ಇದುಸ್ನಾನ ಇದುಸ್ನಾನ ಇದುಸ್ನಾನವಯ್ಯ ಸದಮಲಜ್ಞಾನಿಗಳು ಮನವೊಪ್ಪಿ ಮಾಡ್ವ ಪ ಇಟ್ಟು ಹಂಗಿಸದ್ದೆ ಸ್ನಾನ ಕೊಟ್ಟು ಕುದಿಯದ್ದೆ ಸ್ನಾನ ಕೊಟ್ಟದ್ದು ಕೊಡುವುದೇ ಶಿಷ್ಟ ತುಂಗಾಸ್ನಾನ ನಿಷ್ಠರಾಡದ್ದೆ ಸ್ನಾನ ದುಷ್ಟಸಂಗಳಿವುದೇ ಸ್ನಾನ ಶಿಷ್ಟಜನಸಂಗವೇ ನಿಜ ಕೃಷ್ಣಾಸ್ನಾನ 1 ಭವ ಅದು ಸ್ನಾನ ಕ್ಷೀರಸಾಗರ ಸ್ನಾನ ರಾಗನೀಗ್ವುದೆ ಸ್ನಾನ ಜಾಗರಣ ಸದಾಸ್ನಾನ ಭಾಗವತರೊಲುಮೆ ನಿಜ ಭಾಗೀರಥೀಸ್ನಾನ 2 ಮರೆವ ತರಿವುದೆ ಸ್ನಾನ ಅರಿವು ತಿಳಿವುದೆ ಸ್ನಾನ ಪರಮಜ್ಞಾನ ನಿಜ ಸುರಗಂಗಾಸ್ನಾನ ಕರುಣ ಪಡೆವುದೆ ಸ್ನಾನ ಮರಣಗೆಲಿವುದೆ ಸ್ನಾನ ಹರಿದಾಸರೊಡನಾಟ ಸರಸ್ವತೀ ಸ್ನಾನ 3 ವಾದನೀಗ್ವುದೆ ಸ್ನಾನ ಭೇದ ಅಳಿವುದೆ ಸ್ನಾನ ಮಾಧವನ ಕಥಾಶ್ರವಣ ಸದಾ ಯಮುನಾ ಸ್ನಾನ ವೇದವನರಿವುದೆ ಸ್ನಾನ ಬೋಧಪಡೆವುದೆ ಸ್ನಾನ ಸಾಧುಸಜ್ಜನಸೇವೆ ಗೋದಾವರೀಸ್ನಾನ 4 ನೇಮನಿತ್ಯವೆ ಸ್ನಾನ ತಾಮಸ್ಹರಣವೆ ಸ್ನಾನ ಕಾಮತೊಳೆವುದೆ ನಿಜ ಭೀಮಾನದೀಸ್ನಾನ ಕ್ಷೇಮಸಾಗರ ತ್ರಿಭೂಮಿಯೊಳಧಿಕ ಶ್ರೀ ರಾಮನಡಿಭಕುತಿಮುಕ್ತಿ ಹೇಮಾನದೀಸ್ನಾನ 5
ತಪ್ಪು ಪೇಳ್ವೆ ನಿನ್ನೊಳೆನ್ನಪ್ಪಿ ಸಲಹಯ್ಯ ಅಪ್ಪ ಸಿರಿಪತಿಯೆನ್ನ ನೆಪ್ಪಿನೊಳಗಿರ್ದು ಪ ಅರಿವಿಟ್ಟು ತವಚರಣ ಸ್ಮರಿಸದಿರೆ ಎನ್ನ ತಪ್ಪು ಮರೆವೆಯನು ಪರಹರಿಸದಿರೆ ನಿನ್ನ ತಪ್ಪು ಧರೆಯ ಭೋಗವ ಮೀರಿ ನಡೆಯಿದಿರೆ ಎನ್ನ ತಪ್ಪು ಪರಮವೈರಾಗ್ಯ ಭಕ್ತಿ ಕೊಡದಿರೆ ನಿನ್ನ ತಪ್ಪು 1 ಅರ್ತಿಯಿಂ ತವಭಜನೆ ಮಾಡಿದಿರೆ ಎನ್ನ ತಪ್ಪು ಚಿತ್ತ ಚಂಚಲಗೊಳಿಸಿದರೆ ನಿನ್ನ ತಪ್ಪು ಸತ್ಯಭ್ರಷ್ಟನಾಗಾಚರಿಸಿದರೆ ಎನ್ನ ತಪ್ಪು ಸತ್ಯಜನಸಂಗ ಕೊಡದಿರೆ ನಿನ್ನ ತಪ್ಪು 2 ನಾಶವೊಂದೋ ಮಹಹೇಸಿಸಂಸಾರದ ವಾಸನೆಯ ಬಿಡದಿರೆ ಎನ್ನ ಘನತಪ್ಪು ಶ್ರೀಶ ಶ್ರೀರಾಮ ತವ ದಾಸತ್ವ ಕೊಡದಿರೆ ಸಾಸಿರಪಾಲಿಗೆ ನಿನ್ನ ಮಹತಪ್ಪು 3