ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದುರಿತ ಪೋದವೆನ್ನಿ ಪ ವಾಯುನಂದನನನೆನ್ನಿ | ವರವಜ್ರಕಾಯನೆನ್ನಿ | ರಾಯ ರಾಘವನ ಕಿಂಕರನೆನ್ನಿರೈ | ಛಾಯಾಗ್ರಿಯನ ಕೊಂದು ವನ ಕಿತ್ತಿದನೆನ್ನಿ | ಮಾಯದ ಲಂಕೆಯ ದಹನನೆನ್ನಿರೈ 1 ಪಾಂಡು ಕುಮಾರನೆನ್ನಿ ಪಾಪ ಸಂಹಾರನೆನ್ನಿ | ಉಂಡು ವಿಷವ ತೇಗಿದಾನೆನ್ನಿರೈ | ಲೇಂಡ ಹಿಡಂಬಕನ ಕೊಂದನೆನ್ನಿ | ಚಂಡ ಕುರವಂಶಹತನೆನ್ನಿರೈ 2 ಅಮಿತ ಜೀವಾತ್ಮನೆನ್ನಿ | ಜ್ಞಾನಕೆ ಮೊದಲು ದೇವತಿಯನ್ನಿರೈ | ಕೈವಲ್ಯ ಮಾರ್ಗವೆನ್ನಿ3
--------------
ವಿಜಯದಾಸ
ನಾವು ಕುರುಬರು, ನಮ್ಮ ದೇವರು ಬೀರಯ್ಯಕಾವ ನಮ್ಮಜ್ಜ ನರಕುರಿಯ ಹಿಂಡುಗಳ ಪ ಅಷ್ಟಮದ ಮತ್ಸರಗಳೆಂತೆಂಬ ಟಗರುಗಳುದೃಷ್ಟಿ ಜೀವಾತ್ಮನೆಂತೆಂಬ ಆಡುಸೃಷ್ಟಿ ಸಿದ್ಧ ಪ್ರಸಿದ್ಧವೆಂತೆಂಬ ಹೋತಗಳುಕಟ್ಟಿ ಕೋಲಿನಲಿ ಇರಿಯುತಿಹ ನಮ್ಮಜ್ಜ 1 ವೇದಶಾಸ್ತ್ರ ಪುರಾಣವೆಂತೆಂಬ ಶ್ವಾನಗಳುಕಾದಿದ್ದು ನಮ್ಮಜ್ಜನ ಹಿಂಡೊಳಗೆಹಾದಿಗಾಣದೆ ಕೂಗಿ ಬಾಯಾರಿ ಕಾಲ್ಗೆಡಲುಆದರಿಸಿ ಅಂಬಲಿಯನೆರೆವ ನಮ್ಮಜ್ಜ 2 ಅರಿವೆಂಬ ಮರಿಗಳು ಹಿಂಡಿನೊಳಗಡೆ ಬರಲುಮರೆವೆಂಬ ವ್ಯಾಘ್ರ ಕಿರುಬ ತೋಳಗಳು ಹೊಕ್ಕುತರುಬಿ ಹಿಂಜಾವದಲಿ ಕುರಿಯ ಮುರಿವುದ ಕಂಡು ಅರಿತು ಅರಿಯದ ಹಾಗೆ ಇರುವ ನಮ್ಮಜ್ಜ 3 ಹುಟ್ಟುದಕೆ ಮೊದಲಿಲ್ಲ ಸಾವುದಕೆ ಕೊನೆಯಿಲ್ಲಹುಟ್ಟು ಸಾವಿನ ಹೊಲಬ ಬಲ್ಲ ನಮ್ಮಜ್ಜಅಷ್ಟು ಪ್ರಾಣಿಗಳಿಗೆ ಇಷ್ಟು ಅಂಬಲಿ ಮಾಡಿಹೊಟ್ಟೆ ತುಂಬುವ ಹಾಗೆ ಎರೆವ ನಮ್ಮಜ್ಜ 4 ಕಲಿಯುಗಕೆ ಗೌಡನಿವ ಸಂಗಾತಿ ಮಂತ್ರಿಸುತಕಲಿಯುಗಂಗಳನೆಲ್ಲ ಪೊರೆವಾತನೀತಜಲಜಾಕ್ಷ ಕಾಗಿನೆಲೆಯಾದಿಕೇಶವನ ಮನವೊಲಿಸಿ ಭಜಿಸದ ಮನುಜ ಹುಚ್ಚು ಕುರುಬ 5
--------------
ಕನಕದಾಸ
ಬರಿದೆ ಬಯಸದಿರಿಹಲೋಕಸುಖವೆಂಬ ಬರಗಿನ ಪಾಯಸವ |ಶರಿಧಿಶಯನನ ಬೇಡೊ ಪರಲೋಕಸುಖವೆಂಬಸೇವಗೆ ಪಾಯಸವ ಪ.ಮುಂದರಿಯದೆ ಮಾಳ್ಪ ಮೂಢನೃಪನ ಸೇವೆ ಮುಗ್ಗುರಾಗಿಯ ಹಿಟ್ಟು |ಮಂದಮತಿಯೆ ನೀನನ್ಯರಲಿ ಬಯಸುವ ನೀಚಮಾರ್ಗವ ಬಿಟ್ಟು ||ಕಂದರ್ಪಜನಕನ ಕಿಂಕರನೆಂಬುವ ಕಲಸೋಗರ ಕಟ್ಟು |ಸಂದೇಹಿಸದೆಪರಾತ್ಪರವಸ್ತು ಮುಕುಂದನಂಘ್ರಿಯ ತಟ್ಟು1ಅಗ್ಗದಾಸೆಗೆ ಸಂಗ್ರಹಿಸದಿರಘವೆಂಬ ಅಡಿಗಂಟು ದವಸವನು |ಬಗ್ಗನುಳಿದು ಸಂಪಾದಿಸು ಪರವೆಂಬ ಪುಣ್ಯದ ದವಸವನು ||ಯೋಗ್ಯರನರಿಯದೆ ಏತಕೆ ಬೇಡುವೆ ಸಾಕಾರ ಕೇಶವನು |ಕುಗ್ಗಗೊಡದೆ ಸಂಸಾರವೆಂತೆಂಬುವ ಕೋಟಲೆ ತಪ್ಪಿಸುವನು 2ಸಕ್ಕರಿ ಚಿಲಿಪಾಲು ಘ್ರತ ರಾಜಾನ್ನಕೆ ಸವಿಯೀವಹರಿಕಥೆಯ - ಬಿಟ್ಟು |ಅಕ್ಕರೆಯಿಂದಪೇಕ್ಷಿಸುವರೆ ನೀ ಅಲ್ಪರ ಸಂಗತಿಯ ||ಸೊಕ್ಕೊಳಿತಲ್ಲೆಲೊ ಮದಡು ಜೀವಾತ್ಮನೆ ಸ್ವಾಮಿಕಾರ್ಯಸ್ಥಿತಿಯ |ಗಕ್ಕನಂತು ಸೇರು ಪುರಂದರವಿಠಲನ ಚರಣಕಮಲದ್ವಿತಯ 3
--------------
ಪುರಂದರದಾಸರು