ಒಟ್ಟು 26 ಕಡೆಗಳಲ್ಲಿ , 10 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನ ಮಾಡಿ ತೀರುವೆ ಸದ್ಗುರುನಾಥಗೆ ಏನಮಾಡಿ ತೀರುವೆನೀನೆಯು ಬ್ರಹ್ಮವೆಂದು ಯನ್ನಕೈಯಲಿ ಹಿಡಿದು ಕೊಟ್ಟ ಪ ವೇದಕ್ಕೆ ನಿಲುಕದಿಹ ಷಣ್ಮತಗಳ ವಾದಕ್ಕೆ ತೋರದಿಹನಾದಕ್ಕೆ ಬೇರಿಹ ನಾಮರೂಪವಳಿದಿಹಆದಿಯು ನೀನೆಯೆಂದು ಯನ್ನಕೈಯಲಿ ಪಿಡಿದು ಕೊಟ್ಟ 1 ಬುದ್ಧಿ ಮನಕೆ ಹೊರತಾ ತತ್ವಂಗಳಲಿದ್ದ ಗುಣಕೆ ಅತೀತಶುದ್ಧ ಬ್ರಹ್ಮವು ನೀನು ಸಿದ್ಧಾ ಸಿದ್ಧಾಂತೆಂದುಮುದ್ದಿಸಿ ನಿನ್ನನು ಎನ್ನ ಕೈಯಲಿ ಹಿಡಿಕೊಟ್ಟ2 ಕಾರ್ಯ ತನುವ ಧರಿಸಿ ಜನ್ಮ ಜನ್ಮಾದಿ ತೋರುವ ಜೀವವೆನಿಸಿಕಾರ್ಯ ಕಾರಣಾತೀತನಾದ ಚಿದಾನಂದನು ಬೇರಿಲ್ಲನೀನೇ ಎಂದು ಎನ್ನ ಕೈಯಲಿ ಹಿಡಿದು ಕೊಟ್ಟ 3
--------------
ಚಿದಾನಂದ ಅವಧೂತರು
ಅರಿವರಾರೆಲೋ ನಿನ್ನ ಅಗಮ್ಯ ಚರಿತ ಚರಣದಾಸರ ಪರಮ ಆನಂದಭರಿತ ಪ ದೇವರುಂಟೆಂಬ ಕೆಲವಾಧಾರಪುಟ್ಟಿಸಿದಿ ದೇವರಿಲ್ಲೆಂಬ ಹಲವು ಆಧಾರ ತೋರಿಸಿದಿ ಜೀವಬ್ರಹ್ವೈಕ್ಯೆಂಬುಪಾಯಗಳ ಸ್ಥಾಪಿಸಿದಿ ಆವರೀತಿಗು ಕಾವದೇವ ನಾನೆಂದಿ 1 ಜೀವವೆ ಮಾಯೆಯೆಂದು ಕಾಯವೆ ಕರ್ಮವೆಂದು ಭಾವಿಗಳ ಕೈಯಿಂದ ಬರೆಸಿದೆಯೋ ನಿಂದು ಜೀವಜೀವರಲಿ ಜಡ ಜೀವ ಬೇರೆನಿಸಿದಿ ಜೀವಜೀವರ ಜೀವ ಚೈತನ್ಯರೂಪ 2 ವೇದ ಸುಳ್ಳೆಂಬ್ಹಲವು ವಾದಿಗಳ ನಿರ್ಮಿಸಿದಿ ವೇದ ಅಹುದೆಂಬ ನಿಜವಾದಿಗಳ ಪುಟ್ಟಿಸಿದಿ ನಾದಬ್ರಹ್ಮವುಯೆಂಬ ಹಾದಿ ರಚಿಸಿದಿ ಸರ್ವಸಾಧನಕೆ ಒಲಿದು ಪ್ರಸನ್ನ ನೀನಾದಿ 3 ಬಗೆಬಗೆಯ ವಚನದಿಂ ಬಗೆಬಗೆಯ ನಿಗಮದಿಂ ಬಗೆಬಗೆಯ ರೂಪದಿಂ ನಿಗವಿಟ್ಟು ಸರ್ವರನು ಬಗೆಗೊಂಡು ಬೆಳಗುವೆಯೊ ಜಗಭರಿತನಾಗಿ 4 ಅವಸಾಧನವೊಲ್ಲೆ ಜಾವಜಾವಕೆ ನಿಮ್ಮ ದಿವ್ಯಸ್ಮರಣೆಯ ಎನ್ನ ಭಾವದೊಳು ನಿಲಿಸಿ ದೇವದೇವರ ದೇವ ದೇವ ಶ್ರೀರಾಮ ತವ ಸೇವಕನೆನಿಸೆನ್ನ ಕಾಯೊ ಕೈಪಿಡಿದು 5
--------------
ರಾಮದಾಸರು
ಇತರ ಗುರುಗಳ ಸ್ತುತಿ ಶ್ರೀ ನಾರದರ ಸ್ತುತಿ 7 ಇದೇ ಪೇಳಿ ಪೋದರು ವಿಧುವದನೆ ನಮ್ಮ ಬುಧನುತ ಪದದ ನಾರದರು ಈ ಜಗದಿ ಬಂದು ಪ ಸಿರಿ ಅರಸನೆ ಈ ಧರೆಯೊಳಗುತ್ತಮ ಮರುತ ದೇವರೆ ಜಗದ್ಗುರುಗಳೆಂದು ಪಂಚಭೇದ ಜ್ಞಾನಶೀಲನೆ ಸುರಲೋಕವಾಸಿ ಶ್ರೀ ಹರಿ ಪ್ರೇಮ ಪಾತ್ರನೆಂಬೊದೆ ಪೇಳಿ 1 ಜರದೂರ ನರಹರಿ ಧರೆಯೊಳು ವ್ಯಾಪಿಸಿ ಇರಲು ತ್ರಿಗುಣ ಕಾರ್ಯವಾಹವೆನ್ನುತಾ ಪರತಂತ್ರ ಜೀವವೆಂದರಿದು ಪಾಪ ಪುಣ್ಯ ಸರಸಿಜನಾಭನಿಗರ್ಪಿಸಿ ಒಟ್ಟಿಗೆ ಬರಬೇಕು ಯೆಂದು 2 ಸಿರಿಗೋವಿಂದ ವಿಠಲ ವಿಶ್ವವ್ಯಾಪಕ ಗಿರುವವು ಎರಡು ಪ್ರತಿಮೆ ಜಗದಿ ಚರ ಅಚರಗಳನ್ನು ಅರಿತು ಮಾನಸದಲ್ಲಿ ಹರಿ ಪೂಜೆ ಮಾಡಿ ಸೇರಿರಿ ವೈಕುಂಠವೆಂಬೊದೆ ಪೇಳಿ ಪೋದರು 3
--------------
ಅಸ್ಕಿಹಾಳ ಗೋವಿಂದ
ಏನು ಬಂದ್ಯೋ ಜೀವವೆ ಶರೀರದೊಳು ವ್ಯರ್ಥವಾಗಿಪ. ದಾನಧರ್ಮ ಮಾಡಲಿಲ್ಲ ದಯಬುದ್ಧಿ ಪುಟ್ಟಲಿಲ್ಲಜ್ಞÁನವರಿತು ಹರಿಪೂಜೆ ಮಾಡಲಿಲ್ಲಜ್ಞಾನಿ ಸುಜ್ಞಾನಿಗಳಸನ್ನಿಧಿಯಲ್ಲಿರಲಿಲ್ಲ ನಿರ್ಮಲಮನದಲಿ ಒಂದುದಿನವಿರಲಿಲ್ಲ 1 ಸತಿ ಪುರುಷರು ನಾವು ಸಂತೋಷದಿಂದಿರಲಿಲ್ಲಯತಿಯಾಗಿ ತೀರ್ಥಯಾತ್ರೆ ಮಾಡಲಿಲ್ಲಶ್ರುತಿಶಾಸ್ತ್ರ ಪುರಾಣಗಳ ಕಿವಿಗೊಟ್ಟು ಕೇಳಲಿಲ್ಲಮೃತವಾಗೋಕಾಲ ಬಂತು ಬರಿದೆ ಮುಪ್ಪಾದೆನಲ್ಲ 2 ಉಂಡು ಸುಖಿ ಅಲ್ಲ ಉಟ್ಟು ತೊಟ್ಟು ಪರಿಣಾಮ ಇಲ್ಲಕೊಂಡು ಕೊಟ್ಟು ಹರಿಸೇವೆ ಮಾಡಲಿಲ್ಲದುಂಡು ನಾಯಿಯಂತೆ ಮನೆಮನೆಗಳ ತಿರುಗಿ ಕೆಟ್ಟೆಮೊಂಡಜೋಗಿಗುಣಂಗಳ ಬಿಡಿಸೊ ಹಯವದನ 3
--------------
ವಾದಿರಾಜ
ಜನಿಸಿ ನಾ ಬುವಿಯೊಳು ನಿನಗೆ ದುಡಿಯುವುದಾಯ್ತು ಎನಗೇನುಫಲ ಪೇಳು ಮಾಯವೆ ಎಲೆ ಜೀವವೆ ಪ ನಿನಗೆ ನೀ ದುಡಿಯುವಿ ಎನಗೆ ದುಡಿಯುವುದೇನು ದಿನಸರಿಯದೆನುವುದು ನ್ಯಾಯವೆ ಎಲೆ ಕಾಯವೆ ಅ.ಪ ಘನರೋಗ ತಾಪತ್ರವನುಭವಿಸುವುದೆಲ್ಲ ನಿನಗಾಗಲ್ಲೇನು ಪೇಳು ಮಾಯವೆ ಎಲೆ ಜೀವವೆ ನಿನಗೆ ಬಂದ ಕರ್ಮವನುಭವಿಪೆಯಲ್ಲದೆ ಎನಗಾಗೆನುವುದು ನಿಜನ್ಯಾಯವೆ ಎಲೆ ಕಾಯವೆ 1 ಬನ್ನ ಬಡುವೆನಲ್ಲ ಕರ್ಮ ಮಾಯವೆ ಎಲೆ ಜೀವವೆ ಎನ್ನ ಜೋಪಾನವು ನಿನ್ನಿಂದಲೆಂಬುವುದು ಮಣ್ಣುಗೊಂಬೆ ನಿನಗೆ ನ್ಯಾಯವೆ ಎಲೆ ಕಾಯವೆ 2 ಚಳಿಮಳೆಬಿಸಿಲಿನ ಬಲುತಾಪದಲಿ ನಿನ್ನ ಸಲಹುವರಾರ್ಹೇಳು ಮಾಯವೆ ಎಲೆ ಜೀವವೆ ಚಳಿಮಳೆಬಿಸಿಲಿನ ಬಲುತಾಪ ಎನಗೆಲ್ಲಿ ಎಲುವಿನ್ಹಂದರ ನಿಂದೀನ್ಯಾಯವೆ ಎಲೆ ಕಾಯವೆ 3 ಭಿನ್ನ ಮಾತುಗಳೇನೋ ಮಾಯವೆ ಎಲೆ ಜೀವವೆ ನಿನ್ನದು ದಾವೂರು ನನ್ನದು ದಾವೂರು ಎನ್ನ ಸರಿಗಟ್ಟುವುದು ನ್ಯಾಯವೆ ಎಲೆ ಕಾಯವೆ 4 ನಾನಿಲ್ಲದಿರೆ ನಿನ್ನ ಖೂನವರಿವರಾರು ನೀನೆ ಪೇಳೆಲೋ ನಿಜ ಮಾಯವೆ ಎಲೆ ಜೀವವೆ ಹೀನನೆ ನೀನೆನ್ನ ಖೂನವರಿಯದೆ ಬಿನಗು ಶ್ವಾನನಂತೊದರುವುದು ನ್ಯಾಯವೆ ಎಲೆ ಕಾಯವೆ 5 ಹೊನ್ನೂ ಹೆಣ್ಣು ಮಣ್ಣು ಎನ್ನಿಂದ ಪಡೆದು ನೀ ಧನ್ಯನೆನಿಸುವೆಯಲ್ಲ ಮಾಯವೆ ಎಲೆ ಜೀವವೆ ನಿನ್ನಗದರ ಫಲ ಎನ್ನಗೇನೆಲೆ ಪಾಪಿ ನಿನ್ನ ಮೋಹಿಸಿ ನಾನು ಕೆಡುವೆ ಎಲೆ ಕಾಯವೆ 6 ಎನ್ನಿಂದ ಕೆಡುವೆನೆಂಬನ್ಯವಾದವು ಬೇಡ ನಿನ್ನದೆಲ್ಲವ ಬಲ್ಲೆ ಮಾಯವೆ ಎಲೆ ಜೀವವೆ ಬನ್ನ ಬಡುವೆ ಸತತ ಎನ್ನನರಿವುದು ನಿನ್ನಗಳವೇ ಎಲೆ ಕಾಯವೆ 7 ಹೇವನಿನಗ್ಯಾಕಿಷ್ಟು ಸಾವುತ್ಹುಟ್ಟುತ ನೀನು ನೋಯುವುದ ಬಲ್ಲೆ ನಾ ಮಾಯವೆ ಎಲೆ ಜೀವವೆ ಹೇವದಮಾತಲ್ಲ ಸಾವುಹುಟ್ಟೆನಗಿಲ್ಲ ಕೇವಲನಾದಿಕಾಲದಿರುವೆ ಎಲೆ ಕಾಯವೆ 8 ಕೇವಲನಾದಿಯು ಜೀವ ನೀನಾದರೆ ದೇವರೆ ನೀನಿದ್ದಿ ಮಾಯವೆ ಎಲೆ ಜೀವವೆ ದೇವರು ನಾನಲ್ಲ ದೇವ ಶ್ರೀರಾಮನ ಕೇವಲದಾಸ ನಾನಿರುವೆ ಎಲೆ ಕಾಯವೆ 9
--------------
ರಾಮದಾಸರು
ದೀಪವಿದ ಬೆಳಗುವೆನು ದೇವ ನೀ ನೋಡುವ್ಯಾಪಿಸಿದ ತಿಮಿರವನು ಪರಿಹರಿಸಿ ರಂಜಿಸುವ ಪಸಕಲ ದೇವಾತ್ಮಕದ ತಿಲ ತೈಲವಾಗಿರಲುಅಕಲುತ ವರ್ತಿುಂ ಮಿಳಿತವಾಗಿ ಪ್ರಕಟವಾಗಿರುವಗ್ನಿ ಪ್ರಭೆಯೊಡನೆ ಸ್ಫುಟವಾಗಿಮುಖ ಸಮೀಪದಿ ಮೂರು ಲೋಕಗಳ ಬೆಳಗುತಿಹ 1ಜ್ಞಾನವೇ ಗೋಘೃತವು ಮೂರ್ತಿಗಳೆ ವರ್ತಿಗಳುನೀನಿದಕೆ ಮೂಲ ಕಾರಣವಸ್ತುವೂಸಾನುಕೂಲದಿ ಗುಣಗಳೊಂದಾಗಿ ಚಿತ್ತಿನೊಳುಲೀನವಾಗಿರೆ ನಿರ್ಮಲಾಕೃತಿಯ ತಾಳಿರುವ 2ಎನ್ನ ಜೀವವೆ ದೀಪ ನಿನ್ನ ಪಾದವೆ ಬ್ರಹ್ಮಭಿನ್ನ ಭಾವವನುಳಿದು ಪೂರ್ಣರೂಪದಲಿನಿನ್ನೊಳಗೆ ನಿಲಿಸೆನ್ನ ಪುಣ್ಯತಮವೆಂದೆನಿಪಸ್ವರ್ಣಮಯ ತಿರುಪತಿಯ ವಾಸ ವೆಂಕಟರಮಣ 3 ಓಂ ಸಚ್ಚಿದಾನಂದವಿಗ್ರಹಾಯ ನಮಃ
--------------
ತಿಮ್ಮಪ್ಪದಾಸರು
ಪರರ ಮನೆಗೆ ಪೋಗಿ ತಿರುಗುವೆ ಯಾತಕೆ ಸುರತರುವಿರುವದ ಅರಿಯದೆ ಮನುಜ ಪ. ವರದಿಹ ಸುರಮುನಿ ಗುರುವರ ನಾರದ ಪೊರೆವ ಹರಿ ಎಂದ ಪುರಂದರದಾಸರ ಅ.ಪ. ವರ ದಿವಕರನೇಳದ ಮುನ್ನ ಸ್ಮರಿಸುತ ಹರಿಯ ನೀನೇಳೆಂದು ಕರುಣಸಾಗರ ಹರಿಚರಣಕೆ ನಿನ್ನಯ ಹರಣವ ಬಾಗುತೆ ಪೊರೆವ ನಿನ್ನ ಜೀವವೆಂದರುಹಿದ ಮರೆತು ನೀನನುದಿನ 1 ಅಂಗನೆ ದ್ರೌಪದಿ ಗಂಗ ಸ್ನಾನಕೆ ಪೋಗೆ ರಂಗನ ಚರಣವ ಸ್ಮರಿಸುವಂಥ ಶುಕರು ಹೆಂಗಳೆಯನು ಮಾನಂಗಳ್ವಸ್ತ್ರವ ಬೇಡೆ ಮಂಗಳೆ ಕೈಯಿಂದ ರಂಗನ ಕೊಡಿಸಿರೆಂದು ಮರೆತುನೀನನುದಿನ2 ತೋರಿದ ಜಗಕೆ ಕೃಷ್ಣನೆಂಬೋ ನಾರಿ ಸೊಲ್ಲ ಕೇಳಿ ಭೋರೆಂಬೊ ಸಭೆಗೆ ತಾ ಕೋರಿದಕ್ಷಯ ಶೀರೆ ಶ್ರೀ ಶ್ರೀನಿವಾಸನು ಮರೆತು ನೀನನುದಿನ3
--------------
ಸರಸ್ವತಿ ಬಾಯಿ
ಪುರಂದರ ದಾಸರಾಯರ ಪೋಷಿಸುವ ಸಂತೋಷದಿಂದಲಿ ಪ ಪುರಂದರಗಡಾದ ಒಳಗೆ ಹಿರಿಯ ಸಾವುಕಾರನೆನಸಿ ಪರಿಪರಿಯ ಸೌಖ್ಯಗಳ ಸುರಿಸುತ್ತ ಇರುತಿರಲು ನರಹರಿ ತ್ವರಿತದಿಂ ಬ್ರಾಹ್ಮಣನಾಗುತ್ತ ಪೋಗುತ್ತ ಯಜಮಾನ ಕಂಡು ಜರಿದು ಬ್ರಾಹ್ಮಣನ್ಹೊರಗೆ ಹಾಕಲು ಮರುದಿವಸ ಮತ್ಹೋಗಿ ನಿಂತ 1 ಭಾರಿಭಾರಿಗೆ ಸಾವುಕಾರನ ಮೋರೆಗ್ಹೊತ್ತಿ ಮೇರೆಯಿಲ್ಲದೆ ಆರು ತಿಂಗಳು ಬೆನ್ನು ಬೀಳುತ್ತ ನಾಯಕರು ಈತನ ಆರು ಅಟ್ಯಾರೆಂದು ಬೈಯುತ್ತ ಬೇಸತ್ತು ಎರಡು ಹೇರು ರೊಕ್ಕಾ ಮುಂದೆ ಸುರಿಯುತ್ತ ಅದರೊಳಗೊಂದು ಡ್ಡಾರಿಸಿಕೋ ಎಂದು ಹೇಳಲು ನಾರಾಯಣ ಬಿಟ್ಹೋದ ನಗುತ2 ಹಿತ್ತಲಾ ಬಾಗಿಲಿಗೆ ಹೋಗಿ ಮತ್ತೆ ಆತನ ಮಡದಿಗಾಗಿ ವಿತ್ತ ತಾ ಯೆನುತ ತನ ಮಗನ ಮುಂಜ್ಯೆಂ ದೆತ್ತಿ ಕರದಿಂ ಬಾಯಿ ತೆರೆಯುತ್ತ ಆ ಪ್ರಾಣಿ ನುಡಿದಳು ಎತ್ತಣ ದ್ರವ್ಯವು ತನಗೆನುತ ನಿನ್ನ ಮೂಗಿನ ಮುತ್ತಿನ ಮೂಗುತಿಯ ಕೊಡು ಎನೆ ಉತ್ತುಮಳು ತೆಗೆದಿತ್ತಳಾಕ್ಷಣ 3 ಆಕಿ ಗಂಡನ ಕಣ್ಣೆದುರಿಗೆ ಹಾಕಿದನು ತಾ ಪಾಕಿ ಕೊಡೆಯೆನುತ ಅದು ಕಂಡು ಇದು ನ ಮ್ಮಾಕಿದೆಂದು ಈತ ನುಡಿಯುತ್ತ ಅನ್ಯರದು ಯಿಂಥಾ ದ್ಯಾಕೆ ಯಿರಬಾರದೆನ್ನುತ್ತಾ ಬೆಲೆ ಹೇಳು ಎನಲು ಎಂದಾಕೆ ಹೋದನು ತಿರೂಗಿ ಬಾರದೆ 4 ತಿರುಗಿ ಬ್ರಾಹ್ಮಣ ಬಾರದಿರಲು ಕರೆದು ತನ್ನ ಹೆಂಡತಿಯ ಬರಿಯ ನಾಶಿಕವನ್ನೆ ಕಂಡುನು ಮೂಗುತಿಯ ಎಲ್ಲೆನೆ ಮುರಿದಿಹುದು ಯೆಂದಾಕೆ ಹೇಳಲು ಒಳಗ್ಹೋಗಿ ನೀ ತಾರದಿರೆ ಅರೆವೆ ನಿನ್ನಯ ಜೀವವೆಂದನು ವಿಷಕೊಂಬೆನೆಂದು ಕರದಿ ಬಟ್ಟಲು ಧರಿಸಲಾಕ್ಷಣ ತ್ವರಿತದಲಿ ಹರಿ ಅದರೊಳಾಕಿದ 5 ಪುರುಷನಾ ಕೈಕೊಳಗೆಯಿಡಲು ತರಿಸಿ ತನ್ನಲ್ಲಿದ್ದ ಪೆಟ್ಟಿಗೆಯಾ ಅದು ಕಾಣದಿರಲು ಬೆರಗಾಗಿ ನೋಡಿದನು ಮಡದಿಯ ನಿಜ ಪೇಳುಯೆನಲು ಅರಸಿ ಪೇಳ್ದಳು ಕೊಟ್ಟ ಸುದ್ದಿಯಾ ಅಭಿಮಾನಕಂಜಿ ಅರದು ವಿಷವನು ಕುಡಿವೆನಲು ಸಿರಿರಮಣಾ ಕೊಟ್ಟ ಖರಿಯಾ 6 ಬಂದಿದ್ದ ಪರಿಪಕ್ವವೆನಗೆ ನ್ನಾವ ಕಾಲಕೆ ಆಗಬೇಕೆಂದ ವೈರಾಗ್ಯಭಾವದಿ ಜೀವಿಸಿಕೊಂಡಿರುವುದೇ ಛಂದ ಹೀಗೆನುತ ಮನೆ ಧನ ಕೋವಿದರ ಕರೆದಿತ್ತ ಹರುಷದಿ ಕಾವನಯ್ಯನ ದಾಸನಾದ 7 ಲಕ್ಷ್ಮಿಪತಿಯ ಪಾದದಲ್ಲಿ ಲಕ್ಷ್ಯವಿಟ್ಟು ವ್ಯಾಸರಾಯರ ಶಿಕ್ಷೆಯಿಂದಲಿ ಅಂಕಿತವ ಕೊಳುತ ತಿರಿಪಾದ ಐದು ಲಕ್ಷಪದ ಸುಳಾದಿ ಪೇಳುತ್ತ ಪ್ರತಿದಿವಸದಲ್ಲು ಅಪರೋಕ್ಷ ಪುಟ್ಟಲು ಮೋಕ್ಷಸ್ಥಾನಕ್ಕೆ ಕರೆದೊಯ್ದು ಅ ಧೋಕ್ಷಜನು ಸಂರಕ್ಷಿಸಿದ 8 ಘೊರ ನರಕದೊಳಗೆ ಬಿದ್ದಾ ಪಾರ ಜನರು ಚೀರುತಿರಲು ದ್ಧಾರ ಮಾಡಿದ ನಾರದಾರಿವರು ಅವ ತಾರ ಮಾಡಿ ಧಾರುಣಿಯಲಿ ಮತ್ತೆ ಬಂದರು ಸರುವೋತ್ತಮ ಹರಿ ನಾರಾಯಣನೆ ಎಂದು ಸಾರಿದರು ಹೀಗೆಂದು ತಿಳಿಯಲು ಮಾರ ಜನಕ ವಿಜಯವಿಠ್ಠಲ ಆರಿಗಾದರು ಒಲಿವ ಕಾಣಿರೊ 9
--------------
ವಿಜಯದಾಸ
45ಅನುದಿನದಲಿ ಬಂದು ತನುವ ಸೂರೆಯಗೊಂಡು |ಎನಗೊಂದು ಮಾತ ಪೇಳೊ ಜೀವವೆ ! ಪಘನಕೋಪದಲಿ ಬಂದು ಯಮನವರಳೆದೊಯ್ವಾಗ |ನಿನಕೂಡಿನ್ನೇತರ ಮಾತೂ ಕಾಯವೆ! ಅ.ಪಬೆಲ್ಲದ ಹೇರಿನಂತೆ ಬೇಕಾದ ಬಂಧು - ಬಳಗ |ನಿಲ್ಲೊ ಮಾತನಾಡತೇನೆ ಜೀವವೆ ||ನಿಲ್ಲಗೊಡದೆ ಬಂದು ಯಮನವರೆಳೆದೊಯ್ವಾಗ |ಬೆಲ್ಲ ಬೇವಾಯಿತಲ್ಲೋ ಕಾಯವೆ ! 1ಸತ್ಕರೆ ಹೇರಿನಂತೆ ಸವಿದುಂಡು ಪಾಯಸವ |ದಿಕ್ಕೆಟ್ಟು ಹೋಗುತೀಯೋ ಜೀವವೆ ||ದಕ್ಕಗೊಡದೆ ಬಂದು ಯಮನವರೆಳೆದೊಯ್ವಾಗ |ಸಕ್ಕರೆ ವಿಷವಾಯ್ತೋ ಕಾಯವೆ ! 2ಅಂದಣದೈಶ್ವರ್ಯ ದಂಡಿಗೆ - ಪಲ್ಲಕ್ಕಿ |ಮಂದಗಮನೆಯರು ಜೀವವೆ ||ಮಂದಗಮನೆ ಯಾರೊ - ಮಡದಿ - ಮಕ್ಕಳು ಯಾರೋ -ಬಂದಂತೆ ಹೋಗ್ತೀನಿ ಕಾಯವೆ ! 3ಸೋರುವ ಮನೆಯಲಿ ಧ್ಯಾನ - ಮೌನಾದಿಗಳು |ಬೇರಿತ್ತು ನಿನ್ನ ಮನಸು ಜೀವವೆ ||ನೀರಮೇಲಣ ಗುಳ್ಳೆ ತೋರಿ ಹಾರಿದಂತೆ |ಯಾರಿಗೆ ಯಾರಿಲ್ಲ ಕಾಯವೆ ! 4ಹುಟ್ಟಿದ್ದು ಹೊಲೆಯೂರು ಬೆಳದದ್ದು ಮೊಲೆಯೂರು |ಇಟ್ಟದ್ದು ಈ ಊರು ಜೀವವೆ ||ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ |ಗಟ್ಟ ಪೂಜೆಯ ಮಾಡೊ ಕಾಯವೆ ! 5
--------------
ಪುರಂದರದಾಸರು
ತನುವ ನಂಬಲುಬೇಡ ಜೀವವೆ ಪ.ಅನುವಾಗಿ ನಿನ್ನಂಗಕೆ ಕೆಲಕಾಲ ತೋರುವದು |ಅನುವಿಲ್ಲದಾಗ ಈ ತನುವೆ ನಿನಗೆ ವೈರಿ ಅಪಜರೆಮರಣಗಳಿಂದ ಭರಿತವಾದುದುಕಾಯ |ಸ್ಥಿರವೆಂದು ನಂಬಿ ನೀ ಮರುಳಾಗಬೇಡ 1ಧನ - ಧಾನ್ಯ ಪಶು - ಪತ್ನಿ ಸ್ಥಿರವೆಂದು ತಿಳಿದು |ಮನುಮತನಯ್ಯನ ಮರೆಯದೆ ಮನವೆ 2ಶರಣೆಂದರೆಕಾವ ಗರುಡಕೇತನ ನಮ್ಮ |ಪುರಂದರವಿಠಲನ ಮರೆಯದೆ ಮನವೆ 3
--------------
ಪುರಂದರದಾಸರು
ಬಿಡು ನಾಚಿಕೆಯನು ಉಗ್ಗಡಿಸು ಚಕ್ರಿಯನುಹಿಡಿಯೈ ವೈಕುಂಠ ಚಾವಡಿಯವನಡಿಯ ಪ.ಎಳೆತನ ಯೌವನ ಮುಪ್ಪೆಂದಲಸಿಸಿ ಹೆಬ್ಬುಲಿಯಂಥ ಮೃತ್ಯುಗಂಟಲ ಬಲೆಗೆಸಿಲುಕಿ ಸಿಲುಕಿ ಸಂದುಗಡಿಯದ ಲೇಖವನಳಿಯೆ ರಾಮನ ಪೊಗಳೆಲೆಲೆ ಜೀವವೆ 1ಅಹಂಕಾರ ವಾರಿಧಿಯಲ್ಲೀಸಾಡಿ ಬರೆಬಹಿರ ಸದ್ಗುಣದಿ ನಿರಯಕೆ ಸಾಗದೆಅಹರ್ನಿಶಾಂಬುಜನಾಭನೊಲಿವಂತೆ ಭಕುತಿಯಸಹಸ ಸಾಧಿಸು ಡಂಭವ್ಯಾಕೆನ್ನ ಮನವೆ 2ಯೋಚನೆಗೊದಗದ ಅನಂತ ಮಹಿಮನೆಂದುವಾಚಿಸ್ಯವನ ಕರ್ಮಗುಣ ನಾಮವಲೋಚನ ದಣಿಯೆ ಪ್ರತಿಮೆಯ ನೋಡಿ ಪ್ರಸನ್ವೆಂಕಟಾಚಲಪತಿ ಮುಂದೆ ಕುಣಿದಾಡು ಗಡ 3
--------------
ಪ್ರಸನ್ನವೆಂಕಟದಾಸರು
ಸಿರಿಗೋವಿಂದಶ್ರೀ ಪುರಂದರದಾಸರ ಸ್ತ್ರೋತ್ರಇದೇ ಪೇಳಿ ಪೋದರುವಿಧುವದನೆನಮ್ಮ ಬುಧನುತ ಪದದ ನಾರದರು ಈ ಜಗದಿ ಬಂದು ಪಸಿರಿಅರಸನೆ ಈ ಧರೆಯೊಳಗುತ್ತಮಮರುತ ದೇವರೆ ಜಗದ್ಗುರುಗಳೆಂದುತರತಮಪಂಚಭೇದಜ್ಞಾನ ಶೀಲನೆಸುರಲೋಕವಾಸಿ ಶ್ರಿಹರಿ ಪ್ರೇಮ ಪಾತ್ರನೆಂಬೊದೆ ಪೇಳಿ 1ಜರದೂರನರಹರಿ ಧರೆಯೊಳು ವ್ಯಾಪಿಸಿಇರಲು ತ್ರಿಗುಣ ಕಾರ್ಯವಾಹವೆನ್ನುತಾಪರತಂತ್ರ ಜೀವವೆಂದರಿದು ಪಾಪ ಪುಣ್ಯಸರಸಿಜನಾಭನಿಗರ್ಪಿಸಿರೆಲೋಯಂದು 2ಶಿರಿಗೋವಿಂದ ವಿಠಲ ವಿಶ್ವವ್ಯಾಪಕಗಿರುವವುಎರಡು ಪ್ರತಿಮೆಜಗದಿಚರಅಚರಗಳನ್ನು ಅರಿತು ಮಾನಸದಲ್ಲಿಹರಿಪೂಜೆ ಮಾಡಿ ಸೇರಿರಿ ವೈಕುಂಠವೆಂಬೊದೆಪೇಳಿ ಪೋದರು 3
--------------
ಸಿರಿಗೋವಿಂದವಿಠಲ