ಒಟ್ಟು 7 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೌರೀದೇವಿ ಮಾತಾಡೇ ಎನ್ನ ಮೌನದ ಗೌರೀ ಯಾತಕಚಲಮನ ಸೋತವನೊಡನೆ ಮಾತಾಡೇ ಗೌರಿ ಮಾತಾಡೇ ಪ ನಸುನಗೆ ಮುಖವಿದು ಬಾಡಿ ಕೆಂದುಟಿಯು ಎಸೆದಿರಲು ನಾನೋಡಿ ವಸುಧೆಯೊಳಗೆ ನಾ ಜೀವಿಸಲಾರೆ ಘಸಘಸವ್ಯಾತಕೆ ತುಂಬಿತÀು ಅರಗಿಣಿ 1 ಕ್ಷಣ ಬಿಟ್ಟಿರಲಾರೆ ಅಮ್ಮ ಷಣ್ಮುಖ ಗಣಪರ ತಾಯೆ ನೀ ಬಾರೇ ವಸುಧೆಯೊಳಗೆ ನಾ ಜೀವಿಸಲಾರೆ ಘಸಘಸವ್ಯಾತಕೆ ತುಂಬಿತು ಅರಗಿಣಿ 2 ಕ್ರೋಧವ್ಯಾತಕೆ ಎನ್ನೊಳು ಗೌರೀ ಏನಪ- ರಾಧವು ಇದ್ದರು ತಾಳೇ ಪಾದ ಕಿಂಕಿಣಿಯೇ ಆದರಿಸುವೆ ನಾ ಆದರಿಸುವೆನೇ 3
--------------
ಶ್ರೀದವಿಠಲರು
ನೀರೇ ನೀಕರೆ ತಾರೇ ಪ್ರಾಣದೊಲ್ಲಭನಾ|ಜಾಣ ಸುಜ್ಷಾನೇ ಪ ಹೃದಯ ಮಂದಿರದೊಳು ಅರುಹುದೀಪವಹಚ್ಚಿ| ಹಾಡಿ ನೋಡಲಿಹೆ ಮೈದೋರನ್ಯಾಕ|ಮೈದೋರ ನ್ಯಾಕ 1 ಧ್ಯಾಸಮಂಚದಿ ಭಕುತಿ ಹಾಸಿಕೆಯು ಸು| ವಾಸನೆಪುಣ್ಯಕ ವಲಿದು ಬಾರನೇ|ವಲಿದು ಬಾರನೇ 2 ಸಕಲ ನುಕೂಲಿರಲು ಕ್ರೀಡೆಗೆ ಇನಿಯನು ಪುಕಟ ದೊಲಿಯಭಾಗ್ಯ ಮಂದಳು ಕಾಣೇ|ಮಂದಳು ಕಾಣೇ 3 ಅರಿದವಳು ಎಂದು ಅರಿತು ಕೈಯ್ಯವಿಡಿದು| ಮರಳೆನ್ನ ಅಂತ ನೊಡುವರೇನೇ ನೋಡುವರೇನೇ 4 ಧರೆಯೊಳು ಭೋಗಪದಾರ್ಥಿವು ಸರ್ಪದ| ಸರಸದ ಓಲಾಯಿತು ಅಗಲಿರಲಾರೇ|ಅಗಲಿರಲಾರೇ 5 ಬಂದರೊಂದಿನ ನಿಶೆದಲಿ ಕಳೆಗೂಡದೇ| ಒಂದು ಜಾವ ವ್ಯರ್ಥಿಹೋಯಿತಲ್ಲಮ್ಮಾ|ಹೋಯಿತಲ್ಲಮ್ಮಾ 6 ಗುರುವರ ಮಹಿಪತಿ ನಂದನ ಪ್ರಭುವಿನ| ಚರಣವಗಾಣದೇ ಜೀವಿಸಲಾರೆ|ಜೀವಿಸಲಾರೆ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮರೆಯಲಾರೆ ನಿನ್ನ ತೊರೆಯಲಾರೆ ಮರೆತು ತೊರೆದು ಜೀವಿಸಲಾರೆ ಕೃಷ್ಣಮುರಾರೆ ಪ ಹರಿಚರಣಂಗಳೆ ಶರಣೆನದಿದ್ದರೆ ನಾನಪರಾಧಿ ರಂಗ ಕರುಣವ ಬೀರದೆ ಮರೆ ನೀನಾದರೆ ನೀನಪರಾಧಿ 1 ಭಕ್ತಿ ವಿರಕ್ತಿಯ ಮಾರ್ಗವ ಬಿಟ್ಟರೆ ನಾನಪರಾಧಿ ರಂಗ ಯುಕ್ತಿಯೊಳೆನ್ನನು ಕತ್ತಲೆಯೊಳಗಿಡೆ ನೀನಪರಾಧಿ 2 ನೀನೇ ಗತಿಮತಿಯೆನಗೆನದಿದ್ದರೆ ನಾನಪರಾಧಿ ಎನ್ನಪರಾಧವ ಮನ್ನಿಸದಿದ್ದರೆ ನೀನಪರಾಧಿ 3 ಅಪರಾಧಗಳಿನ್ನಿಬ್ಬರಿಗೇತಕೋ ಕಮಲಾಂಗ ಸುಪಥವ ತೋರುವ ಜಾಣ್ಮೆಯು ನಿನ್ನದು ಮಾಂಗಿರಿರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾಕೆ ನಿರ್ದಯ ಮಾಡಿದೆ ರಂಗಯ್ಯ ನೀನ್ಯಾಕೆ ನಿರ್ದಯ ಮಾಡಿದೆ ಪ ವ್ಯಾಕುಲ ಪಡಲಾರೆ ನಿಮ್ಮ ಲೋಕವ ಸೇರಿಸು ಅ.ಪ ದುಷ್ಟರ ಮಧ್ಯದಲ್ಲಿ ನಾನಿರಲಾರೆ ಸೃಷ್ಟಿಗೀಶ್ವರನೆ ಕೇಳು ಮುಟ್ಟಿ ಭಜಸಿ ನಿಮ್ಮ ಪಾದಪದ್ಮದ ಭಕ್ತಿಯಿಟ್ಟೇನೆಂದರೆ ದುಷ್ಟ ಇಂದ್ರಿಯ ಬಿಡದೆನ್ನ 1 ಪಂಚೇಂದ್ರಿಯಗಳೆನ್ನ ಬಹುಬೇಗ ವಂಚನೆ ಮಾಡುತಿದೆ ಪಂಚಬಾಣನ ಪಿತ ಪರಮಪುರುಷ ರಂಗ ಅ ಕಿಂಚನಾದೆ ನಿನ್ನಂಘ್ರಿಯ ಸೇರಿಸು 2 ಸಂಸಾರವೆಂಬ ಸರ್ಪ ಕಚ್ಚಿ ವಿಷ ಕ್ಷಣದಲ್ಲಿ ತಲೆಗೇರಿತು ಪರಮ ಹಂಸರ ಸಂಗದೊಳಗೆಯಿರಿಸಿ ಎನಗೆ ಭರದಿಂದೇರಿದ ವಿಷ ತಿರುಗೆಸೋ ಶ್ರೀಹರಿ 3 ಸರ್ಪ ತುಂಬಿದ ಕೂಪದಿ ಬಿದ್ದಿಹೆನು ಎನ್ನಪ್ಪ ರಕ್ಷಿಸೊ ಬೇಗದಿ ಸರ್ಪಶಯನ ಶ್ರೀಅಪ್ರಮೇಯ ರಂಗ ಇನ್ನು ಕ್ಷಿಪ್ರದಿಂ ಮುಕ್ತಿಯ ಒಲಿದು ಪಾಲಿಸು ರಂಗ 4 ಅಮ್ಬುಜನಾಭನೆ ನಿಮ್ಮ ಪಾದದಧ್ಯಾನ ಒಂದು ನಿಮಿಷವಾದರು ಮಾಡಲೀಸದು 5 ಹಿಂದಿನ ಕರ್ಮಂಗಳು ಇಂದಿರೇಶ ನಿಂದಕರ ವಶವಾಯಿತು ಇಂದು ಧರ್ಮದಲಿರ್ದೆ ಬಂಧುಗಳ ವಶವಾಯ್ತು ಇನ್ನು ಬಂಧನವೇನಯ್ಯ ಮುಕ್ತ್ಯಾನಂದ ತೋರುವುದಕ್ಕೆ 6 ಎಂದಿಗಾದರೂ ಮುಕ್ತಿಯ ಕೊಡುವೆಯೆಂದಾನಂದ ಇಂದು ಈ ಸಂಸಾರ ಬಂಧನದೊಳಗೆ ನಾ ಒಂದು ನಿಮಿಷ ಜೀವಿಸಲಾರೆನು ರಂಗ 7 ಅಂದು ದ್ರೌಪದಿ ಧ್ರುವÀ ಗಜೇಂದ್ರನ ರಕ್ಷಿಸಲಿಲ್ಲವೆ ಬಂದು ಅಂಬರೀಷ ಅಜಾಮಿಳರ ಪ್ರಹ್ಲಾದನ ಕಂಬದಿಂದಲೆ ಬಂದು ಕಾಯ್ದ ಗೋವಿಂದ 8 ಭಕ್ತವತ್ಸಲನೆಂತೆಂಬೊ ಬಿರುದು ಈಗ ವ್ಯರ್ಥವಾಯಿತೆ ಶ್ರೀರಂಗ ಉತ್ತಮ ಗುರುಗಳು ಶ್ರೇಯೋನಿಧಿಗಳ ವಾಕ್ಯ ಸತ್ಯವ ಮಾಡಿ ಮುಕ್ತ್ಯಾನಂದ ಪಾಲಿಸು 9 ರಂಗನಾಥ ನೀ ಕೈ ಬಿಟ್ಟರೆ ಎನ್ನ ಲೋಕಮಾತೆ ಬಿಡುವಳೆ ಬೇಗ ಮುಕ್ತಿಪಥವ ಪಾಲಿಸುವಳು 10 ಮಾಡಬಾರದ ಮಾಡಿದೆ ಈ ಸಂಸಾರದೆ ನೋಡಬಾರದ ನೋಡಿದೆ ಆಡಬಾರದ ವಾರ್ತೆಗಳನಾಡಿದೆ ಇನ್ನು ಗಾಡನೆ ಮುಕ್ತಿಯ ನೀಡೊ ವೆಂಕಟರಮಣ 11
--------------
ಯದುಗಿರಿಯಮ್ಮ
ಹಿಂದಿನ ದಿನದಂತಿದಲ್ಲಣ್ಣ ಈಗ ಬಂದಿಹ ದಿನವತಿ ಹೊಸದಣ್ಣ ಪ ಹೆಂಡಿರು ಮಕ್ಕಳ ಕರೆದರೆ ಒಳಗೆ ತಂಡುಲವಿಲ್ಲ ಗಂಜಿಗೆಶರೆ ಉಂಡೆವೆನುತ ಬಾಯ ಬಿಡುತಾರೆ ಇದ ಕಂಡು ನಾಕ್ಷಣವು ಜೀವಿಸಲಾರೆ 1 ಕಡಕಟ್ಟು ಹುಟ್ಟಿತೆಂಬುದು ಹುಸಿಯಿನ್ನು ಕೊಡುವರು ಕೊಡುವುದಿಲ್ಲವೋ ರೋಸಿ ಉಡಲು ತೊಡಲಿಕ್ಕಿಲ್ಲ ಕೈ ಬೀಸಿ ಎದೆ ನಡುಗಿ ಸಾವೆನು ನಾನು ಪರದೇಶಿ 2 ಅತಿಥಿಗಿಕ್ಕಲಿಕೆ ತನಗೇ ಇಲ್ಲ ಪ್ರತಿಮೆ ಲಿಂಗ ಪೂಜೆಗಳು ಜನ್ಮದೊಳಿಲ್ಲ ವ್ರತನೇಮ ದಾನ ಧರ್ಮಗಳಿಲ್ಲ ಪರ ಗತಿಗೇನು ಮುಂದೆ ಸಾಧನವಿಲ್ಲ 3 ಸಂಸಾರದೊಳಗೇನು ಸುಖವಿಲ್ಲ ಪರಮ ಹಂಸನಾಗಲು ಮುಂದೆ ಪಥವಿಲ್ಲ ಕಂಸಾರಿ ಸ್ಮರಣೆ ಎಂದಿಗೂ ಇಲ್ಲ ತಮ ಧ್ವಂಸಿ ಯಣುಗನ ಕೈವಶರೆಲ್ಲ 4 ಕಾಲಗತಿಯು ಬಲು ಬಿರುಸಣ್ಣ ಜನ ಬಾಳುವ ಪರಿಯಿನ್ನು ಹೆಂಗಣ್ಣ ಕೂಳಿಗೆ ಬಗೆಯಿಲ್ಲದಾಯ್ತಣ್ಣ ಲಕ್ಷ್ಮೀ ಲೋಲನ ಮೇಲೆ ಭಕ್ತಿಯಿಲ್ಲಣ್ಣ 5
--------------
ಕವಿ ಪರಮದೇವದಾಸರು