ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೆ ನಾನೆಂಬುವ ಮಾನವಾಧಮನನ್ನು ಏನು ಮಾಡಲು ಬೇಕು ನಾನರಿಯೆನೊ ರಂಗ ಪ ದಾನವಾರಿಯೆ ಎನ್ನನೇನೆಂದರೂ ಅನಲಿ ನಾ ನಿನ್ನ ನಿಂದಿಸುವರಾನನವ ನೋಡೆನೋಅ.ಪ. ಆನೆಕಾಲಿಗೆ ಕಟ್ಟಿ ಬೀದಿಯೊಳೆಳೆಸಲೆ ಕಾನನಕೆ ಕೊಂಡೊಯ್ದು ಕೈಕಾಲು ಕಡಿಸಲೆ ಮೀನು ಮೊಸಳೆಗಳಿರುವ ಮಡುವೀಲಿ ನೂಕಿಸಲೆ ನೇಣುಗಳಿಂದಲಿ ಬಿಗಿದು ಶೂಲಕೇರಿಸಲೆ 1 ಜೀವದೊರಸೆ ಅವನ ಹೂಳಿಸಿರೆಂದ್ಹೇಳಲೆ ಹಾವುಗಳ ಹಿಂಡಿನೊಳು ನೂಕಿರೆಂದ್ಹೇಳಲೆ ನೋವು ಬಹಳಾಗಲು ಸೂಜಿಗಳಿಂದಿರಿಸಲೆ ಪಾವಕನೊಳು ಕಾಲ್ಕಟ್ಟಿ ಎತ್ತಿ ಹಾಕಿಸಲೇ 2 ಗಿರಿಯ ತುದಿಯಲಿ ನಿಲಿಸಿ ಜರಿಯೊಳಗೆ ನೂಕಿಸಲೆ ಭರದಿ ಕಣ್ಕಟ್ಟಿ ಕಾದತೈಲದೊಳಿಡಿಸಲೆ ಸಿರಿಹರಿಯೆ ಪೇಳೆಂದು ರಂಗೇಶವಿಠಲನೊಳು ತರಣಿನಂದನ ತಾನು ಬಿನ್ನೈಸಿದನಂದು 3
--------------
ರಂಗೇಶವಿಠಲದಾಸರು
ಭಾಗೀರಥಿ ದೇವಿ ನಮೋ ||ಭಾಗೀರಥಿ ದೇವಿ ಭಯ ನಿವಾರಣ ಗಂಗೆ |ಸಾಗರನರ್ಧಂಗೆ ಸುತರಂಗೆ ಪವಾಮನ ವಾಮ ಪಾದಾಂಗುಷ್ಟನಖಸೋಕಿ |ಆ ಮಹ ಬ್ರಹ್ಮಾಂಡ ಸೀಳಾಲೂ | ಭಾಗೀ..... ||ತಾಮರಸಜ ಲೋಕಕ್ಕಿಳಿದು ಮಜ್ಜನವಾಗಿ |ಸ್ವಾಮಿ ಪಾದೋದಕಳೆನಿಸಿದೆ || ಭಾಗೀ... 1ಹರಿಪಾದ ಜಲ ದೊರಕುವದು ದುರ್ಲಭವೆಂದು |ಹರ ಪ್ರಾರ್ಥಿಸಲು ಜಡೆಯೊಳು ನಿಂದೆ | ಭಾಗೀ.... ||ಮೊರೆಯಿಡೆ ದೇವತೆಗಳಿಗೆ ವೊಲಿದು ಬಂದು |ಸುರನದಿಯೆಂದು ಕರೆಸಿಕೊಂಡೇ | ಭಾಗೀ..... 2ಚನ್ನಾಗಿ ಸ್ವರ್ಗದೊಳಗೆ ನಿಂತ ಕಾರಣ |ಸ್ವರ್ನದಿಯೆಂದು ಕರೆಸಿದೆವ್ವ | ಭಾಗೀ.... ||ಉನ್ನತಧೃವಮಂಡಲಕ್ಕೆ ಪೋಗಿ ಮುಟ್ಟಿದೆ |ನಿನ್ನಾಕಾಶ ಗಂಗೆ ಎಂಬೋರೆ | ಭಾಗೀ..... 3ಭಗೀರಥ ಬಹುಕಾಲ ಪ್ರಾರ್ಥಿಸೆ ಕರುಣದಿಂ |ಜಿಗಳಿ ಹೇಮಾದ್ರಿಗೆ ನಡೆತಂದೆ | ಭಾಗೀ.... ||ಸೊಗಸಿಲಿಂ ತ್ರಿಪಥಾಗಿ ದಕ್ಷಿಣದಲಿ ಬಂದು |ಸಗರರಾಯನ ಉದ್ಧರಿಸಿದೇ | ಭಾಗೀ..... 4ತವಕದಿಂದಲ್ಲಿ ಜಹ್ನು ಋಷಿಯಲ್ಲಿ ಜನಿಸಿ ಜಾ |ಹ್ನವಿಯೆಂದು ಸ್ತುತಿಸೋರೆ ಸುರರೆಲ್ಲ | ಭಾಗೀ.... ||ಭುವನದೊಳೆಲ್ಲರು ಪುನೀತರಾಗೋದು ಸಿದ್ಧ |ತವಪಾದಸ್ಮøತಿಮಾತ್ರದಿಂದಲೀ | ಭಾಗೀ...... 5ನಂದಿನಿ ನಳಿನಿ ಸೀತಾ ಮಾಲತೀ ಮಲಹ |ಮಂದರಧರ ಪದಿ ಶ್ರೀಗಂಗೆ | ಭಾಗೀ...... ||ಸುಂದರ ತ್ರಿಪಥ ಭಾಗೀರಥಿ ಭೋಗವತಿ |ವಂದೆಜಾಹ್ನವಿತ್ರಿದಶೇಶ್ವರಿ | ಭಾಗೀ.... 6ವಸುಗಳ ಮಾತು ಲಾಲಿಸಿ ರಾಯನಲಿ ಬಂದು |ಬಸುರಿಂದ ಪಡೆದು ಉದ್ಧರಿಸಿದೆ | ಭಾಗೀ.... |ಅಸಹ್ಯ ಕರ್ಮವ್ಯಾಕೆಂದೆನಲು ಕುಮಾರನ |ಕೊಸರುತ ನಿಜರೂಪವೈದಿದೇ | ಭಾಗೀ.... 7ನಮೊ ನಮೊ ಶುಭಗಾತ್ರೆ ನಮೊ ನಮೋ ಸುಚರಿತ್ರೆ |ನಮೊ ನಮೊ ಶಂತನುವಿನ ಮಿತ್ರೆ | ಭಾಗೀ..... ||ಶಮದಮಾದಿಗಳಿತ್ತುಪೊರೆಅನುದಿನದಲ್ಲಿ |ಅಮರವಿನುತಪಾದಪಂಕಜೆ | ಭಾಗೀ.....8ಕಾಣಲು ಪಾಪಹರವು ಮುಕ್ತಿ ಅಹುದು |ಸ್ನಾನದ ಫಲವು ಬಲ್ಲವರಿಲ್ಲ | ಭಾಗೀ...... ||ಕ್ಷೋಣಿಯ ಮ್ಯಾಲುಳ್ಳ ಸರಿದ್ವರಳೆನಿಸುವೆ |ಪ್ರಾಣೇಶ ವಿಠಲನ್ನ ದಯದಿಂದ | ಭಾಗೀ..... 9
--------------
ಪ್ರಾಣೇಶದಾಸರು