ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡೋ ಇನ್ನು ಬಿಡೋ ಇನ್ನು ಪ ಕಡೆಗಾದರೂ ನಿನ್ನ ಹುಡುಗು ಬುದ್ಧಿಯನು ಅ.ಪ. ಜೀರ್ಣವಾಯಿತು ದೇಹವು ನಿನಗೆ ಜೀರ್ಣವಾಗಲಿಲ್ಲ ನೇಹವು ಕೊನೆಗೆ 1 ವಾಹನ ಮೃಷ್ಟಾನ್ನಗ ಳಾ ಮಹನೀಯನೊಲಿಸವೊ ಮೂಢ 2 ಸ್ನಾನ ದಾನ ಅಧ್ಯಯನಾದಿಗಳಿಗೆ ಶ್ರೀನಿವಾಸ ತಾನೊಲಿಯನೊ ಬರಿದೆ 3 ತಾಳ ಮೇಳ ಸಂಗೀತಾದಿಗಳನು ಕೇಳನು ಪ್ರೇಮದ ಭಾವವಿಲ್ಲದೊಡೆ 4 ಚಿತ್ತ ಮಲಿನವಿದ್ದು ಸತ್ಕಾರವಗೈಯ್ಯೆ ಆಪ್ತ ಕಾಮ ತಾ ತೃಪ್ತಿಯ ಪೊಂದನು 5 ಶ್ರೀಧರ ತಾ ದಯದಿಂದೊಲಿದಲ್ಲದೆ ಸಾಧನ ಮಾತ್ರಕ್ಕೆ ಒಲಿಯಲು ಸಾಧ್ಯವೆ 6 ನಳಿನನಯನನಾಜ್ಞೆಯ ನೀ ಪಾಲಿಸೆ ಒಲಿವನು ನಿಜವಿದು ನಲಿಯುತ ನಿನಗೆ 7 ಮೃಡವಂದಿತ ಶ್ರೀ ಕರಿಗಿರೀಶನೊಳ್ ದೃಢ ಭಕ್ತಿಯನಿಡು ಬಿಡದೆ ಪೊರೆವನೊ 8
--------------
ವರಾವಾಣಿರಾಮರಾಯದಾಸರು