ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕೋಲ ಹಾಡು) ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲು ಶ್ರೀ ರಾಮನ ಬಲಗೊಂಬೆ ರನ್ನದ ಪ. ಭೂಮಿಯೊಳಗೆ ಸೀತಾರಾಮನು ಜನಿಸಲು ಸೀಮೆಯ ನಾರಿ ಜನರೆಲ್ಲ ರನ್ನದಾ ಸೀಮೆಯ ನಾರಿ ಜನರೆಲ್ಲ ನೆರೆದು ಸು ಪ್ರೇಮದಿ ಪಾಡಿ ನಲಿದರು ರನ್ನದಾ 1 ಕುಂಡಲ ಕಂಠ ಮಾಲೆಯ ನೊಸಲಾ ತಿಲಕವು ರನ್ನದ ಮಾಲೆಯ ತಿಲಕನೊಸಲೊಳಗಿರಿಸಿದ ಬಾಲೇರು ಕೂಡಿ ನಲಿವುದ ರನ್ನದ 2 ಸಾರಸಂಭವ ಕ್ಷೀರ ವಾರುಧಿ ತಡಿಯಲ್ಲಿ ಭೋರನೆ ಬಂದು ಸ್ತುತಿಸಲು ರನ್ನದ ಭೋರನೆ ಬಂದು ಸ್ತುತಿಸಲು ರಾಮವ ತಾರನಾಗುವೆನೆಂದು ನುಡಿದನು ರನ್ನದ 3 ಪೃಥಿವಿ ನಾಯಕ ದಶರಥನಲ್ಲಿ ಜನಿಸಿದ ಕಥನೀಯ ಸುಗುಣ ಸಂಭೃತ ರಾಮರನ್ನದ ಕಥನೀಯ ಸುಗುಣ ಸಂಭೃತ ರಾಮ ಕೌಸಲ್ಯ ಸುತನೆಂದು ನಗುತ ಮನ್ಮಥನ ಜನಕನಿಗೆ 4 ಕೌಶಿಕ ಮುನಿಯ ಮಹಾಶೆ ಪೂರಿಸಿ ಯಜ್ಞ ಘಾಸಿ ಮಾಡಿದ ರಾಮ ಘಾಸಿ ಮಾಡಿದ ಜಗ ದೀಶನು ಸಕಲಾಭಿಲಾಷಾ ಪೂರಿಪೆನೆಂದು 5 ಪಾದ ಪಲ್ಲವವಿರಿಸುತ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ರಾಮ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ಸಿರಿ ನಲ್ಲ ಶಿವನ ಮಹ ಬಿಲ್ಲ ಮುರಿದನು 6 ಭೂತಳಾಧಿಪಜನವ್ರಾತಮಂಡಲದೊಳು ಸೀತೆಯನೊಲಿಸಿ ಶುಭದಿಂದ ರನ್ನದಾ ಸೀತೆಯನೊಲಿಸಿ ಶುಭದಿಂದ ಸ್ವಜನ ಸ- ಮೇತಾಯೋಧ್ಯಗೆ ಬಂದ ಖ್ಯಾತ ರಾಘವನಿಗೆ 7 ಜನಕನ ವಾಕ್ಯದಿಂದ ಜನಕಾತ್ಮಜೆಯ ಕೂಡಿ ವನಕಾಗಿ ನಡೆತಂದ ವನಜಾಕ್ಷ ರನ್ನದಾ ವನಕಾಗಿ ನಡೆ ತಂದ ವನಜಾಕ್ಷನಲ್ಲಿ ಶೂ- ರ್ಪನಖಿಯ ಮಾನಭಂಗವನು ಗೈದ ರನ್ನದಾ 8 ಖರದೂಷಣಾದಿ ದೈತ್ಯರ ಕೊಂದು ಮಾರೀಚ ದುರುಳನ ಸದೆದಾ ಧುರಧೀರ ರನ್ನದ ದುರುಳನ ಸದೆದಾ ಧುರಧೀರ ಶ್ರೀ ರಾಮ ಪರಿಪಾಲಿಸೆಮ್ಮನು ಕರುಣಾಳು ರನ್ನದ 9 ಪಾತಕಿ ದಶಕಂಠ ಸೀತೆಯನೊಯ್ದನೆಂದು ಕಾತರಗೊಂಡಂತೆ ಜನಕೆಲ್ಲ ರನ್ನದಾ ಕಾತರಗೊಂಡಂತೆ ಜನಕೆಲ್ಲ ತೋರ್ದ ರಘು ನಾಥನ ಮೊಖಲೀಲೆ ಖ್ಯಾತಿಯ ಪೊಗಳುತ10 ಮಂದರಾವಣ ಮೋಸದಿಂದ ಕೆಡಹಿದಂಥ ತಂದೆಯ ಸಖನಿಗಾನಂದ ಪದವನಿತ್ತ ತಂದೆಯ ಸಖನಿಗಾನಂದವ ಸಲಿಸಿ ಕ- ಬಂಧನ ದೈತ್ಯಯೋನಿ ಇಂದ ಬಿಡಿಸಿದಗೆ 11 ಬೇಡತಿ ಶಬರಿಯನ್ನು ನೋಡಿ ರಕ್ಷಣೆ ಮಾಡಿ ಪ್ರೌಢ ಮಾರುತಿಯಿಂದ ಕೂಡಿದ ರನ್ನದಾ ಪ್ರೌಢ ಮಾರುತಿಯನ್ನು ಕೂಡಿ ರವಿಜನ ಕಾ ಪಾಡಿ ವಾಲಿಯ ವಧೆ ಮಾಡಿದ ರನ್ನದಾ 12 ಪ್ರಾಣಾತ್ಮಜನು ನಾಗವೇಣಿಯ ವಾರ್ತೆಯ ತಾರೆ ಜಾಣತನದಲಿದ ಕ್ಷೀಣಾಂಬುಧಿಯೊಳಂದು ಜಾಣತನದಲಿದ ಕ್ಷೀಣಾಂಬುಧಿಯೊಳು- ಪ್ರ ವೀಣತನದಿ ಸೇತು ಕಾಣಿಸಿದವನಿಗೆ 13 ದೋಷಿ ರಾವಣನನು ನಾಶಗೈದಸುರಾರಿ ನೀಶ ನೀನೆನುತ ವಿಭೀಷಣಗೊರವಿತ್ತಾ ಈಶ ನೀನೆನುತಲಿವಿಭೀಷಣಗೊರವಿತ್ತ ವೈರಿ ಜಗದೀಶ ರಾಮನಿಗೆ 14 ಸೃಷ್ಟಿಜಾತೆಯ ಕೂಡಿ ಪಟ್ಟಾಭಿಷೇಕಗೊಂಡು ಶಿಷ್ಟ ರಕ್ಷಕನಾದ ಸಿರಿನಾಥ ರನ್ನದಾ ಶಿಷ್ಟ ರಕ್ಷಕನಾದ ಸಿರಿನಾಥ ವೆಂಕಟ ಬೆಟ್ಟದೊಡೆಯ ನಮ್ಮಭೀಷ್ಟವ ಕೊಡುವನ 15
--------------
ತುಪಾಕಿ ವೆಂಕಟರಮಣಾಚಾರ್ಯ
ಕಾರ್ತಿಕೇಯ ಮಹಾಸೇನ ನಿಜ ಭೃತ್ಯರೊಳಾಗು ಪ್ರಸನ್ನ ಪ. ಚಿತ್ತಸಾಕ್ಷಿ ಹರಿಭಕ್ತಿಜ್ಞಾನಮ- ನಿತ್ತು ಕಾಯೊ ಷಡ್ವದನ ಅ.ಪ. ತಂದೆ ತಾಯಿ ಕುಲಸ್ವಾಮಿ ಹರಿ- ಯೆಂದು ಭಜಿಸುವೆನು ಪ್ರೇಮಿ ಸ್ಕಂದನಾಮಕ ನೀನಂತರ್ಯಾಮಿ ಸುಂದರ ಮಯೂರಗಾಮಿ 1 ಪಾರ್ವತಿ ಶಿವಸಂಜಾತ ಪರಿ- ಪಾಲಿತ ಸುಜನವ್ರಾತ ಸರ್ವಗೀರ್ವಾಣ ಸೇನಾಧ್ಯಕ್ಷ ಸರ್ವೋತ್ತಮ ಹರಿಪಕ್ಷ2 ತಾರಕದ್ಯೆತ್ಯಸಂಹಾರ ಸುವಿ- ಚಾರೈಕಪರಾಧಾರ ಪ್ರಾರಂಭಗೈದ ಕಾರ್ಯ ಸಫಲಿಪುದು ಭಾರ ನಿನ್ನದು ರಣಧೀರ 3 ಪಾವಂಜಪುರನಿವಾಸ ನಃ ಪಾತು ಶಿವಗಣಾಧೀಶ ದೇವ ಲಕ್ಷ್ಮೀನಾರಾಯಣದಾಸ ಪಾವನಚರಿತ ವಿಲಾಸ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕಾರ್ತಿಕೇಯ ಮಹಾಸೇನ ನಿಜ ಭೃತ್ಯರೊಳಾಗು ಪ್ರಸನ್ನಪ. ಚಿತ್ತಸಾಕ್ಷಿ ಹರಿಭಕ್ತಿಜ್ಞಾನಮ- ನಿತ್ತು ಕಾಯೊ ಷಡ್ವದನಅ.ಪ. ತಂದೆ ತಾಯಿ ಕುಲಸ್ವಾಮಿ ಹರಿ- ಯೆಂದು ಭಜಿಸುವೆನು ಪ್ರೇಮಿ ಸ್ಕಂದನಾಮಕ ನೀನಂತರ್ಯಾಮಿ ಸುಂದರ ಮಯೂರಗಾಮಿ 1 ಪಾರ್ವತಿ ಶಿವಸಂಜಾತ ಪರಿ- ಪಾಲಿತ ಸುಜನವ್ರಾತ ಸರ್ವಗೀರ್ವಾಣ ಸೇನಾಧ್ಯಕ್ಷ ಸರ್ವೋತ್ತಮ ಹರಿಪಕ್ಷ 2 ತಾರಕದ್ಯೆತ್ಯಸಂಹಾರ ಸುವಿ- ಚಾರೈಕಪರಾಧಾರ ಪ್ರಾರಂಭಗೈದ ಕಾರ್ಯ ಸಫಲಿಪುದು ಭಾರ ನಿನ್ನದು ರಣಧೀರ 3 ಪಾವಂಜಪುರನಿವಾಸ ನಃ ಪಾತು ಶಿವಗಣಾಧೀಶ ದೇವ ಲಕ್ಷ್ಮೀನಾರಾಯಣದಾಸ ಪಾವನಚರಿತ ವಿಲಾಸ 4
--------------
ತುಪಾಕಿ ವೆಂಕಟರಮಣಾಚಾರ್ಯ
ಗರ್ವವು ಸುಜನವ್ರಾತದಲಿ ಸರ್ವವು ನನಗೆ ನಮ್ಮಪ್ಪಗಿಹಲಿ ಪ ಕಾಸುಕಾಸಿನಿಂದ ಹಣ ಹೊನ್ನಹುದು ದೇಶ ದೇಶದಿಂದ ರಾಜ್ಯವಾಗುವದು 1 ಕ್ಲೇಶ ಕ್ಲೇಶದಿಂದ ಹಾಸನಾಗುವುದು ದಾಸದಾಸರಿಂದ ಮುಕ್ತಿಮಾರ್ಗಹುದು2 ಸಾರಾಸಾರದಿಂದ ತತ್ವವಾಗುವದು ಧೀರ ನರಸಿಂಹವಿಠಲನರಿಯುವದು 3
--------------
ನರಸಿಂಹವಿಠಲರು
ಪದುಮಾವತಿ ಕಾಂತ ಪ ಬ್ರಹ್ಮಾದ್ಯರ ತಾತ ಅ.ಪ. ನಿನ್ನ ದರ್ಶನವು ಸಂಸಾರ ಸಮೇತ | ಬೇಡನೆ ಜನವ್ರಾತ ಮನ್ನಿಸಲಿಲ್ಲವೊ ನಾನವರ ಮಾತ | ಪಾವನ ಶುಭಚರಿತ ನಾ ಮಾಡಿದೆ ಶಪಥ ಸದ್ಗುಣ ಗಣಭರಿತ 1 ದ್ವಿಜರಾಜ ವರೂಥ ಇದು ಏನಧಿಕವೊ ನಿನ್ನಸಮದಾತ | ರಿಲ್ಲವೊ ಶುಭಗಾಥ ಭವ ಶರಧಿಗೆ ಪೋತ ನಾಗಯ್ಯಾತ್ವರಿತ 2 ವತ್ಸರ ಪ್ರತಿಪದ ಬುಧಸಹಿತ ಊಧ್ರ್ವಪುಂಡ್ರವಿಡುತ ಏರಿದೆ ಪರುವತ ಸಿರಿ ನಿನ ಕಂಡೆವೊ ತಾತ 3 ಸುಕೃತ | ಈ ದಿನ ಒದಗುತ ಫಲವಾದುದಕೆ ನಾವೆಲ್ಲ ಬಹುಪ್ರೀತ | ರಾದೆವು ಶ್ರೀಕಾಂತ ಉತ್ಸವ ನೋಡುತ ಒಲಿದು ನಿನ್ನ ತೀರ್ಥಪ್ರಸಾದವ ಕೊಳುತ | ನಾವಿದ್ದೆವೊ ಸತತ 4 ತುಂಗ ವಿಕ್ರಮನೆ ರಣದೊಳು ನಿರ್ಭೀತ | ಬಲರಿಪು ಸಹಜಾತ ಗಾಂಡೀವಿಯ ಸೂತ ಗಂಗಾಜನಕನೆ ತ್ರಿಗುಣಾತೀತ | ಭುವನದಿ ವಿಖ್ಯಾತ ರಂಗೇಶವಿಠಲನೆ ನಾ ನಿನ್ನ ದೂತ | ಯದುಕುಲ ಸಂಭೂತ 5
--------------
ರಂಗೇಶವಿಠಲದಾಸರು
ಶ್ರೀ ಗುರುವಿನ ನೆನದು ಸುಖಿಯಾಗು ಮನವೇ ನೀನುದುರ್ಗುಣ ಪಾಪಹರಿದು ಛೇದಿಸು ಜನನವಪನಾನಾ ಜನ್ಮದಿ ತೊಳಲಿ ನೀ ಬಂದುನರಮನುಷ ಜನ್ಮವ ತಾಳಿ ಮರತ ಕಂಡ್ಯಾ ತನುವಿನಲಿಧ್ಯಾನಿಸುಸದಾಕಾಲದಿ ದುರ್ಜನ ಬುದ್ಧಿಮಾಣಿಸು ಪರಂಜ್ಯೋತಿಯನೆನೆದು ನೆನೆದು ದೃಷ್ಟಿಸಿ ಕಾಣುಗುಣಜÕನ ಕರುಣಪ್ರಾಜÕನ ಜ್ಞಾನ ಸಿದ್ಧನ ಗುರುವ ಸಿದ್ಧನಮಾನಸ ರೂಪನ ಮೂಜಗ ವ್ಯಾಪನದೀನರನಾಥನ ವಾಙ್ಮಯಾತೀತನ1ಸುಜನರ ಸಂಗವ ಮಾಡದೆ ಸಾಯುತಲಿಹೆಕುಜನರ ಸಂಗದಿಂದ ಕರುಣವೆಂಬುದು ಮರೆತೆತ್ಯಜಿಪುದು ನಿನಗೆ ನೀತಿಯೆ ಥೂ ನಿನಗೆ ಬುದ್ಧಿಯೇಭಜಿಸು ಪರಾತ್ಪರವ ನೆನೆದು ದೃಷ್ಟಿಸು ಮನವೇತ್ರಿಜಗವಂದ್ಯನ ತ್ರಿಗುಣಕೆ ಮಾನ್ಯನೆಸುಜನವ್ರಾತನ ಸುಪ್ರಭಾತೀತನಭಜಕರ ಭಾಗ್ಯನ ಬಹುಗುಣ ಯೋಗ್ಯನಸರ್ವಬೇಧಜÕನ ನಯಸರ್ವಜÕನ2ಇರುವೆ ಮೊದಲುಗಜಕಡೆಯಾದ ಎಂಭತ್ತನಾಲ್ಕುತಿರುವಿನ ಲಕ್ಷಜೀವದಿ ಜನಿಸಿ ಜನಿಸಿ ಪುಟ್ಟುವಪರಿಯನೆಲ್ಲವ ಛೇದಿಪ ಉಪಾಯವ ತಿಳಿವಚಿರಕಾಲ ನೆನೆಯೋ ಕಂಡ್ಯಾ ಚಿದಾನಂದಾವಧೂತನಪರಮಪರೇಶನಪಂಡಿತಪುರುಷನ ಶರಣು ಜನಾಂಗನ ಸುಗುಣ ಕೃಪಾಂಗನಕರುಣಾ ಕಟಾಕ್ಷನ ಕಾರಣ ಮೋಕ್ಷನಮರಣ ವಿದೂರನ ಮುನಿಯತಿ ವರನ3
--------------
ಚಿದಾನಂದ ಅವಧೂತರು