ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

279ಹನುಮ ಭೀಮಾನಂದ ಮುನಿರಾಯ ಎನ್ನದು ಸಲಹೆಂದು ಬಿನ್ನೈಪೆವಿ ಜ್ಞಾನ ರೂಪ ವಿಜಿತಾತ್ಮ 1 280ತ್ರಿದಶವಿಂಶತಿ ರೂಪ ಸುದತಿಯಿಂದೊಡಗೊಡಿ ಪದುಮಜಾಂಡದೊಳು ಸರ್ವತ್ರ | ಸರ್ವತ್ರ ಭಕುತರಾ ಬದಿಗನಾಗಿದ್ದು ಸಲಹುವಿ 2 281ಕೋಟಿತ್ರಯ ಸ್ವರೂಪಿ ದಾಟಿಸು ಭವಾಬ್ಧಿಯ ನಿ ಭಯಹಾರಿ ರಣದೊಳು ಕಿ ರೀಟಿಯ ಕಾಯ್ದಿ ಧ್ವಜನಾಗಿ 3 282ಪ್ರಾಣನಾಯಕ ನಿನ್ನ ಕಾಣ ಬೇಕೆಂದೆನುತ ಸಾನುರಾಗದಲಿ ನಮಿಸುವೆ | ನಮಿಸುವೆನು ಮೂಜಗ ಪರಮೇಷ್ಟಿ 4 283ಚತುರವಿಂಶತಿ ತತ್ವ ಪತಿಗಳೊಳಗೆ ಗರುವ ನತಿಸುವೆನು ನಿನ್ನ ಚರಣಕ್ಕೆ | ಚರಣಕಮಲವ ತೋರಿ ಕೃತ ಕೃತ್ಯನೆನಿಸೊ ಕೃಪೆಯಿಂದ 5 284ಮೂರೇಳು ಸಾವಿರದ ಆರ್ನೂರು ಮಂತ್ರವ ಈರೇಳು ಜಗದಿ ಜನರೊಳು | ಜನರೊಳು ಮಾಡಿ ಉ ದ್ಧಾರ ಗೈಸುವಿಯೊ ಸುಜನರ 6 285ಪವಮಾನರಾಯ ನೀ ತ್ರಿವಿಧ ಜೀವರೊಳಿದ್ದು ವಿವಿಧ ವ್ಯಾಪಾರ ನೀ ಮಾಡಿ | ನೀ ಮಾಡಿ ಮಾಡಿಸಿ ಅವರವರ ಗತಿಯ ಕೊಡುತಿಪ್ಪ 7 286 ಮಿಶ್ರ ಜೀವ ರೊಳಿದ್ದು ಮಿಶ್ರಜ್ಞಾನವನಿತ್ತು ಮಿಶ್ರ ಸಾಧನವ ನೀ ಮಾಡಿ | ನೀ ಮಾಡಿ ಮಾಡಿಸಿ ಮಿಶ್ರಗತಿಗಳನೆ ಕೊಡುತಿಪ್ಪೆ 8 287ಅನಿಲದೇವನೆ ದೈತ್ಯದನುಜ ರಾಕ್ಷ ಸರೊಳಿದ್ದು ಅನುಚಿತ ಕುಕರ್ಮ ನೀ ಮಾಡಿ | ನೀ ಮಾಡಿ ಮೋಹಿಸಿ ದಣಿಸುವಿಯೊ ಅವರ ದಿವಿಜೇಶ 9 288ಕಾಲನಿಯಮಕನೆ ಕಾಲತ್ರಯಾದಿಗಳಲ್ಲಿ ಕಾಲ ಕರ್ಮ ಅನುಸಾರ | ಅನುಸಾರವಿತ್ತು ಪಾಲಿಸುವಿ ಜಗವ ಪವಮಾನ10 289ಆಖಣಾಶ್ಮನೆ ನಿನ್ನ ಸೋಕಲರಿಯವು ದೋಷ ಶ್ರೀಕಂಠ ಮುಖ್ಯ ಸುರರಿಗೆ | ಸುರರಿಗಿಲ್ಲವು ಭಾರ ತೀಕಾಂತ ನಿನಗೆ ಬಹದೆಂತೊ 11 290 ಕಲ್ಯಾದಿ ದೈತ್ಯಕುಲದಲ್ಲಣ ದಯಾಸಾಂದ್ರ ಬಲ್ಲಿದನು ಜಗಕೆ ಭಯದೂರ | ಭಯದೂರ ಭಕ್ತರ ನೆಲ್ಲ ಕಾಲದಲ್ಲಿ ಸಲಹಯ್ಯ 12 291ಕಾರುಣ್ಯನಿಧಿ ಜಗದ ಉದ್ಧಾರಕನು ನೀನೆ ಉ ದ್ಧಾರ ಮಾಡದಿರೆ ಭಕುತರ | ಭಕುತರನು ಕಾವ ರಿನ್ನಾರು ಲೋಕದಲಿ ಜಯವಂತ 13 292ತ್ರಿಜಗದ್ಗುರುವರೇಣ್ಯ ಋಜುಗಣಾಧಿಪ ಪಾದಾಂ ಬುಜ ಯುಗ್ಮಕ್ಕೆರಗಿ ಬಿನ್ನೈಪೆ | ಬಿನ್ನೈಪೆ ಮನ್ಮನದಿ ನಿಜರೂಪ ತೋರಿ ಸಂತೈಸೊ 14 293ಅನಿಲದೇವನೆ ನಿನ್ನ ಜನುಮ ಜನುಮಗಳಲ್ಲಿ ಎಂದೆಂದು ವಿಷಯ ಚಿಂ ತನೆಯ ಕೊಡದೆನ್ನ ಸಲಹೆಂದು 15 294ತಾರತಮ್ಯ ಜ್ಞಾನ ವೈರಾಗ್ಯಭಕ್ತಿ ಧಾರಡ್ಯವಾಗಿ ಇರಲೆಂದು | ಇರಲೆಂದು ಬಿನ್ನೈಪೆ ಭಾರತೀರಮಣ ನಿನಗಾನು 16 295 ಮರಣ ಜನನಗಳು ಬಂದರೆ ಬರಲಿ ಪ್ರದ್ವೇಷ ಗುರು ಹಿರಿಯರಲ್ಲಿ ಹರಿಯಲ್ಲಿ | ಹರಿಯಲ್ಲಿ ಕೊಡದೆ ಉ ದ್ಧರಿಸಬೇಕೆನ್ನ ಪರಮಾಪ್ತ 17 296ವಿಷಯದಾಸೆಗಳ ಬಿಡಿಸಿ ಅಸುನಾಥ ಎನ್ನ ಪಾ ಲಿಸಬೇಕು ಮನವ ನಿನ್ನಲ್ಲಿ | ನಿನ್ನಲ್ಲಿ ನಿಲಿಸಿ ಸಂ ತಸದಿ ಕಾಯೆನ್ನ ಮರುದೀಶ 18 297 ವಾಯು ಹನುಮದ್ಭೀಮರಾಯ ಮಧ್ವರ ಸ್ತೋತ್ರ ಬಾಯೊಳುಳ್ಳವಗೆ ಜನ್ಮಾದಿ | ಜನ್ಮಾದಿ ರೋಗಭಯ ವೀಯನೆಂದೆಂದು ಭಗವಂತ 19 298ಮಾತರಿಶ್ವನೆ ಎನ್ನ ಮಾತುಗಳ ಲಾಲಿಸಿ ಜಗ ನ್ನಾಥ ವಿಠಲನ್ನ ಮನದಲ್ಲಿ | ಮನದಲ್ಲಿ ತೋರಿ ಭವ ಭೀತಿಯನು ಬಿಡಿಸೊ ಭವ್ಯಾತ್ಮ 20 299 ನಮ್ಮ ಗುರುಗಳ ಪಾದ ಒಮ್ಮೆ ನೆನೆಯಲು ಆ ಜನ್ಮ ಕೃತ ಪಾಪ ಪರಿಹಾರ | ಪರಿಹಾರವಾಗಿ ಸ ದ್ಬೊಮ್ಮಪದವಿಯಲಿ ಸುಖಿಸುವಿ 21 300ಮೂರೇಳು ಸಾವಿರದ ಆರುನೂರು ಹಂಸ ಮೂರು ಮಂತ್ರಗಳ ಜನರೊಳು | ಜನರೊಳು ಮಾಡ್ವ ಸ ಮೀರನ ಅಡಿಗೆ ಶರಣೆಂಬೆ 22 301ಅಂಜಿದವರಿಗೆ ವಜ್ರಪಂಜರನೆನಿಪ ಪ್ರ ಭಂಜನ ಪ್ರಭುವೆ ಪ್ರತಿದಿನ | ಪ್ರತಿದಿನ ನಮ್ಮ ಭಯ ಭಂಜಿಸಿ ಕಾಯೊ ಬಹುರೂಪ 23 302ಭವಿಷ್ಯದ್ವಿಧಾತನೆ ತವ ಚರಣ ಸೇವಿಪೆನು ಶ್ರವಣ ಮನನಾದಿ ಭಕುತಿಯ | ಭಕುತಿ ನಿನ್ನಲ್ಲಿ ಮಾ ಧವನಲ್ಲಿ ಕೊಟ್ಟು ಸಲಹಯ್ಯ24 303ಕಲಿಮುಖ್ಯ ದೈತ್ಯರುಪಟಳವ ಪರಿಹರಿಸಿ ಮ ಸಿಂಧು ನಿ ನ್ನೊಲುಮೆಯೊಂದಿ ಹರಿಕಾಯ್ವ 25 304 ಭಾರತೀ ರಮಣ ಮದ್ಭಾರ ನಿನ್ನದು ಎನ್ನ ಪಾರ ದೋಷಗಳ ಎಣಿಸದೆ | ಎಣಿಸದೆ ಸಂತೈಸೊ ಸಿಂಧು ಎಂದೆಂದು 26 305ಶ್ರೀಶಸದ್ಮನೆ ಜೀವರಾಶಿಯೊಳಗೊಂದಧಿಕ ವಿಂಶತಿ ಸಹಸ್ರದಾರ್ನೂರು | ಆರ್ನೂರು ಹಗಲಿರುಳು ಶ್ವಾಸ ಜಪಮಾಡಿ ಹರಿಗೀವಿ 27 306ತಾಸಿಗೊಂಭೈ ನೂರು ಶ್ವಾಸಜಪಗಳ ಮಾಡಿ ಬೇಸರದೆ ನಮ್ಮ ಸಲಹುವಿ | ಸಲಹುವಿ ಶ್ರೀ ಭಾರ ತೀಶ ನಿನ್ನಡಿಗೆ ಶರಣೆಂಬೆ 28 307ಬಲದೇವ ನೀನೆ ಬೆಂಬಲವಾಗಿ ಇರಲು ದು ರ್ಬಲ ಕಾಲಕರ್ಮ ಕೆಡಿಸೋದೆ | ಕೆಡಿಸೋದೆ ನಿನ್ನ ಹಂ ಬಲು ಉಳ್ಳ ಜನರ ಜಗದೊಳು 29 308ಹಾಲಾಹಲವನುಂಡು ಪಾಲಿಸಿದೆ ಜಗವ ಕರು ಣಾಳು ಪವಮಾನ ವಿಜ್ಞಾನ | ವಿಜ್ಞಾನ ಭಕುತಿ ಶ್ರೀ ಲೋಲನಲಿ ಕೊಟ್ಟು ಸಲಹಯ್ಯ 30 309ವಾತಾತ್ಮಜನೆ ನಿನ್ನ ಪ್ರೀತಿಯನೆ ಪಡೆದ ಖ ಪೊರೆದಂತೆ ಪೊರೆಯೆನ್ನ ನೀನಿಂತು ಕ್ಷಣದಿ ಕೃಪೆಯಿಂದ 31 310ಅಪರಾಜಿತನೆ ಮನದೊಳಪರೋಕ್ಷವಿತ್ತೆನಗೆ ಸುಖವೀಯೊ ಭಾವಿ ಲೋ ಕಪಿತಾಮಹನೆ ಎನಗೆ ದಯವಾಗೊ 32 311 ಬುದ್ಧಿ ಬಲ ಕೀರ್ತಿ ಪರಿಶುದ್ದ ಭಕ್ತಿಜ್ಞಾನ ಸದ್ಧೈರ್ಯಾಜಾಡ್ಯ ಆಯುಷ್ಯ | ಆಯುಷ್ಯ ವಿತ್ತಭಿ
--------------
ಜಗನ್ನಾಥದಾಸರು
ತತ್ವಸುವಾಲಿಗಳು ಓಂಕಾರ ಪ್ರತಿಪಾದ್ಯ ಶ್ರೀಕಾಂತನೇ ನಿನ್ನ ಭವ ಭಂಗವ ಗೈಸಿ ಶುಭಾಂಗನೆ ಕಾಯಯ್ಯ ಶ್ರೀರಂಗ 1 ಕಾಲತÀ್ರಯಕೃತ ವಿಕಾರವಿಲ್ಲದೆ ನೀನೆ ಮೂಲರೂಪನೆ ಬಹು ರೂಪ-ಬಹುರೂಪ ಸ್ವಗತಭೇದ ವಿವರ್ಜಿಕನೆ ಸಲಹಯ್ಯ 2 ಆವಕಾಲಕು ನೀನೆ ಚತುರ ರೂಪದೊಳಿದ್ದು ಜೀವ ನಿಯಾಮನು ನೀನಾಗಿ-ನೀನಾಗಿ ವಿಶ್ವ ತೈಜಸ ಪ್ರಾಜ್ಞ ತುರ್ಯಾತ್ಮ3 ಶುಭ ವಿಷಯಂಗಳಾ ಮಾಡಿ ಉಣಿಸುವೆ 4 ವಿಶ್ವದಲಿ ವ್ಯಾಪಿಸಿಹೆ ವಿಶ್ವನಂಬೋರು ನಿನ್ನ ನಾಶರಹಿತನೆಂದೂ ನರನೆಂದೂ-ನರನೆಂದೂ ನಿನ್ನ ವೈಶ್ವಾನರನು ಎಂದು ಪೇಳ್ವಾರೊ 5 ಹರಿ ನಿನ್ನ ವಿಶ್ವನೆಂದು ಉಪಾಸನೆಯನು ಮಾಡಿ ಹೇರಂಬ ನಿನ್ನ ಒಲಿಸಿದಾ-ಒಲಿಸಿದಾ ಗಜವಕ್ತ್ರನಾಗಿ ನಿನ್ನ ಸ್ತುತಿಪಾನೋ 6 ದೇಹದೊಳು ಸ್ವಪನದಲಿ ನೀ ನೀಡಿ-ನೀ ನೀಡಿ ಜೀವರುಪಭೋಗಿಸುವ ಸಾರವನು ರಕ್ಷೀಪೆ 7 ತೈಜಸನೆ ವಾಸನಾಮಯವೆಲ್ಲ ತೋರೀಪೆ8 ತತ್ವಗಳ ವ್ಯಾಪಾರವೇ ವ್ಯಾಪಾರ9 ಸುಪ್ತಕಾಲದಿ ಜೀವ ಸ್ವರೂಪಕೆ ತಕ್ಕ ಕ್ಲುಪ್ತ ಅಜ್ಞಾನ ಮೊದಲಾದ-ಮೊದಲಾದ ಕಾಲವನನುಸರಿಸಿ ಜೀವನಿಗೆ ತನ್ನ ತಿಳಿಯಗೊಡದೆ 10 ಪ್ರಾಜ್ಞಮೂರುತಿ ನೀನೆ ಹೃದಯಸ್ಥಾನದೊಳಿದ್ದು ಅಜ್ಞಾನಿ ಜೀವನ ಕಾಲಾವ-ಕಾಲಾವ ನನುಸರಿಸಿ ಜೀವ ಸ್ವರೂಪಾನಂದವÀನು ನೀನೀವೆ11 ಸ್ವಪನ ಜಾಗ್ರತ ಜ್ಞಾನವಿನಿತಿಲ್ಲವೆಂದು ಕೂಡುವ ಜೀವ ಆನಂದ ಹಿಂದೆಂದೂ ಕಾಣನೊ12 ಘನ ಬಹಿ ಪ್ರಾಜ್ಞ ತೈಜಸಾಂತ ಪ್ರಾಜ್ಞ ಘನ ಪ್ರಾಜ್ಞ ಮೂರುತಿ-ಮೂರುತಿ ಗಳುಪಾಸನೆ ಮಾಳ್ವ ಬುಧರೇನು ಧನ್ಯರೊ 13 ನಾಗಿ ನೀ ಕೊಡುತಿರುವೆ ಮುಕ್ತರಿಗೆ ಆನಂದ 14 ಮುಕ್ತರಿಗೆ ದೃಷ್ಟನೋ ಅದೃಷ್ಟನೋ ಅ- ಗುರುಪ್ರಾಣನನುಗ್ರಹದಿ ಲಭ್ಯನಹುದಯ್ಯಾ ಹೇ ಜೀಯ 15 ಕಣ್ಮನ ಹೃದಯ ತ್ರಿಧಾಮಗಳಲ್ಲಿ ಇದ್ದು ಉಣಿಸೂವೇ ಜೀವರಿಗೆ ಫಲಭೋಗ-ಫಲಭೋಗವು ವಿಶ್ವತೈಜಸ ಪ್ರಾಜ್ಞ ಸ್ಥಿತಿಯೊಳು 16 ಸರ್ವರೂಪವು ಪೂರ್ಣ ಸರ್ವಗುಣ ಸಂಪೂರ್ಣ ಸರ್ವೋತ್ಪಾದಕ ಸುಖರೂಪಿ-ಸುಖರೂಪಿ ಸರ್ವಲೋಕ ಜೀವರೊಳಿದ್ದು ನಿರ್ಲಿಪ್ತಾ 17 ವರ್ಣತ್ರಯಯುತ ಓಂಕಾರದೊಳಾದ್ಯವರ್ಣ ವಿಶ್ವ ನೀನೆ-ವಿಶ್ವನು ನೀನೆ ಉಕಾರವೇ ತೈಜಸನು ಮಕಾರ ವಾಚ್ಯನೇ ಶ್ರೀಪ್ರಾಜ್ಞ 18 ನಾದದೊಳು ನೀ ವಾಚ್ಯ ತುರ್ಯರೆಂಬೋರು ನಿನ್ನ ಸದನವಾಗಿಹುದೈ ಶಿರಸ್ಥಾನ-ಶಿರಸ್ಥಾನ ನಾಶಿಕಾಗ್ರದಿ ಊಧ್ರ್ವ ದ್ವಾದಶಾಂಗುಲದಲ್ಲಿ ನೆಲೆಸಿರ್ಪೆ 19 ತೈಜಸನೊಡಗೂಡಿ ವಾಸನಾ-ವಾಸನಾಮಯ ಕಳೆವ ಅಜ್ಞಾನಿ ಜೀವನನ್ನಾಡಿಸುವೆ ಶ್ರೀಪ್ರಾಜ್ಞ 20 ಸರ್ವಶಕ್ತನು ನೀನೆ ಸರ್ವಕತರ್Àನು ನೀನೆ ಸವೋತ್ತಮನು ನೀನೆ ಸರ್ವಜ್ಞ-ಸರ್ವಜ್ಞ ಪೂರ್ಣಪ್ರಜ್ಞಾಂತರ್ಯಾಮಿ ಸಲಹಯೈ21 ಪಲವಿಲ್ಲ ವಾಸುದೇವನೆ ನಿನ್ನ ದಯ ಬೇಕೊ 22 ನೀ ಸುಮ್ಮನಿರದೆ ಎನ್ನನೂ-ಎನ್ನನು ಪ್ರೇರಿಸುವೆ ಲೇಸುಮನ ನಿನ್ನಲ್ಲಿ ನೆಲೆಸಲೋ 23 ಕಂಡಕಂಡಲ್ಲಿ ನಾ ಉಂಡುಂಡು ಓಡಾಡಿ ಧಾಂಡಿಗನಾಗಿ ಬೆಳೆದೆನೊ-ಬೆಳೆದೆನೊ ಪುಂಡರೀಕಾಕ್ಷ ನಿನ್ನ ಮರೆತೆನೋ24 ಅವಾವ ಕಾಲದೊಳು ನೀನಿದ್ದು ಉಣಿಸುವೆ ಜೀವಕೃತ ಕರ್ಮಫಲಗಳ-ಫಲಗಳ ಶ್ರೀ ವೇಂಕಟೇಶ ನೀನಿತ್ತು ಸಲಹೂವೇ 25 ವಂದನೆಯು ಒಂದೆ ಮನದಿಂದೆ-ಮನದಲಿ ನಿನ್ನ ಪಾದಾರವಿಂದವ ತೋರಯ್ಯ26 ಬಂಧುಗಳು ಹಿತರೆನ್ನೆ ಬಂಧಕರಾಗಿಹರು ಬಂಧನಕೆ ನಾ ಇನ್ನು ಸಿಲುಕಿದೆ 27 ಘನವಾಗಿ ತನು ಬೆಳೆಸಿ ಹಿತದಿಂದ-ಹಿತದಿಂದ ಮುಂದೆ ಪರಗತಿಯ ಕಾಣುವುದೆಂತೊ ಗೋವಿಂದ28 ವಿತ್ತಾಪಹಾರಕರು ಹೃತ್ತಾಪಕಳೆವರೆ ಉತ್ತಮಗತಿಯ ತೋರಿಸು29 ಹರಿಕಥಾಪುರಾಣಶ್ರವಣ ನಿತ್ಯದೀ ಮಾಡೀ ಪರಿಯಿಂದ ನಿಜತತ್ವವರಿಯಾದೆ-ಅರಿಯಾದೆ ಬರಿದೇ ವಿಪರೀತ ಜ್ಞಾನಕೆ ವಶನಾದೆ30 ಮದ್ಯ ತುಂಬಿದ ಭಾಂಡ ಗದ್ಗುಗೆಯ ಮೇಲಿಟ್ಟು ಶ್ರಧ್ದೆಯಿಂದಲಿ ಅದನ ಪೂಜಿಸೆ-ಪೂಜಿಸೆ ಪೂತÀ ದುರ್ಗಂಧ ಫಲವದು ಬಿಟ್ಟೀತೆ 31 ಮಂದಹಾಸದಿ ಜನರ ಸಂದೋಹದಲಿ ಕುಳಿತು ನಿಂದೆ ಮಾತುಗಳಾಡಿ ಮದತುಂಬೀ-ಮದತುಂಬಿಬಿದಾ ದುರ್ಮ ದಾಂಧರಿಗೆ ಗತಿಯು ಮುಂದೆ ಇನ್ನೆಂತೊ32 ಕಂಡಕಂಡವರಲ್ಲಿ ಕೊಂಡೆ ಮಾತುಗಳಾಡಿ ಪುಂಡರೀಕಾಕ್ಷ ನಿನ್ನ ಸ್ಮರಿಸಾದೆ-ಸ್ಮರಿಸದಲೆ ಪರದಿ ಯಮದಂಡಕ್ಕೆ ಗುರಿಯಾದೆ33 ಹಿಂದೆ ಮಾಡಿದ ಪುಣ್ಯದಿಂದ ಇಂದಿನ ಭಾಗ್ಯ ವೆಂದು ತಿಳಿದು ಮುಂದೆ ನಡೆಯಾದೆ-ನಡೆಯಾದೆ ತಿಳಿಗೇಡಿ ಬುದ್ಧಿಯಿಂದ ಕುಂದುಪೊಂದುವೆ 34 ಬಾಯಿಮಾತಲ್ಲ ಶ್ರೀ ತೋಯಜಾಕ್ಷನ ಭಕ್ತ- ರಾಯತನ ತಿಳಿವುದು ಶ್ರಮಸಾಧ್ಯ-ಶ್ರಮಸಾಧ್ಯ ವನು ಸದುಪಾಯದಿಂದ ತಿಳಿದು ನಲಿದಾಡೊ 35 ನಿಂದಕರ ನುಡಿಯಿಂದ ಹಿಂದೆ ಮಾಡಿದ ಪಾಪ ಒಂದೊಂದು ಪರಿಯಲ್ಲಿ ಪರಿಹಾರ-ಪರಿಹಾರವಾಗಿ ನಿಂದಕರು ಬಂಧನಕೆ ಬೀಳ್ವಾರೋ 36 ಸ್ಮøತಿಯುಕ್ತಿಯನೆ ಬಿಟ್ಟು ಯುಕ್ತಿಮಾತುಗಳಿಂದ ಹೊತ್ತು ಕಳೆಯುತ ಉನ್ಮತ್ತನೆನಿಸಿ-ಉನ್ಮತ್ತನೆನಿಸಿದವ ಇ- ನ್ನೆತ್ತÀ್ತ ಭವಶರಧಿಯ ದಾಟÀುವ 37 ಅರೆಘಳಿಗೆ ಕಳೆದುದಿಹ ನರಜನ್ಮ-ನರಜನ್ಮ ಬಂದುದು ನರಕಯಾತನೆಗಲ್ಲದಿನ್ನಿಲ್ಲ 38 ಪರಿಯಂತ ಉದರಭರಣಕಾಗಿ ಉದಧಿಶಯನ ನಾ ನಿನ್ನ ಭಜಿಸಾದೆ-ಭಜಿಸಾದೆ ಮದದಿಂದ ಬುಧಜನರ ನಿಂದೆಯ ಮಾಡೀದೆ39 ಇನ್ನಲ್ಲ ಪರಗತಿಯ ಸಾಧನ-ಸಾಧನವು ತನ್ನೊಳು ತÀನ್ನಿರವರಿತು ಸುಮ್ಮನಿರುವುದು ಅದು ನಿಧಾನ40 ಭಿನ್ನಧರ್ಮಂಗಳ ಗ್ರಹಿಸಾದೆ-ಗ್ರಹಿಸಾದೆ ನೀನೆಣಿಸಿದೆ ತನ್ನಗುಣಧರ್ಮದಂತನ್ಯರಿಹನೇನೊ 41 ಕಾಯವೇ ತಾನೆಂದು ಮಾಯಕೆ ಒಳಗಾಗಿ ಕಾಯಯಾತನೆಗೊಂಡು ನೋಯುವಾ 42 ವಚನ ವಚನವು ಸರ್ವ ಉಚಿತ ದೇಹದ ಕಾರ್ಯ ನಿಚಯದೊಳು ಹರಿ ಪ್ರಚುರನಾಗಿ-ಪ್ರಚುರನಾಗಿ ಕಾಯಕುಪಚಯವಿತ್ತು ಸಲಹೂವ 43 ದೇಹ ಕಾಯದ ಕಾರ್ಯಪ್ರಕ್ರಿಯವ ತಿಳಿಯಾದೆ ಮಾಯೆಗೊಳಗಾಗದಿರು ಹೇ ಮಾನವಾ-ಮಾನವನೆ ತಿ- ಳಿಯೊ ಮಾಯಾರಮಣನ ಬಿಂಬಕ್ರಿಯವಾ44 ಅನ್ಯರೊಳು ನೀ ಹೋರಾಡಬಲ್ಲೆಯ-ಬಲ್ಲೆಯಾ ನಿನ್ನ ವೈರಿಗಳ ಜಯಿಸಲರಿಯದ ಖೂಳ ರಣಹೇಡಿ 45 ಕೊಳೆತು ನಾರುವ ದೇಹದೊಳಗಿರುವ ಹುಳುಕುಗಳ ಕೊಳೆಯ ಕಳೆಯದ ಮನುಜ ನೀನೆಂತೊ-ನೀನೆಂತೊ ಕೊಳೆತÀ ಸಗಣಿಯೊಳಗಿಹ ಹುಳುವೆ ನಿನ್ನ ಗತಿಯೆಂತೊ46 ಆದದ್ದು ಆಯಿತು ಯತ್ನ ತಪ್ಪಿತು ಎಂದು ಹೆದ್ದಾರಿ ಹಿಡಿದು ಪರಮಾರ್ಥ-ಪರಮಾರ್ಥವ ಬುದ್ಧಿ ತಿದ್ದಿಕೊಳ್ಳಲು ಮುಂದೆ ಅನುವಾಗೊ47 ತತ್ತ ್ವದೇವತೆಗಳು ತತ್ತತ್ವಕಾರ್ಯಜಿ- ವೋತ್ತಮನಾಜ್ಞೆಯಿಂ ತಾವ್ ಗೈವರೊ-ತಾವ್‍ಗÉೈ ಯುತ್ತಲಿರೆ ನಾನೆತ್ತ ಮೃತ್ತಿಕಾಪ್ರತಿಮೆಯೋ48 ಒಂದೊಂದು ರೀತಿಯಿಂ ಚೆಂದಾಗಿ ಯೋಚಿಸು ಮಂದಮತಿಯು ನೀನು ಹಿಂದೆಂತೂ-ಹಿಂದೇನು ವಂದನೆಯೊಂದಲ್ಲದಿನ್ನಿಲ್ಲ49 ಡಾಂಭಿಕತನ ಬಿಟ್ಟು ಡಿಂಬದೊಳು ಸರ್ವದಾ ಅಂಬುಜನಾಭನೇ ಇಂಬಾಗಿ-ಇಂಬಾಗಿ ಸರ್ವತ್ರ ತುಂಬಿಕೊಂಡಿಹನೆಂದು ನಲಿದಾಡೋ 50 ತುಷ್ಟಿಯಾಗಿರು ನೀನು ಕೊಟ್ಟಷ್ಟು ಲಾಭಕ್ಕೆ ದುಷ್ಟವಿಷಯಗಳಿಗೆ ಎರಗಾದೆ-ಎರಗಾದೆ ಇರಲು ಸಂ- ತುಷ್ಟ ನಾಗುವನಯ್ಯ ಶ್ರೀಕೃಷ್ಣ51 ಕಾಯ ನಿನ್ನದು ಅಲ್ಲ ಮನವು ಅಧೀನವಲ್ಲ ಹೇಯವಿಲ್ಲದೆ ಮಾಯಕೊಳಗಾಗಿ ಮರುಳಾಗದಲೆ-ಮರುಳಾಗದಲೆ ಮಾಯಾರಮಣನ್ನ ನೆನೆಯೊ ನಿರ್ಭಯದಿಂದ 52 ಹಲವು ಶಾಸ್ತ್ರವ ನೋಡಿ ತಲೆಹರಟೆಯ ಬಿಟ್ಟು ಅಲವಬೋಧರ ತತ್ತ ್ವಸುಧೆಯನ್ನು- ಸುಧೆಯನ್ನು ಸವಿದು ನಿ-
--------------
ಉರಗಾದ್ರಿವಾಸವಿಠಲದಾಸರು
ಶರಣು ದೇವರ ದೇವ ಶರಣು ಸುರವರ ಮಾನ್ಯ ಶರಣು ಶತಕೋಟಿ ಲಾವಣ್ಯ | ಲಾವಣ್ಯ ಮೂರುತಿಯೆ ಶರಣೆಂಬೆ ಸ್ವಾಮಿ ಕರುಣೀಸೊ 1 ಆದಿನಾರಾಯಣನು ಭೂದೇವಿ ಮೊರೆ ಕೇಳಿ ಯಾದವರ ಕುಲದಲ್ಲಿ ಜನಿಸೀದ | ಜನಿಸೀದ ಕೃಷ್ಣ ಪಾದಕ್ಕೆ ಶರಣೆಂಬೆ ದಯವಾಗೊ 2 ನಿನ್ನ ವಿಸ್ಮøತಿ ದೋಷ ಜನ್ಮ ಜನ್ಮಕ್ಕೆ ಕೊಡದಿರು ಎನ್ನ ಕುಲ ಬಂಧು ಎಂದೆಂದು |ಎಂದೆಂದು ನಿನಗಾನು ಬಿನ್ನೈಪೆ ಬಿಡದೆ ಸಲಹಯ್ಯ 3 ವಸುದೇವನಂದನನ ಹಸುಗೂಸು ಎನಬೇಡಿ ಶಿಶುವಾಗಿ ಕೊಂದ ಶಕಟನ್ನ | ಶಕಟನ್ನ ವತ್ಸಾಸುರನ ಅಸುವಳಿದು ಪೊರೆದ ಜಗವನ್ನ 4 ವಾತರೂಪಿಲಿ ಬಂದ ಆ ತೃಣಾವರ್ತನ್ನ ಮಡುಹಿ ಮೊಲೆಯುಣಿಸಿದಾ ಪೂತನಿಯ ಕೊಂದ ಪುರುಷೇಶ 5 ನಿನ್ನ ಸ್ಮøತಿಗಿಂತಧಿಕ ಪುಣ್ಯ ಕರ್ಮಗಳಿಲ್ಲ ನಿನ್ನ ವಿಸ್ಮøತಿಗಿಂತ | ಅಧಿಕವಾದ ಮಹಪಾಪಗಳು ಇನ್ನಿಲ್ಲ ಲೋಕತ್ರಯದೊಳು 6 ಅಂಬುಜಾಂಬಕಿಗೊಲಿದ ಜಂಭಾರಿಪುರದಿಂದ ಕೆಂಬಣ್ಣದ ಮರ ತೆಗೆದಂಥ | ತೆಗೆದಂಥ ಕೃಷ್ಣನ ಕ ರಾಂಬುಜವೆ ನಮ್ಮ ಸಲಹಲಿ 7 ದೇವಕೀಸುತನಾಗಿ ಗೋವುಗಳ ಕಾದದೆ ನಲಿವೋನೆ ಮೂರ್ಲೋಕ ಓವ ದೇವೇಂದ್ರ ತುತಿಪೋನೆ 8 ಜಗದುದರ ನೀನಾಗಿ ಜಗದೊಳಗೆ ನೀನಿಪ್ಪೆ ಜಗದಿ ಜೀವರನ ಸೃಜಿಸುವಿ | ಸೃಜಿಸಿ ಜೀವರೊಳಿದ್ದು ಜಗದನ್ಯನೆಂದು ಕರೆಸುವಿ 9 ಕರಣನೀಯಾಮಕನೆ ಕರುಣಾಳು ನೀನೆಂದು ಮೊರೆಹೊಕ್ಕೆ ನಾನಾ ಪರಿಯಲ್ಲಿ | ಪರಿಯಲ್ಲಿ ಮಧ್ವೇಶ ಮರುಳು ಮಾಡುವರೆ ನೀಯೆನ್ನ 10 ಕುವಲಯಾಪೀಡನನು ಲವಮಾತ್ರದಿ ಕೊಂದು ಶಿವನ ಚಾಪವನು ಮುರಿದಿಟ್ಟಿ | ಮುರಿದಿಟ್ಟಿ ಮುಷ್ಟಿಕನ ಬವರದಲಿ ಕೆಡಹಿ ಬಲಿಗೈದೆ 11 ಗಂಧವಿತ್ತಬಲೆಯೊಳ ಕುಂದನೆಣಿಸದೆ ಪರಮ ಸುಂದರಿಯ ಮಾಡಿ ವಶವಾದಿ | ವಶವಾದಿ ನಮ್ಮ ಗೋ ವಿಂದ ನೀನೆಂಥ ಕರುಣಾಳು 12 ವಂಚಿಸಿದ ಹರಿಯೆಂದು ಪರಚಿಂತೆಯಲಿ ಕಂಸ ಮಂಚದ ಮ್ಯಾಲೆ ಕುಳಿತಿದ್ದ | ಕುಳಿತಿದ್ದ ಮದಕರಿಗೆ ಪಂಚಾಸ್ಯನಂತೆ ಎರಗೀದೆ 13 ದುರ್ಧರ್ಷ ಕಂಸನ್ನ ಮಧ್ಯರಂಗದಿ ಕೆಡಹಿ ಜನನೋಡೆ ದುರ್ಮತಿಯ ಮರ್ದಿಸಿದ ಕೃಷ್ಣ ಸಲಹೆಮ್ಮ 14
--------------
ಜಗನ್ನಾಥದಾಸರು
ಶ್ರೀ ವಾಯುದೇವರು ಕಾಯೊ ಹನುಮರಾಯ ನಿನ್ನ ಕಾಯ ಮನದಿ ನಮೋ ಪ ಭಾರತೀಶ ಕೃಪಾಸಮುದ್ರನೆ ವಾರಿಜಜಾಂಡದಿ ಸರ್ವಜೀವರೊಳಿದ್ದು ಮೂರೇಳು ಸಾಸಿರ ನೂರಾರು ಜಪಗಳ ಇರುಳು ಹಗಲು ನರಹರಿಗೆ ಅರ್ಪಿಪ ಸುರ 1 ಮಾತರಿಶ್ವಪ್ರಖ್ಯಾತ ಮಹಿಮನೆ ವಾತ ಪ್ರಭಂಜನ ಸತತ ಎನ್ನನು ಅತಿ ಹಿತದಿ ನೀ ಸಲಹುವೆ ಪ್ರತತ ಶ್ರೀ ನೃಹರಿಯ ಪ್ರಥಮಾಂಗನೆ ದಣಿ 2 ಸತ್ಪಾತ್ರ ಮಾಡೆನ್ನ ಸೂತ್ರಸುಖ ಸಿತಗಾತ್ರ ಪವಿತ್ರನೆ ಮಾತ್ರಾಕರಣನಿಯಂತೃ ಮಹಂತನೆ ಚಿತ್ರ ಪುರುಷ ಮಾಕಳತ್ರನ ತೋರಿಸೊ 3 ದೇವಜನನುತ ಭಾವಿ ಬ್ರಹ್ಮನೆ ಕಾವ ಕರುಣಿಯೆ ಪವಮಾನ ನಮೋ ನಮೋ ಭಾವುಕರೊಡೆಯ ಶ್ರೀದೇವಿ ಶಾಂತಿಯ ಪತಿ ದೇವವರೇಣ್ಯನನಿರುದ್ಧನ ತೋರಿಸೊ 4 ಶುದ್ಧ P್ಪರುಣಾಬ್ಧಿ ನಮೋ ನಮೋ ಶುದ್ಧ ಭಕ್ತ್ಯಾದಿ ಸಂಪತ್ತು ಎನಗಿತ್ತು ಉದ್ಧರಿಸೊ ಎನ್ನ ಶ್ರದ್ಧೇಶ ಮುಖ್ಯಪ್ರಾಣ ಪದ್ಮೆ ಕೃತೀಶ ಪ್ರದ್ಯುಮ್ನಗೆ ಪ್ರಿಯತಮ 5 ಜ್ಞಾನಬಲರೂಪ ಹನುಮ ನಮೋ ನಮೋ ಜ್ಞಾನಸುಖಮಯ ಜಾನಕೀಶನ ದೂತ ಇನನ ಸುತನಿಗೆ ವಿಭೀಷಣನಿಗೆ ರಾಮ ತಾನೂ ಒಲಿದ ನೀನೊಲಿದ ಕಾರಣದಿ 6 ಕಾಂತ ಕೃಷ್ಣನೇಕಾಂತ ಭಕ್ತಾಗ್ರಣಿ ಅಂತಕ ಸುಜನರ ಸಂತತ ಪೊರೆವ ಧನಂಜಯಗೊಲಿದನೆ 7 ಪಂಚಭೇದ ಪ್ರಪಂಚ ಸತ್ಯವಿ ರಿಂಚಿಪಿತನೆ ಸ್ವತಂತ್ರ ಸರ್ವೋತ್ತಮ ಚಿಂತಿಸೆ ಭಕ್ತಿಯಿಂ ಮಿಂಚುಪೊಲ್ ತೋರಿ ನಿ ರಂತರ ನಿಜಸುಖವೀವನೆಂದೆಯೊ ಮಧ್ವ 8 ಶ್ರೀಶ ಚಿನ್ಮಯ ದೋಷದೂರನು ವ್ಯಾಸ ಸುಖಮಯ ಪ್ರಸನ್ನ ಶ್ರೀನಿವಾಸ ಭಾಸಿಪ ನಿನ್ನಯ ಹೃತ್ಸರಸಿಜದಲಿ ದಾಶರಥಿಯ ಮುಖ್ಯ ದಾಸವರ್ಯನೆ ನಮೋ 9
--------------
ಪ್ರಸನ್ನ ಶ್ರೀನಿವಾಸದಾಸರು
ಸೂರ್ಯಾಂತರ್ಗತ ನಾರಾಯಣ ಪಾಹಿ ಆರ್ಯ ಮಾರುತಿ ಪಂಚಪ್ರಾಣ ಪ ಭಾರ್ಯಳೆಂದೊಡಗೂಡಿ ಸರ್ವಜೀವರೊಳಿದ್ದು ವೀರ್ಯ ಕೊಡುತಲಿರ್ದ ಶರ್ವಾದಿ ವಂದ್ಯಾತಿಅ.ಪ. ದ್ರುಪದನ ಸುತೆ ನಿನ್ನ ಕರೆಯೆ ಅಂದು ಕೃಪಣ ವತ್ಸಲ ಶೀರೆ ಮಳೆಯೇ ಅಪರಿಮಿತವು ನೀರ ಸುರಿಯೆ ಸ್ವಾಮಿ ಕುಪಿತ ದೈತ್ಯರ ಗರ್ವ ಮುರಿಯೇ ಜನಸೋ ಜನರ ವಿಪತ್ತು ಕಳೆದೆ ಈ ಪರಿಯ ದೇವರನೆಲ್ಲಿ ಕಾಣೆನೊ ತಪನಕೋಟ ಪ್ರಕಾಶ ಬಲ ಉಳ್ಳ ಕಪಿಲರೂಪನೆ ಜ್ಞಾನದಾಯಕ 1 ಹೃದಯ ಮಂಟಪದೊಳಗೆಲ್ಲ ಪ್ರಾಣ- ದದುಭುತ ಮಹಿಮೆಯ ಬಲ್ಲ ಸದಮಲನಾಗಿ ತಾವೆಲ್ಲ ಕಾರ್ಯ ಮುದದಿ ಮಾಡಿಸುವ ಶ್ರೀನಲ್ಲ ಹದುಳ ಕೊಡುತಲಿ ಬದಿಲಿ ತಾನಿದ್ದು ಒದಗಿ ನಿನಗೆಲ್ಲ ಮದುವೆ ಮಾಡಿದ ಪದುಮಜಾಂಡೋದರ ಸುದತಿಯ ಮುದದಿ ರಮಿಸೆಂದು ಒದಗಿ ಬೇಡುವೆ 2 ಎನ್ನ ಬಿನ್ನಪವನ್ನು ಕೇಳೊ ಪ್ರಿಯ ಮನ್ನಿಸಿ ನೋಡೊ ದಯಾಳೋ ಹೆಣ್ಣಬಲೆಯ ಮಾತು ಕೇಳೂ ನಾನು ನಿನ್ನವಳಲ್ಲವೇನು ಹೇಳೋ ನಿನ್ನ ಮನದನುಮಾನ ತಿಳಿಯಿತು ಕನ್ಯಾವಸ್ಥೆಯು ಎನ್ನದೆನ್ನದೆ ಚೆನ್ನ ಶ್ರೀನಿಧಿವಿಠಲ ಪ್ರಾಯದ ಕನ್ನೆ ಇವಳನು ದೇವ ಕೂಡಿಕೊ 3
--------------
ಶ್ರೀನಿಧಿವಿಠಲರು