ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉ. ತತ್ವ ವಿವೇಚನೆ ಹರಿಯಾದರೇನು ತಾ ಹರನಾದರೇನು ಮೂರ್ತಿ ದೊರಕಿ ಫಲವೇನು ಪ ಪಿತನೊಳಗೆ ಸೇರದಿಹ ಸುತನಿಂದ ಫಲವೇನು ಸತಿ ಇದ್ದರೇನು ಮತಿಹೀನ ಗುರು ತಾನು ಜೊತೆಯಾಗಿ ಇದ್ದರೇನು ಮತ ಮೀರಿ ನಡೆವಾತ ಯತಿಯಾದರೇನು 1 ಸಾಯವಿಲ್ಲದ ನ್ಯಾಯ ಸತ್ಯವಾದರೆ ಏನು ಬಾಯಸವಿಯಿಲ್ಲದ ರಸಾಯನದಲೇನು ಕಾಯ ಕುಂದಿದ ಮೇಲೆ ಜೀವದಾಶೆಯದೇನು ಮಾಯವಾದಿಯ ಮಾತು ಮತ್ತೆ ದೃಢವೇನು 2 ಋಣವ ಮಾಡಿದ ತಾತ ಗುಣವಂತನಾದರೇನು ಭಣಿತೆ ತಪ್ಪಿದ ತಾಯಿ ರಕ್ಷಿಣಿಯು ಆದರೇನು ಎಣಿಕೆ ಬಾರದ ಮನುಜ ಕರಣಿಕನಾದರೇನು ಫಣಿರಾಜನೊತ್ತಿನೊಳು ಹಣವಿದ್ದರೇನು 3 ವಿಪ್ರ ವೇದ ಓದಿದರೇನು ಮಾದಿಗನು ತಾ ಮಡಿಯನುಟ್ಟರೇನು ಬೂದಿಮುಚ್ಚಿದೆ ಕೆಂಡವಾದ ಸೋದರವೇನು ಸಾಧಿಸುವ ಊರೊಳಗೆ ಆದ ಫಲವೇನು 4 ಹರಿಯನರ್ಚಿಸದಿರ್ದ ಕರವಿರ್ದು ಫಲವೇನು ಹರಿಯ ಸ್ಮರಣೆಯ ಮಾಡದರಿಯದವನೇನು ಸಿರಿಯು ನಿಲ್ಲದ ಗೃಹದ ಪರಿಯ ಸೌಖ್ಯವದೇನು ಮರೆಯಾದ ಮನುಜನೊಳು ವ್ಯವಹಾರವೇನು 5 ವಾರಿಯಿಲ್ಲದ ಊರ ಸೇರಿರ್ದು ಫಲವೇನು ಚೋರನೊಡನೇ ದಾರಿ ನಡೆವುದೇನು ಬೇರು ಇಲ್ಲದ ವೃಕ್ಷ ಏರಿ ನೋಡುವುದೇನು ಮಾರಿ ಮನೆಯೊಳಗಿರಲು ಸಾಕಾರವೇನು 6 ಲಕ್ಷಣದ ಮೂರ್ತಿಯಿರಲಕ್ಷಯವ ತೋರುವುದು ಪಕ್ಷಿವಾಹನ ಲಕ್ಷ್ಮ್ಯಪೇಕ್ಷೆಯಾಗಿಹರು ಲಕ್ಷಣವಿರಹಿತ ನರ ಪ್ರದಕ್ಷಿಣದಿ ಬಳಲಿದರು ಭಿಕ್ಷುಕನೇ ಸರಿಯಾತನೀಕ್ಷಿಸರು ಜನರು 7 ಬುದ್ದಿವಂತರ ಕೈಯ ಶುದ್ಧವಾದೆರಕದಲಿ ತಿದ್ದಿರ್ದ ಮೂರ್ತಿಯನು ಕದ್ದುಕೊಂಡು ಹೊದ್ದಿ ಬಲವಂತನೊಳು ಬದ್ದವಾಗಿರುತಿರ್ದು ಎದ್ದು ಹೋಗದ ಸ್ಥಳದಿ ಮುದ್ದನಾಗಿಹುದು 8 ಕಾಮಿತಾರ್ಥನೀವ ಸೀಮೆಯಲಿ ಕೌರವನು ರಾಮರಾಜ್ಯದಿ ಬೇಡಿಕೊಳಲು ಕೊಡುತಿಹನು ಪ್ರೇಮದೊಳು ವರಾಹತಿಮ್ಮಪ್ಪ ಮನದಣಿಯೆ ಸೌಮನಸ್ಯವೀವ ಬರಿದೆ ಬಳಲದಿರು 9
--------------
ವರಹತಿಮ್ಮಪ್ಪ
ಕರದೊಳಿನ ಮಣಿಗೆ ಕನ್ನಡಿಯೇತಕೆ ಪ ಸಿರಿ ರಮಣನಲತಿ ಸಂಶಯವೇತಕೆ ಅ.ಪ ಶರಧಿಯ ಜಲವನ್ನು ಪರಿಪರಿ ದೇಶಕೆ ಬಿರುಗಾಳಿಗಳಿಂದ ದೊರಕಿಸುವನು ಯಾರು ಧರೆಯೊಳು ನವನಾಗರಿಕರೆಂದರಿಯುವ ಪರಿ ತರವೆ ಯೋಚಿಸೆಲೊ 1 ಎಲ್ಲಾ ದೇಶಗಳ ವಿಚಾರ ನೋಟಗಳನ್ನು ಇಲ್ಲೇ ತೋರಿಸುವಂಥ ನಲ್ಲರು ಇರುವರು ಎಲ್ಲಿಂದ ಬಂದೆ ಎಲ್ಲಿಗೆ ಹೋಗುವೆ ಎಂದು ಬಲ್ಲರೇ ಇವರು ತಲ್ಲಣಿಸುತಿಹರು 2 ಘಾಸಿಯ ಮಾಡದೆ ಪೋಷಿಸುವನು ಯಾರು ಈಶನ ಕರುಣವು ಲೇಶ ತಪ್ಪಿದರೆ ಆ ಶಿಶುವಿನ ಜೀವದಾಶೆ ಎಂತಿಹುದೊ 3 ಎಲ್ಲಾ ನಾರಿಯರು ಗರ್ಭ ಧರಿಸುವರೆ ಎಲ್ಲಾ ಬೀಜಗಳಿಂದ ತರುಗಳು ಬರುವುದೆ ಬಲ್ಲವರುಂಟೆ ಇದಕೆ ಕಾರಣ ಲಕ್ಷ್ಮೀ ಪರಿ 4 ಭಿನ್ನದೇಶಗಳಲ್ಲಿ ಭಿನ್ನ ರೂಪಗಳುಳ್ಳ ಭಿನ್ನ ಗುಣಗಳುಳ್ಳ ಭಿನ್ನ ಜಂತುಗಳಿಗೆ ಭಿನ್ನ ಕಾಲಗಳಲ್ಲಿ ಅನ್ನವನೀಯಲು ಅನ್ಯರಿಗಳವೆ ಪ್ರಸನ್ನನಿಗಲ್ಲದೆ 5
--------------
ವಿದ್ಯಾಪ್ರಸನ್ನತೀರ್ಥರು