ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊರಡು ಎಂಬೆನು ಇಂಥವನ ಕಂಡು ಕೊರಡು ಎಂಬೆಹುಸಿಯದೆಕೊರಡು ಅಲ್ಲದೆ ಶಿವನಿರೆ ಜೀವನೆಂಬುವನ ಕೊರಡು ಎಂಬೆ ಪ ಹಿರಿಯರು ಬರಲು ಏಳದವನನು ಕಂಡು ಕೊರಡು ಎಂಬೆಮರೆತು ತನ್ನನು ಕಲ್ಲ ಪೂಜಿಪ ಕಂಡು ಕೊರಡು ಎಂಬೆಅರಿತು ತನ್ನನು ಅಹುದಲ್ಲವೋ ಎಂಬುವನ ಕೊರಡು ಎಂಬೆಗುರುಪಾದ ಹೊಂದಿ ತನ್ನನು ತಿಳಿಯದವನು ಕೊರಡು ಎಂಬೆ 1 ತನ್ನೊಳು ಪರಮಾತ್ಮನಿರಲು ಕಾಣದವನನು ಕೊರಡು ಎಂಬೆಅನ್ನವ ಬಿಟ್ಟು ತೊಪ್ಪಲ ತಿಂಬನ ಕಂಡು ಕೊರಡು ಎಂಬೆತಿನ್ನುವನಿರುಲು ಉಪವಾಸ ಬೀಳ್ವನ ಕಂಡು ಕೊರಡು ಎಂಬೆಚೆನ್ನಾಗಿ ಹಮ್ಮಳಿಯದೆ ಶ್ರೇಷ್ಠನೆಂಬುವನ ಕೊರಡು ಎಂಬೆ 2 ನೀನಾರು ಎಂಬುವನ ಅದಾರೆನ್ನದನ ಕಂಡು ಕೊರಡು ಎಂಬೆವೇದಶಿರವನೋದಿನರ ತನ್ನನೆಂಬನ ಕೊರಡು ಎಂಬೆವಾದಕ್ಕೆ ಠಾವಿಲ್ಲ ಖೇದ ಮಾಡುವನ ಕಂಡು ಕೊರಡು ಎಂಬೆಬೋಧ ಚಿದಾನಂದನಿರೆ ಕಾಣದವನನು ಕೊರಡು ಎಂಬೆ 3
--------------
ಚಿದಾನಂದ ಅವಧೂತರು
ಬಾರೋ ವೆಂಕಟಗಿರಿನಾಥ| ದಯ- ದೋರೈ ಭಕುತರ ಪ್ರೀತ ಪ. ಮಾರಪಿತ ಗುಣಹಾರ ಮಂದರ- ಧಾರ ದೈತ್ಯಸಂಹಾರ ಸುಜನೋ ದ್ಧಾರ ಮಮಹೃದಯಾರವಿಂದಕೆ ಬಾರೋ ಕೃಪೆದೋರೋ ವೆಂಕಟ ಅ.ಪ. ವೃಷಭಾಸುರನೊಳು ಕಾದಿ ಸಾ- ಹಸವ ಮೆರೆಸಿದ ವಿನೋದಿ ವಶಗೈದು ದೈತ್ಯನ ಶಿರವ ಕತ್ತ- ರಿಸುತಲಿ ನೀನಿತ್ತೆ ವರವ ವಸುಧೆಯೊಳಗಿಹ ಸುಜನರನು ಮ- ನ್ನಿಸುತಲಿಷ್ಟವನಿತ್ತು ಕರುಣಾ- ರಸದಿ ಸಲಹುವ ಬಿಸಜನಾಭ ಶ್ರೀ- ವೃಷಭಾಚಲವೊಡೆಯ ವೆಂಕಟ 1 ಅಂಜನೆಯೆಂಬಳ ತಪಕೆ ಭಕ್ತ- ಸಂಜೀವನೆಂಬ ಶಪಥಕೆ ರಂಜಿಪ ಪದವಿತ್ತೆ ಮುದದಿ ಖಿಲ- ಭಂಜನಮೂರ್ತಿ ಕರುಣದಿ| ಮಂಜುಳಾಂಗ ಶ್ರೀರಂಗ ಸುರವರ ಕಂಜಭವವಿನುತಾದಿ ಮಾಯಾ- ರಂಜಿತಾಂಘ್ರಿ ಸರೋರುಹದ್ವಯ ಅಂಜನಾಚಲವೊಡೆಯ ವೆಂಕಟ 2 ಶೇಷನ ಮೊರೆಯ ತಾ ಕೇಳಿ ಬಲು ತೋಷವ ಮನಸಿನೊಳ್ತಾಳಿ ದೋಷರಹಿತನೆಂದೆನಿಸಿ ಕರು- ಣಾಶರಧಿಯ ತಾನೆ ಧರಿಸಿ ಶ್ರೀಶ ಹರಿ ಸರ್ವೇಶ ನತಜನ- ಪೋಷ ದುರ್ಜನನಾಶ ರವಿಶತ- ಭಾಸ ಕೌಸ್ತುಭಭೂಷ ವರ ಶ್ರೀ- ಶೇಷಾಚಲವಾಸ ವೆಂಕಟ 3 ಮಾಧವವಿಪ್ರ ವಿರಹದಿ ಭ್ರಷ್ಟ ಹೊಲತಿಗಳನು ಸೇರ್ದ ಮುದದಿ ಸಾದರದಲಿ ನಿನ್ನ ಬಳಿಗೆ ಬರೆ ನೀ ದಯಾನಿಧಿ ಕಂಡು ಅವಗೆ ಶೋಧಿಸುತ ಪಾಪಗಳೆಲ್ಲವ ಛೇದಿ ಬಿಸುಡುತ ನಿಂದು ವೆಂಕಟ- ಭೂಧರದ ನೆಲೆಯಾದ ನಾದವಿ- ಭೇದಬಿಂದು ಕಲಾದಿಮೂರುತಿ 4 ಧನಪತಿಯೊಳು ತಾನು ಸಾಲ ಕೊಂಡ ಘನಕೀರ್ತಿಯಿಂದ ಶ್ರೀಲೋಲ ವನಿತೆ ಪದ್ಮಾವತಿಪ್ರೀತ ಭಕ್ತ- ಜನಸುರಧೇನು ಶ್ರೀನಾಥ ವನಧಿಶಯನ ಮುರಾರಿ ಹರಿ ಚಿ- ಧ್ವನಿನಿಭಾಂಗ ಸುಶೀಲ ಕೋಮಲ ವನಜನಾಭ ನೀಯೆನ್ನ ಕೃಪೆಯೊಳ- ಗನುದಿನದಿ ಕಾಯೊ ಕೃಪಾಕರ 5 ಛಪ್ಪನ್ನೈವತ್ತಾರು ದೇಶದಿಂದ ಕಪ್ಪವಗೊಂಬ ಸರ್ವೇಶ ಅಪ್ಪ ಹೋಳಿಗೆಯನ್ನು ಮಾರಿ ಹಣ- ಒಪ್ಪಿಸಿಕೊಂಬ ಉದಾರಿ ಸರ್ಪಶಯನ ಕಂದರ್ಪಪಿತ ಭಜಿ- ಸಿರ್ಪವರ ಸಲಹಿರ್ಪ ಕುಜನರ ದರ್ಪಹರಿಸುತ ಕಪ್ಪಕಾಣಿಕೆ ಒಪ್ಪಿಗೊಂಬ ತಿಮ್ಮಪ್ಪಶೆಟ್ಟಿಯೆ 6 ಚಾರುಚರಣತೀರ್ಥವೀಂಟಿ ನಿನ್ನೊ- ಳ್ಸಾರಿ ಬರುವ ಪುಣ್ಯಕೋಟಿ ಸೇರಿದೆ ಕೊಡು ಮನೋರಥವ ಲಕ್ಷ್ಮೀ- ನಾರಾಯಣನೆನ್ನೊಳ್ದಯವ ತೋರು ನಿರತ ಸಮೀರಭವ ವರ- ದಾರವಿಂದದಳಾಕ್ಷ ತಿರುಪತಿ ವೀರ ವೆಂಕಟರಮಣ ಮದ್ಬಹು-ಭಾರ ನಿನ್ನದು ಪಾಲಿಸೆನ್ನನು 7
--------------
ತುಪಾಕಿ ವೆಂಕಟರಮಣಾಚಾರ್ಯ
ಭರಬರನೆ ಬಾಜಾರಕೆ ನಾ ಬಂದೆನಯ್ಯ ಚಿದಾನಂದನ ಮರೆಯಲಿಕೆ ಪ ಐವರು ಗೌಡರು ಕಟ್ಟಿದ ಪೇಟೆ ಆ ಪೇಟೆಗೆಐದು ನಾಲ್ಕು ಬಾಗಿಲುಗಳುಐದು ಮಂದಿ ಸೆಟ್ಟರು ಸೇರಿಹರು ಆವರಲ್ಲಿಯೆಐದು ಮಂದಿ ಚಲವಾದಿಗಳು1 ಭಾರ ನೇಮಲ್ಲಿದೆ 2 ತಡುಗರೆಂಬವಾಲೆ ಶೆಟ್ಟಿಗಳೆ ಅಲ್ಲಿಗಲ್ಲಿಗೆಪಡುವಲ ಕೋರಿ ಶೆಟ್ಟಿಗಳೇಕಡುಕರ್ಮಿ ಕೋಮಟಿ ಶೆಟ್ಟಿಗಳೇ ಬಾಯಿ ಘನವಾಗೆಬಡಬಡಿಪ ಪಟ್ಟಣ ಶೆಟ್ಟಿ 3 ಪಾಪವೆಂಬ ವಸ್ತ್ರದಂಗಡಿಯೇ ನಾ ನೋಡಲಾಗಿತಾಪವೆಂಬ ಜವಳಿ ಅಂಗಡಿಯೆಕೋಪವೆಂಬ ಕುಪ್ಪಸ ದಂಗಡಿಯೇಒಪ್ಪುತಲಿರೆ ಕಾಪಥವೆಂಬ ಸಕಲಾತ್ಮಂಗಡಿಯೇ 4 ಚಿ, ಛೀ ಎಂಬ ಚಿಕ್ಕ ತಕ್ಕಡ ಗಂಡಿಯೆ ನಾ ಬರುತಿರೆನಾಚಿಕೆಯಿಲ್ಲದ ಕಂಚಿನಂಗಡಿಯೇಚು ಛೂ ಎಂಬ ಚೀನಿಯಂಗಡಿಯೇ ಯಡಬಲದಲ್ಲಿಕೋಚು ಮಾಡೋ ಉದ್ದಿನಂಗಡಿಯೇ 5 ತನು ವ್ಯಸನವೆಂಬ ತಾಡಪತ್ರಿ ತೋರಲಾಗಿಮನವ್ಯಸನವೆಂಬ ಕಿಂಕಾಪುಧನವ್ಯಸನವೆಂಬೋ ಮಖಮಲ್ಲು ನಾ ಬೆರಗಾಗೆಜನ ವ್ಯಸನವೆಂಬೋ ಜರತಾರಿಯೇ6 ನಾನಾ ವಿಷಯ ವೆಂಬೋ ಉತ್ತತ್ತಿ ಅಲ್ಲಿದ್ದಾವೆಜ್ಞಾನಶೂನ್ಯ ಜಾಜಿಕಾಯಿಮಾನ ಹಾನಿಯೆಂಬೋ ಜಾಪತ್ರಿನಾನು ನನ್ನದು ಎಂಬ ಭಂಗಿ ಸೊಪ್ಪು7 ಜೀವನೆಂಬ ಹೊಗೆಯ ತೊಪ್ಪಲೇ ಹಿರಿಯವಾದನೋವು ಕಷ್ಟಗಳೆಂಬ ಗಾಂಜಿಯೇಸಾವು ಬದುಕು ಎಂದೆಂಬ ಮಾಲೆಗಳೇ ಮಾರುತಲಿತ್ತೋನಾನು ನೀನು ಎಂಬ ಚಿಲುಮೆಗಳೋ 8 ಭೇದವೆಂಬ ನಿಲುವುಗನ್ನಡಿಯೆ ಒಳಗಿದ್ದಾವೆ ವಾದವೆಂಬವಜ್ರದಹರಳೇ ಹಾದಿ ಕಾಣೆನೆಂಬ ಹವಳದ ರಾಶಿಯೇ ಹರಡಿದ್ದಾವೆಗಾದೆ ಎಂಬ ಸೂಜಿದಬ್ಬಣವೇ 9 ಪ್ರಾರಬ್ಧವೆಂಬೋ ಉಂಬತಳಿಗೆಯೇ ಪಸರಿಸುತಿರುವಘೋರ ತಾಪತ್ರಯದ ತಟ್ಟೆಯೇನಾರಿ ನೋಟೆಂಬ ಕಠಾರಿಯೇ ನಿಲಿಸಿದ್ದಾವೆಸೂರಿಯ ಸುಕೃತವೆಂಬೋ ತುಬಾಕಿಯೇ10 ಪರಿಣಾಮಿಲ್ಲದ ಪಡವಲಕಾಯಿ ದಾರಿಯಲಿದಾರಿಯಿಲ್ಲದ ದೊಡ್ಡಿಲಕಾಯಿಅರಿವಿಲ್ಲದ ಕುಂಬಳಕಾಯಿ ಹಾಗಿದ್ದಾವೆಮರುಳು ಎಂಬ ಮಾವಿನಕಾಯಿ11 ಮಂಠ ಎಂಬೋ ಮೆಂತ್ಯ ಪಲ್ಲಯೇ ಮಾಸಲವಿತ್ತೆಕಂಟಕ ಎಂಬೋ ಹರಿವೆ ಪಲ್ಲೆಯೇಕೊಂಟೆಯೆಂಬೊ ಬಸಲೆ ಪಲ್ಲೆಯೇ ತೀವ್ರದಲಿತ್ತೆಶುಂಠವೆಂಬೋ ಬೆರಕೆ ಪಲ್ಲೆಯೇ 12 ಬಂಗಾರವೆಂಬೋ ಬಿಳಿಯ ಜೋಳವೇ ಬೆಡಗಿಲಿರೇರಂಗು ಎಂಬೋ ರಾಗಿ ರಾಶಿಯೇಸಂಗವೆಂಬೋ ಸಣ್ಣಕ್ಕಿಯೇ ಸಾರಿದ್ದಾವೆಹಿಂಗದೀಪರಿ ದಿವಾರಾತ್ರಿಯೇ 13 ಸಂಕಲ್ಪೆಂಬೋ ಧಾರಣೆ ಹಚ್ಚಿರೋ ಸಂಗಾತಲೆವಿಕಲ್ಪೆಂಬೋ ಧಾರಣೆಯಿಳಿವುದೇಸುಖದುಃಖವೆಂಬೋ ಮಾರಾಟವೇ ಸಾಗಿರಲಾಗಿಕಾಕಧಾವಂತರ ಸಂಧಾನವೇ 14 ಕಾಮಕ್ರೋಧಗಳೆಂಬ ಕಳ್ಳರೇ ಕಾವಲಿರ್ದುರಾಮನೆಂಬ ಸ್ಮರಣೆ ಕದ್ದಿಹರೋಕಾಮುಕರೆ ತಿರುಗಾಡುವರೆಲ್ಲ ಕಾಣದ ಹಾಗೆಆ ಮಹಾಜ್ಞಾನವ ಸುಲಿದಿಹರೋ15 ಬರಬಾರದ ನಾನು ಬಂದೆನೇ ಬಾಜಾರ ಬಿಟ್ಟುಹೊರಡುವ ತೆರನ ಕಾಣೆನೇಕರುಣಿಯಾಗಿ ಕೈ ವಿಡಿವರಾರೋಕರುಣಾಕರ ಹರ ವಿಶ್ವೇಶನೇ ಬಲ್ಲ 16 ಚಿಂತೆ ನಾನು ಮಾಡುತಿರಲಾಗಿ ಚಿದಾನಂದಚಿಂತೆ ಬೇಡೆಂದು ಮುಂದೆ ನಿಂದಿಹನುಚಿಂತೆ ಬಿಡು ಕಾವಲಿಹೆನೆಂದು ಚಿದ್ರೂಪ ತೋರಿಎಂತು ಪೇಳಲಿ ಎನ್ನೆದುರು ನಿಂದಿಹನೆ17
--------------
ಚಿದಾನಂದ ಅವಧೂತರು
ಬಾರೋ ವೆಂಕಟಗಿರಿನಾಥ| ದಯ-ದೋರೈ ಭಕುತರ ಪ್ರೀತ ಪ.ಮಾರಪಿತ ಗುಣಹಾರ ಮಂದರ-ಧಾರ ದೈತ್ಯಸಂಹಾರ ಸುಜನೋದ್ಧಾರ ಮಮಹೃದಯಾರವಿಂದಕೆಬಾರೋ ಕೃಪೆದೋರೋ ವೆಂಕಟ ಅ.ಪ.ವೃಷಭಾಸುರನೊಳು ಕಾದಿ ಸಾ-ಹಸವ ಮೆರೆಸಿದ ವಿನೋದಿವಶಗೈದು ದೈತ್ಯನ ಶಿರವ ಕತ್ತ-ರಿಸುತಲಿ ನೀನಿತ್ತೆ ವರವವಸುಧೆಯೊಳಗಿಹ ಸುಜನರನು ಮ-ನ್ನಿಸುತಲಿಷ್ಟವನಿತ್ತು ಕರುಣಾ-ರಸದಿ ಸಲಹುವ ಬಿಸಜನಾಭ ಶ್ರೀ-ವೃಷಭಾಚಲವೊಡೆಯ ವೆಂಕಟ 1ಅಂಜನೆಯೆಂಬಳ ತಪಕೆ ಭಕ್ತ-ಸಂಜೀವನೆಂಬ ಶಪಥಕೆರಂಜಿಪ ಪದವಿತ್ತೆ ಮುದದಿ ಖಿಲ-ಭಂಜನಮೂರ್ತಿ ಕರುಣದಿ|ಮಂಜುಳಾಂಗ ಶ್ರೀರಂಗ ಸುರವರಕಂಜಭವವಿನುತಾದಿ ಮಾಯಾ-ರಂಜಿತಾಂಘ್ರಿ ಸರೋರುಹದ್ವಯಅಂಜನಾಚಲವೊಡೆಯ ವೆಂಕಟ 2ಶೇಷನ ಮೊರೆಯ ತಾಕೇಳಿಬಲುತೋಷವ ಮನಸಿನೊಳ್ತಾಳಿದೋಷರಹಿತನೆಂದೆನಿಸಿ ಕರು-ಣಾಶರಧಿಯ ತಾನೆ ಧರಿಸಿಶ್ರೀಶಹರಿಸರ್ವೇಶ ನತಜನ-ಪೋಷ ದುರ್ಜನನಾಶ ರವಿಶತ-ಭಾಸ ಕೌಸ್ತುಭಭೂಷವರಶ್ರೀ-ಶೇಷಾಚಲವಾಸ ವೆಂಕಟ 3ಮಾಧವವಿಪ್ರ ವಿರಹದಿ ಭ್ರಷ್ಟಹೊಲತಿಗಳನು ಸೇರ್ದ ಮುದದಿಸಾದರದಲಿ ನಿನ್ನ ಬಳಿಗೆ ಬರೆನೀ ದಯಾನಿಧಿ ಕಂಡು ಅವಗೆಶೋಧಿಸುತ ಪಾಪಗಳೆಲ್ಲವಛೇದಿ ಬಿಸುಡುತನಿಂದುವೆಂಕಟ-ಭೂಧರದ ನೆಲೆಯಾದ ನಾದವಿ-ಭೇದಬಿಂದು ಕಲಾದಿಮೂರುತಿ 4ಧನಪತಿಯೊಳು ತಾನು ಸಾಲಕೊಂಡಘನಕೀರ್ತಿಯಿಂದ ಶ್ರೀಲೋಲವನಿತೆ ಪದ್ಮಾವತಿಪ್ರೀತ ಭಕ್ತ-ಜನಸುರಧೇನು ಶ್ರೀನಾಥವನಧಿಶಯನ ಮುರಾರಿಹರಿಚಿ-ಧ್ವನಿನಿಭಾಂಗ ಸುಶೀಲ ಕೋಮಲವನಜನಾಭನೀಯೆನ್ನ ಕೃಪೆಯೊಳ-ಗನುದಿನದಿ ಕಾಯೊ ಕೃಪಾಕರ 5ಛಪ್ಪನ್ನೈವತ್ತಾರು ದೇಶದಿಂದಕಪ್ಪವಗೊಂಬ ಸರ್ವೇಶಅಪ್ಪ ಹೋಳಿಗೆಯನ್ನುಮಾರಿಹಣ-ಒಪ್ಪಿಸಿಕೊಂಬ ಉದಾರಿಸರ್ಪಶಯನ ಕಂದರ್ಪಪಿತ ಭಜಿ-ಸಿರ್ಪವರ ಸಲಹಿರ್ಪ ಕುಜನರದರ್ಪಹರಿಸುತ ಕಪ್ಪಕಾಣಿಕೆಒಪ್ಪಿಗೊಂಬ ತಿಮ್ಮಪ್ಪಶೆಟ್ಟಿಯೆ 6ಚಾರುಚರಣತೀರ್ಥವೀಂಟಿ ನಿನ್ನೊ-ಳ್ಸಾರಿ ಬರುವ ಪುಣ್ಯಕೋಟಿಸೇರಿದೆ ಕೊಡು ಮನೋರಥವ ಲಕ್ಷ್ಮೀ-ನಾರಾಯಣನೆನ್ನೊಳ್ದಯವತೋರುನಿರತಸಮೀರಭವ ವರ-ದಾರವಿಂದದಳಾಕ್ಷ ತಿರುಪತಿವೀರ ವೆಂಕಟರಮಣ ಮದ್ಬಹು-ಭಾರನಿನ್ನದು ಪಾಲಿಸೆನ್ನನು7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ