ಕೈಲಾಸವಾಸ ಶ್ರೀತಜನ ಶುಭಕರ ಗಿರಿಜಾ ಹೃದಯ ವಿಲಾಸ
ಹಿಮ ಹಿಮಕರ ಧವಳ ಸುಭಾವ ದೇವ ದೇವ ಪ
ಸಮಸುರುಚಿರಗ್ರೀವ ವರ ಮೇರುಶರಾಸನ
ನಿರಂಜನ ಪಾರ್ವತೀರಮಣ ಪಾಹಿ ಜಗನ್ಮಯ 1
ಹರಿಶರಜಿತ ಪುರ ನಿಕುರುಂಬ
ಜಿತಧೃತ ಮನಸಿಜ ಶಶಿಬಿಂಬ ರವಿ ಸೋಮ ವಿಲೋಚನ
ತ್ರಿಪುರಾಂತಕ ಶಂಕರ 2
ಭವ ವಿದಳನ ವರದ ಗಿರೀಶ
ಪರತರ ಶಿವ ಪರಮ ಮಹೇಶ ನಿಗಮಾಗಮ ಗೋಚರ
ಭೋಗಿ ವರ ಧೇನು ಪುರೀಶ್ವರ 3