ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿಗೆ ದೊರಕುವನು ಶ್ರೀಗುರುವನ ಗೆಂದಗೆ ದೊರಕುವನು ಪ ಮಂದಮತಿಯ ಕಡೆಗ್ಹೊಂದಿಸಿ ಸಚ್ಚಿದಾ ನಂದ ಬ್ರಹ್ಮನ ಕೃಪೆಯಿಂದ ಪಾಲಿಸಿದಾತಾ ಅ.ಪ. ಕರುಣದಿ ಕರದು ತನ್ನಾ ತೊಡೆಯ ಮೇಲ್ಕು ಳ್ಳಿರಿಸಿ ಶರಧಿಯೊಳೀಡಾಡಿ ಈಶ್ವರನ ತೋರಿದ ಗುರು ಎಂದಿಗೆ 1 ತನ್ನ ತಾ ತಿಳಿವವೊಲು ತತ್ವನಸಾರ ವನ್ನು ಸಾಧುಗಳಿಂದಲಿ ಚೆನ್ನಾಗಿ ಅರಿತುಕೊಳ್ಳೆಂದು ಅಮೃತಪಾನವನ್ನು ಮಾಡಿಸಿದ ಪ್ರಸನ್ನವದನ ಗುರು ಎಂದಿಗೆ 2 ಹುಟ್ಟಿಸಾಯದಂದದಿ ವಾಕ್ಯದ ಮದ್ದು ಕೊಟ್ಟು ಜೀವನ್ಮುಕ್ತಿಯ ಪಟ್ಟವ ಗಟ್ಟಿ ಫಣಿಗೆ ಮಂಗಲಾಕ್ಷತೆ ಇಟ್ಟ ವಿಮಲಾನಂದ ಬಟ್ಟೆದೋರಿದ ಗುರು 3
--------------
ಭಟಕಳ ಅಪ್ಪಯ್ಯ
ಗುರುವಿನ ನೋಡಿರೋ ಕರುಣವ ಪಾಡಿರೋ ಪ ದೀನ ಜನರ ಅಭಿಮಾನಿ ನಿಜ ಸುಖದಾನಿ ಮಹಾಸುಜ್ಞಾನಿ | ಸ್ವಾನುಭವ ದಾಗರ ಗುಣಗಂಭೀರ ಪರಮ ಉದಾರ | ಮೂರ್ತಿ ವಿಮಲ ಸುಕೀರ್ತಿ | ಭರಿತನಾದಸುರ ಚರಿತನು 1 ವಿಡಿಯುತ ಕುರುಹು | ನಿರುತ ತತ್ವದ ಬೊಂಬೆಯೆನೆ ಸುಖದಿಂಬೆ ಅದು ಏನೆಂಬೆ | ನರ ಶರೀರದೆ ಬಂದ ಪರಗೃಹಲಿಂದಲ್ಯಾಡೊದ ಛಂದ | ವಿರಾಗದೋರಿದ ಯೋಗನು 2 ಬೆಳೆಯದೋರಿದ ಕಳೆಯ | ಮರೆದ ಮುನ್ನಿನ ಠಾವ ದೋರಿಸಿ ಜೀವನ್ಮುಕ್ತಿಯ ನೀವ | ನಮೋ ನಮೋ ಎಂದೆ | ಕರುಣವ ಮಾಡಿದ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ಧ್ರುವ ಬಲ್ಲೆ ಬಲ್ಲೆನೆಂಬರು ಬಲ್ಲರಿಯದಿಹದನು ಬಲ್ಲರೆ ನೀವಿನ್ನು ಹೇಳುವುದು ತಾನಾ 1 ಕಣ್ಣು ಕಾಂಬುವದೇನು ಕಣ್ಣಿನೊಳಿಹುದೇನು ಕಣ್ಣು ಕಾಂಬುವ ಗತಿ ತಿಳಿಯುವುದು ತಾನಾ 2 ಕಿವಿಯ ಕಿವಿಯೆಂಬುದೇನು ಕಿವಿಯ ಕೇಳುವುದೇನು ಕಿವಿಯ ಕೇಳುವ ಗತಿ ತಿಳಿಯುವದು ತಾನಾ 3 ಮೂಗು ಮೂಗೆಂಬುದೇನು ಮೂಗಿನೊಳಾಡುವದೇನು ಆಡುವ ಗತಿಗಳ ತಿಳಿಯುವದು ತಾನಾ 4 ಬಾಯಿ ಬಾಯೆಂಬುದೇನು ಬಾಯಿಯೊಳ ನುಡಿವದೇನು ಬಾಯಿ ನುಡಿವ ಗತಿ ತಿಳಿಯುವದು ತಾನಾ 5 ದೇಹ ದೇಹೆಂಬುದೇನು ದೇಹದೊಳಿಹುದೇನು ದೇಹದೊಳಿಹ ವಸ್ತು ತಿಳಿಯುವದು ತಾನಾ 6 ಪ್ರಾಣವೆಂಬುದೇನು ಕರಣವೆಂಬುದೇನು ತತ್ತ್ವವೆಂಬುದೇನು ತಿಳಿಯುವದು ತಾನಾ 7 ಜೀವ ಅಂಬುದೇನು ಜೀವಭಾಗಗಳೇನು ಜೀವ ಶಿವದ ಗತಿ ತಿಳಿಯುವದು ತಾನಾ 8 ಆರುವ್ಹೆಂಬುದೇನು ಮರವ್ಹುವೆಂಬುದೇನು ಇದರೊಳು ಖೂನ ಕುರುಹು ತಿಳಿಯುವುದು ತಾನಾ 9 ಕನಸುವೆಂಬುದೇನು ಕನಸು ಕಾಂಬುವದೇನು ಕನಸು ಹೇಳುವದೇನು ತಿಳಿಯುವುದು ತಾನಾ 10 ಹಗಲು ಎದ್ದಿಹದೇನು ಇರಳು ಮಲಗುವದೇನು ಇದರ ಹಗರಣವನು ತಿಳಿಯುವದು ತಾನಾ 11 ಹುಟ್ಟಿ ಬಾಳುವದೇನು ಸತ್ತು ಹೋಗುವದೇನು ಸತ್ತು ಹುಟ್ಟುವದೇನು ತಿಳಿಯುವದು ತಾನಾ 12 ಹೆಣ್ಣು ಗಂಡೆಂಬುವದೇನು ಹೆಣ್ಣು ಗಂಡು ಕೂಡುವದೇನು ಕೂಡುವದೇನೆಂದು ತಿಳಿಯುವದು ತಾನಾ 13 ಅನುಭವ ಗತಿಗಳ ತಿಳಿಯಲು ಆತ್ಮದೊಳು ತಿಳಿಯಲು ಜನ್ಮವು ಅಳಿಯುವದು ತಾನಾ 14 ಆತ್ಮ ಅನುಭವವು ತಿಳಿಯುವದು ಗುರುಕೃಪೆಯು ತಿಳಿಯಲು ಜೀವನ್ಮುಕ್ತಿಯು ತಾನಾ 15 ಮಹಿಪತೆಂಬ್ಹೆಸರನು ಕರೆದರೊ ಎಂಬುವದೇನು ಓ ಎಂಬುವದೆನಗಿನ್ನು ತಿಳಿಯಿತು ತಾನಾ 16 ಇಂತು ಪರಿಯಾಯವು ತಿಳುಹಿದ ಗುರುರಾಯ ಎನ್ನೊಳು ಭಾಸ್ಕರ ಗುರು ತಾನೆ ತಾನಾ 17
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧುರ ಮಹಿಮೆಯು ಸಾಧಿಸದೆ ತಿಳಿಯದು ಭೇದಿಸದಲ್ಲದೆ ಹೊಳೆಯದಿದು ಧ್ರುವ ತೆಂಗಿನ ಫಲದಂತವರ ಸಂಗದಸುಖ ಹಿಂಗದಂತನುದಿನ ಅನುಭವಿಸುವದಲ್ಲದೆ 1 ಬಂಡೆಯೊಳಿದ್ದದ ತಾ ಒಡೆದು ಪ್ರಾಶಿಸಿದಂತೆ ಕಡಲೊಳಗಿದ್ದ ರತ್ನ ಮುಳುಗಿ ತೆಗೆದಂತೆ 2 ಅಂತರಾತ್ಮದ ಸುಖ ಮಹಾತ್ಮರಗಲ್ಲದೆ ಮೂಢಾತ್ಮರಿಗಿದು ಎಲ್ಲಿಹುದು 3 ಸಾಧು ಸಂತರ ನಿಜದಾಸ ಮಹಿಪತಿಗಿನ್ನು ಸಾಧು ಸಂಗತಿ ಜೀವನ್ಮುಕ್ತಿಯು 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು