ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣ ಕಲಿಯ ಕಾಯ್ದ ಕರುಣಿ ಜಿಷ್ಣುಸಖನೆ ಕೃಷ್ಣನೆ ಪ. ಕೃಷ್ಣ ಪೊರೆಯೊ ಎನ್ನ ವಿಷಯತೃಷ್ಣೆಯಿಂ ಸಾಯಲೆ ದಮ್ಮಯ್ಯ ಅ.ಪ. ಹಿಂದೆ ಮಾಡಿದ ಕರ್ಮದಡವಿಯೊಂದಿಗೆ ಸವರುವೆನೊ ಗೋ-ವಿಂದ ನಿನ್ನ ಕರುಣಸುಧೆ ಇನ್ನೆಂದು ಪಡೆದು ಸುಖಿಪೆನೊಇಂದು ಮಾಡಿದ ಅಘಗಳು ಬಲು ದಂದುಗಕೊಳಗಾದೆ ನೀನುಕುಂದು ಕುಜನದೂರ ನಿನ್ನ ಕಂದನೆಂದು ಸಲಹೊ ತಂದೆ1 ಕಾಮವೆನ್ನ ಕಮಲನಾಭ ಸೀಮೆಗಾಣಲಿಯ್ಯದೊ ನಿ-ಸ್ಸೀಮಮಹಿಮ ಕ್ರೋಧ ಎನ್ನ ಸಾಮವ ನಡುಗಿಸುತಿದೆಭ್ರಮಿತನಾದೆ ಬಲುಪ್ರೇಮವ ತಪ್ಪಿಸಿ ಸುರಕ್ತಾನು ಹೆ ದೈವ ಎನ್ನಆ ಮಹಾಭಯವ ನಿವಾರಿಸೊ2 ಅನುದಿನ 3
--------------
ವಾದಿರಾಜ
ಜಿತಮನವ ನೀಡೆನಗೆ ಜಿಷ್ಣುಸಖನೆ ರತಿಪತಿಪಿತ ನಿನ್ನ ಹಿತದಿ ಭಜಿಸುವೆನೊ ಪ. ದುಷ್ಟ ಇಂದ್ರಿಯಗಳು ಕೆಟ್ಟ ವಿಷಯಗಳಲ್ಲಿ ಕಟ್ಟ್ಟೆ ಎನ್ನಯ ಮನವ ಸೆಳೆಯುತಿಹವೊ ಕೃಷ್ಣಮೂರುತಿ ನೀನೆ ದೃಷ್ಟಿಯಿಂದಲಿ ನೋಡಿ ಒಟ್ಟುಗೂಡಿಸಿ ನಿನ್ನ ಪಾದದಲ್ಲಿಡಿಸೊ 1 ಎಂಟು ಜನ ದುಷ್ಟರು ಆರು ಜನ ಕಳ್ಳರು ಕಂಟಕರಾಗಿನ್ನು ಕಾಡುತಿಹರೋ ಎಂಟುದಳಗಳಿಪ್ಪ ನೆಂಟರೆನಗಾಗರೊ ಎಂಟೆರಡು ಇಂದ್ರಿಯವ ಬಂಧನದೊಳಿರಿಸೊ 2 ಮೂರು ತಾಪಗಳಿಂದ ಮೂರು ಗುಣದೊಳು ತಿರುಗಿ ಮೂರು ಮಾರ್ಗವ ಕಾಣೆ ಮುರವೈರಿಯೆ ಮೂರು ಅವಸ್ಥೆಗಳ ವಿವರವರಿಯದ ಎನಗೆ ದಾರಿ ತೋರಿ ಸಲಹೊ ಕಾರುಣ್ಯನಿಧಿಯೆ 3 ಡಿಂಬ ಮಧ್ಯದಲಿರುವ ಅಂಬರದಲಿ ನಿನ್ನ ಬಿಂಬರೂಪವ ತೋರೊ ಶಂಭು ಸಖನೆ ಅಂಬುಜನಾಭ ಎಪ್ಪತ್ತೆರಡು ಸಾಹಸ್ರ ತುಂಬಿದ ನಾಡಿಯೊಳು ರೂಪಗಳ ತೋರೊ4 ಮನದಲ್ಲಿ ನೆಲಸಿಹನೆ ಮನುಶಬ್ದವಾಚ್ಯನೆ ಮನದಿಂದ ಭಿನ್ನನೆ ಮನಪ್ರೇರಕ ಮನವ ನಿನ್ನಲಿ ನಿಲಿಸಿ ಅನುಗಾಲ ಸಲಹುವುದು ಚಿನುಮಯನೆ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ಪುಂಡರೀಕನಯನ ಕೃಷ್ಣ ಪ ಕಂಡೆನಿಂದು ನಿನ್ನ ಬಹುದಿನ ಬಳಿಕ ಬ್ರ ಉದ್ದಂಡ ಮಹಿಮನೆ ಅ.ಪ ಪುಟ್ಟಿದಂದಿನಿಂದಾ ಕಷ್ಟವಪಟ್ಟೆನು ಗೋವಿಂದ ಸೃಷ್ಟಿಯೊಳಗೆ ನಾ ಪುಟ್ಟಿದನೇತಕೆ ಜಿಷ್ಣುಸಖನೇ ಎನ್ನ ಕೊನೆಗಾಣೆ 1 ಕರಿಗಿರೀಶ ನಿನ್ನ ಚರಣವ ನೆರೆ ನಂಬಿಹರನ್ನ ಪರಿ ಪೊರೆ ಕಂಸಾರಿಯೆ ಸ್ಥಿರ ಸಂಕಲ್ಪನೆ ಕರುಣಾಶರಧಿಯೆ 2
--------------
ವರಾವಾಣಿರಾಮರಾಯದಾಸರು
ಯತಿಗಳ ಸ್ತುತಿ ಮಧ್ವಮುನಿಯೆ ಎನ್ನ ಉದ್ಧರಿಸಿನ್ನ ಪ. ಸದ್ಗುರುವೆ ನಿನ್ನ ಪದ್ಮಪಾದಗಳಿಗೆ ಕರ ಮಣಿ ಅ.ಪ. ವರಕಲ್ಪ ಕಲ್ಪದಲಿ ಹರಿಯ ಮೆಚ್ಚಿಸಿ ಸಿರಿವರನಲಿ ಜನಿಸಿ ವಾಯುವೆಂದೆನಿಸಿ ಸುರರೆಲ್ಲ ಮೊರೆಯಿಡೆ ಹರಿಯವತರಿಸಿ ಹರಿಯ ಸೇವೆಗೆ ನೀ ಮಾರುತಿ ಎನಿಸಿ ಶರಧಿ ಲಂಘಿಸಿ ಉಂಗುರ ಸೀತೆಗೆ ಇತ್ತು ದುರುಳನ ಪುರ ಸುರಮುಖನಿಗರ್ಪಿಸಿದೆ 1 ಚಂದ್ರವಂಶದಲಿ ಬಂದ್ಯೊ ಬಲಶಾಲಿ ನಂದಕಂದನ ಲೀಲೆ ಅಂದ ಪಾಡುತಲಿ ಬಂದಿತು ಕಲಹ ಅಲ್ಲಿ ದ್ವಂದ್ವ ಭಾಗದಲಿ ಅಂದು ಕೌರವರಲಿ ನಿಂದ್ಯೊ ದ್ವೇಷದಲಿ ಇಂದುಮುಖಿಗೆ ಸೌಗಂಧಿಕ ಇತ್ತು ಕುರು ನಂದನ ವಂಶವನಂದು ಛೇದಿಸಿದೆ 2 ದುರುಳರೆಲ್ಲರು ಬಂದು ಕಲಿಯುಗದಿ ನಿಂದು ಹರಿಯು ನರನು ಒಂದು ಅರುಹಲಿಂತೆಂದು ಸುರರೆಲ್ಲ ಬಲುನೊಂದು ಕ್ಷೀರಾಬ್ಧಿಗೆ ಬಂದು ಸಿರಿವರ ಪೊರೆಯೆಂದು ಮೊರೆಯಿಡಲಂದು ಹರಿ ನಿನಗರುಹಲು ಧರೆಯಲ್ಲಿಗೆ ಬಂದು ಸುರ ಭೂ ಶ್ರೇಷ್ಠನುದರದಲಿ ಜನಿಸಿದೆ 3 ಪರಮಾಯಿಗಳ ಮತ ತರಿದು ಕೆಡಹುತ್ತ ಹರಿ ಸರ್ವೋತ್ತಮೆನುತ ಧರೆಯೊಳ್ ಸಾರುತ್ತ ತರತಮ್ಯ ಸತ್ಯವೆನುತ ಪಂಚಭೇದೆನುತ ಸಿರಿರಮಣಗೆ ನರಭೃತ್ಯನೆನ್ನುತ್ತ ಪರಿ ಬೋಧಿüಸಿ ದುರುಳರ ಛೇಡಿಸಿ ಸರಸಿಜಾಕ್ಷಗೆ ಬಲು ಸಮ್ಮತನೆನಿಸಿ 4 ವೈಷ್ಣವಾಗ್ರಣೀ ಲೀಲೆ ಪೇಳಲಳವಲ್ಲ ಜಿಷ್ಣುಸಖನ ಲೀಲೆ ನುಡಿಸೆನಗೆ ಸೊಲ್ಲ ಕಷ್ಟಪಡುತಿಹೆನಲ್ಲ ಕರುಣವೇಕಿಲ್ಲ ಶ್ರೇಷ್ಠನೆ ಗೋಪಾಲಕೃಷ್ಣವಿಠಲ ಇಷ್ಟು ತಿಳಿಸುತ ಅಷ್ಟದಳದಲಿ ಶ್ರೇಷ್ಠದಿ ಪೂಜಿಪ ಗುಟ್ಟು ತೋರೆನಗೆ 5
--------------
ಅಂಬಾಬಾಯಿ