ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದಕೊ ಕಾಶಿಯನು ಮನವೇ ಬೆದಕುಗೊಳ್ಳಲು ಬೇಡ ತೋರುವೆನು ಪ ಬಲ್ಲವನಾದರೆ ಇಲ್ಲಿಯೆ ಕಾಶಿ ಕಲ್ಲೆದೆಯಾದವನಲ್ಲವೆ ದೋಷಿ ಎಲ್ಲವ ತಿಳುಹುವೆ ಚಲ್ವ ಸಂತೋಷಿ ಸೊಲ್ಲ ಲಾಲಿಸಿ ಕೇಳು ಪೇಳ್ವೆ ನಿರ್ದೋಷಿ 1 ಕಾಶಿಯ ದರುಶನವಿಲ್ಲದ ಜನರು ವಿ- ಶೇಷವಾಗಿಯೆ ಇಲ್ಲಿ ನಡೆಕೊಂಬುತಿಹರು ದೂಷಣ ಮಾಡದೆ ಪೋಷಿಸುವವರು ಕಾಶಿಗಿಮ್ಮಡಿಯಾಗಿ ಲೇಸ ಪಡೆಯುವರು 2 ವೇದವನೋದಿದ ವಿಪ್ರನೆ ಕಾಶಿ ವಾದಗಳಿಲ್ಲದ ಸೋದರನೆ ಕಾಶಿ ಆ ಧನ ಕೈಯೊಳು ಇದ್ದರೆ ಕಾಶಿ ಮಾಧವ ಧ್ಯಾನವು ಮನದೊಳು ಕಾಶಿ 3 ಅವ್ವೆ ತಂದೆಯ ಸೇವೆ ಮಾಳ್ಪುದೆ ಕಾಶಿ ದೇವರ ಪೂಜೆಯ ನೋಳ್ಪುದೆ ಕಾಶಿ ಜೀವರಕ್ಷಣ್ಯವ ಮಾಳ್ಪುದೆ ಕಾಶಿ ಭಾವಶುದ್ಧತ್ವದಿ ಇಪ್ಪುದೆ ಕಾಶಿ 4 ಗುರುಗಳಿಗೆರಗುವ ಪರಿಯೊಂದು ಕಾಶಿ ಹಿರಿಯರ ಆಜ್ಞೆಯೊಳಿರುವುದು ಕಾಶಿ ಪರವುಪಕಾರವು ಸ್ಥಿರವಾದ ಕಾಶಿ ಕರೆದು ಮೃಷ್ಟಾನ್ನವನೆರೆವುದು ಕಾಶಿ 5 ಅರಳಿಯ ವೃಕ್ಷವ ನೆಟ್ಟರೆ ಕಾಶಿ ಕೆರೆ ಬಾವಿ ಕಟ್ಟಲು ಇಷ್ಟದ ಕಾಶಿ ಅರವಟ್ಟಿ ನೀರಿರಿಸಲು ದೃಷ್ಟ ಕಾಶಿ ಸಿರಿಲಕ್ಷ್ಮಿಯರಸನ ಕರೆವುದು ಕಾಶಿ 6 ದುಷ್ಟರ ಸಂಗವ ಬಿಡುವುದೆ ಕಾಶಿ ಕಷ್ಟದ ಮಾರ್ಗವ ತೊರೆವುದು ಕಾಶಿ ಶಿಷ್ಟರ ಸೇರುವುದು ಇಷ್ಟದ ಕಾಶಿ ಬೆಟ್ಟದ ಒಡೆಯನ ನೆನೆವುದೆ ಕಾಶಿ 7 ಏಕಾದಶಿ ಉಪವಾಸವೆ ಕಾಶಿ ಆಕಳ ದಾನವ ಮಾಳ್ಪುದೆ ಕಾಶಿ ಬೇಕಾದುದಿದ್ದರೆ ಮನೆಯೆಲ್ಲ ಕಾಶಿ ಕಾಕು ಸೇವೆಯಿಲ್ಲದ ಮನುಜನೆ ಕಾಶಿ 8 ಉದಯದಿ ಸ್ನಾನವ ಮಾಳ್ಪುದೆ ಕಾಶಿ ಪದುಮನಾಭನ ಧ್ಯಾನ ಮೃದುವಾದ ಕಾಶಿ ಕದನವಿಲ್ಲದ ಊರ ನೋಡಲು ಕಾಶಿ ಉದರವು ತುಂಬಲು ಬಡವಗೆ ಕಾಶಿ 9 ರುದ್ರ ದೇವನ ಪೂಜೆ ಇದ್ದಲ್ಲಿ ಕಾಶಿ ವಿಧ್ಯುಕ್ತ ಮಾರ್ಗದಿ ನಡೆವುದು ಕಾಶಿ ಬದ್ಧವಾಗೈವರ ಕಟ್ಟಲು ಕಾಶಿ ಶುದ್ಧವಾದ ಹೆಂಡತಿ ಮುದ್ದಿನ ಕಾಶಿ 10 ಸನ್ಯಾಸ ಮಾರ್ಗವು ಚೆನ್ನಾದ ಕಾಶಿ ಅನ್ಯಾಯವಿಲ್ಲದ ಅರಸನೆ ಕಾಶಿ ಕನ್ಯಾದಾನವು ಮುನ್ನಿನ ಕಾಶಿ ಮನ್ನಿಸಿಕೊಂಡರೆ ತನ್ನಲ್ಲೆ ಕಾಶಿ 11 ಅಧ್ಯಾತ್ಮ ವಿದ್ಯೆಯ ಹೊದ್ದಲು ಕಾಶಿ ಬದ್ಧ ನಡೆನುಡಿ ಇದ್ದರೆ ಕಾಶಿ ಮಧ್ವರಾಯನು ಕುಳಿತಿದ್ದಲ್ಲಿ ಕಾಶಿ ಪದುಮನಾಭನ ನೆನವಿದ್ದರೆ ಕಾಶಿ 12 ದಾನದೊಳಗೆ ಸಮಾಧಾನವೆ ಕಾಶಿ ಮಾನದೊಳಗೆ ಅಭಿಮಾನವೆ ಕಾಶಿ ಸ್ನಾನದೊಳಗೆ ಭಕ್ತಿ ಸ್ನಾನವೆ ಕಾಶಿ ಜ್ಞಾನದೊಳಗೆ ಶುದ್ಧಜ್ಞಾನವೆ ಕಾಶಿ 13 ದೇವರೊಳಗೆ ಸಾಲಿಗ್ರಾಮವೆ ಕಾಶಿ ಜೀವರೊಳಗೆ ಗೋವುಚಯವೆಲ್ಲ ಕಾಶಿ ಹೂವಿನೊಳಗೆ ಬಿಲ್ವಪತ್ರಿಯೆ ಕಾಶಿ 14 ಹಲವು ಮಾತುಗಳೇನೀಪರಿ ಕಾಶಿ ಛಲ ಭಕ್ತಿಯಿದ್ದರೆ ಜಲವೆಲ್ಲ ಕಾಶಿ ಒಲವುಳ್ಳ ವರಾಹತಿಮ್ಮಪ್ಪನೆ ಕಾಶಿ ಕುಲವೃಕ್ಷವೆಂಬುದು ಫಲವಾದ ಕಾಶಿ 15
--------------
ವರಹತಿಮ್ಮಪ್ಪ
ಕಾಯ ಸತ್ಯ ಸತ್ಯ ಸರ್ವ ಜೀವರನಿಟ್ಟುಕೊಂಡು ವಿಸ್ತಾರವಾದೊಂದಾಲದೆಲೆಯಲ್ಲಿ ಮಲಗಿದ್ದು ಅ.ಪ. ಹರಿ ಹ್ಯಾಗೆ ನಿತ್ಯನೊ ಹಾಗೆ ಜೀವನು ನಿತ್ಯ ಹರಿಯೆಂಬೋ ಧಣಿಗೆ ಈ ಜೀವನು ಭೃತ್ಯ ಹರಿ ಜೀವರೊಳಗೆ ಹೀಗೆ ತಿಳಿದವನು ಧರೆಯೊಳಗೆಂದೆಂದಿಗು ಕೃತಕೃತ್ಯನು 1 ಹರಿಯೆಂಬೊ ರಾಜಗೆ ಗುರುಮೂರುತಿ ಮಂತ್ರಿ ಪರಿವಾರ ಇವರಯ್ಯ ಜೀವಂಗಳು ಅರಿತು ಈ ವಿಧದಲ್ಲಿ ನಿರುತ ಪಾಡುವರಿಗೆ ಪರಲೋಕದಲಿ ದಿವ್ಯಭೋಗಂಗಳು 2 ಭಿನ್ನ ಭಿನ್ನ ಜೀವ ಭಿನ್ನ ಭಿನ್ನ ಕರ್ಮ- ವೆನ್ನುವುದೆ ಘನ್ನತತ್ವಂಗಳು ಅನ್ಯಥಾನುಡಿಯಲ್ಲ ಇನ್ನು ಸಂಶಯವಿಲ್ಲ ಎನ್ನೊಡೆಯ ಹಯವದನ ಬಲ್ಲ 3
--------------
ವಾದಿರಾಜ
ಯೆಂದಿಗೆ ಬರುತೀಯೆ ಸುಂದರ ಭಾರತಿ ಮಂದರೋದ್ಧರನ ತೋರಿಸೆಂದೆ ನಾ ಬಂದೆ ಪ. ಅಂಧಕಾರಣ್ಯದೊಳು ನಿಂದು ತತ್ತರಿಸುವೆನು ತಾಯೆ ಕುಂದುಗಳೆಣಿಸಾದಿರು ಆನಂದ ತೋರು ಅ.ಪ. ಹರಿಗೆ ಕಿರಿಯ ಸೊಸಿ ವಾತನಸತಿಯು ನೀನು ಪ್ರಖ್ಯಾತಿವಂತಳೇ ಏಕಾಂತ ಭಕ್ತಳೇ ತ್ರಿವಿಧ ಜೀವರೊಳಗೆ ನಿಂತು ತ್ರೀವಿಧ ಪ್ರೇರಣೆ ಮಾಡುವಿ ದೇನಿ ನಿನ್ನಾ ಮಹಿಮೆಗೆ ನಮೋ ಎಂಬೆ ಪುತ್ಥಳಿಯಾ ಬೊಂಬೆ 1 ಮಂದರೋದ್ಧರನ ಪಾದಸೇವಕಳೇ ನಿನಗೀಡೆ ನಲಿದಾಡೆ ಒಂದನಾದರೂ ಮಾತನಾಡೆ ವರಗಳ ನೀಡೆ ದಯಮಾಡಿ ನೋಡೆ ತವಪಾದವ ಕೊಡೆ ಕರವ ಜೋಡಿಸಿ ಬೇಡುವೆನಿಂದು ನಾ ಬಂದು 2 ಗರುಡ, ಶೇಷ ರುದ್ರಾದಿಗಳೊಡೆಯಳೇ ನೀನು ನಿನ್ನಡಿಗಳಿಗೆರಗುವೆ ನಾನು ತಡಮಾಡ ಬ್ಯಾಡಮ್ಮಾ ನಡೆದು ಬಾರಮ್ಮ ಭವ ಮಡುವಿನೊಳಗಿರುವೆನು ತೋರಿಸೋ ದಯಪಾಲಿಸೋ 3
--------------
ಕಳಸದ ಸುಂದರಮ್ಮ
ಪೃಕ್ಷದಶ್ವ ಪಾಲಿಪುದೆನ್ನ ಈ ದು |ರ್ವಿಷಯ ತ್ಯಜಿಸಿ ಶ್ರೀ ಕೃಷ್ಣನ್ನ ||ಅಸಮ ಪಾದಾಬ್ಜ ಭಜಿಸುವಂತೆ ಪ್ರತಿದಿನ |ಹಸನಾದ ಜ್ಞಾನ ಪ್ರೇರಿಸೊ ಭಕ್ತ ಸುರತರು ಪಪರಿಸರ ಕೃಷ್ಣೇಶ ಗಂಧ ವಹಸಿರಿವಲ್ಲಭ ಪದಾರವಿಂದಭೃಂಗ|ಪುರುಹೂತಮುಖ ಸುರವೃಂದ ವಂದ್ಯ |ಗಿರಿಜಾ ಪಾಲಕ ಶತಾನಂದ||ಆಹಾ||ಎರಡು ಹತ್ತೊಂದು ಸಾವಿರದಾರುನೂರ್ಜಪಸರುವ ಜೀವರೊಳಗೆ ಇರುಳು ಹಗಲು ಮಾಳ್ಪ 1ನಾಗಾದಿ ದಶರೂಪ ಧರ ತಲೆಬಾಗುವೆ ನಿನಗೆ ಉದಾರ ವಿಕ್ರ-ಮಾಘಕಾನನವೈಶ್ವಾನರ, ಹೇ ಸ-ದಾಗತಿ ಕುಜನ ಕುಠಾರಾ ||ಆಹಾ||ಮಾಗಧರಿಪುಹೊತ್ತು ಹೋಗುತಲಿದೆ ಈಗ |ಭಾಗವತರ ಸಂಗಜಾಗುಮಾಡದಲೀಯೋ 2ದೀನವತ್ಸಲ ಶ್ರೀ ಮಾರುತ ಯಾತುಧಾನ ಸಂಹರನೆ ಹೇಮಾತರಿಶ್ವ|ಪ್ರಾಣೇಶ ವಿಠಲನ ದೂತ ಚತು-ರಾನನ ಪದಯೋಗ್ಯವಾತ||ಆಹಾ||ಕ್ಷೋಣಿಯೊಳೆನ್ನಂಥ ಹೀನರಿಲ್ಲವೊ ಪಾಪ |ಕ್ಷೀಣಿಸಿ ಸಲಹೋ ಸುಶೇಣಾದಿಸೂದನ 3
--------------
ಪ್ರಾಣೇಶದಾಸರು