ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳಿದ್ಯಾ ಈ ಕೌತುಕ ಕೇಳಿದ್ಯಾ ಕೇಳಿದ್ಯಾ ಕೌತುಕವನ್ನು ಈಗ ಪ ಪೇಳುವೆ ನಾ ನಿಮಗಿನ್ನು ಆಹಾ ಜಾರ ಚೋರ ಕೃಷ್ಣ ಅ.ಪ. ಕರೆಯೆ ಬಂದಿಹನೊಬ್ಬ ಚೋರಾ ತನ್ನ ಕಿರಿಯಯ್ಯನಂತೆ ಅಕ್ರೂರಾ ಊರ ಹೊರ ಹೊಳಿಯಲಿ ಬಟ್ಟ ತೇರಾ ಆಹಾ ಹಿರಿಯನೆಂದು ಕಾಲಿಗೊರಗೋರಾ ರಾಮಕೃಷ್ಣರ ಭರದಿ ಅಪ್ಪಿಕೊಂಡು ಮರುಳು ಮಾಡಿದ ಸುದ್ದೀ 1 ಸೋದರಮಾವನ ಮನೆಯೋಳ್ ಬೆಳ - U್ಫದ ನಾಳಿನ ದಿನದೋಳ್ ಕೃಷ್ಣ ಪೋದರೆ ನೆರೆದ ಜನರೋಳ್ ಆಹಾ ಕಾದುವ ಮಲ್ಲರ ಮೇಲ್ಹಾರ ಬಿಲ್ಹಬ್ಬ ಸಾಧಿಸಿ ಸಮಯಕ್ಕೆ ಹೋದೆವೆಂಬ ಅರ್ತಿ 2 ಹುಟ್ಟಿದ ಸ್ಥಳವಂತೆ ಮಧುರೀ ಕಂಸ - ನಟ್ಟುಳಿಗಾಗಿ ತಾ ಬೆದರೀ ಇ - ಲ್ಲಿಟ್ಟಳಾತನ ತಂಗಿ ಚದುರೀ ತೋರಿ ಕೊಟ್ಟರೆ ತನ್ನನು ಬೆದರೀ ಆಹಾ ಇಷ್ಟು ಸ್ನೇಹವು ಶ್ರೀದವಿಠಲ ಮಾವನ ಭೆಟ್ಟಿಗಾಗಿ ಒಡಂಬಟ್ಟು ಹೋಗುವನಂತೆ 3
--------------
ಶ್ರೀದವಿಠಲರು
ದೇವ ಹನುಮಶೆಟ್ಟ | ರಾಯ ಜಗಜಟ್ಟಿ ಪರಮೇಷ್ಟಿ ಪ ಪಾವನಚರಿತ ಸಂಜೀವನ ಗಿರಿಧರ ಪಾವಮಾನಿ ಕರುಣಾವಲೋಕನದಿ ನೀ ನಲಿಯುತಲಿ ಸದಾವಕಾಲ ತವ ತಾವರೆ ಪದಯುಗ ಸೇವೆಯ ಕರುಣಿಸೊ ಅ.ಪ ವಾನರ ಕುಲನಾಯಕ | ಜಾನಕಿಶೋಕ ನಿವಾರಕ ಕಾನನ ತೃಣಪಾವಕ | ಹೀನ ಕೌರÀವ ನಾಶಕ | ಸನ್ಮಾನಿ ತಿಲಕ ಆನಂದತೀರ್ಥನಾಮಕ | ಕ್ಷೋಣಿಯೊಳಗೆ ಎಣೆ | ಗಾಣಿ ಪಿಡಿದು ಪೊರೆ ಗೀರ್ವಾಣ ವಿನುತ ಜಗತ್ಪ್ರಾಣ ಕಲ್ಯಾಣ ಮೂರುತಿ 1 ಮರುತನಂದನ ಹನುಮ | ಪುರಹರರೋಮ ಪರಮಪುರುಷ ಶ್ರೀ ಭೀಮಾ ಕರುಣಸಾಗರ ಜಿತಕಾಮ | ಸದ್ಗುಣ ಭೌಮ ಪರವಾದಿ ಮತವ ನಿರ್ನಾಮ ಗರಿಸುತ ಪಾಲಕ ಜರಿಜ ವಿನಾಶಕ || ದುರಿತ ವಿಮೋಚಕ ಸುರತರು ಭಾರತಿವರ ಮರಿಯದೆ ಪಾಲಿಸೊ ನಿರುತ ಮಮ ಚರಿತ 2 ಧಿಟ್ಟ ಶಾಮಸುಂದರ ವಿಠಲ ಕುವರ ದುಷ್ಟರಾವಣ ಮದಹರ ಜಿಷ್ಣುಪೂರ್ವಜ ವೃಕೋದರ | ರಣರಂಗಶೂರ ಶಿಷ್ಟ ಜನರುದ್ಧಾರ | ನಿಷ್ಟೆಯಿಂದ ಮನಮುಟ್ಟಿ ನಿನ್ನಪದ ಥಟ್ಟನೆ ಪಾಡುವ ಶ್ರೇಷ್ಠ ಸುಜನರೋಳ್ | ಇಟ್ಟು ಸಲಹೊ ಸದಾ ಸೃಷ್ಟಿಮಂಡಲದಿ | ಪುಟ್ಟಗ್ರಾಮ ಬಲ್ಲಟಿಗಿವಾಸ 3
--------------
ಶಾಮಸುಂದರ ವಿಠಲ