ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಭಯ ಎನಗಿಲ್ಲ | ದೇವ ನಿನ್ನಯ ಪಾದ ಸೇವೆ ಮಂತ್ರವು ಎನ್ನ | ಭಾವದೊಳಿರಲು ಪ ಸಾವಿಗಂಜುವನಲ್ಲ | ನೋವಿಗಂಜುವನಲ್ಲ ಜೀವಕೋಟಿಯನೆಲ್ಲ | ಕಾವನೀನಿರಲಾಗಿ ಅ.ಪ ವರದಾತ ನೀನಿರಲು | ನರಕ ಭಯ ಎನಗುಂಟೆ ಪರಮ ಪುರುಷಾರ್ಥಗಳ | ಕರವೆತ್ತಿ ಕೊಡುವ ಧರಣೀಶ ಮಾಂಗಿರಿಯ | ಸಿರಿರಂಗಪತಿ ನಿನ್ನ ಸ್ಮರಣೆ ವಂದನೆ ಎನ್ನ ಮನದೊಳಿರಲು1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಾರತೀಪತಿ ಮೂರುತಿ ಮಾರುತಿ ಕಾಯೊ ಪ ಘೋರದುರಿತೌಘ ಪರಿಹಾರ ಸುಸಮೀರ ಧೀರಾ ಅ.ಪ ಸತ್ತ್ವ್ವ ಸತ್ತ್ವಾತ್ಮಕ ತತ್ತ್ವದೇವತೆಗಳ ನಿತ್ಯ ನಿಯಾಮಕ ಗುರು 1 ಪಟುತರಾಂಗನೆ ಧೂರ್ಜಟಿಯ ಸೇವೆಗೆ ಮಚ್ಚಿ ಪರಮೇಷ್ಠಿ ಪದ 2 ನಂಜಯನಾಗ್ರಜನೆ ಮೂರ್ಜಗ ಗುರು 3 ಶ್ರೇಷ್ಠಮೂರುತಿ ಜಗಚ್ಚೇಷ್ಟಾಪ್ರದಾಯಕ ಪ್ರವಿಷ್ಠ ಸರ್ವಸೃಷ್ಟಿಕಾರ್ಯ ತೊಟ್ಟಿರುವೆ4 ಮುಖ್ಯವಾಚ್ಯನು ದೇವ ಅಮುಖ್ಯವಾಚ್ಯನು ನೀನು ಮುಖ್ಯ ಜೀವಕೋಟಿಯೊಳು ಪ್ರಮುಖನಯ್ಯ ಮುಖ್ಯಪ್ರಾಣ5 ಶ್ವಾಸನಿಯಾಮಕ ನಿಶೆಯೊಳು ನಿದ್ರೆಯೊಳು ಅಸುರಾದಿ ಜೀವರೊಳು ಶ್ವಾಸಭೂರ್ಭುವನೆನಿಸುವೆ 6 ಸರ್ವನಿಯಾಮಕ ಶರ್ವರೊಂದಿತಪಾದ ಸರ್ವೋತ್ತಮ ಶ್ರೀ ವೇಂಕಟೇಶನೋರ್ವನೆ ಮುಖ್ಯನೆಂದೆ7
--------------
ಉರಗಾದ್ರಿವಾಸವಿಠಲದಾಸರು
ಲೋಕನೀತಿ ಎಲ್ಲಿಗೇತಕೆ ಪೋಗಿ ತಲ್ಲಣಿಸುವೆಯೊ ಮನವೆ ಇಲ್ಲೆ ಶ್ರೀಹರಿಯಿಲ್ಲವೆ ಪ ಬಲ್ಲವರ ಹೃದಯಗುಹೆಯಲ್ಲಿ ಪ್ರಕಟಿಸುತ ಜನ ತುಂಬಿ ಸೂಸುತಲಿರುವ ಅ.ಪ ಕಾಶಿ ರಾಮೇಶ್ವರ ಬದರಿ ತಿರುಪತಿಯೆಂದು ಘಾಸಿಗÉೂಳ್ಳುವೆ ಏತಕೋ ವಾಸನೆಯ ನೀಗದವನಾಶೆಪಾಶಗಳಿಂದ ಬೇಸತ್ತು ಚರಿಸಲೇಕೋ ಈಶನಾವಾಸವೀಜಗವೆಲ್ಲವಿಲ್ಲಿಲ್ಲ ವಲ್ಲಿರುವನೆಂಬುದೇಕೋ ಶ್ರೀಶ ಶ್ರೀಹರಿಯ ನೀನಿರುವಲ್ಲೆ ಶೋಧಿಸುವ ಆಸೆಯುದಯಿಸಲಿಲ್ಲವೇಕೋ 1 ಅಣುಮಹತುಗಳಲ್ಲಿ ತೃಣಜೀವಕೋಟಿಯಲಿ ಗುಣ ಮಹಿಮನರಿಯ ಬಯಸೋ ಎಣಿಸಲಾಗದನಂತಗುಣನ ಪ್ರಾಣಿ ಸಮೂಹ ಗಣಗಳೊಳು ಕಾಣಬಯಸೋ ಅಣುವಿಗಣುವೆನಿಸಿ ಮಹತಿಗೆ ಮಹತ್ತಹನ ಕಣ್ದಣಿಯೆ ಕಾಣುತ ಭಾವಿಸೊ ಗುಣನಿಧಿಯು ನಿನ್ನ ಶ್ರದ್ಧಾಭಕ್ತಿಗಳಿಗೊಲಿದು ಕ್ಷಣದಿ ಕಾಣಿಸುವನಿದನರಿತು ನೀ ಚರಿಸೋ 2 ವ್ರತನಿಯಮಗಳ ಕಾಮ್ಯ ಫಲದಾಸೆಯಿಂ ಮಾಡೆ ಫಲವೇನು ವ್ಯರ್ಥಶ್ರಮವೋ ಸತತ ನಿನ್ನಯ ವ್ಯಾಪ್ತ ಮಹಿಮೆಯರಿಯದೆ ಪೂಜೆ ಮಾಡಿದರು ವ್ಯರ್ಥಶ್ರಮವೋ ಮತಿವಿಕಳ ಕೋಪ ತಾಪದ ದಾಸನವ ಮಾಳ್ಪ ದಾನವದು ವ್ಯರ್ಥಶ್ರಮವೋ ಅಕಳಂಕಮಹಿಮ ರಘುರಾಮವಿಠ್ಠಲನೆಂದು ನಂಬಿ ನಡೆವುದೆ ಸಾರ್ಥಕವೋ 3
--------------
ರಘುರಾಮವಿಠಲದಾಸರು
ಲೋಕಪಾಲನೆ ನಾಕವಂದ್ಯನೆ ಸಾಕುಬಿಡು ಚಲವಾ ಯಾಕೆ ಕೋಪ ದೀನ ನಾನೆಲೈ ಶ್ರೀಕರ ಸುಗುಣಾ ಪ ಕಾವರಿಲ್ಲವೋ ದೇವ ದೇವನೆ ಭಾವಜಾತಪಿತನೆ ಜೀವಕೋಟಿಯ ಜೀವರಾಶಿಯ ಪಾವನಾಂಗನೆ ಅ.ಪ ಪರರ ನಾನುಪರಿಚರಿಸಲಿಲ್ಲವೋ ದುರುಳಭಾವದಿ ಪರರ ಹಿಂಸೆಗೈದು ಎನ್ನ ಉದರ ಪೊರೆದೆನೋ 1 ವೇದಗಳ ನಾನೋದಿ ಅರಿಯೇ ಸಾಧು ಸಂಗಮ ಭೇದಗೈದೆ ಗರ್ವದಿಂದೆ ವೇದವೇದ್ಯನೆ 2 ಗಂಗಜನಕ ತುಂಗ ವಿಕ್ರಮ | ಮಂಗಳಾಂಗನೇ ಮಾಂಗಿರೀಶ ನಿನ್ನ ನಾಮಭೃಂಗವ ತೋರೈ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಮಾರುತಾತ್ಮ ಸಂಭೂತ ಹನುಮ ಭೀಮ ಮಧ್ವಾಖ್ಯ ಯತಿನಾಥ | ಮೂಲ ರಾಮಕೃಷ್ಣಾರ್ಪಿತ ಸುಚೇತಾ | ಮಮ ಸ್ವಾಮಿ ಚಿತ್ತೈಸೆನ್ನ ಮಾತಾ 1 ಅಂಜನಾದೇವಿ ಸುಕುಮಾರ |ಎಮ್ಮ ನಂಜಿಸುವ ಘೋರ ಸಂಸಾರ |ಹೇ ಪ್ರ ನಿಗಮ ಸಂಚಾರ | ಕ್ಲೇಶ ಭಂಜಿಸಿ ಸಲಹೋ ಗುಣೋದಾರ 2 ಕುಂತಿ ಜಠರದಲುದಿಸೆ ಬಂದೆ | ಮಾ ಹೊಂತ ಕೌರವರ ನೀ ಕೊಂದೆ | ಅನಾ ದ್ಯಂತ ಕಾಲದಿ ಎಮ್ಮ ತಂದೆ | ನೀನೆ ಸಂತೈಸಬೇಕೆಂದು ನಿಂದೆ 3 ಮಧ್ಯ ಗೇಹಾಖ್ಯ ದ್ವಿಜಸದನ | ದೊಳಗೆ ಉದ್ಭವಿಸಿ ಮೆರೆದೆ ಜಿತಮದನ | ಧರ್ಮ ಪದ್ಧತಿಗಳ ಪ್ರಸನ್ನವದನಾ | ತಿಳಿಸಿ ಉದ್ಧರಿಸೋ ದನುಜಕುಲ ನಿಧನ4 ಶ್ರೀ ಪೂರ್ಣಬೋಧ ಯತಿರಾಯ | ಎಮ್ಮ ತಾಪತ್ರಯಗಳಿಂದ ನೋಯ | ಗೊಡದೆ ನಿಕಾಯ | ಕೃಷ್ಣ ದ್ವೈಪಾಯನಗೆ ನೀನೆ ಪ್ರೀಯ 5 ಬದರಿಕಾಶ್ರಮಕೆ ನೀ ಪೋಗಿ | ಲಕ್ಷ್ಮೀ ಹೃದಯ ವಾಸನ ಪದಕೆ ಬಾಗಿ | ಭಾಷ್ಯ ಮುದದಿಂದ ಪೇಳ್ದೆ ಚೆನ್ನಾಗಿ | ಎನಗೆ ಅದರ ಭಾವವ ತಿಳಿಸೋ ಯೋಗಿ6 ತಾಪ ಭಾರ ತೀರಮಣ ಮಹಪಾಪ ವೆಣಿಸಿ ದೂರ ನೋಳ್ಪರೆ ಸುಪ್ರತಾಪ ಪರಮ ಕಾರುಣಿಕ ತೋರೋ ತವರೂಪ 7 ಭಕ್ತರಿಗೊಲಿದು ಭವದಿಂದ ನೀ ಮುಕ್ತರನÀ ಮಾಡು ದಯದಿಂದ ನೀನೆ ಶಕ್ತನಹುದೆಂದು ವೇದವೃಂದದೊಳಗೆ ಉಕ್ತವಾಗಿದೆ ನಿಮ್ಮಾನಂದಾ8 ಜೀವಕೋಟಿಯೊಳು ನೀನೆ ಪಿರಿಯ ಎಮ್ಮ ನೋವು ಸುಖಗಳನು ನೀನೆ ಅರಿಯ ಈಗ ನೀವೊಲಿಯದಿರೆ ಹರಿ ನಮ್ಮ ಪೊರೆಯಾ ಜಗವ ಕಾಯ್ವ ಗುರುವರ ನೀನೆ ಖರೆಯ 9 ಶ್ರೀ ಜಗನ್ನಾಥ ವಿಠ್ಠಲಯ್ಯ ನಂಘ್ರಿ ಪೂಜಿಸುವ ಸಜ್ಜನರ ಕೈಯಾ ಪಿಡಿದು ನೀ ಜೋಕೆ ಮಾಡುವುದು ಜೀಯಾ ನೀನೆ ಈ ಜಗತ್ರಯ [ಕೆ] ಗುರುವರ್ಯಾ 10
--------------
ಜಗನ್ನಾಥದಾಸರು