ಒಟ್ಟು 13 ಕಡೆಗಳಲ್ಲಿ , 7 ದಾಸರು , 13 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘಾಸಿ ತಿಮಿರದಿನಪ ಪ ಈಶನ ವರಸುತ ದಾಸ ಜನರ ಹಿತ ಪಾಶಾಂಕುಶ ಹಸ್ತ ಅ.ಪ ವಿದ್ಯೆ ಪ್ರದಾಯಕ ಬುದ್ಧಿ ಪ್ರಬೋಧಕ ಸಿದ್ಧಿದ ಶ್ರೀ ಬೆನಕ ಹೊದ್ದಿ ನೆನೆವ ಭಕ್ತರುದ್ಧರಿಸುವ ಶಕ್ತ ಮುದ್ದು ಮುಖವ ತೋರಿತ್ತ 1 ಗಿರಿಜೆ ಸತ್ಕುವರನೆ ದ್ವಿರದ ಸುವದನನೆ ಶರಣರ ಪಾಲಿಪನೆ ಪೊರೆಯನ್ನ ಸದ್ದಯದಿ 2 ಕಿಂಕರ ಶಂಕರ ಶತ್ರುಭಯಂಕರ ಶಂಖಚಕ್ರಾಬ್ಜಧರ ಪಂಕಜ ಮುಖವ ತೋರ 3 ರಕ್ತ ವಸ್ತ್ರಾನ್ವಿತ ರಕ್ತ ಗಂಧಾಕ್ಷತ ರಕ್ತ ಮಾಲಾದಿಧೃತ ಭಕ್ತ ಜನಾವನ ಶಕ್ತನೆ ನೀ ಎನ್ನ ಚಿತ್ತದಿ ಪೊಳೆಯೊ ಘನ್ನ 4 ವೇದನಿಕರ ಸುಗೀಯ ಸಾಧು ಸಜ್ಜನ ಸಮ್ಮತ 5 ಇಂಬಿಟ್ಟಿಯೆಂದು ನಿನ್ನ ಅಂಬರೊ ಸುಗುಣಸಿಂಧು 6 ವಕ್ರವ ತುಂಡಿಪ ಕತದಿಂದಲಪ್ಪ ವಕ್ರತುಂಡನು ನೀನಪ್ಪ ಶಕ್ರ ಪೂಜಿಸಿದನು ವೃತ್ರನ ವಧೆಗಿನ್ನುಪಕ್ರಮದಲೆ ತಾನಿನ್ನು 7 ಪರಿವಾರಸಹಿತ ಘನ್ನ ಧುರದಲ್ಲಿ ಬಿದ್ದನು ವರ ಧರ್ಮ ಗೆದ್ದನು ಎರಗಿ ಅರ್ಚಿಸಿ ನಿನ್ನನು 8 ದುರಳ ದಶಾನನ ಸರಕುಮಾಡದೆ ನಿನ್ನ ಗರುವದಿಂದಿರಲವನ ಪರಿಭವ ಕಾರಣವಾದುದೆಂಬರು ಕಣ ಶರಣಜನಾಭರಣ 9 ನೇಮದಿರುತಿದ್ದು ಹೇ ಮಹಿಮ ಖರ ದಶಶಿರನನ್ನು ಧುರದಲ್ಲಿಗೆದ್ದನು ಕರುಣೆಯೆ ಒರೆಯಲೇನು 10 ಕೋರಲು ಸಿದ್ಧಿ ಅಂದು ತೋರಿದೆ ಕರುಣವ ಚಾರುಕರದಿ ಅವನಾರೈಸಿ ಕರುಣಾರ್ಣವ 11 ಮುಪ್ಪುರ ಗೆದ್ದನು ಮುಕ್ಕಣ್ಣ ನಿನ್ನನು ತಪ್ಪದೆ ನೆನೆದವನು ಅಪ್ಪನೆ ನಿನ್ನಯ ಗೊಪ್ಪ ಚರಿತ್ರೆಯ ಇಪ್ಪಂತೆ ಪೇಳಿಸಯ್ಯ 12 ಸೃಷ್ಟಿಕರ್ತನು ತನ್ನ ಸೃಷ್ಟಿಗೈಯ್ಯಲು ಮುನ್ನ ಮುಟ್ಟಿಭಜಿಸಿದ ನಿನ್ನ ಎಷ್ಟೆಂತ ಪೇಳಲಿ ಶ್ರೇಷ್ಠಗುಣಾವಳಿ ಅಷ್ಟೆಲ್ಲ ನೀನೆ ಬಲ್ಲಿ 13 ಮಾಧವ ಪೊಂದಿದ ನಿನ್ನನವ ದ್ವಂದ ವಿವಾಹಾದುದು 14 ಭಾರತ ಬರೆಯಲು ಆಕಾರ ನೋಡಲು ತೋರದೆ ಇರುತಿರಲು ಶೂರನೆ ನಿನ್ನನು ಅರಿಸಿ ವ್ಯಾಸನು ಬೀರಿದ ಮಹಿಮೆಯನು 15 ಏನು ಕರುಣವಯ್ಯ ಶ್ರೀನಿಕೇತನಿಗೈಯ್ಯಾ ತಾನೆ ಇತ್ತಿಹನಯ್ಯ ಆನತಿಸಲು ಇಷ್ಟ ಮಾಣಲು ಸಂಕಟ ನೀನು ಕೊಡೆನುತದಟ 16 ಭಜಿಪರ ಭಾಗ್ಯದ ಯಜಿಪರಭೀಷ್ಟದ ತ್ಯಜಿಪರ ಸಂಕಟದ ಪಡಿ 17 ಜಯ ಜಯ ಕಾಪಿಲನೆ ಫಾಲ ಜಯ ಗಜಮುಖನೆ 18 ದ್ವಾದಶ ನಾಮವ ಆದರದಿಂದಾವ ಓದುವ ಕೇಳುವವ ಆದಿ ಪೂಜಿತನೊಲಿವ 20 ವಿದ್ಯಾರಂಭದಿ ಮುದ್ದು ವಿವಾದÀದಿ ಪೊದ್ದಲ್ಲಿ ನಿರ್ಗಮದಿ ಯುದ್ಧದಿ ನಿನ್ನನು ಬದ್ಧದಿ ನೆನೆವನು ಗೆದ್ದಪನೈ ಅವನು 21 ಏಕವಿಂಶತಿಪದ ಕೋಕನಪುಷ್ಪದ ಶ್ರೀಕರ ಮಾಲೆ ಇದ ಶ್ರೀಕಾಂತ ವರಭಕ್ತ ನೀ ಕರುಣಿಸೆಂದಿತ್ತ ಸ್ವೀಕರಿಸೈ ಮಹಂತ 22 ಬೆಂಗಳೂರಿನಲಿ ತುಂಗರೂಪದಲ್ಲಿ ಕಂಗೊಳಿಸುತಲಿಲ್ಲಿ ಹಿಂಗದೆ ಪೊರೆವೆನೆಂದ 23 ಬಾಲಕೃಷ್ಣಾರ್ಯರ ಬಾಲ ಲಕ್ಷ್ಮೀನಾರಾಯಣನೆಂಬ ಸತ್ಪೆಸರ ತಾಳಿದ ಶರಣನು ಮೇಳೈಸೀನುತಿಯನು ಓಲಗಿಸಿದ ನಿನ್ನನು 24 ಪೊಂದುವ ಮೋದವನು ಇಂದುಧರನ ಸುತನಂದದಿ ಸದ್ಭಕ್ತವೃಂದ ರಕ್ಷಿಪ ಸಂತತ 25 ನಮೋ ಸಾಕುವ ಮಹಿಮ ನಮೋ ಭೀಕರ ಬಿಡಿಸೆನ್ನ ನೀ ಕರುಣಿಸು ಮುನ್ನ ಶ್ರೀಕಾಂತ ಭಕ್ತಿಘನ್ನ 26 ಮಂಗಳ ಸದ್ವಿದ್ಯಾಬುದ್ಧಿದ ಜಯ ಜಯ ಮುಂಗಳ ಸಿದ್ಧದನೆ ಮಂಗಳ ವರ್ಧಿತನೆ 27
--------------
ಲಕ್ಷ್ಮೀನಾರಯಣರಾಯರು
(ಅ) ಪರತರ ಪಾವನ ಶ್ರೀರಾಮ ಜಯ ಪ ಶರಣ ಜನಾವನ ಶ್ರೀರಾಮ ಜಯ ಅ.ಪ. ಖರತರ ನಿಶಾಚರ ದಹನ ಪರಾವೃತ ಸರಸಿಜಭವನುತ ಶ್ರೀರಾಮಜಯ 1 ಸೀತಾಲಕ್ಷ್ಮಣ ಭರತ ಶತ್ರುಹನ ವಾತಜ ಸೇವಿತ ಶ್ರೀರಾಮ ಜಯ 2 ಸ್ವಾಂತ ಧ್ವಾಂತ ನಿಕೃಂತ ಲಕ್ಷ್ಮೀ- ಕಾಂತ ನಮೋ ನಮೋ ಶ್ರೀರಾಮ ಜಯ 3
--------------
ಲಕ್ಷ್ಮೀನಾರಯಣರಾಯರು
ಕರುಣದಿ ಕಾಯೋ ಎನ್ನ ಕಾರುಣ್ಯನಿಧಿ ಕರುಣದಿ ಕಾಯೋ ಎನ್ನ ಪ ಚರಣಸೇವಕಭಯಹರಣ ಶ್ರೀ ಕೌಸ್ತುಭಾಭರಣ ಸೌಖ್ಯವಿ ತರಣ ನಿನ್ನಯ ಚರಣಯುಗಳವ ಶರಣುಹೊಕ್ಕೆನು ಅ.ಪ ಕರ್ಮತಂತ್ರವನುಳಿದು ಕಾಮಿಸಿ ಮ£ವ ನಿರ್ಮಲತ್ವವ ತೊರೆದು ಹಮ್ಮಿನಿಂದಲೆ ಭಕ್ತಿಯುಮ್ಮಳಿಸದೆ ಕಾಮವು ಹೊಮ್ಮುತಿದೆ ಪರಬೊಮ್ಮ ಮೂರುತಿ 1 ಸ್ನಾನ ಮೌನವ ತೊರೆದು ಸಂಧ್ಯಾದ್ಯನುಷ್ಠಾನ ನೇಮವ ಮರೆದು ಮಾನಸಪೂಜಾ ವಿಧಾನವನರಿಯದೆ ದೀನಜನಸುರಧೇನು ಭಕ್ತರಮಾನನಿಧಿಯಹ ಶ್ರೀನಿವಾಸನೆ2 ಶರಣಜನಾವನನೆ ಶಕ್ರಾದಿ ನಿರ್ಜರಕುಲಪಾಲಕನೆ ಪುರಹರ ಸನ್ನುತ ಚರಿತಪೂರಿತ ದುರಿತ ಸದ್ಗುಣ ಭರಿತ ಪುಲಿಗಿರಿ ವರದ ವಿಠಲ 3
--------------
ವೆಂಕಟವರದಾರ್ಯರು
ಕರುಣದಿ ಕಾಯೋಯನ್ನ ಕಾರುಣ್ಯನಿಧಿ ಕರುಣದಿ ಕಾಯೊಎನ್ನ ಪ ಚರಣ ಸೇವಕ ಭಯಹರಣ ಶ್ರೀಕೌಸ್ತುಭಾಭರಣ ಸೌಖ್ಯವಿತರಣ ನಿನ್ನಯ ಚರಣ ಯುಗಳವ ಶರಣುಹೊಕ್ಕೆನು ಅ.ಪ. ಕರ್ಮತಂತ್ರವನುಳಿದು ಕಾಮಿಸಿ ಮನ ನಿರ್ಮಲತ್ವವ ತೊರೆದು ಹಮ್ಮಿನಿಂದಲೆ ಭಕ್ತಿಯುಮ್ಮಳಿಸದೆ ಬಲು ನಿರ್ಮಲತ್ವವನಳಿದು ಪರ ಬೊಮ್ಮ ಮೂರುತಿ1 ಸ್ನಾನ ಮೌನವ ತೊರೆದು ಸಂಧ್ಯಾದ್ಯನುಷ್ಠಾನನೇಮವ ಮರೆದು ಮಾನಸ ಪೂಜಾ ವಿಧಾನ ವನರಿಯದೆ ದೀನಜನ ಸುರಧೇನು ಭಕ್ತರ ಮಾನನಿಧಿಯಹ ಶ್ರೀನಿವಾಸನೆ 2 ಶರಣಜನಾವನನೆ ಶಕ್ರಾದಿನಿ-ರ್ಜರಕುಲ ಪಾಲಕನೆ ಪುರಹರ ಸನ್ನುತ ಚರಿತದೂರಿತ ದುರಿತಸದ್ಗುಣ ಭರಿತ ಪುಲಿಗಿರಿ ವರದ ವಿಠಲ 3
--------------
ಸರಗೂರು ವೆಂಕಟವರದಾರ್ಯರು
ಗುರುವರÀ ತುಲಸೀರಾಮಯ್ಯಾ ಪೂರ್ವದ್ವಾರಗುರುಸ್ತುತಿ ಮಂಪಾಲಯಾ 'ಜಿತೇಂದ್ರಿಯಾ ಪಪುರಪುರವರ ತವ ತಿರುತಾರೊತ್ಸವನಿರತಸೇವಕೃತನುತ ಜನವೈಭವ 1ಪತಿತಜನಾವನ ಪದ್ಮಸುಲೊಚನಪ್ರಥಮಾಶ್ರಮ ಘನಕೃತಮುಖರಂಜನ 2ವೆಂಕಟಲಕ್ಷಾಂಬ ಸುಗರ್ಭೊದ್ಭವ ಪಂಕಜಭ' ಸಂಪದಯುತಪ್ರಭಾವ 3ಕೇಶವಪದನಿಜ ದಾಸಸ್ವರೂಪಾಆಶಯೇಶಯ ಜಿತವರಪ್ರತಿಭಾ 4ಶುಕಮುನಿ ವಾಗ್ಭರಿಸೂನೃತಚರಿತಸಕಲಪಂಡಿತೊತ್ತಮಜನ'ನುತ 5ಮ'ಸೂರ್ಪುರವರ ಮ'ಪತಿಸಮುಖಅ'ಪತಿರೀತ್ಯಾ ಹರಿಗುಣಕಥಕಾ 6ಚಾಮನೃಪಾಲ ಸುಜ್ಞಾನಬೊಧಿನೀಸಮಾಜಶೇಖರ ಸಾತ್ವಿಕಧೀಮಣಿ 7ಶ್ರೀರಾಮೋತ್ಸವ ಸೇವಾಬ್ದಪ್ರತಿಸಾರ್ಥಶತಂ ನಿಷ್ಕನ್ನಾ ರ್ಕತ 8ಭಗವದಾಂಶ ಸಂಭೂತ ಕೃಪಾಕರಅಗಣಿತ ಸುಗುಣಾಲಂಕೃತಧೀವರ 9ಮಂಗಳಕರ ಗುರುತುಲಸೀರಾಮಾರಂಗಸ್ವಾ'ುದಾಸ ಹೃದಯಸುಧಾಮಾ 10
--------------
ಮಳಿಗೆ ರಂಗಸ್ವಾಮಿದಾಸರು
ದೇವಾದಿ ದೇವ ನಮೋ ಶ್ರೀ ಸತ್ಯದೇವ ಪ ದೇವಾದಿ ದೇವ ಹರಿ ಗೋವಿಂದ ಮುಕುಂದ ಭಾವಜನಕ ಸದ್ಭಾವುಕ ಜನಪ್ರಿಯ ಅ.ಪ. ಶ್ರೀಶಾ ಶಶಿಕೋಟಿ ಸಂಕಾಶ ಸುಶೋಭಿತ ದರಹಾಸ ಸುಜನ ಪರಿಪೋಷ ಸನ್ನುತ ಸರ್ವೇಶ ಈಶಾ ಈ ಸಮಸ್ತ ಜಗದೀಶನೆಂದು ನಿನ್ನ ನಾ ಸ್ತುತಿಸುವೆ ಮನದಾಸೆಯ ಸಲ್ಲಿಸೊ ವಾಸವಾದಿ ಸುರಮಹಿಮ ಪ ರೇಶ ಪೂರ್ಣಗುಣ ದಾಸಜನಾವನ ಕ್ಲೇಶವ ಕಳೆದಿನ್ನು ನೀ ಸರ್ವದ ಎನ್ನ ಪೋಷಿಸು ಕರಿಗಿರಿ ವಾಸ ಶ್ರೀ ನರಹರಿ 1
--------------
ವರಾವಾಣಿರಾಮರಾಯದಾಸರು
ನಂದನಂದನ ಗೋವಿಂದ ಹರಿ ಪ ಸುಂದರವದನ ಸುರೇಂದ್ರ ಸುವಂದ್ಯ ಅ.ಪ. ಮಾಧವ ಮುರಹರ ಬೃಂದಾವನ ವಿಹಾರ ಸುಂದರ ಮುರಳೀಧರ ಸುಮನೋಹರ ಸಿಂಧುಶಯನ ಸುಖಸಾಂದ್ರ ಪರಾತ್ಪರ 1 ಕೇಶೀ ಮಥನ ಕಂಸಾಸುರ ಮರ್ದನ ಸನ್ನುತ ಶ್ರೀಚರಣ ದಾಸ ಜನಾವನ ಕರುಣಾಭರಣ ಕೇಶವಗುಣ ಪರಿಪೂರ್ಣ 2 ಮುರನರಕಾಂತಕ ಮುಕ್ತಿಪ್ರದಾಯಕ ಶರಣಾಗತ ಜನ ಪಾಲಕ ಕರಿಗಿರೀಶ ಕಾಮಿತ ಫಲದಾಯಕ ಗರುಡಗಮನ ಶ್ರೀ ರುಕ್ಮಿಣಿನಾಯಕ 3
--------------
ವರಾವಾಣಿರಾಮರಾಯದಾಸರು
ನಮಿಸುವೆ ಗುರುರಾಜ - ಸುತೇಜ ಪ ನಮಿಸುವೆ ಸುಜನರ ಕಲ್ಪಭೂಜ ಅ.ಪ ಶರಣ ಜನಾವನ ಕರುಣಾಭರಣ ಹರಿಚರಣಾರಾಧನ ಧುರೀಣ 1 ಮೂರಾವತಾರವನೆತ್ತಿದ ಧೀರ ಸಾರಿದವರ ಸಂತಾಪ ವಿದೂರ 2 ದ್ವಿಜಕುಲದೀಪ ಭವ್ಯ ಸ್ವರೂಪ ಅಜರಾಮರ ಸತ್ಕೀರ್ತಿ ಪ್ರತಾಪ 3 ಜ್ಞಾನವಿರಕ್ತಿ ನಿರ್ಮಲಭಕ್ತಿ ಮಾಣದೆ ಕೊಡುವುದು ಮನಸಿಗೆ ಶಾಂತಿ 4 ವರ ಮಂತ್ರಾಲಯ ಸುರುಚಿರ ನಿಲಯ ಕರಿಗಿರೀಶ ಶ್ರೀ ನರಹರಿಪ್ರಿಯ 5
--------------
ವರಾವಾಣಿರಾಮರಾಯದಾಸರು
ಪರಮ ಕೃಪಾನಿಧೆ ಗೋಪಾಲದೇವ ಪ ಪರಿಪಾಲಿಸೋ ಎನ್ನ ಶ್ರೀಲೋಲ ಹರಿ ಅ.ಪ. ಪತಿತಪಾವನಾಶ್ರಿತ ಜನ ಪಾಲನ ಗತಿ ನೀನಲ್ಲದೆ ಕಾಣೆ ನಾ1 ಮಾನಾಭಿಮಾನ ನಿನ್ನಾಧೀನ ದೀನ ಜನಾವನ ನಿನ್ನವ ನಾ 2 ಅಜಭವಾರ್ಚಿತ ಆನಂದಾಚ್ಯುತ ನಿಜಪಥ ತೋರಿಸೊ ಶ್ರೀಕಾಂತ 3
--------------
ಲಕ್ಷ್ಮೀನಾರಯಣರಾಯರು
ರಾಘವೇಂದ್ರಂ ಭಜೇಹಂ ||ಶ್ರೀ|| ಪ ಆಗಮಚಯ ವಿಜ್ಞಾನ ಸುಗೇಹಂ ಶ್ರೀಗದಾಬ್ಜ ಚಕ್ರಾಂಕಿತ ದೇಹಂ ಅ.ಪ ರಾಗ ಮೋಹನಾದಿ ರಹಿತಂ ಸುಚರಿತಂ ಭೋಗಿರಾಟ್ ಶಯನ ಗುಣಮತಿ ಮಹಿತಂ ಭಾಗವತೋತ್ತಮ ಮತಿ ಸುಮತಿಯುತಂ ಯೋಗಿ ಜನಹಿತಂ ಶ್ರೀ ಗುರು ನಿರುತಂ 1 ಅತಿಪಾವನ ಕಾಷಾಯ ಸುವಸನಂ ನತಜನೇಷ್ಟ ವಿಶ್ರಾಣನ ನಿಪುಣಂ ಧೃತ ದಂಡ ಕಮಂಡಲ ಶುಭಪಾಣಿಂ ಕೃತ ಹರಿಸುತಿ ಸಂಗೀತ ಸುವಾಣೀಂ 2 ನಿಜತಪಸಾ ಸಮುಜಾರ್ಜಿತ ತೇಜಂ ಸುಜನಾವನ ಗುಣಹಿತ ಸುರಭೂಜಂ ಹರಣ ಕೃಷ್ಣ ವಿಜಯವಿಠ್ಠಲರೇಯಂ ಅಜಿನಾಸನ ಸುಸ್ಥಿರ ಯತಿರಾಜಂ3
--------------
ವಿಜಯದಾಸ
ವಾಸುದೇವ ಹೃದಯನಮೋ ನಮೋ ನಂದಾಭ್ಯುದಯ ನಮೋ ನಮೋ ಗೋಪಿಕಾ ಪ್ರಿಯ ಪದೀನಜನಾವನಲೋಲ ದಾನವಶಿಕ್ಷಕ ಕಾಲಭಾನುಶತಾಭಜಾಲ ಶ್ರೀ ನಿಜಭೋಗವಿಶಾಲ 1ಮುರಹರ ಮುಚುಕುಂದ ಸೇವ್ಯ ಭಾವ್ಯ 2ಪರಮ ಪುರುಷ ಶ್ರೀ ರಮಣ ಶರಧಿಶಯನ ನಿರಾವರಣದುರಿತತಿಮಿರಹರಚರಣ ತಿರುಪತಿ ವೆಂಕಟರಮಣ 3ಓಂ ಇಳಾಪತಯೇ ನಮಃ
--------------
ತಿಮ್ಮಪ್ಪದಾಸರು
ಸಾರಸನಯನ ನಮೋ ನಮೋ ಪ ನಾರಾಯಣ ಗೋವಿಂದ ನಮೋ ಅ.ಪ. ದೀನ ಜನಾವನ ದಾನವ ಮಥನ ಶ್ರೀ ನಿಕೇತನ ಕೌಸ್ತುಭಾಭರಣ 1 ದಾಮೋದರ ದುರಿತಾರಿ ಪರಾತ್ಪರ ಹೇಮಾಂಬರಧರ ವನಮಾಲಾಧರ 2 ಸಾರಸಾಪ್ತನು ಸಾರುತಿಹನು ತವ ಸಾರಸಪಾದದ ಚಾರುದರುಶನಕೆ 3 ಮಾರ್ತಾಂಡನ ಬಲು ಚಂಡಕಿರಣವೆಮ್ಮ ನೇತ್ರಪಟುತ್ವ ಕುಂದಿಸುವುದು ಕೇಳ್ 4 ತರಣಿ ಪ್ರಕಾಶದಿ ತಪಿಸುತಿಹೆವು ನಾವ್ ಪೊರೆವುದೆಮ್ಮನು ಕರಿಗಿರೀಶನೆ 5
--------------
ವರಾವಾಣಿರಾಮರಾಯದಾಸರು
ಹರಿ ಹರಿ ಕೃಷ್ಣ ಗೋವಿಂದ ಪ ಮಾಧವ ಗೋವಿಂದ ಅ.ಪ ಕೇಶವ ನಾರಾಯಣ ಗೋವಿಂದ ವಾಸುದೇವ ಶ್ರೀ ಗೋವಿಂದ ಶ್ರೀಶ ಜನಾದರ್Àನ ಗೋವಿಂದ | ಹರಿ ದಾಸ ಜನಾವನ ಗೋವಿಂದ1 ವಾಮನ ದಾಮೋದರ ಗೋವಿಂದ ಕಾಮಿಕದಾಯಕ ಗೋವಿಂದ ರಾಮ ರಘೂತ್ತಮ ಗೋವಿಂದ | ಗುಣ ಧಾಮ ದಯಾನಿಧೇ ಗೋವಿಂದ 2 ಶ್ರೀಧರ ಭೂಧರ ಗೋವಿಂದ ಆದಿಮೂಲ ಶ್ರೀ ಗೋವಿಂದ ವೇದ ವೇದ್ಯ ಹರಿ ಗೋವಿಂದ | ನಿಜ ಪಾದ ಭಜಕಪ್ರಿಯ ಗೋವಿಂದ 3 ಪದ್ಮದಳಾಂಬಕ ಗೋವಿಂದ ಪದ್ಮನಾಭ ಶ್ರೀ ಗೋವಿಂದ ಪದ್ಮಿನಿ ಅರಸನೆ ಗೋವಿಂದ | ಕರ ಪದ್ಮದಿ ಪಿಡಿ ಎನ್ನ ಗೋವಿಂದ4 ಕರಿಗಿರೀಶ ನರಹರಿ ಗೋವಿಂದ ಪರತರ ಮುರಹರ ಗೋವಿಂದ ಗರುಡಗಮನ ಶ್ರೀ ಗೋವಿಂದ | ಹರಿ ಹರಿ ಹರಿ ಹರಿ ಹರಿ ಗೋವಿಂದ 5
--------------
ವರಾವಾಣಿರಾಮರಾಯದಾಸರು