ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆಚ್ಚದಿರು ಸಂಸಾರ ಕಡೆಗೆ ಹಾಕುವುದಲ್ಲ ಮಚ್ಚುಗೊಳಿಸುವುದು ವಿಷಯದಲಿ ಎಚ್ಚತ್ತು ಪ್ರವರ್ತಿಸು ಇನ್ನಾದರೂ ಸಿರಿ- ಅಚ್ಯುತನ ಪಾದವನು ನಂಬೊ ಪ್ರಾಣಿ ಪ ಪುಂಪೆಣ್ಗಳಿಂದ ಪುಟ್ಟಿದ ದೇಹವನು ತಿಳಿ ಕೆಂಪು ಬಿಳಿದಿನ ವರ್ಣ ಮಿಳಿತ ಇಂಪಾಗಿದೆಯೆಂದು ಹಿಗ್ಗದಿರೆಲವೊ ಹೊಲೆ- ಗಂಪು ನಾರುವುದು ಅದ ತೊಳೆಯದೆ ಇರಲು 1 ಜನಿಸಿದಾಕ್ಷಣ ಕಾಯು ಕಡಮೆಂದು ತಿಳಿಯದಲೆ ಜನನಿ ಜನಕರು ಸುಖಿಸುತಿಹರು ತನುಭ್ರಮಣವಲ್ಲದೆ ಚಿದ್ರೂಪ ಬಲ್ಲರೆ ಕೊನೆಗೆ ಏನಾಗುವುದೊ ಪ್ರಾಣಿ 2 ಗಳಿಸಿ ಧನ ತರುವಾಗ ಸುತ್ತ ನೆರೆದಿಹರೆಲ್ಲ ಭಳಿರೆ ಇವ ಮಹಾತ್ಮನೆಂದು ಘಳಿಗೆ ತೊಲಗಲು ಧನವು ಕರಗಿ ತಿಂದು ಪೋಗಿ ಹಳಿದು ಹಲ್ತೆರೆದು ಅಣಕಿಪರೋ-ಪ್ರಾಣಿ 3 ಹುಬ್ಬಿನಿಂದಲೆ ಹೊಡೆದು ಹೃದಯದ ಕಗ್ಗಂಟು ಕಬ್ಬು ಕಾರ್ಮುಕನಿಂದ ಬಿಡಿಸಿ ಉಬ್ಬಿಸ್ಯುಕ್ಕಿನ ತಂತಿಯಂತೆ ಮಾತುಗಳಾಡಿ ಉಬ್ಬಸವ ಬಡಿಸುವಳೊ ನಾರಿ ಪ್ರಾಣಿ 4 ಯೌವನವೊದಗಿದಾಗ ಏನೆಂದರೂ ಅಪ್ಪ ಅವ್ವಣ್ಣನೆಂದು ನಸುನಗುತ ಗವ್ವಳಿಕೆ ವೃದ್ಧಾಪ್ಯ ಬಂದೊದಗಲು ಇವನ ಬವ್ವನ ತೆರೆದಲಾಡಿಪರೋ-ಪ್ರಾಣಿ 5 ನಿಷ್ಠಕ್ಕೆ ದೇಹವನು ಮಾಡಿಕೊಂಡಂತೆ ನೀ ದುಷ್ಕರ್ಮಕೊಳಗಾಗದಿರೆಲೋ ನಿಷ್ಕಂಟಕವಾದ ಮಾರ್ಗದಲಿ ನರಹರಿಯ ನಿಷ್ಕಾಮದಲಿ ಭಜಿಸೊ ಮನವೆ ಪ್ರಾಣಿ 6 ಅಂ¨ಲಿಗೆ ಗೃಹಪಾಲ ಮನೆ ಮುಂದೆ ಹಗಲಿರುಳು ಹಂಬಲಿಸಿ ಬಿದ್ದಂತೆ ನೀನು ಕವಿ ಜೋತು ಬಿದ್ದು ಈ ಡಿಂಬವನು ಪೋಷಿಸದಿರೆಲವೊ-ಪ್ರಾಣಿ 7 ದೇಹಕ್ಕೆ ಬಲವಾಗಬೇಕೆಂದು ಎಲ್ಲರೊಳು ಕಂಡಲ್ಲಿ ಸ್ನೇಹಭಾವವನ್ನು ಬಯಸಿ ಕಾಯ ಪುಷ್ಟಿಯಿಂದ ಮೋಹಕ್ಕೆ ಒಳಗಾದೆಯಲ್ಲೋ-ಪ್ರಾಣಿ8 ಸ್ವಲ್ಪ ದಿನವುಳಿಯಿತು ಒಂದು ಸಾಧನ ಕಾಣೆ ಕಲ್ಪಾಯು ನಿನಗಿಲ್ಲವಲ್ಲೊ ಬಲ್ಪಂಥಗಳ ಮಾಡಿ ಭೋಗಪಡದಿರು ನಾಗ- ತಲ್ಪನ್ನ ಮೊರೆಹೋಗಲೋ-ಪ್ರಾಣಿ9 ದೇಶ ದೇಶವ ತಿರುಗಿ ಬಳಲಿ ಬಾಯಾರಿ ನೀ ಕ್ಲೇಶಕೊಳಗಾಗಿ ಹೊನ್ನುಗಳ ಏಸೇಸು ತಂದದ್ದು ಏನಾಯಿತೋ ಒಂದು- ಕಾಸು ನಾಳೆಗೆ ಕಾಣೆಯೋ-ಪ್ರಾಣಿ10 ಎಂದಿಗಾದರೋ ಇದೇ ಸಂಸಾರ ವಿಸ್ತಾರ ಒಂದಕ್ಕೆ ಒಂದೊಂದು ಅಧಿಕ ಬಂಧನವಲ್ಲದಲೆ ಲೇಶ ನಿರ್ಮಲ ಕಾಣೆ ಪೊಂದು ಸಜ್ಜನರಲ್ಲಿ ಮಂದ-ಪ್ರಾಣಿ11 ನಿತ್ಯ ಗಂಡಾಂತರದಿ ಬಿದ್ದು ಸಕಲಕ್ಕೆ ಕರ್ತೃ ನಾನೆಂದು ಕೂಗುವಿಯಲೊ ಮೃತ್ಯು ನಗುವುದು ನಿನ್ನ ಹೆಡತಲೆಯಲಿ ನಿಂದು ಚಿತ್ತದಲ್ಲಿ ತಿಳಿದು ತಲೆ ಬಾಗೊ-ಪ್ರಾಣಿ 12 ದೊಡ್ಡವನು ನಾನು ಎನಗೆಲ್ಲ ಜನರು ಬಂದು ಅಡ್ಡಬೀಳುವರೆಂಬ ಮಾತು ಹೆಡ್ಡತನ ತಾಳದಿರು ಕೊನೆಗೆ ಅನುಭವಕ್ಕು ಕಡ್ಡಿಯಂದದಿ ಮಾಳ್ಪರೋ-ಪ್ರಾಣಿ 13 ಕೋಟಿಯಾದರು ಕೇಳು ಅವರೋಕ್ಷಿಗಾದರೂ ಕೋಟಲೆಯೊಳಿರದೆ ಗತಿಯಿಲ್ಲ ತಾಟತೂಟಕ ಮಾಡಿ ಅವರಂತೆ ನುಡಿದು ಭವ ದಾಟಬೇಕೋ ಬೇಗ ಜಾಣ-ಪ್ರಾಣಿ14 ಆದರಿಸಿ ಸತಿಸುತರು ಬಂಧು ಬಳಗಕ್ಕೆ ಸಂ ಪಾದಿಸಿ ಧನ ಧಾನ್ಯ ತಂದು ಮೋದಪಡಿಸುವೆನೆಂದು ವಾದಿಸುವ ಮನುಜನ್ನ ಪಾದಕ್ಕೆ ಶರಣು ಸಾರೆಲವೋ-ಪ್ರಾಣಿ 15 ವನಧಿಯೊಳು ಸಪ್ತದ್ವೀಪದ ಮೃತ್ತಿಕೆ ಹಾಕೆ ದಣುವಿಕ್ಯಲ್ಲದೆ ಪೂರ್ಣವಹುದೆ ಇನಿತು ತಿಳಿಯೆಲ್ಲೆಲ್ಲಿ ತಂದ ಧನದಿಂದ ಭವ- ವನಧಿ ತುಂಬದು ಕಾಣೊ ಮರುಳೆ-ಪ್ರಾಣಿ 16 ನಿತ್ಯ ಬರೆದ ಲೆಖ್ಖವು ದಿವಾ ರಾತ್ರಿ ನೋಡುತಲಿದ್ದು ನಿನ್ನ ಪತ್ರ ಕರದಲಿ ಪಿಡಿದು ಈ ಮೂರ್ಖ ನರಮಹಿಷ- ಪುತ್ರನೆಂದು ನಸುನಗುವರಲ್ಲೋ-ಪ್ರಾಣಿ 17 ಎನಗೆ ತನಗೆಂದು ಯಮಭಟರು ಕರಗಳ ಹೊಯಿದು ಕಣಿದು ಭುಜ ಚಪ್ಪರುಸುತಿಹರೊ ಅನಿತರೊಳಗೆಚ್ಚರಿಕೆ ಎಚ್ಚತ್ತು ಹರಿಚರಣ ವನಜ ಧಾನ್ಯವ ಒಲವು ಮಾಡೊ-ಪ್ರಾಣಿ 18 ಶ್ರುತಿಗೆ ಅಪ್ರಾಮಾಣ್ಯ ಬಾರದಂತೆ ಮಧ್ವ ಮತಕೆ ವಿರೋಧವಾಗದಂತೆ ಕ್ಷಿತಿಯೊಳಗೆ ಸುಜನರಿಗೆ ಹಿತವಾಗುವಂತೆ ಶ್ರೀ- ಪತಿಯ ಸೇವಿಸಿ ಸುಗತಿ ಪಡೆಯೋ-ಪ್ರಾಣಿ 19 ಅರ್ಥಬಾರದು ನಿನ್ನ ಸಂಗಾತ ಕೇಳ್ ಕೊನೆಗೆ ವ್ಯರ್ಥಧಾವತಿ ಪ್ರಾಪ್ತಕರ್ಮ ತೀರ್ಥಯಾತ್ರೆಯ ಮಾಡಿ ನಿಸ್ಸಂಗನಾಗು ಯ_ ಥಾರ್ಥಾ ಜ್ಞಾನದಿಂದ ಬಾಳೊ ಪ್ರಾಣಿ20 ಶಿಥಿಲವಾಗಿ ಪೋಪ ದೇಹಕೆ ಮಮತಿಂದ ಮಿಥುನ ಭಾವಗಳನ್ನೆ ಬಯಸಿ ವ್ಯಥೆಪಟ್ಟು ಪಥತಪ್ಪಿ ನಡೆದು ನರಹರಿ ಸುಗಣ ಕಥೆಗೆ ವಿಮುಖನಾಗದಿರೆಲೊ-ಪ್ರಾಣಿ 21 ವನಗಿರೀ ನದಿ ಮೆದೆ ಹೊದರು ಗಹ್ವರ ಹುತ್ತ ವನರಾಶಿ ದ್ವೀಪ ಪಾತಾಳ ತನು ಮತ್ರ್ಯ ಸುರಲೋಕ ಜನನಿ ಜಠರದೊಳಿರಲು ಅಣು ಮಾತ್ರ ತಪ್ಪುವುದೆ ಬರಹ ಪ್ರಾಣಿ 22 ಹಲವು ಹಂಬಲ ಸಲ್ಲ ಆದ್ಯಂತಕಾಲದಲಿ ಗಳಿಸಿಕೋ ಪೂರ್ಣಾಯು ವಾಯು ಒಲಿಯದಲೆ ನಿನ್ನೊಳಗೆ ವಿಜಯವಿಠ್ಠಲರೇಯ ಸುಳಿಯ ಜಾಗ್ರತನಾ ಗೆಲೋ ಪ್ರಾಣಿ 23
--------------
ವಿಜಯದಾಸ
ಯಾಕೊ ಪಾರ್ಥನ ಹೆಸರು ಹೋಕೆ ಮಾತಿನ ಕೃಷ್ಣ ಸಾಕು ನೀ ನಮ್ಮ ಸರಿಯೇನೊ ಕೋಲಸಾಕು ನೀನಮ್ಮ ಸರಿಯೇನೊ ಬಲಿಯ ಮನೆಯ ಬಾಗಿಲ ಕಾಯ್ದು ಬದುಕಿದಿ ಕೋಲ ಪ. ಚಿಕ್ಕಂದಿನಾರಭ್ಯ ವತ್ಸಗಳನೆ ಕಾಯ್ದು ತುಚ್ಛನಾಗಿದ್ಯೊ ಜನರೊಳು ತುಚ್ಛನಾಗಿದ್ಯೊ ಜನರೊಳು ರುಕ್ಮಿಣಿಯಕೂಡಿ ಹೆಚ್ಚಿನವನೆಂದು ಹೆಸರಾದ್ಯೊ ಕೋಲ1 ಜನಿಸಿದಾಕ್ಷಣದಲ್ಲಿ ಜನನಿ ಜನಕರನಗಲಿದಿದನಗಳ ಕಾಯ್ದ್ಯೊ ವನವನ ದನಗಳ ಕಾಯ್ದ್ಯೊ ವನವನ ತಿರುಗಿದ್ದುಮನಕೆ ತಾರಯ್ಯ ಮರೆಯದೆ ಕೋಲ 2 ಬಡಿವಾರ ಬಂದ ಬಗಿ ಹೇಳೊ ಕೋಲ3 ಸತ್ಯಭಾಮೆ ನಿನ್ನ ಹೊಸ್ತಿಲ ಹೊಗಲಿಕ್ಕೆಅತ್ಯಂತ ಪದವಿ ಒದಗಿತುಅತ್ಯಂತ ಪದವಿ ಒದಗಿತು ಕೃಷ್ಣ ನಿನ್ನ ಹೆತ್ತವರ ಭಾಗ್ಯ ಅರಿವೆಯೆ ಕೋಲ4 ಹೆಂಡಿರ ಪುಣ್ಯದಿಂದ ಕಂಡೆಯಾ ಈ ಭಾಗ್ಯವ ಪಾಂಡಿತ್ಯವೆಲ್ಲೊ ಬಲವೆಲ್ಲೊಪಾಂಡಿತ್ಯವೆಲ್ಲೊ ಬಲವೆಲ್ಲೊ ಕೃಷ್ಣ ನಿನ್ನ ಪಂಡಿತರು ಕೇಳೋ ಹುಸಿಯಲ್ಲ ಕೋಲ5 ನಾರಿಯರ ಪುಣ್ಯದಿ ಏರಿದ್ಯೋ ರಥವಾಜಿ ಧೀರತನದಿಂದ ಗಳಿಸಿದ್ಯೊಧೀರತನದಿಂದ ಗಳಿಸಿದ ಗಳಿಕೆಯ ತೋರೊ ರಾಮೇಶ ನಮಗಿನ್ನು ಕೋಲ 6
--------------
ಗಲಗಲಿಅವ್ವನವರು