ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಾಹಿ ತ್ರಾಹಿ ಎನ್ನಿರೊ ತ್ರೈಲೋಕ್ಯದೊಡಿಯಗೆ ತ್ರಾಹಿ ತ್ರಾಹಿ ಎನ್ನಿರೊ ತಾರಕ ಬ್ರಹ್ಮಗೆ ಧ್ರುವ ಕಾಮ ಕ್ರೋಧ ಸುಟ್ಟು ಹೋಳಿಯಾಡುವ ಬನ್ನಿರೊ ಪ್ರೇಮ ಪ್ರೀತಿಯಿಂದ ಕುಣಿದಾಡುವ ಬನ್ನಿರೊ 1 ಭೇದವಳಿದು ಸಾಧು ಜನರ ಕೂಡಿಕೊಂಬ ಬನ್ನಿರೊ ಮದ ಮತ್ಸರವ ಬೂದಿ ಮಾಡಿಚೆಲ್ಲುವ ಬನ್ನಿರೊ 2 ಏಕರಂಗವಾಗಿ ಓಕುಳ್ಯಾಡವ ಬನ್ನಿರೊ ಜೀಕಳಿಯ ಮಾಡಿ ಮಾಯ ಮೋಹ ಎಸುವ ಬನ್ನಿರೊ 3 ಎಲ್ಲರೊಳಗಿಹ ನಮ್ಮ ಪುಲ್ಲನಾಭ ಚಲುವನೊ ಬಲ್ಲ ಮಹಿಮನಿಗೆ ನೆಲೆಯ ನೋಡಿ ಒಲಿವನೊ 4 ಹೋಳಿಯಾಡಿದನು ನೋಡಿ ಇಳಿಯೊಳಗ ಮಹಿಪತಿಯು ಕಳೆದು ಕಲ್ಪನೆ ಕೋಟಿಲಿಂದ ಗೆದ್ದ ನೋಡಿರೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾಗುವ ತೆಂಗಿನ ಮರನೋಡ ರಂಗನ ಅಂಘ್ರಿಗೆರಗುವಂತೆ ಸಖಿಯೆ ಪ. ಶೃಂಗಾರದ ವನ ನೋಡ ಪಂಚರಂಗದ ಗಿಳಿ ನೋಡ ಮಂಗಳ ಸ್ವರ ನೋಡ ಕೋಕಿಲ ರಂಗನ ಪಾಡುತಲಿವೆ 1 ಮೃಗ ನೋಡ ಕಸ್ತೂರಿ ಹರಿಪಾದಕೆ ಆತುರದಿ ಬರುತಲಿವೆ 2 ನೆಲ್ಲಿ ನೇರಲೆ ನೋಡ ಪುಷ್ಪ ಚೆಲ್ಲಿ ನಲಿಯುತಲಿವೆ ಮಲ್ಲ ಮಲ್ಲಿಗೆ ನೋಡ ಹರಿಪಾದ ಪಲ್ಲವಕೆ ಎರಗುತಿವೆ 3 ಸಾರ ಪಕ್ಷಿಗಳ ನೋಡ ಹರಿಗುಣ ಸಾರುತ ನಲಿಯುತಿವೆ4 ನಾಗ ಪುನ್ನಾಗ ನೋಡ ಸಂಪಿಗೆ ಪರಿಮಳ ನೋಡ ಹಾಂಗೆ ಕ್ಯಾದಿಗೆ ನೋಡ ಹರಿಪಾದ ಕ್ಹೋಗಿ ಎರಗುತಿವೆ 5 ಕುಸುಮ ನೋಡ ತುಳಸಿ ವಿರಾಜಿಸುªವನÀ ನೋಡ ಸಹಜದವನವ ನೋಡ ರಂಗನ ಪೂಜೆಗೆ ಒದಗುವಂತೆ 6 ಮಂದ ಮಾರುತ ನೋಡ ಪರಿಮಳ ತಂದು ಬೀಸುತಲಿದೆ ಸುಂದರ ಲತೆ ನೋಡ ರಂಗಗೆ ಫಲ ತಂದು ಅರ್ಪಿಸುವಂತೆ7 ಓಕುಳಿ ಕುಣಿನೋಡ ನಿಲ್ಲಿಸಿದ ಜೀಕಳಿ ಗೊಂಬೆಗಳ ಲೋಕ ನಾಯಕ ಹರಿಗೆ ಚಿಮ್ಮುತ ಹಾಕುವ ಪರಿಯಂತೆ 8 ಸಾಲು ಮರಗಳ ನೋಡ ರಂಗಗೆ ಫಲ ಮೇಲಾಡಿ ಮೆಲಿಸುವಂತೆ ಲಾಲಿಮಣಿಯ ನೋಡ ರಾಮೇಶನ ವಾಲೈಸಿ ಕರೆಯುತಿವೆ9
--------------
ಗಲಗಲಿಅವ್ವನವರು