ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವನೆವೆ ದಾನವನು ನೋಡಿರೋ | ಅವನವೇ ದಾನವನು ಪ ದಾವನು ಸಾಕುವ ದೇವರ ಮರೆದು | ಅವಿವೇಕತನದಲಿ ಜೀವಿಸುತಿಹಾ ಅ.ಪ ವಿಷಯದ ಸಂಭ್ರಮದಾ ಸ್ಥಿರಪಟ್ಟಾ | ವಸುಧಿಲಿ ಬಗದಾವಾ | ಆಶನ ವ್ಯಸನದೊಳು ಪಶುವಿನ ಪರಿಯಲಿ | ನಿಶಿದಿನ ಗಳೆವುತ ದೆಶೆಗೆಟ್ಟು ಹೋದಾ 1 ಸಾಧು ಸಂಗಕ ದೂರಾ ಶ್ರವಣದ | ಹಾದಿಗೆಂದಿಗೆ ಬಾರಾ | ಸಾಧಿಸಿ ಕುವಿದ್ಯಾವಾದಾ ಆಟಗಳನು | ಸಾದರ ನೋಡುತಾ ತಾ ದಿನಗಳೆವಾ 2 ಗುರು ಮಹಿಪತಿ ಬೋಧಾ ನಂದನು | ಸಾರಿದನಾ ಹಿತವಾದಾ | ಹರಿನಾಮಾವೆಂದಿಗೆ ಸ್ಮರಿಸು ಮುಖದೊಳು | ನರದೇಹವೆಂಬುದು ಬಾರದು ನೋಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದ್ರೋಹಿಯೋ ನಾನಿನಗೆ ದ್ರೋಹಿಯೋ ಪ ಪಾಹಿ ಬ್ರಹ್ಮಜವಂಶ ಪಾಪ ಬ್ರಾಹ್ಮಣ ಪ್ರಿಯ ಅ.ಪ ಸ್ವಪ್ನ ಜಾಗ್ರತೆ ನಿದ್ರೆ ಮೋಕ್ಷಾವಸ್ಥೆಯಲ್ಲಿ ತೈಜಸ ವಿಶ್ವ ಅಪ್ಪತುರೀಯನಾಗಿ ದಾತ ನಿನ್ನನ್ನು ಬಿಟ್ಟು ಬೆಪ್ಪನಂದದಿ ನರರ ಯೆಂಜಲ ಬಯಸುವೆ 1 ಬಿಂಬ ಮೂರ್ತಿಯು ನೀನು ಪ್ರತಿ ಬಿಂಬನಾನಿನಗೆ ತುಂಬಿ ಅಂತರ್ಬಹಿ ಮೆರೆವ ವಿಷ್ಣುವೆ ನಿನ್ನ ನಂಬಿದೆ ದೃಢದಿಂದ ಬರಿದೆ ಹಂಬಲಿಸುವೆ ಬೆಂಬಲನಾಗಿದ್ದು ತುಂಬೊ ನಿನ್ನಯ ಭಕ್ತಿ 2 ಸತಿ ಸುತ ಪಿತರಲ್ಲಿ ತಿಳಿಯದೆ ನಿನ್ನಿರವ ಹಿತರವರು ಬರಿದೆಂಬ ಭ್ರಾಂತಿಯ ನೀಗದೆ ಖತಿಯ ಪಡುವೆನು ಭವದಿ ಕುಮತಿಯನಗೆಮುಂದೆ ಗತಿಯೇನು ಜಗದೀಶ ಮರೆತು ನಿನ್ನನು ದೇವ 3 ಕಸವ ರಸವೆಂದು ಬಯಸುವೆ ವಿಷಯವ ರಸವ ವಿಷವೆಂದು ತೊರೆದು ಜೀವಿಸುತಿರ್ಪೆ ಅಸಮವಿಷಣವಿಷ್ಣು ಆತ್ಮಾಖ್ಯಾತನ ನಿನ್ನ ತುಸಸಹ ನೆನೆಯದೆ ಹುಸಿಯ ದಾಸನಾಗಿ 4 ನನ್ನದಲ್ಲದ ಒಡವೆ ನನ್ನದೆಂದು ತಿಳಿವೆ ನಿನ್ನ ಸ್ವಾಮಿತ್ವವ ಮರದು ಮೆರೆಯುತಿರ್ಪೆ ನನ್ನದೇ ಸ್ವಾತಂತ್ರವೆಂದು ತಿಳಿದು ಭವದಿ ಹುಣ್ಣು ತಿಂದೆನು ದೊರೆಯೆ ಕೊಡದೆ ನಿನ್ನದುನಿನಗೆ 5 ವೇದ ವೋದುವ ನಾನು ನಾನೆನೀನೆಂಬುವೆ ಭೇದವ ತಿಳಿಯದೆ ಭಜಿಸುವೆ ಕುವಿದ್ಯೆ ಬಾದರಾಯಣಗುದರ ಭೇದವ ನುಡಿಯುವೆ ಮಧ್ವಮಂದಿರ ಕೃಷ್ಣ ನೀನಿಲ್ಲ ವೆನ್ನುತ6 ಪೂರ್ಣ ಗುಣದವ ನಿನ್ನ ನಿರ್ಗುಣನೆಂಬುವೆನು ಪೂರ್ಣರಲ್ಲದ ಸುರರ ಸಾಟಿ ನಿನಗೆಂಬುವೆನು ಪೂರ್ಣಬೋಧರ ಕರುಣ ಕೊಡಿಸದ್ದಿದರೆಯಿನ್ನು ಜ್ಞಾನ ಮಾರ್ಗವ ಕಾಣೆ ಸ್ವಾಮಿ ಜಗಜ್ಜನಕ 7 ಜನನ ಮರಣ ರಹಿತ ಜನಿಸುವೆ ನಮ್ಮೊಡನೆ ಕ್ಷಣ ಬಿಟ್ಟಗಲದಲೆಮಗೆ ಉಂಡುಣಿಸುತಿಪ್ಪೆ ಅನಿಮಿತ್ತ ಬಂಧುವೆ ಮರೆತು ನಿಮ್ಮುಪಕಾರ ದನುಜರ ಸೇವಿಸುತ ಹಾಳು ಮಾಡಿದೆ ಬಾಳು 8 ನಿರಯ ಭಾಜನ ನಾದೆ ದೂರವಾಯಿತು ಮುಕುತಿ ದಾರಿಕಾಯುವರ್ಯಾರೊ ಧೀರ ಜಯತೀರ್ಥ ವಾಯು ಅಂತರದಿರ್ಪ ನೀರಜಾಕ್ಷನಮ್ಮ ಶ್ರೀ ಕೃಷ್ಣವಿಠಲನೆ 9
--------------
ಕೃಷ್ಣವಿಠಲದಾಸರು
ಮೂರ್ತಿ ಚಿನ್ಮಯಾತ್ಮಕ ರೂಪ ಸಂತತದಿ ನೆನೆವವರ ಸಲಹೊ ಕರುಣಿ ಪ. ತುಂಬಿ ಇರುತಿಹುದು ಎಂತು ನಿನ್ನಾಟ ಪೇಳ್ ನಿಗಮವೇದ್ಯ ಚಿಂತೆ ಎನಗೊಂದಿಲ್ಲ ಅಂತರಂಗದಿ ನೆಲೆಸಿ ಸಂತತದಿ ನಿನ ಧ್ಯಾನ ನೀಡೆಂಬೆನೊ 1 ದೇಶಾಧಿಪತಿಗಳಿಗೆ ಕೋಶ ತುಂಬದ ಚಿಂತೆ ದೇಶ ತಿರುಗುವನಿಗೆ ಹಣದ ಚಿಂತೆ ದೇಶಸ್ಥನಾದವಗೆ ರಾಜಭಟರಾ ಚಿಂತೆ ಕಾಶಿಯಲ್ಲಿರುವವಗೆ ಮನೆಯ ಚಿಂತೆ 2 ಜಾರಿಣಿಗೆ ವಿಟನೊಬ್ಬ ಬಾರದಿರುವ ಚಿಂತೆ ಚೋರನಿಗೆ ರವಿ ಮುಳುಗದಿರುವ ಚಿಂತೆ ಮಾರನಿಗೆ ಯೋಗಿಗಳ ಹೃದಯ ಭೇದಿಪ ಚಿಂತೆ ಪತಿ ಒಲುಮೆ ಪಡೆವ ಚಿಂತೆ 3 ಕರ್ಮತತ್ಪರರಿಗೆ ಹರಿಮರ್ಮವರಿಯದ ಚಿಂತೆ ಧರ್ಮಪುರುಷಗೆ ಕಲಿಬಾಧೆಯ ಚಿಂತೆ ವೇದಶಾಸ್ತ್ರಜ್ಞನಿಗೆ ವಾದಿಯ ಭಯ ಚಿಂತೆ ಹಾದಿ ನಡೆವಗೆ ದುಷ್ಟ ಜನರ ಚಿಂತೆ 4 ಸಾಧು ಸಜ್ಜನರಿಗೆ ಬಾಧೆ ಕೊಡುವರ ಚಿಂತೆ ಹಾದಿ ತಪ್ಪಿದ ಪಾಪಿಗೆ ಯಮನ ಚಿಂತೆ ವಾಣಿಜ್ಯತನದವಗೆ ಹಣವು ಗಳಿಸುವ ಚಿಂತೆ ಮಾನವಂತರಿಗೂನ ನುಡಿಯ ಚಿಂತೆ 5 ಇಂತೆಲ್ಲರಾ ಚಿಂತೆ ಇರಲಿ ಕೇಳ್ ಹರಿಯೆ ಚಿಂತೆ ಬಿಡಿಸೆನಗೆ ನೀನೊಲಿದು ದೊರೆಯೆ ಚಿಂತನೆಗೆ ಸಿಗದಿಹುದು ನಿನಗೆ ಸರಿಯೆ ಚಿಂತಿಪರಿಗೊಲಿವಂಥ ಸಿರಿಕಾಂತ ಹರಿಯೆ6 ಶಾಂತ ಮೂರುತಿ ಪರಮ ಕರುಣಾಳುವೆನ್ನುತಲಿ ಎಂತೆಂತೂ ಸಜ್ಜನರು ಸ್ತುತಿಪುದನು ಕೇಳುತಲಿ ಇಂತು ನಿನ ಪದವನಾನ್ಹಾರೈಸಿ ಬಂದರೂ ನಿಂತರೂ ಎದುರಲ್ಲಿ ನೀನೊಲಿಯಲಿಲ್ಲ 7 ಕರಮುಗಿದು ಎರಗಿದರೂ ಶಿರಬಾಗಿ ನಮಿಸಿದರೂ ಚರಣದಲಿ ತನುಮನ ಒಪ್ಪಿಸಿದರೂ ಕರಗಲಿಲವು ಮನಸು ಕರುಣಪುಟ್ಟಲು ಕಾಣೆ ಭರವಸೆಯು ನಿನ್ನಲ್ಲಿ ಮೂಡಲಿಲ್ಲ 8 ಶಿರದಿ ಕರವಿಡಲಿಲ್ಲ ತೊರೆದೆಯೊ ಜರಿದೆಯೊ ವರಭಕ್ತಿ ಸಾಲದೊ ಗುರುವಿಕೆಯೊ ದೊರೆತನವೊ ಅರಹೊಟ್ಟೆ ಜೀವಿಸುತ ಅರಿಯದೆ ಮತ್ತೊಂದು ಇರುಳು ಹಗಲಾಲ್ಪರಿವ ತೆರವು ತೋರದೊ ಮನಕೆ 9 ಸರಿಯಲ್ಲ ಸರಿಯಲ್ಲ ಕರುಣಾಳುವೆಂಬುವೋ ಬಿರುದುಳಿವ ತೆರವಿಲ್ಲ ಬಿಂಕಪಟ್ಟರೆ ಈಗ ಕರೆದು ಮನ್ನಿಸೊ ಪಾಂಡುರಂಗವಿಠ್ಠಲ ದೇವ ವರ ಪುಂಡಲೀಕಗೆ ಒಲಿದದ್ದು ನಿಜವಾಗೆ 10 ಪರಿಪರಿಯ ಭಕ್ತರನು ಪೊರೆದದ್ದು ನಿಜವಾಗೆ ಹರಿದಾಸ ಸಂತತಿಗೆ ಮನೆದೈವ ನಿಜವಾಗೆ ಸರಿಯಿಲ್ಲದಾ ದೈವ ನೀನೆಂದು ನಿಜವಾಗೆ ಹೊರವೊಳಗೆ ಒಂದಾಗಿ ಕರಪಿಡಿದು ಸಲಹಿನ್ನು 11 ಗುರುಕೊಟ್ಟ ವರಬಲದಿ ಶರಣು ಪೊಂದಿದೆ ನಿನಗೆ ಚರಣದಲಿ ಬಿದ್ದಿರುವೆ ಪರಮ ಪುರುಷನೆ ದೇವ ಸ್ಮರಪಿತನೆ ಗೋಪಾಲಕೃಷ್ಣವಿಠ್ಠಲ ನಿನ್ನ ಸ್ಮರಣೆ ಮಾಡಿದ ಮೇಲೆ ಭವದ ಭಯ ಉಂಟೆ 12
--------------
ಅಂಬಾಬಾಯಿ
ನಂಬಿದೆ ನಿನ್ನ ಪಾದವ - ವೆಂಕಟರಮಣನಂಬಿದೆ ನಿನ್ನ ಪಾದವ || ಪನಂಬಿದೆ ನಿನ್ನ ಪದಾಂಬುಜಯುಗಳವಇಂಬಿತ್ತು ಸಲಹಯ್ಯ ಶಂಖ-ಚಕ್ರಧರನೆ . ಪತಂದೆಯು ನೀನೆ ತಾಯಿಯು ನೀನೆಬಂಧು ಬಳಗವು ನೀನೆ ||ಬಂದ ದುರಿತವೆನ್ನ ಹೊಂದಿಕೊಳ್ಳದಂತೆತಂದೆ ಸಲಹೊ ಮುಕುಂದ ಮುರಾರಿ 1ಚಿಕ್ಕಂದು ಮೊದಲು ನಾನು ನಿನ್ನಯಪಾದಹೊಕ್ಕು ಜೀವಿಸುತಿಹೆನು ||ಗಕ್ಕನೆ ಜ್ಞಾನವನಕ್ಕರೆಯಲಿ ಕೊಡುಮಕ್ಕಳ ಮಾಣಿಕ್ಯ ರುಕ್ಮಿಣಿಯರಸಾ 2ಮರೆತು ನಾ ಮಾಯೆಯೊಳು ಮುಳುಗಿದೆ ಅದನರಿತು ಅರಿಯದಾದೆ ||ಮರೆಯದೆ ಎನ್ನನು ಪೊರೆಯೆ ಕೃಪಾನಿಧಿವರದ ಶ್ರೀವೆಂಕಟಪುರಂದರವಿಠಲ3
--------------
ಪುರಂದರದಾಸರು
ಸಂಸಾರದೊಳು ಸಾರದಾವುದು ಸಾರದಾವುದಯ್ಯ ಸುಖತೀರಥಗುರುಸಾರಿದ ಮತಸೇರಿ ತತ್ವ ವಿಚಾರಿಸದೆಪ.ದಾವಕಾಲಕೆದಾವಧರ್ಮವುಈ ವಿಚಾರದಿ ಜೀವಿಸುತ ಮತ್ತಾವ ತರತಮ ಭಾವದಲಿ ರಾಜೀವನೇತ್ರನ ಭಾವಿಸದೆ 1ಇಂದಿರಾಧವಗೆಂದು ಆತ್ಮಗೆಹೊಂದಿಸದೆ ಸ್ವಾನಂದ ಬಯಕೆಗೆಇಂದುನಾಳೆಗೆ ಎಂದು ಅಲಸದೆತಂದೆ ಕೃಷ್ಣಗೆ ವಂದಿಸದೆ 2ತನ್ನಗುರುಮತಿ ಸನ್ಮತದಿ ತಾಧನ್ಯನಾಗಿ ಚಿನ್ಮಯ ಪ್ರಸನ್ನವೆಂಕಟ ಎನ್ನಯ್ಯನವರಪೀಯೂಷವುಣ್ಣದ3
--------------
ಪ್ರಸನ್ನವೆಂಕಟದಾಸರು
ಸ್ವಾಮಿ ನೀ ಮಾಡಿದುಪಕಾರಾ ಕಿಂತು ಪಾಮರನಪ್ರತಿಉಪಕಾರಾ | ಭೀಮಾಶಂಕರ ಗುರುವಾಗುವ ಪ್ರಕಾರಾ |ಈ ಮನಕೆ ಎಂದಿಗೆ ತೋರದಾಕಾರಾ ||ಸ್ವಾಮಿ||ಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಲಕ್ಷ ಎಂಬತ್ತು ಮೂರೊಂದನು |ಯೋನಿಕುಕ್ಷಿಯೊಳಗೆಹೊಕ್ಕು ಬಂದೆನೊ | ಭಕ್ಷ್ಯಾಭಕ್ಷ್ಯವ ಮೆದ್ದೆನು |ಅನುಪೇಕ್ಷಿಯೊಳಗೆ ಮುಳುಗಿದ್ದೆನೋ | ಭಿಕ್ಷುಕರೊಡೆಯನಿರೀಕ್ಷಿಸಿ ಕೃಪಾ ಕಟಾಕ್ಷದಿ ಸದ್ಗುರು ರಕ್ಷಿಸಿದಂಥಾ1ನೀರೊಳು ಜೀವಿಸುತಿದೆ ಮೀನಾ |ನೀರು ಕಾರಣವರಿಯದು | ಆ ಮೀನಾ |ಪಾರವಿಲ್ಲದಂಥದೀ ಮೀನಾ |ಪರವಸ್ತುಖೂನನರಿಯದು ಮನ ಮೀನಾ |ನಾರೇರ ನೋಟಕ್ಕೆ ಸೇರಿ ತಾ ಹೋದೀತು |ಸಾರವಸ್ತುವ ತಂದು ತೋರಿಸಿದಂಥ2ತನುವು ತನ್ನೊಳಗೆ ತಾ ತೋರದು |ತನು ಮನದ ವೃತ್ತಿಗೆ ತಾ ಬಾರದು |ಜನನ ಮೃತ್ಯಂಗಳು ದೋರದು |ಎನಗೆ ಸಾಧು ಸಜ್ಜನ ಸಂಗ ದೊರಕದು |ಘನಗುರುಶಂಕರ ಚಿನುಮಯರೂಪ- |ದನುಭವಕೆ ತಂದು ಎನಗೆ ನೀ ಕೊಟ್ಟಂಥ3
--------------
ಜಕ್ಕಪ್ಪಯ್ಯನವರು