ಪ್ರತಿದಿವಸವಾಗೆ, ದೇವ 2 ಯಾತ್ರೆಯನೆ ಮಾಡಿಸು ಯೋಚನೆಯಲೇ ಇರಿಸು ಪಾತ್ರ ಜನರೊಳು ಪೊಂದಿಸು ಗೋತ್ರ ಉತ್ತಮನೆನಿಸು ಗೋವುಗಳ ಕಾಯಿಸು ಧಾತ್ರಿಯೊಳು ನೀಚನೆನಿಸು ಮೈತ್ರರೊಳು ಕೂಡಿಸು ಮೈಗೆಟ್ಟವನೆನಿಸು ಸ್ತೋತ್ರಕ್ಕೆ ಯೋಗ್ಯನೆನಿಸು ನೇತ್ರ ಮೂರುಳ್ಳವನು ಸ್ತುತಿಸಿದ ಮಹಾಮಹಿಮ ರಾತ್ರಿ ಹಗಲು ಎನ್ನದೆ ದೇವ 3 ಉಪವಾಸದಲ್ಲಿರಿಸು ಉಚಿತ ಭೋಜನ ಉಣಿಸು ಜಪತಪವನೆ ಮಾಡಿಸು ಅಪಹಾಸ್ಯ ಮಾಡಿಸು ಅದ್ಭುತವನೈದಿಸು ಗುಪಿತರೊಳಗಧಿಕನೆನಿಸು ಉಪಕಾರಿ ನರನೆನಿಸು ಉದ್ದಂಡನಿವನೆನಿಸು ವಿಪುಳ ಮತಿಯಲಿ ನಿಲಿಸು ಅಪರಿಮಿತ ಗುಣನಿಧಿಯೆ ಆನಂದ ಮೂರುತಿಯ ಸಫಲಮತಿಯೀವ ದೇವ 4 ವೇದವನು ಓದಿಸು ವೇದಾರ್ಥಗಳ ನುಡಿಸು ಓದಿದರು ದಡ್ಡನೆನಿಸು ಹಾದಿಯನು ತಪ್ಪಿಸು ಹಿತದವರನಗಲಿಸು ಸಾಧು ಮಾರ್ಗವನೆ ಕೊಡಿಸು ಬಾಧೆಗಳನಟ್ಟಿಸು ಭಕುತಿವೆಗ್ಗಳನೆನಿಸು ಉದರಕೋಸುಗ ತಿರುಗಿಸು ಪಾದದಲಿ ಗಂಗೆಯನು ಪೆತ್ತ ಪರಮಾನಂದ ಮೋದ ವಿನೋದವಾಗೆ ದೇವ 5 ಕುಣಿಕುಣಿದಾಡಿಸು ಕಾಶಿಯಲಿ ಪೊಂದಿಸು ಮಣಿ ಭೂಷಣವ ತೊಡಿಸು ಘನ ಕವನ ಪೇಳಿಸು ಕೌತುಕವನೈದಿಸು ವನ ಭುವನದೊಳು ನಿಲಿಸು ಪ್ರಣವ ಮಂತ್ರವ ಜಪಿಸು ಪ್ರಕಟಭಯವನೆ ಬಿಡಿಸು ಬಿನುಗು ವೈರಾಗ್ಯನೆನಿಸು ಜನನಿ ತನುಜರ ಕೂಡೆ ಅನುಸರಿಸಿ ನಡೆವಂತೆ ಎನಗೆ ನೀನೆ ಸದ್ಗತಿ ಸ್ವಾಮಿ 6 ಯಾವುದಾದರು ನೀನು ಇತ್ತುದಕೆ ಎನಗಿಷ್ಟು ನೋವು ಒಂದಾದರಿಲ್ಲ ಜೀವೇಶರೊಂದೆಂಬ ದುರ್ಮತವ ಕೊಡದಿರು ಭಾವದಲಿ ನಾ ಬೇಡುವೆ ಆವಾವ ನರಕದಲಿ ಬಹುಕಾಲವಿಟ್ಟರು ಇಪ್ಪೆ ನಾನೊಲ್ಲೆ ಮಿಥ್ಯಮತವ ಕಾವ ಕರುಣೆ ನಮ್ಮ ವಿಜಯವಿಠ್ಠಲರೇಯ ಪಾವನ್ನ ಮಾಳ್ಪ ಶಕ್ತ ವ್ಯಕ್ತ 7
--------------
ವಿಜಯದಾಸ
ಗುರುರಾಯರ ನಂಬಿರೋ-ಮಾರುತಿಯೆಂಬ ಪಗುರುರಾಯರ ನಂಬಿ ಬಿಡದೆ ಯಾವಾಗಲು |ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ ಅ.ಪವನಧಿಯ ಮನೋವೇಗದಿಂದ ಲಂಘಿಸಿ ಮಹಿ-ತನುಜೆಯ ಶೋಕತಾಪವ ಕಳೆದು ||ವನವ ಬೇರೊಡನೆ ಕಿತ್ತೀಡಾಡಿ ಎದುರಾದದನುಜರ ಸದೆದು ಲಂಕೆಯ ತನ್ನ ಸಖಗಿತ್ತ 1ಕೌರವ ಬಕ ಹಿಡಿಂಬಕ ಕೀಚಕರೆಂಬ |ಕ್ರೊರಸಂತತಿಯೆಲ್ಲ ನುಗ್ಗಲೊತ್ತಿ ||ಘೋರಪಾತಕಿದುಶ್ಯಾಸನ ರಕುತವಹೀರಿ ಮುದದಿ ಮುರವೈರಿಯ ಭಜಿಸಿದ 2ಜೀವೇಶರೊಂದೆಂಬ ದುರ್ವಾದಿಗಳ ಕು-ಭಾವಶಾಸ್ರ್ತಗಳೆಲ್ಲ ತರಿದೋಡಿಸಿ ||ಕೋವಿದರಿಗೆ ಸದ್ಛಾಷ್ಯ ಸುಧೆಯನಿತ್ತುದೇವ ಪುರಂದರವಿಠಲ ಸೇವಕನಾದ 3
--------------
ಪುರಂದರದಾಸರು
ನೆನೆವೆನುಅನುದಿನನಿಮ್ಮ ಮಹಿಮೆಯನು-ಮಧ್ವರಾಯಾ |ಸನಕಾದಿ ಮುನಿವೃಂದ ಸೇವಿತ ಪಾದಾಬ್ಜ-ಮಧ್ವರಾಯಾ ಪಕಲಿಮಲದಿ ಙ್ಞÕನ ಕಲುಷಿತವಾಗಲು ಮಧ್ವರಾಯಾ |ನಳಿನಾಕ್ಷನಾಜೆÕಯಿಂದಿಳೆಯೊಳಗುದಿಸಿದೆ-ಮಧ್ವರಾಯಾ 1ಗೋವಿತ್ತ ವಿಪ್ರಗೆ ನಿರುತ ಮೋಕ್ಷವನಿತ್ತ-ಮಧ್ವರಾಯಾ |ಜೀವೇಶರೊಂದೆಂಬ ಮತವ ಭೇದಿಸಿದೆ-ಮಧ್ವರಾಯಾ 2ಸೂತ್ರಾರ್ಥಂಗಳನೆಲ್ಲ ವೇತೃಗಳಿಗೆ ತಿಳಿಸಿ-ಮಧ್ವರಾಯಾ |ಶಾಸ್ತ್ರದ ತಾತ್ಪರ್ಯ ಪ್ರಕರಣ ರಚಿಸಿದೆ-ಮಧ್ವರಾಯಾ 3ಸುಜನರ ಹೃದಯದಿ ಸೇರಿದ್ದ ತಮಸಿಗೆ-ಮಧ್ವರಾಯಾ |ನಿಜ ಙ್ಞÕನ ರವಿಯಂತೆ ಕಿರಣವ ಹರಡಿದೆ-ಮಧ್ವರಾಯಾ 4ವ್ಯಾಸದೇವರಿಗಭಿವಂದಿಸಿ ಬದರಿಯಲಿ-ಮಧ್ವರಾಯಾ ||ಶ್ರೀಶಪುರಂದರವಿಠಲ ದಾಸನಾದೆ-ಮಧ್ವರಾಯಾ 5
--------------
ಪುರಂದರದಾಸರು