ತನ್ನ ತಾನು ಕಂಡರೆ ಜೀವಶಿವರೆಂಬ ಭೇದವೆಲ್ಲಿಹುದೋ ಪ
ಶ್ರವಣ ಮನನ ನಿದಿಧ್ಯಾಸವು ಬಲಿದರೆ | ಭುವನದ ಜನಪದ ಪುಸಿಯಹುದೊ 1
ರೂಪನಾಮಕ್ರಿಯಾ ವರ್ಣಗಳು | ಕಾಯದಿ ತೋರಲು ನಿಜವಲ್ಲಾ 2
`ತತ್ತ್ವಮಸಿ’ ಮಹಾ ವಾಕ್ಯವು ಬಂದರೆ | ಮಿಥ್ಯೆಗಳೆಲ್ಲಾ ನೀಗುವವು 3
ಆಗಮದಲಿ ಶಿವಯೋಗವ ಮಾಡಲು | ಈಗಲೆ ಜೀವನ್ಮುಕುತಿಯು ಸಿಗುವದೊ 4
ಭವತಾರಕನ ಕರುಣವ ಪಡೆದರೆ | ಜನನ ಮರಣ ಭಯ ಹಿಂಗುವದೊ 5