ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಮಂಗಳಂನಿತ್ಯಶುಭಮಂಗಳಂ ||ಪ.ಶ್ರೀ ವತ್ಸಲಾಂಛನಗೆ ಕ್ಷೀರಾಬ್ಧಿ ವಾಸಗೆ |ಗೋವರ್ಧನೋದ್ಧಾರ ಗೋವಿಂದಗೆ ||ಮಾವ ಕಂಸನ ಕೊಂದುಮಕರಕುಂಡಲ ಧರಿಸಿ |ಜೀವಾತ್ಮನಾದ ಚಿನ್ಮಯರೂಪಗೆ 1ಅಂಬುಧಿಯ ಶಯನಗೆ ಅಖಿಲ ಭೂತೇಶಗೆ |ತುಂಬುರ - ನಾರದ ಮುನಿವಂದ್ಯಗೆ ||ಎಂಭತ್ತನಾಲ್ಕು ಲಕ್ಷ ಯೋನಿಗಳ ರಾಶಿಯನು |ಗೊಂಬೆಯನು ಮಾಡಿ ಕುಣಿಸುವ ದೇವಗೆ 2ಕಂದರ್ಪನಯ್ಯನಿಗೆ ಕೋಟಿ ಲಾವಣ್ಯನಿಗೆಸುಂದರ ಮೂರುತಿಹರಿ ಸರ್ವೋತ್ತಮನಿಗೆ ||ಕಂದ ಪ್ರಹ್ಲಾದನ ಕಾಯ್ದ ದೇವನಿಗೆಅರ |............................................. 3ಪನ್ನಂಗಶಯನಗೆಪಾವನ್ನ ಚರಿತೆಗೆ |ಸನ್ನುತರಾದ ಸಜ್ಜನ ಪಾಲಿಗೆ ||ಎನ್ನೊಡೆಯ ಸಿರಿದೇವಿಯರಸು ಮುದ್ದುರಂಗಗೆ |ತನ್ನ ನಂಬಿದವರನು ಸಲಹುವವಗೆ 4ಕರಿರಾಜವರದಗೆ ಕರುಣಾಸಮುದ್ರಗೆ |ಗರುಡ ಗಮನನಿಗೆ ವೈಭವಹಾರಗೆ ||ವರಪುರಂದರವಿಠಲ ಕಂಬುಕಂದರನಿಗೆ |ಅರವಿಂದನಾಭನಿಗೆ ಅಜನ ಪಿತಗೆ 5
--------------
ಪುರಂದರದಾಸರು