ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನುದೋಷ ರಾಶಿ ನಾಶ ಮಾಡು ಶ್ರೀಶ ಕೇಶವ ಪ ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನಚರಣ ಸ್ಮರಣೆ ಕರುಣಿಸಯ್ಯ ನಾರಾಯಣ1 ಕಲುಷ ಮಾಧವ 2 ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನುಇಂದು ಭವದ ಬಂಧ ಬಿಡಿಸು ತಂದೆ ಗೋವಿಂದನೆ 3 ಭ್ರಷ್ಟನೆನಿಸ ಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ 4 ಪಾದ ಪೂಜೆ ಮುದದಿ ಗೈವೆನಯ್ಯ ನಾನುಹೃದಯದೊಳಗೆ ಒದಗಿಸಯ್ಯ ಮಧುಸೂದನ 5 ಕವಿದುಕೊಂಡು ಇರುವ ಪಾಪ ಸವೆದು ಹೋಗುವಂತೆ ಮಾಡಿಜವನ ಬಾಧೆಯನ್ನು ಬಿಡಿಸೊ ಘನ ತ್ರಿವಿಕ್ರಮ 6 ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ 7 ಸದನ ಮಾಡು ಮುದದಿ ಶ್ರೀಧರ 8 ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದುಹುಸಿಗೆ ನನ್ನ ಹಾಕದಿರೋ ಹೃಷಿಕೇಶನೆ 9 ಅಬ್ಧಿಯೊಳಗೆ ಬಿದ್ದು ನಾನು ಒದ್ದುಕೊಂಬೆನಯ್ಯ ಭವದಿಗೆದ್ದು ಪೋಪ ಬುದ್ಧಿ ತೋರೊ ಪದ್ಮನಾಭನೆ10 ಕಾಮಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸುಶ್ರೀಮಹಾನುಭಾವನಾದ ದಾಮೋದರ 11 ಪಂಕಜಾಕ್ಷ ನೀನು ಎನ್ನ ಮಂಕುಬುದ್ಧಿ ಬಿಡಿಸಿ ನಿನ್ನಕಿಂಕರನ್ನ ಮಾಡಿಕೊಳ್ಳೊ ಸಂಕರುಷಣ12 ಏಸು ಜನ್ಮ ಬಂದರೇನು ದಾಸನಲ್ಲವೇನೊ ನಿನ್ನಘಾಸಿ ಮಾಡದಿರೋ ಎನ್ನ ವಾಸುದೇವನೆ 13 ಬುದ್ಧಿ ಶೂನ್ಯನಾಗಿ ನಾನು ಕದ್ದ ಕಳ್ಳನಾದೆನಯ್ಯತಿದ್ದಿ ಹೃದಯ ಶುದ್ಧಿ ಮಾಡೊ ಪ್ರದ್ಯುಮ್ನನೆ 14 ಜನನಿ ಜನಕ ನೀನೆ ಎಂದು ಎನುವೆನಯ್ಯ ದೀನಬಂಧುಎನಗೆ ಮುಕ್ತಿ ಪಾಲಿಸಿಂದು ಅನಿರುದ್ಧನೆ 15 ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ನೇಮಇರಿಸು ಚರಣದಲ್ಲಿ ಕ್ಷೇಮ ಪುರುಷೋತ್ತಮ 16 ಅಧೋಕ್ಷಜ 17 ಚಾರುಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆಭಾರ ಹಾಕಿ ಇರುವೆ ನಿನಗೆ ನಾರಸಿಂಹನೆ 18 ಸಂಚಿತಾರ್ಥ ಪಾಪಗಳನು ಕಿಂಚಿತಾದರುಳಿಯದಂತೆಮುಂಚಿತಾಗಿ ಕಳೆದು ಪೊರೆಯೊ ಸ್ವಾಮಿ ಅಚ್ಯುತ19 ಜ್ಞಾನ ಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನಹೀನ ಬುದ್ಧಿ ಬಿಡಿಸೊ ಮುನ್ನ ಜನಾರ್ದನ 20 ಜಪತಪಾನುಷ್ಠಾನ ನೀನು ಒಪ್ಪುವಂತೆ ಮಾಡಲಿಲ್ಲತಪ್ಪ ಕೋಟಿ ಕ್ಷಮಿಸಬೇಕು ಉಪೇಂದ್ರನೆ 21 ಮೊರೆಯನಿಡುವೆನಯ್ಯ ನಿನಗೆ ಸೆರೆಯ ಬಿಡಿಸು ಭವದ ಎನಗೆಇರಿಸು ಭಕ್ತರೊಳಗೆ ಪರಮಪುರುಷ ಶ್ರೀಹರೇ22 ಪುಟ್ಟಿಸಲೇ ಬೇಡವಿನ್ನು ಪುಟ್ಟಿಸಿದಕೆ ಪಾಲಿಸಿನ್ನುಇಷ್ಟು ಬೇಡಿಕೊಂಬೆ ನಾನು ಶ್ರೀಕೃಷ್ಣನೆ23 ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವರಅರ್ತಿಯಿಂದ ಕಾಯದಿರನು ಕರ್ತೃ ಕೇಶವ 24 ಮರೆತು ಬಿಡದೆ ಹರಿಯ ನಾಮ ಬರೆದು ಓದಿ ಕೇಳುವರಿಗೆಕರೆದು ಮುಕ್ತಿ ಕೊಡುವ ಬಾಡದಾದಿಕೇಶವ 25
--------------
ಕನಕದಾಸ
ಪರಬೊಮ್ಮನ ಧ್ಯಾನಿಸು ಕಂಡ್ಯಾ ಸೋಹಂ ಎನುತಿರಕಂಡ್ಯಾ ಪ ಒಂದು ನಿಮಿಷ ಸುಖವಿಲ್ಲ ವಿಧಿ ಏಳೇಳೆಂದು ಎಳೆವರಲ್ಲ ಗೋವಿಂದನೆ ತಾ ಬಲ್ಲ 1 ಯೋನಿಯೊಳಗೆ ಜನಿಸಿ ನಾನದನೆಲ್ಲವ ನುಳಿದು ಈಗಳು ನರಮಾನವನೆಂದೆನಿಸಿ ಏನೋ ಪುಣ್ಯದಿ ಪುಟ್ಟಿದೆ ನಿಲ್ಲಿ ನಿಧಾನದಿ ಸಂಚರಿಸಿ ಆನಂದ ಮಯನೆನಿಸಿ 2 ಎಲ್ಲಾ ಜನ್ಮದೊಳ್ಳಿತು ನೀನಿದರಲ್ಲಿ ಸಾಧಿಸುಗತಿಯಾ ಹೊಲ್ಲದ ತನುವಿದ ನಂಬಿ ನೀ ಕೆಡದಿರು ಪೊಳ್ಳೆ ನಿನಗೆ ತಿಳಿಯ ಬಲ್ಲಡೆ ಜಿಹ್ವೆಯೊಳಗೆ ನೀ ನಿರಂತರ ಸೊಲ್ಲಿಸು ಶ್ರೀಹರಿಯ ಲಕ್ಷ್ಮೀನಲ್ಲನ ಪೋಗು ಮರೆಯ 3
--------------
ಕವಿ ಪರಮದೇವದಾಸರು
ಭವದ ಬಂಧವಿನ್ನೆನಗೆ ಯಾಕೆ ಭವಹರಣ ನಾಮ ಎನ್ನ ಜಿಹ್ವೆಯೊಳಗೆ ಇರುತಿರಲು ಪ ದುರಿತ ಭೀತಿ ಯಾಕೆ ಎನಗೆ ಕರ್ಮದ ಲೇಪವ್ಯಾಕೆ ಎನಗೆ ಕುಲ ಚಲಗಳ್ಯಾಕೆ ಎನಗೆ ಮಡಿಯು ಮೈಲಿಗ್ಯಾಕೆ ಅನುದಿನದಿ ಪಾವನಾತ್ಮಕನ ನೆನವು ಎನ್ನ ಮನದೊಳಿರಲು 1 ನಷ್ಟ ಪ್ರಪಂಚಂಟಿನ್ನ್ಯಾತಹೆÉ ಬಿಟ್ಟ ಬಡತನ ತಂತಿನಗ್ಯಾಕೆ ಹುಟ್ಟು ಸಾವು ಕಷ್ಟ ಮತ್ತ್ಯಾಕೆ ಕೆಟ್ಟ ಯಮನ ಅಂಜಿಕಿನ್ನ್ಯಾಕೆ ಸೃಷ್ಟಿ ಕರ್ತನ ಶಿಷ್ಟಪಾದ ನಿಷ್ಠೆಯೆನ್ನೊಳು ಗಟ್ಟಿಯಿರಲು 2 ನಿತ್ಯ ನೇಮ ಪೂಜೆ ಯಾಕೊ ಮತ್ತೆ ಜಪ ತಪವು ಯಾಕೊ ನಿತ್ಯ ನಿರ್ಮಲಾನಂದ ರೂಪಿ ಸತ್ತು ಚಿತ್ತನಂದದಾತ ಮುಕ್ತಿದಾಯಕ ಶ್ರೀರಾಮ ಪಾದ ಭಕ್ತನಾಗಿ ನಾ ಮೆರೆಯುತಿರಲು 3
--------------
ರಾಮದಾಸರು
ಇನ್ನೇಕೆ ಯಮನ ಬಾಧೆಗಳು? |ಎನ್ನ ಜಿಹ್ವೆಯೊಳಗೆ ಹರಿನಾಮವಿರಲು ಪಪತೀತ ಪಾವನನೆಂಬ ನಾಮ-ಸಕಲ |ಶ್ರುತಿತತಿಗಳಿಗೆಲ್ಲ ನಿಲುಕದೀ ನಾಮ ||ಕ್ರುತುಕೋಟಿ ಫಲ ಒಂದೇ ನಾಮ-ಸದ್ |ಗತಿಗೆ ಸಂಗಡ ಬಾಹೋದಲೆ ದಿವ್ಯನಾಮ1ಮುನ್ನ ಪ್ರಹ್ಲಾದನೆ ಸಾಕ್ಷಿ - ನಮ್ಮ |ಕನ್ಯಾಶಿರೋಮಣಿ ದ್ರೌಪದಿ ಸಾಕ್ಷಿ ||ಚೆನ್ನ ಅಜಮಿಳನೊಬ್ಬ ಸಾಕ್ಷಿ ಆ |ಉನ್ನಂತ ಲೋಕವಾಳುವ ಧ್ರುವ ಸಾಕ್ಷಿ 2ಹದಿನಾಲ್ಕು ಲೋಕವಾಳುವ - ನಮ್ಮ |ಮದನಜನಕನಾಗಿ ಮಹಿಮೆ ತೋರುವ ||ಪದುಮನಾಭನಾಗಿ ಮೆರೆವ- ನಮ್ಮ |ಪುರಂದರವಿಠಲನ ಹರುಷದಿ ಕರೆವ 3
--------------
ಪುರಂದರದಾಸರು