ಶ್ರೀಹರಿಯ ಸ್ತುತಿ
ಕಡಲಶಾಯಿ ಪ
ರುಧಿರ ಮೂಲ ಸಾಸ್ಥಿಯ ಕಾಯಾ ಒಳ್ಳೆ
ಮೃದು ನರ ಜಾಲಗಳ ಸುತ್ತಿಹ ಮೈಯಾ
ಅದರೊಳು ನಿನ್ನಾದಿ ಕಾರ್ಯಾ ಮತ್ತೆ
ಸದಮಲ ಪ್ರಾಣೇಶ ನಿನಗೆ ತಾ ಸಹಾಯ 1
ಸಂತತ ಹರಿಯ ಕೊಂಡಾಡಿ ಮಧ್ವ
ಪಂಥವ ಪಿಡಿದು ದುವ್ರ್ಯಸನವನೀಡಾಡಿ
ಕಂತುಪಿತನ ನಾಮಾ ಪಾಡಿ ಎನ್ನ
ಚಿಂತೆ ತಾರಕನೆಂದು ನಂಬಿದೆ ಕೂಡಿ 2
ನರದೇಹ ಕೊಡುವವನು ನೀನು ನಿನ್ನ
ಮರೆದಧಮದ ಶಾಸನ ಕರ್ತಾ ನಾನು
ನರಸಿಂಹವಿಠಲನು ನೀನು ನಿನ್ನ
ಕರುಣೆ ತಪ್ಪಿದ ಮೇಲೆ ಜೀವನವೇನು 3