ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿನವೇ ಸುದಿನವು ಧ್ಯಾನ ಮಾಳ್ಪ ಜನವೇ ಸುಜನವು ಪ ಮಹಿಮೆಯ ಪಾಡುವ ಅ.ಪ. ಯುಕ್ತದಿ ಕೂಡಿ ಆಯುಕ್ತವಿರಕ್ತಿಯ ಮಾಡಿ ಭಕ್ತಿಗಾಗಲಿ ಭವಮುಕ್ತಿಗಾಗಲಿ ಹರಿಭಕ್ತರನೊಡಗೂಡಿ ರಕ್ತಿಲಿ ಪಾಡುವ ದಿನವೇ 1 ತಾಳ ತಂಬೂರಿಯ ತಪ್ಪದೆ ತಂದು ಮೈಳೈಸಿ-ಶ್ರುತಿಯ ಕಥೆಪೇಳವ ಕೇಳುವ 2 ಅರ್ಥಾಪೇಕ್ಷೆಯಲಿ ಕಾಲಗಳನ್ನು ವ್ಯರ್ಥಮಾಡದಲೆ ಪ್ರಾರ್ಥನೆ ಮಾಡುವ 3 ಕಾಮಕ್ರೋಧಗಳ ಕಳೆವ ರಘುರಾಮ ನಾಮಗಳ ಭವ ತಾಮಸ ಕಳೆಯುವ 4 ಹರಿವಾಸರವನು ಸಾಧಿಸಿ ಮುರುಹರ ನಾಮಗಳನು ಹರಿದಾಸರೊಡಗೂಡಿ ಹರುಷದಿಂದೆಚ್ಚತ್ತು ವರದ ವಿಠಲ ನರಹರಿಯೆಂದು ಪಾಡುವ ದಿನವೇ 5
--------------
ಸರಗೂರು ವೆಂಕಟವರದಾರ್ಯರು
ದಿನವೇ ಸುದಿನವು ಧ್ಯಾನಮಾಳ್ಪ ಜನವೇ ಸುಜನವು ಪ ಘನತರ ಹರಷದಿ ಮನದಣವಂದದಿ ಮನಸಿಜನಯ್ಯನ ಮಹಿಮೆಯ ಪಾಡುತ ಅ.ಪ ಯುಕ್ತದಿ ಕೂಡಿ ಅಯುಕ್ತ ವಿರಕ್ತಿಯ ಮಾಡಿ ಭುಕ್ತಿಗಾಗಲಿ ಭವಮುಕ್ತಿಗಾಲಿ ಹರಿ ಭಕ್ತರ ನೋಡಗೂಡಿ ರಕ್ತಿಲಿ ಪಾಡುವ 1 ತಾಳ ತಂಬೂರಿಯ ತಪ್ಪದೆ ತಂದು ಮೈಳೈಸಿಶ್ರುತಿಯ ಶ್ರೀಲಾಲಮನ ಕಥೆ ಪೇಳುವ ಕೇಳುವ 2 ಅರ್ಥಾಪೇಕ್ಷೆಯಲಿ ಕಾಲಗಳನು ವ್ಯರ್ಥಮಾಡದಲೆ ಪಾರ್ಥಸಾರಥಿಯನ್ನು ಪ್ರಾರ್ಥನೆ ಮಾಡುವ 3 ಕಾಮಕ್ರೋಧಗಳ ಕಳೆವ ರಘು ರಾಮ ನಾಮಗಳ ಪ್ರೇಮದಿಂ ಪಾಡುತ್ತ ರೋಮಾಂಚದೊಡಗೂಡಿ ಭವ ತಾಮಸ ಕಳೆಯುವ 4 ಹರಿವಾಸರವನು ಸಾಧಿಸಿ ಮುರಹರ ನಾಮಗಳು ಹರಿದಾಸರೊಡಗೂಡಿ ಹರಷದಿಂದೆಚ್ಚತ್ತು ವರದ ವಿಠಲ ನರಹರಿಯೆಂದು ಪಾಡುವ 5
--------------
ವೆಂಕಟವರದಾರ್ಯರು
ನಿಧಾನವೆ ಕೇಳಿ ಸಜ್ಜನವೇ ಇಂದು ಜಿನ ಶಕ್ತಿಯಾನಂದದಾರಾಧನ ಪ ಒಂದು ಮನದಲಿ ವದಗಿನ್ನು ಒಂದು ಮನದಲಿ ವದಗಿನ್ನು ನೀವೆಲ್ಲಾ ವಂದದಾರುತಿಯಾ ಬೆಳಗುವಾ 1 ಒಂದು ಮಾರ್ಗವಿಡಿದು ಬಂದು ಗುರುಮುಖದಿಂದ ಒಂದನೆ ಭಕ್ತಿ ತಿಳಿದಿನ್ನು ಒಂದನೆ ಭಕ್ತಿ ತಿಳಿದು ಪರೀಕ್ಷಿತಿಯಂತೆ ವಂದನಾರುತಿಯಾ ಬೆಳಗುವಾ 2 ಎರಡಕ ಮೀರದಾ ಎರಡಕ್ಷರದಿಂದ ಎರಡನೆ ಭಕ್ತಿ ತಿಳಿದಿನ್ನು ಎರಡನೇ ಭಕ್ತಿ ತಿಳಿದು ನಾರದರಂತೆ ಎರಡನಾರತಿಯಾ ಬೆಳಗೀರೇ 3 ಮೂರು ಬಲಿಯನೆದಾಟಿ ಮೂರು ರತ್ನವಗಂಡು ಮೂರನೇ ಭಕ್ತಿ ತಿಳಿದಿನ್ನು ಮೂರನೇ ಭಕ್ತಿ ತಿಳಿದು ಪ್ರಲ್ಲಾದನಂತೆ ಮೂರನಾರತಿಯಾ ಬೆಳಗೀರೇ 4 ನಾಕುಸ್ಥಾನವ ಮುಟ್ಟಿ ನಾಕರಂತವ ನೋಡಿ ನಾಕನೇ ಭಕ್ತಿ ತಿಳಿದಿನ್ನು ನಾಕನೇ ಭಕ್ತಿ ತಿಳಿದು ಜನಕನಂತೆ ನಾಕನಾರತಿಯಾ ಬೆಳಗೀರೇ 5 ಐದುಕ್ಲೇಶಗಳ್ಹಿಂಗಿ ಐದರೊಂದನೆ ಮಾಡಿ ಐದನೇ ಭಕ್ತಿ ತಿಳಿದಿನ್ನು ಐದನೇ ಭಕ್ತಿ ತಿಳಿದು ಗರುಡನಂತೆ ಐದನಾರತೀಯ ಬೆಳಗೀರೆ 6 ಆರನೇ ಭಕ್ತಿ ಆರು ಸಂಗವ ಮೀರಿ ಆರು ಪರಿಯಾಗದೇ ಆರನೇ ಭಕ್ತಿ ತಿಳಿದಿನ್ನು ಆರನೇ ಭಕ್ತಿ ತಿಳಿದು ಪುಂಡಲೀಕನಂತೆ ಆರನಾರತಿಯಾ ಬೆಳಗೀರೆ 7 ಏಳು ವ್ಯಸನವ ಬಿಟ್ಟು ಏಳು ಧಾತುವ ಕಂಡು ಏಳನೇ ಭಕ್ತಿ ತಿಳಿದಿನ್ನು ಏಳನೇ ಭಕ್ತಿ ತಿಳಿದು ಹನುಮಂತನಂತೆ ಏಳನಾರತಿಯಾ ಬೆಳಗೀರೆ 8 ಎಂಟು ಮದಗಳ ಜರಿದು ಎಂಟು ಸಿದ್ಧಿಯ ತೊರೆದು ಎಂಟನೆ ಭಕ್ತಿ ತಿಳಿದಿನ್ನು ಎಂಟನೇ ಭಕ್ತಿ ತಿಳಿದು ಅರ್ಜುನ ನಂತೆ ಎಂಟನೇ ಭಕ್ತಿ ಯಾರತಿಯಾ ಬೆಳಗೀರೆ 9 ಒಂಭತ್ತರನೇ ಬಲಿದು ಒಂಭತ್ತರ ನೆಗೆಲಿದು ಒಂಭತ್ತರನೇ ಭಕ್ತಿ ತಿಳಿದಿನ್ನು ಒಂಭತ್ತರನೇ ಭಕ್ತಿ ತಿಳಿದು ಬಲಿಯಂದದಿ ಒಂಭತ್ತನಾರತಿಯಾ ಬೆಳಗೀರೆ 10 ಗುರು ಮಹಿಪತಿ ಸುತಬ ಹೊರವ ದೇವಿಗೆ ಧರಿಯೊಳೀಪರಿಯಲಿ ನೀವು ಧರಿಯೊಳೀಪರಿ ನೀವು ಮಾಡಲಿಕೀಗ ಪರಮ ಆನಂದಾದೋರುವದು 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಖಿ ನೋಡ ದ್ವಾಪರ ಯುಗವ ದ್ವಾಪರಯುಗವ ಅಪಾರ ಭಾಗ್ಯವ ಶ್ರೀಪತಿ ಇವರಿಗೊಲಿದಿರುವ ಸಖಿ ಪ. ಪಾದ ಬಲ್ಲಷ್ಟು ಬಲಗೊಂಡುಗೊಲ್ಲರ ಅರಸು ಜನಿಸಿದ ಗೊಲ್ಲರ ಅರಸು ಜನಿಸಿದ ಯುಗ ಧರ್ಮಎಲ್ಲವಿಸ್ತಾರ ರಚಿಸುವೆ ಸಖಿ 1 ಅಕ್ಕ ದ್ವಾಪರ ಧರ್ಮ ಶಕ್ಯವೆ ವರ್ಣಿಸಲುಲಕುಮಿದೇವಿಗೆ ವಶವಲ್ಲಲಕುಮಿದೇವಿಗೆ ವಶವಲ್ಲ ಯುಗಧರ್ಮತಕ್ಕಷ್ಟು ಹೇಳಿ ರಚಿಸುವೆ ಸಖಿ2 ಭೂಪ ದ್ವಾಪರದಲ್ಲೆ ಪಾಪಿ ಒಬ್ಬನಿಲ್ಲತಾಪಕೋಪಗಳು ಮೊದಲಿಲ್ಲತಾಪಕೋಪಗಳು ಮೊದಲಿಲ್ಲ ಧರೆ ಮ್ಯಾಲೆ ತಾಪಸ ಜನವೇ ಹರವಿತ್ತು ಸಖಿ 3 ಅಕ್ಷಯ ದ್ರವ್ಯವಲಕ್ಷ್ಯವಿಲ್ಲದಲೆ ಕೊಡುವೋರುಲಕ್ಷ್ಯವಿಲ್ಲದಲೆ ಕೊಡುವೋರು ರಂಗನ ರಕ್ಷೆಯ ಮಾಡಿಜೈಸೋರು ಸಖಿ 4 ಕೃಷ್ಣನ ಪಾದದಲೆ ನಿಷ್ಠೆಯುಳ್ಳವರನ್ನುದೃಷ್ಟಿಲೆ ನೋಡಿ ಸಹಿಸದೆದೃಷ್ಟಿಲೆ ನೋಡಿ ಸಹಿಸದೆ ಧರೆಮ್ಯಾಲೆ ಪುಟ್ಟಿದನಾಗ ಕಲಿಬಂದು ಸಖಿ5 ಸತ್ಯಶೌಚ ಆಚಾರ ಉತ್ತಮ ಧರ್ಮತತ್ವವಿಚಾರ ಮೊದಲಿಲ್ಲತತ್ವವಿಚಾರ ಮೊದಲಿಲ್ಲ ಧರೆ ಮ್ಯಾಲೆ ದೈತ್ಯಮಯವಾಗಿ ಜಡದಿತು ಸಖಿಯೆ 6 ಹರಿಗುರುಗಳರಿಯದ ಪರಮ ಪಾಮರಜನ ಧರೆಯ ಮೇಲಾಗ ಜನಿಸಿತುಧರೆಯ ಮೇಲಾಗ ಜನಿಸಿತು ರಾಮೇಶನಪರಮ ಭಕ್ತರನ ದಣಿಸಿತು ಸಖಿಯೆ 7
--------------
ಗಲಗಲಿಅವ್ವನವರು
ಹರಿಭಜನವೇ ಬಹುಮಿಗಿಲು ನರನಿಗೆ ಧರೆಯಸುಖವೆಲ್ಲ ಸುಳ್ಳೊ ಸುಳ್ಳೋ ಪ ತಂದೆತಾಯಿಗಳು ಮಂದಿ ಮಕ್ಕಳು ಬಂಧುಬಳಗ ಒಂದು ಸಂಬಂಧವಿಲ್ಲ 1 ಕೋಟಿಕೊತ್ತಲ ಕೋಟಿಧನಬಲ ನೀಟಾದ ಮಹಲು ನಿಜವಿಲ್ಲ ಇಲ್ಲ 2 ರಾಜ್ಯಭಂಡಾರ ಪ್ಯಾಟೆ ತೇಜಿ ಆನೆ ಒಂಟಿ ರಾಜಿಪುದೆಲ್ಲ ಸುಳ್ಳ ಮುಷ್ಟಿಮುಷ್ಟಿ 3 ಸಿರಿ ಅಂದಣ ಭಾರಿ ನಂದಿಪೋಗುವುದೆಲ್ಲ ಹಾರಿ ಹಾರಿ 4 ವರದ ಶ್ರೀರಾಮನ ಚರಣಸ್ಮರಣಿಲ್ಲದ ನರರ ಜನುಮವೆಲ್ಲ ಹಾಳು ಹಾಳು 5
--------------
ರಾಮದಾಸರು