ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸಜನರ ಪ್ರಾಣೇಶ ಬಾರೋ ಪ ಉರಗಶಯನ ಬಾರೋ ಗರುಡಗಮನ ಬಾರೋ ಶರಧಿಸುತೆಯ ಪ್ರಾಣದರಸ ಬಾರೋ 1 ಕಲುಷಹರಣ ಬಾರೋ ವಿಲಸಿತಮಹಿಮ ಬಾರೋ ತುಲಸೀಮಾಲನೇ ಸಿರಿಲೋಲ ಬಾರೋ 2 ತರಳನುದ್ಧರ ಬಾರೋ ಕರಿಯಪಾಲನೆ ಬಾರೋ ಮಾನವ ಕಾಯ್ದ ಕರುಣಿ ಬಾರೋ 3 ಭಾವಜನಯ್ಯ ಬಾರೋ ಸೇವಕಜನ ಜೀವದಾಪ್ತ ಬಾರೋ 4 ಭಕ್ತವತ್ಸಲ ಬಾರೋ ಮುಕ್ತಿದಾಯಕ ಬಾರೋ ಭಕ್ತಾಂತರಂಗ ಶ್ರೀರಾಮ ಬಾರೋ 5
--------------
ರಾಮದಾಸರು
ನಾನೊಂದು ಮಾಡಲು ತಾನೊಂದಾದಮೇಲಿನ್ನೇನಿನ್ನೇನು ದೇವರೆಂದು ನಮಿಸಲು ದೆವ್ವಾಗಿ ಬಡಿದ ಮೇಲಿನ್ನೇನಿನ್ನೇನು ಜೀವದಾಪ್ತರೆ ತನ್ನ ಕೊಲ್ಲಲೆತ್ನಿಸಿದರಿನ್ನೇನಿನ್ನೇನು 1 ತಾಯ್ತಂದೆಗಳೆ ಸುತರಿಗ್ವಿಷವನೆರೆದ ಮೇಲಿನ್ನೇನಿನ್ನೇನು ಕೈಯೊಳು ಪಿಡಿದ ಬೆತ್ತ ಹಾವಾಗಿ ಕಚ್ಚಲು ಇನ್ನೇನಿನ್ನೇನು 2 ಕಣ್ಣಿಲ್ಲದವನಿಗೆ ಮಾರ್ಗ ತಪ್ಪಿದ ಮೇಲೆನ್ನೇನಿನ್ನೇನು 3 ಹಾಲೆಂದು ಸವಿದರೆ ಹಲ್ಲು ಮುರಿದಮೇಲಿನ್ನೇನಿನ್ನೇನು ಮಾಲ್ಯೆಂದು ಧರಿಸಲು ಉರುಲು ಬಿದ್ದ ಮೇಲಿನ್ನೇನಿನ್ನೇನು 4 ಬೇಲ್ಯೆದ್ದು ಹೊಲದ ಬೆಳೆಯ ತಾ ಮೇಯಲಿನ್ನೇನಿನ್ನೇನು ಮಾಳಿಗೆ ಮನೆಯೆ ತಾ ಗಾಳಿಗೆ ಸಡಲಿದರರಿನ್ನೇನಿನ್ನೇನು 5 ಭೂಪತಿಗಳತಿನೀತಿತಪ್ಪಿದ ಮೇಲಿನ್ನೇನಿನ್ನೇನು ಪಾಪಿಗಳತಿಶಯಯಕೋಪ ತಾಳಿದ ಮೇಲಿನ್ನೇನಿನ್ನೇನು 6 ನೋಪಿದ ಗೌರಿಯೆ ಶಾಪವಿತ್ತ ಮೇಲಿನ್ನೇನಿನ್ನೇನು ದೀಪವೆ ಕಾಲಾಗ್ನಿಯಾಗಿ ಉರಿದಮೇಲಿನ್ನೇನಿನ್ನೇನು 7 ಹೂಳಿಟ್ಟ ಹಣವೆಲ್ಲ ಚೇಳಾಗ್ಹರಿದ ಮೇಲಿನ್ನೇನಿನ್ನೇನು ಅಳಿದ ಗೋವುಗಳು ಹುಲಿಯಾಗ್ಹಾರಿದ ಮೇಲಿನ್ನೇನಿನ್ನೇನು 8 ಆಳುವ ಒಡೆಯರೆ ಅಹಿತರಾದ ಮೇಲಿನ್ನೇನಿನ್ನೇನು ಬಾಳುವುದೆಂತಯ್ಯ ಶ್ರೀರಾಮ ನೀಮುನಿದರಿನ್ನೇನಿನ್ನೇನು 9
--------------
ರಾಮದಾಸರು
ವಿಶ್ವಧಾರನೋ ಶ್ರೀಶ ವಿಶ್ವಕಾರನೋ ವಿಶ್ವ ವಿಶ್ವಭರಿತ ವಿಶ್ವರಕ್ಷ ವಿಶ್ವಚರಿತ ಪ ನಾದಭರಿತನೋ ಹರಿ ನಾದಾತೀತನೋ ವೇದಾಧರನೋ ರಂಗ ವೇದ ಗೋಚರನೋ ವೇದವೇದಾಂತ ಸ್ವಾದ ನಿಖಿಲ ಬೋಧರೂಪ ಭೇದರಹಿತ ಆದಿ ಅನಾದಿದಾತ ಸತತ ಸಾಧುಸಜ್ಜನವಿನುತ ಅಮಿತ1 ದೇವದೇವನೋ ಸ್ವಾಮಿ ದಿವ್ಯಚರಿತನೋ ಕಾವ ಕರುಣನೋ ಭಕ್ತಿ ಭಾವಪೂರ್ಣನೋ ಸಾವುಹುಟ್ಟು ಭಯವಿದೂರ ಮಾಯಗೆಲಿದ ಮಹಪ್ರಕಾಶ ಭಾವಜಜನಕ ಭವಭಂಗ ಸೇವಕಜನರ ಜೀವದಾಪ್ತ 2 ದೋಷನಾಶನೋ ಕೃಷ್ಣ ಮೀಸಲಾತ್ಮನೋ ಭಾಸುರಂಗನೋ ಜಗದೀಶ ಗಮ್ಯನೋ ವಾಸುಕಿಶಯನ ವಾಸುದೇವ ಸಾಸಿರನಾಮದೊಡೆಯ ಇಂದಿ ರೇಶ ಗೋವಿಂದ ಪೋಷಿಸೆನ್ನ ಶ್ರೀಶ ಶ್ರೀರಾಮದಾಸಪ್ರಿಯ 3
--------------
ರಾಮದಾಸರು