ಕಾಪಾಡೆಲೊ ದೇವ ಕರುಣಾರ್ಣವ ಪ
ನಾ ಪಾಪಿಯು ಎಂದು ನೀ ಪರಿ
ಪಾಲಿಸದೀಪರಿಗೈದರೆ ಆಪದ್ಭಾಂಧವ ಅ.ಪ.
ಮೊರೆಯಿಡುವೆನು ಇನ್ಯಾರಿಗೆ | ನೀನಿಲ್ಲದೆ
ಪೊರೆವ ಪ್ರಭುವಾರೆನಗೆ | ಶರಣ ಮಂ
ದಾರನೆಂದರಿತು ನಿನ್ನಯ ಪಾದ
ನೆರೆ ನಂಬಿದೆನು ಇನ್ನು ಪೊರೆಯಬೇಕೆನ್ನನು 1
ಕರಿರಾಜನ ಭಯ ಪರಿಹರಿಸಿದ | ವರ
ಗರುಡಗಮನ ಸಿರಿವರದ | ಜನಾದರ್Àನ
ಪರಮ ಪುರುಷ ಶ್ರೀ ಕರಿಗಿರಿ ಮಂದಿರ
ನರಹರಿ ನಮಿಪೆನು ಚರಣ ಸರಸಿಜಕೆ 2