ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡು ಕಂಡು ನಾನು ಹೇಗೆ ಸುಮ್ಮನಿರಲಿ ಪ ಯಲ್ಲಮ್ಮ ಎಕನಾತಿ ಮೊದಲಾದ ಚಿಲ್ಲರೆ ದೇವರುಗಳಲ್ಲಿ ನಿಷ್ಠೆ ಇಟ್ಟು ||ನಿಲ್ಲದೇ ಭಜಿಸಿ ಸಂತತಾಪುಲ್ಲನಾಭನ ಬಿಟ್ಟು ಕ್ಷುಲ್ಲಕರನ 1 ದೇವರೆಲ್ಲಾ ಸಮ್ಮತವೆಂದುಬೇವಿನ ಉಡಿಗೆ ಊಟಾನಿಟ್ರು ||ಜೀವ ಹರಿಗೆ ಐಕ್ಯವ ಪೇಳುವಕೇವಲ ತಾಮಸ ಜೀವಿಗಳನ 2 ಅಹಂಕಾರದಿಂದಲಿ ಕೆಟ್ಟುದೇಹಿ ಎಂಬೋ ವಾಕ್ಯವ ಬಿಟ್ಟು ||ರಹಸ್ಯದಿಂದಲಿ ಶ್ರೀ ಹರಿಯ ಬಿಟ್ಟುಮೋಹನ್ನ ವಿಠಲನ ಸೋಹಂ ಎಂಬರ 3
--------------
ಮೋಹನದಾಸರು
ಕರೆದರೆ ಓ ಓ ಎನಬಾರದೆ ಮರೆತರು ಕೂಗಿನ ದನಿಕೇಳದೆ ರಂಗ ಪ ಶರಣಜನರು ಸಾಸಿರವಿದ್ದರೇನೋ ಮೊರೆಯಿಡುವವ ಕಂಡರರಿವಾಗದೇನೋ ಅ.ಪ ಲಕ್ಷಜೀವಿಗಳನ್ನು ರಕ್ಷಿಸುವವನೆಂದು ವಕ್ಷದೊಳಿರುವ ಶ್ರೀಲಕ್ಷ್ಮಿ ಹೇಳುವಳು ಪಕ್ಷಿರಾಜನ ಫಣಿಯಕ್ಷನಂಗನೆಯರು ಅಕ್ಷರ ಲೋಕಾಧ್ಯಕ್ಷನೆನುವರು 1 ಯೋಗವನರಿಯೆನು ಯಾಗವನರಿಯೆನು ತ್ಯಾಗ ಮಾಡುವ ಬುದ್ಧಿ ಎಳ್ಳನಿತಿಲ್ಲ ರಾಗ ರಚನೆಗಳ ಅರಿವೆನಗಿಲ್ಲ ನಾಗಶಯನ ಕಾಯೋ ಮಾಂಗಿರಿರಂಗ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮನವೇ ನೀನೆಚ್ಚರಿಕೆ ಬಿಡದಿರು ಅನುದಿನವು ಹರಿಧ್ಯಾನದೊಳಗಿರು ಪ ವನಿತೆ ಧನಧಾರಿಣಿಯ ನೆಚ್ಚಿ ತನುವೆ ತಾನೆಂಬುದನುಚಿತವು ಅ.ಪ ಬರಿಯಕೈಯಲಿ ಭೂಮಿಗಳಿಸಿದೆ ದುರಿತಭಾರವ ಧರಿಸಿರ್ಪೆ ನರರೆ ಹರಿಸುವರಾರೋ ಕಾಣಿರ ಅರಿತುಕೊಂಡಿರೆ ತಿಳಿಸಿರೈ 1 ಕಾಯವಸ್ಥಿರ ಹೇಮಸಂಸ್ಕøತಿ ಮಾಯಾಪಾಶದ ಬಲೆಗೆ ಸಿಲ್ಕಿ ನಾಯಿನರಿಯಂದದಲಿ ತೊಳಲಿ ಸಾಯವರ ಕಂಡಳುವದೇಕೋ 2 ಜಾತಿಧನವಧಿಕಾರ ಖ್ಯಾತಿಗೆ ಆತುರದೊಳಭಿಮಾನ ಪಡುವೇ ಪಾತಕರೆ ಹಿಂಜರಿಯದಂತೇ ಪ್ರೀತಿಯಿಂ ಪರಪೀಡೆಗೈವೇ 3 ಪೊಡವಿಯೊಳ್ ಪೆಣ್ ಬಾಲ ವೃದ್ಧರು ಬಡವರಾರ್ತರು ಕುಂಟಕುರುಡರು ಎಡೆಯ ಜೀವಿಗಳನ್ನು ಕರುಣದಿ ಕಾಣೆಲೋ ಕಡುಜಾಣನೇ 4 ಸತ್ತಮೇಲೇನೆಂದು ಯೋಚಿಸು ಮುತ್ತಿ ಕತ್ತಿಯೊಳಿರಿವರೈ [ಮ]ತ್ತಕ್ಷಣದ ಫಲಕಾಶೆಪಡದಿರು ಸತ್ಯವಂ ಪಿಡಿ ನಿತ್ಯವೂ 5 ಯಮುನೆ ಹೊಕ್ಕರು ಯಮನು ಬಿಡನೂ ಅಮಮ ನರಕದೊಳಿಳಿಪರೈ ರಮಾರಮಣನ ಒಲುಮೆಗಾಗಿ ಶ್ರಮಿಸಿ ಪರರುಪಕಾರಿಯಾಗೋ6 ಪತಿತಪಾವನ ಜಾಜಿಕೇಶವ ನತಿಶಯದಿ ತಾ ಜಗವ ಪಾಲಿಪ ಚತುರ್ವೇದ ಶ್ರುತಿ ಪ್ರಮಾಣವ ಮತಿಯುತರು ಮೀರುವರೆ ಮರುಳೇ 7
--------------
ಶಾಮಶರ್ಮರು
ಸ್ಮರಿಸಿದದರಘನನಾಶನ ಸ್ಮರಿಸಿದವರಘನಾಶಸ್ಮರನಯ್ಯನಂಘ್ರಿ ಯುಗ ಸರಸಿಜವ ಪೂಜಿಸುವಗುರು ವಿಜಯರಾಯರ ಚರಣಾಬ್ಜ ಸಾರಿದವದುರಿತಾಬ್ಧಿ ಮೀರಿದವ ಹರಿಪುರವ ಸೇರಿದವನೊ ಪ ಅಘ ಬಂಧ ಪರಿಹರ ಮಾಡುತಾ ಜನರು 1 ಇನಿತು ಜನಸಮುದಾಯದೊಳು ಯಿರುತಿರ್ದ ಇಭವರದ ನನುದಿನವು ಗಾಯನದಿ ಕೊಂಡಾಡಿ ಮನಮುಟ್ಟಿವಿನಯಾತಿಶಯದಲ್ಲಿ ಗುರುವರ್ಯರಾ ಸೇವೆ ಘನವಾಗಿ ಮಾಡಿ ಮುದದಿ ||ತನುವೆತ್ತಿ ವರಸರಿತ ತೀರದಾ ಅಣು ಬದರಿಜನ ಶ್ರೇಷ್ಠರೊಳು ಹರಿಯ ದಾಸ ಪೆಸರಲಿ ಬಂದುಘನ ಯಾದವಾದ್ರಿ ಪಟ್ಟಣದೊಳಗೆ ಯಿದ್ದು ಬಗೆ ಜನನಿ ಅನುಜಾತಿ ಸಹಿತ 2 ಕೆಲವು ದಿನ ಸಂಸಾರ ಗಲಭಿಯೊಳು ಯಿರುತಿರ್ದುಜಲದೊಳಗೆ ಅಂಬುಜವು ಮಿಳಿತವಾಗಿದ್ದ ತೆರಹಳಿದು ದುಷ್ಟಾಸಿಯನು ಕಳೆದು ಕಡು ಮಮತೆಯನು ಪುಳಕೋತ್ಸ ಮನದಿ ತಾಳಿ ||ಜಲದೊಳುತ್ತಮವಾದ ಭಾಗೀರಥೀ ಯಾತ್ರಿಛಲ ಭಕುತಿಯಿಂದಲಿ ಮಾಡಿ ಮೋದದಿ ಹರಿಯಹಲವು ಬಗೆ ಲೀಲೆಯನು ಹರುಷದಿಂದಲಿ ಯಿನ್ನು ತಿಳಿದು ಗುರು ಕರುಣ ಬಲದಿ 3 ಮೂರ್ತಿ ಮನದೊಳು ಕಂಡು ಸುಖವನಧಿಯಲ್ಲಿ ಲೋಲ್ಯಾಡಿಕೊಳುತ ||ಅಲ್ಲಿಂದ ತೆರಳಿ ಗಿರಿಯಲ್ಲಿದ್ದ ವೆಂಕಟನಸಲ್ಲುವಾ ಭಕುತರೊಳು ಸಲೆ ಶ್ರೇಷ್ಠನೆಂದೆನಿಸಿಮಲ್ಲ ಮರ್ದನನಾದ ಮುರಹರನ ಮಹಿಮೆ ಮನ ಬಲ್ಲನಿತು ವಿಸ್ತರಿಸುತ ಜನರು 4 ಈ ತೆರದಿ ಇಭವರದನಾತುಮದೊಳಗೆ ತಂದುಭೂತಳದ ಬಲು ವಿಧದ ತೀರ್ಥಕ್ಷೇತ್ರಗಳಲ್ಲಿಪ್ರೀತಿಯಿಂದಲಿ ಪರಮ ಪುರುಷನ್ನ ಧೇನಿಸುತ ಖ್ಯಾತಿ ಮಹಿಯೊಳಗೆ ಮೆರದು ||ವಾತಜಾತನ ಮತದ ವೊಳಗಿಪ್ಪ ವೈಷ್ಣವರತಾತನೆಂದೆನಿಸಿ ಸುಖವ್ರಾತದೊಳಗಿಡುವಲ್ಲಿಚಾತುರ್ಯದಿಂದ ಬಲುದಾತನೆನಿಸುತಲಿ ಭವತೀತರನ ಮಾಡಿ ಪೊರವ ಜನರು 5 ಆ ಬಗೆಯಲೀ ಕಮಲನಾಭ ಕರುಣಿಸಿ ಯಿವರಈ ಭುವನದೊಳು ಯಿಟ್ಟು ಜನರ ವುದ್ಧರಿಸುವಲೋಭದಿಂದಲಿ ಸಕಲ ಸಜ್ಜನರ ಸನ್ಮಾರ್ಗ ಲಾಭದೊಳು ಸೇರಿಸಿದನೊ ||ತ್ರ್ರಿಭುವನದೊಡೆಯನ್ನ ಕಥೆಯ ತಿಳಿಸುವ ಜನಕೆಶೋಭಿಸುವ ಗಾಯನದ ಸೊಬಗಿನಿಂದಲಿ ಕೇಳಿಶ್ರೀಭೂರಮಣ ವೊಲಿದು ಪಾಲಿಸುವನಾಮೇಲೆ ಶೋಭನ ಗತಿಯ ನೀವನೊ 6 ಕಲುಷ ವಾಕು ವುಪಜೀವರಿಗೆ ಏಕ ಮನದಿಂದಿರುವದೇ ಈ ಕಲಿಯುಗದಲಿಸಾಕಾರ ಗುಣಪೂರ್ಣ ಶ್ರೀನಿವಾಸನು ಬಿಡದೆ ಸಾಕುವನು ಸಮ್ಮೊಗದಲಿ ಜನರು 7 ದೇವಮುನಿ ನಾರದನು ಜೀವಿಗಳನುದ್ಧರಿಪಭಾವದಲಿ ಯಮಪುರಿಯ ದೇವನಲ್ಲಿಗೆ ಪೋಗಿಸಾವಧಾನದಿ ಸಕಲ ಸತ್ಕಾರಕೊಳಗಾಗಿ ನೋವು ಬಡವರನೀಕ್ಷಿಸಿ || ಸಾವಧಾನದಿ ಕೇಳಿ ಕಲಶಾರುಣೀ ಭಕ್ತ- ರಾವಳಿಯ ಸಲಹುವ ದೇವ ದೇವೇಶನನುತಾ ವದರಿ ಕೂಗಲಾ ಜೀವರೆಲ್ಲರು ಕೇಳಿ ಪಾವಿತ್ರವನೆಗೈದರೊ ಜನರು 8 ಭವ ಸಿರಿ ಚರಣಕೆ ಜನರು 9 ಸಿರಿ ತರಣಿ ಶರಧಿ ಶಯನನ ತೋರುವ ಜನರು 10 ದಾನವಾಂತಕ ದನುಜರನ್ನು ಸಂಹರಿಸುವಾಜ್ಞಾನಪೂರ್ಣನು ಗುಪ್ತ ತಾನಾಗಿ ಜಗದೊಳಗೆಹಾನಿ ವೃದ್ಧಿಂಗಳಿಗೆ ಹೊರಗಾಗಿ ಜೀವಿಗಳ ಮಾಣದಲೆ ಪರಿಪಾಲಿಪ ||ಕ್ಷೋಣಿಯೊಳು ಭಕುತರಘ ಹಾನಿಗೈಸುವ ಬಗಿಗೆಈ ನಿರುದ್ಧಕೆ ಯಿವರಧೀನ ಮಾಡಿದ ನಮಗೆವೇಣುಗೋಪಾಲ ವಿಠಲರೇಯ ತಾನೊಲಿದು ಸ್ವಾನಂದವನೆ ವುಣಿಸುವ ಜನರು 11
--------------
ವೇಣುಗೋಪಾಲದಾಸರು