ಮರೆವನೇ ಮುರವೈರಿಯು ಸಿರಿಪತಿ ಸತ್ಯಶಾಸನ ಪ
ಸುಖದು:ಖಗಳನು ಮನಕೆ ಸೇರಿಸದೆ ಸದಾ
ಅಖಿಲ ಕಾರಣ ಹರಿಭಕುತ ಜನರ1
ಅತಿಭಾಗ್ಯ ಬಂದಾಗಲೂ ಚ್ಯುತಿ ಬಂದರೂ ಸ್ಥಿರ
ಮತಿಯ ಪೊಂದುತ ಭಜಿಸುವ ಭಕುತನ 2
ಸಿಂಧುಶಯನನನು ವಂದಿಪ ಸುಜನರ
ಬಂಧು ಬಳಗ ಜನವೆಂದರಿವನು 3
ಸಂಕಟ ಬಂದಾಗಲು ಶಂಕೆಯ ಮಾಡದ
ಪಂಕಜನಾಭನ ಕಿಂಕರನನು 4
ಎನ್ನ ಕರ್ಮಗಳೆಲ್ಲ ನಿನ್ನ ಅಧೀನವೆಂದು
ಸಂತತ ಭಜಿಸೆ ಪ್ರಸನ್ನನಾಗದೆ 5