ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಡೆಯಿಲ್ಲದೀ ಭವಾಂಬುಧಿಯ ದಾಂಟುವೊಡೆ ಜಗ ದೊಡೆಯ ಶ್ರೀಕೃಷ್ಣನೊಬ್ಬನ ನಂಬು ಮರುಳೆ ಪ ನೆಲೆಯಾದುದಿಲ್ಲ ತಾಯುದರ ಬಾಲತ್ವವಿದು ನೆಲೆಯಾದುದಿಲ್ಲ ಜವ್ವನವೆಂಬುದೂ ನೆಲೆಯಾದುದಿಲ್ಲ ಜರೆಯು ಚಕ್ಷುರಾಜಿಗಳು ಒಡಲು ನಿನಗೆ ಮರುಳೆ 1 ಹುಟ್ಟಿದನಳಿದನೇಕೆ ಜೀವ ನಿಜ ಜನನಿಯಲಿ ಹೊಟ್ಟೆಯಲಿ ಹೊತ್ತು ಹೆತ್ತುದಕೈಸಲೆ ಕೊಟ್ಟುಕೊಂಡುದಕೆ ಪಡೆದಿತ್ತು ಸುತರೆಂದೆನಿಸಿ ನೆಟ್ಟನೈದುವರು ನಿನಗೇನಹರು ಮರುಳೆ 2 ನೀನಳಿದ ಬಳಿದ ಸತಿಸುತರಿಗೇನ್ಹೇಳುವೆ ಏನಹರು ನಿನಗವರು ಮೃತವಾದ ಬಳಿಕಾ ದೀನನಹೆ ಬಯಲಮಮತೆಗಳೆಂದು ತಿಳಿದುಕೊ ನೀನೆತ್ತಲವರೆತ್ತಲಿಹರವರು ಮರುಳೆ 3 ಮಗನಾವ ತಂದೆಯಾವನು ಜೀವ ಜೀವರಿಗೆ ಮಗನು ತಂದೆಯು ಕರ್ಮವಾಸನೆಗಳಾ ಬಗೆಯಿಂದಲೀಶ್ವರನು ಜೀವಕೋಟಿಗಳ ಸೃಜಿಸೆ ಜಗದೊಳಾಡುವರು ನಿನಗೇನಹರು ಮರುಳೆ 4 ಅತಿಭಕ್ತನೆಂದು ವೈಕುಂಠ ವೇಲಾಪುರದ ಪತಿ ಅರ್ಜುನಗೆ ನಿರೂಪಿಸಿದರ್ಥವ ಮತಿಗೆಟ್ಟು ಬಿಟ್ಟು ನಾನಾ ದೈವದಡಿಗಳಿಗಾ ನತನಾಗಿ ಸಂಸಾರಿಯ[ಹೆ] ಇದೇಕೆ ಮರುಳೆ 5
--------------
ಬೇಲೂರು ವೈಕುಂಠದಾಸರು
ಪೊರೆಯಮ್ಮ ವಾಣಿ ತರುಣಿ ವಿಧಿರಾಣಿ ರಮಣಿ ಪ. ಸರಸ್ವತಿ ನಿನ್ನನೇ ನೆರೆ ಭಜಿಸುತ್ತಿಹ ಅರಿಯದೀ ತರಳರಂ ಕರುಣದೊಳೀಕ್ಷಿಸು 1 ದೇವಿ ನಿನ್ನಿಂದ ಲೇ ಜೀವಕೋಟಿಗಳಿಂತು ಜೀವಿಪುದಾರೆಯೆ ದೇವಿ ಸಂಜೀವಿನಿ 2 ಜ್ಞಾನಾಧಿದೇವತೆ ಆನಂದಪ್ರದಾತೆ ಮುನಿಜನ ಸಂಸ್ತುತೆ ವನಜಜದಯಿತೇ 3 ಸದಯ ನೀಂ ದಯೆಗೈಯೆ ಸದಸದ್ವಿಚಾರಮಂ ಹೃದಯ ಸಂಶುದ್ಧಿಯಂ ಪದುಳಮಂ ಧೈರ್ಯಮಂ4 ದೇಶಸೇವೆಗೆಂದು ಆಶಿಪರೊಳಿಂದು ಶೇಷಗಿರೀಶನ ದಾಸರೆನಿಸೆಂದು 5
--------------
ನಂಜನಗೂಡು ತಿರುಮಲಾಂಬಾ
ಭವ ನಿಂದುದಗಣಿತ ಕರ್ಮವೆಂದು ನಿನ್ನವನೆನಿಪುದೊ ಹರಿಯೇ ಅ.ಪಸೂಸುತಿದೆಯಜ್ಞಾನ ಮಾಸುತಿದೆ ಸುಜ್ಞಾನದೋಷಗಳು ಬಹುವಾಗಿವೆ ಹರಿಯೇಆಶೆಯೆಂಬುದಕಂತವಿಲ್ಲ ಬಹುಬಗೆ ತರದಪಾಶದಲಿ ಬಿಗಿವಡೆದೆನೋ ಹರಿಯೇಈಶ ನಿನ್ನಯ ಮಾಯೆಯೆಂಬ ಬಲು ಹುರಿ ಬಲೆಯುಬೀಸಿ ಸೋವುತ್ತಲಿದೆಕೋ ಹರಿಯೇಕ್ಲೇಶಸಾಗರದಲ್ಲಿ ಮುಳುಗಿ ತಡಿಯನು ಕಾಣೆವಾಸುದೇವ ಕಡೆಹಾುಸೋ ಹರಿಯೇ 1ಆವರಣ ವಿಕ್ಷೇಪವೆಂದೊಂದು ಶಕ್ತಿ ತಾನಾವರಿಸಿ ಬ್ರಹ್ಮಾಂಡವ ಹರಿಯೇತೀವಿಕೊಂಡೊಳಹೊರಗೆ ವಿಕ್ಷೇಪ ಶಕ್ತಿ ತಾಜೀವಕೋಟಿಗಳ ಸೃಜಿಸಿ ಹರಿಯೇಠಾವುಗಾಣದ ತೆರದಿ ಬಹುವಿಧದ ಕರ್ಮದಲಿಜೀವರನು ಬಂಧಿಸಿಹುದು ಹರಿಯೇಈ ವಿಧದ ಮಾಯೆ ತಾ ಯೋಗಿಗಳಿಗಸದಳವುದೇವ ಕೃಪೆಮಾಡಿ ಸಲಹೋ ಹರಿಯೇ 2ಮೂರು ಗುಣ ಮೂಲದಲಿ ಮೂರು ಕರ್ಮಗಳುದಿಸಿಮೂರಾರು ಕವಲಾದುದೋ ಹರಿಯೇಸಾರಿ ವೃಕ್ಷವ ಬಳ್ಳಿ ಮೀರಿ ಮುಸುಕಿದ ತೆರದಿತೋರದಿದೆ ನಿನ್ನ ನಿಜವ ಹರಿಯೇಬೇರುವರಿದಿಹ ಕರ್ಮಲತೆಯ ಜಾರಿಸಿ ಗುಣವಮೀರುವ ಉಪಾಯವೆಂತೋ ಹರಿಯೇಸೇರಿದೆನು ನಿನ್ನ ಚರಣವನು ವೆಂಕಟರಮಣದಾರಿಯನು ತೋರಿ ಸಲಹೋ ಹರಿಯೇ 3ಕಂ||ಗುರುವಾರದರ್ಚನೆಯನಿದಗುರುವಾಗಿಯೆ ಪೇಳ್ದೆ ನೀನೆ ಮೂಢನ ಸಲಹಲ್‍ಗುರುಸೇವೆಯೆಂತೊ ತಿಳಿಯದುಗುರುವರ ಸಂಗತಿಯನರಿಯೆ ನೀನೇ ಗತಿಯೈಓಂ ದಾಮೋದರಾಯ ನಮಃ
--------------
ತಿಮ್ಮಪ್ಪದಾಸರು
ಕೊಂಡಾಡಲಳವೆ ಕರುಣಾನಿಧಿ ಕಾವನದಂಡ ಸಂಜಿತ ಗುರುಸತ್ಯನಾಥರ ಕೀರ್ತಿ ಪ.ಶ್ರೀ ವಾಸುದೇದ ತಾ ಭಾವಿಸಿ ಚಿತ್ತದಿಭೂವಲಯಕೆ ಸುಜನಾವಳಿಗಾಶ್ರಯವೀವೆನೆನುತ ಶುಭದೇವವೃಕ್ಷವನಟ್ಟೆಈವರ ಪರಮಹಂಸಾವಲಂಬನ ತಾಳ್ದುಶ್ರೀ ವಾಯುಮತದಿ ತತ್ವವೆ ಲಕ್ಷಿಸುವ ಪ್ರೇಕ್ಷಾವಂತರಾಗಿಹ ಜೀವಕೋಟಿಗಳ ಕೃಪಾವಲೋಕನದೊಳಿಟ್ಟ ಅಪೇಕ್ಷಿತಭಾವಾರ್ಥಗಳನೆ ಕೊಟ್ಟು ನಂಬಿದಸೇವಕರ್ಗಭಯವಿಟ್ಟ ಗುರುರಾಯನ 1ಭಾನುತೋರುವ ಮುನ್ನೆ ಸ್ನಾನವ ಮಾಡಿ ಸುಮ್ಮಾನದಿಂದಲಿ ನೇಮ ಮೌನದೊಳಿದ್ದು ಶ್ರೀಮಾನಾಥನಂಘ್ರಿಯ ಮಾನಸದಲಿ ದೃಢಧ್ಯಾನದಿಂ ಬಲಿದುಗೀರ್ವಾಣಭಾಷ್ಯಾಮೃತಪಾನವ ಜನರಿಗೆ ಸಾನುರಾಗದಲಿತ್ತುನಾನಾ ತತ್ವಾರ್ಥ ವ್ಯಾಖ್ಯಾನವ ಜನರಿಗೆತಾನಂದು ಬೋಧಿಸಿದತಾಮಸಜ್ಞಾನವನೋಡಿಸಿದ ಆ ಕಾಮಧೇನುವೆನಿಸಿ ಎಸೆದ ಗುರುರಾಯನ 2ಭೇದವರ್ಜಿತ ಮತ್ತವಾದ ಕುಂಭಿಯಕುಂಭಭೇದಕಸಿಂಗಹಲಾಧಾರಿಹರಿಸಗುಣೋದರ ಸಾಕಾರಮಾಧವಹರನುತಪಾದನೆನುತಸೂತ್ರವೇದ ಪುರಾಣದಿಸಾಧಿಸಿ ಕುತ್ಸಿತವಾದಿಗಳಪಾದಾಕ್ರಾಂತರ ಮಾಡಿ ಮೇದಿನಿಯೊಳು ಜಯನಾದಭೇರಿಯ ಹೊಯಿಸಿದ ಮುಕ್ತಿಯಸಾಧನ ತೋರಿಸಿದ ಭ್ರಷ್ಟಂಕುರೋದಯ ಮಾಣಿಸಿದ ಗುರುರಾಯನ 3ಕಾಲಕಾಲಕೆ ಧರ್ಮ ಪಾಲಿಸಿ ಯಾಚಕಜಾಲಕೆ ಮನ್ನಿಸಿ ಮೂಲ ಮಂತ್ರೋಪದೇಶಪೇಳಿ ಪೂತರ ಮಾಡಿ ಹಾಲು ಸಕ್ಕರೆ ತುಪ್ಪಹೋಳಿಗ್ಯನ್ನವನಿಕ್ಕಿ ಮೇಲೆ ದ್ರವ್ಯವನಿತ್ತುಪಾಲಿಸಿ ತಾಯಿತಂದೆಗಳ ಹಂಬಲ ಬಿಡಿಸಿ ಲೋಕದವರಿಗಭಿಲಾಷಾ ಪೂರ್ಣಾನುಕೂಲಚಿಂತಾಮಣಿಯ ಯತಿಕುಲಮೌಳಿಮಕುಟಮಣಿಯ ವಿರತಿಭಾಗ್ಯಶಾಲಿ ಸುಗುಣಖಣಿಯ ಗುರುರಾಯನ 4ಮಣ್ಣು ವನಿತೆಸತಿಹೊನ್ನಿನ ಬಯಕೆಯಘನ್ನತೆಜರಿದುಪಾವನ್ನಮಹಿಮನಾದಚೆನ್ನ ಸತ್ಯನಿಧಿ ತೀರಥನ್ನ ಕರೋದ್ಭವತನ್ನಾಕಷೆಂಬುವಭಿನ್ನವಚಂದ್ರಿಕೆಯನ್ನು ಪ್ರಕಾಶಿಸಿ ಪೂರ್ಣಚಂದ್ರಮನಂತೆಉನ್ನತ ಕಳೆಯುತ ಚಿನ್ಮಯ ವರದ ಪ್ರಸನ್ನ ವೆಂಕಟಾಧಿಪನ ಭಜಿಸಿನಿತ್ಯಧನ್ಯನೆನಿಸುತಿಪ್ಪನ ಸತ್ಯಾಭಿನವರನ್ನನ ಪೊರೆದÀಪ್ಪನ ಗುರುರಾಯನ 5
--------------
ಪ್ರಸನ್ನವೆಂಕಟದಾಸರು