ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿರ್ವಿಕಲ್ಪರೂಪವೇ ಆನಂದರುಪವೇ ಸರ್ವಾಧಾರ ಚಿನ್ನಭಾ ನೀನೆ ಆ ಸ್ವಯಂಪ್ರಭಾ ಪ ನೀ...... ಅನುಭವದಿ ಮನಗಾಣುವಧೀ ಭಾವಾತೀತ ಬೋಧವಾ ನಿತ್ಯಾನಂದದಾತ್ಮವಾ ಕಲ್ಪನೆ ಎರಡರ ಮಧ್ಯದೊಳಿರುವ ಕಲ್ಪನೆ ಸಾಕ್ಷಿರೂಪವೇ ಪೂರ್ಣಾನಂದ ನೀನಿಹೆ 1 ಈ........... ತೋರಿಕೆ ಎಲ್ಲಾ ಕಲ್ಪಿತಾ ಮನಸಿನದೆಲ್ಲ ಜೀವಿತಾ ಮನವೇ ಚಿತ್ತಾಕಾಶ ತಾ ಪರಿ ಈ ತೋರಿಕೆ ಮಿಥ್ಯಾ ಚಿನುಮಯ ಮಾತ್ರ ನೀನಿಹೆ ಶಂಕರಗುರುವಿನ ಬೋಧವೇ2
--------------
ಶಂಕರಭಟ್ಟ ಅಗ್ನಿಹೋತ್ರಿ
ನೊಂದೆನಯ್ಯ ಭವದೊಳು ಸಿಂಧುಶಯನ ವೆಂಕಟೇಶ ಪ ಒಂದು ದಿನಸುಖವಿಲ್ಲ ಗೋ- ವಿಂದ ಬಹಳ ಕರುಣದಿಂದ ನಿ- ರ್ಬಂಧವನ್ನು ಕಳೆದು ಎನ್ನ ತಂದೆ ನೀನೇ ರಕ್ಷಿಸಯ್ಯ 1 ಕಪಟ ನಾಟಕ ಸೂತ್ರಧಾರಿ ಅಪರಿಮಿತ ಮಹಿಮ ಎನ್ನ ಅಪರಾಧವನು ಕ್ಷಮಿಸಿ ಮುಂದೆ ಕಪಟವಿಲ್ಲದೆ ರಕ್ಷಿಸಯ್ಯ 2 ಕಂದ ಪ್ರಹ್ಲಾದನಂತೆ ತಂದೆ ಮುನಿದಾಡುವ ತೆರದಿ ಗ- ಜೇಂದ್ರನಂತೆ ದೃಢವಿಲ್ಲ ಮಂದಮತಿಯ ರಕ್ಷಿಸಯ್ಯ 3 ನರ ಜನ್ಮದೊಳಗೆ ಪುಟ್ಟಿ ನರಕ ಭಾಜನ ತಾನಾಗಿ ದುರಿತ ಪಂಜರದೊಳಗೆ ನಾನು ಸೆರೆಯ ಬಿದ್ದೆ ರಕ್ಷಿಸಯ್ಯ 4 ಹಗಲು ದೃಷ್ಟಿ ಕಾಣದವಗೆ ಮೊಗವುಗೊಂಡು ರಾತ್ರಿಯೊಳು ಹಗೆಯ ವನದಿ ಸಿಕ್ಕಿದವನ ಅಗಲಿ ಹೋಗದೆ ರಕ್ಷಿಸಯ್ಯ 5 ಸಾವಿರ ಅಪರಾಧವನು ಜೀವಿತಾತ್ಮನೆ ಕ್ಷಮಿಸಿ ಎನ್ನ ಮೂವಿಧಿಯೊಳು ಸಿಲುಕದಂತೆ ಭಾವಿಸಿಯೆ ರಕ್ಷಿಸಯ್ಯ 6 ವರಾಹತಿಮ್ಮಪ್ಪ ಮನದ ಘೋರ ದುಃಖವನ್ನು ಕಳೆದು ಮೀರಿ ಬಂದಾಪತ್ತಿನೊಳು ಕಾರಣಿಕನೆ ರಕ್ಷಿಸಯ್ಯ 7
--------------
ವರಹತಿಮ್ಮಪ್ಪ