ಭೂಷಿತ ವನಮಾಲ | ಶ್ರೀಲೋಲ ಪ
ಆಶ್ರಿತ ರಕ್ಷ ಕೃಪಾಲ ವಾಲ ಅ.ಪ.
ಮಕರ ಕುಂಡಲಧರ ಪೀತಾಂಬರ | ಧೃತ
ಅಕಳಂಕ ಸುಂದರ ಶ್ರೀಮನೋಹರ 1
ಜಲರುಹನಯನ ಜಲನಿಧಿಶಯನ
ವನಜಭವಾದಿ ಸಂಸೇವಿತ ಚರಣ 2
ಅನಿಮಿಷ ಪೂಜಿತ ಮುನಿಜನ ವಿನುತ
ವನರುಹ ಸಂಭವ ತಾತ ವಿಖ್ಯಾತ 3
ಕಾಮಿತಫಲದ ಸಾಮಜವರದ
ಸಾಮನಿಗಮ ಸಂಗೀತ ವಿನೋದ 4
ಮಂದ ಸುಹಾಸ ಮೇಘ ಸಂಕಾಶ
ಸುಂದರವದನ ಶ್ರೀ ಕರಿಗಿರೀಶ 5