ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ದೇವ; ದೇವತಾ ಸ್ತುತಿ ಗಣೇಶ ವಂದಿಸುವೆ ಮುದದಿಂದ ನಂದಿವಾಹನ ಸುತಗೆ ಪ ಬಂದ ದುರಿತವ ಕಳೆದಾನಂದವೀಯುತ ಮನಕೆಇಂದಿರೇಶನ ಚರಣದ್ವಂದ್ವ ತೋರೆಲೋ ಬೇಗ1 ಹೀನಜನರೊಡಗೂಡಿ ಕಾಣದಾದೆನು ಹಾದಿಸಾನುರಾಗದಿ ಪೊರೆಯೊ ಸನಕಾದಿ ಮುನಿವಂದ್ಯ 2 ಸಾರ ಕರುಣದಲಿ ಅರುಹಯ್ಯಶರಧಿಶಯನ ತಂದೆವರದವಿಠಲ ಪ್ರಿಯ 3
--------------
ಸಿರಿಗುರುತಂದೆವರದವಿಠಲರು
ಅನಂತ ಅಪರಾಧ ಅನುಗಾಲ ಮಾಡುತಿಹೆ ಪ ಸ್ನಾನ ಸಂದ್ಯಾ ಜಪ ಮೌನವೇ ಮೊದಲಾದ ನಾನಾವಿಧದ ವಿಹಿತ ಧರ್ಮತೊರೆದು ನಾನು ನನ್ನದು ಎಂಬೊ ಹೀನ ಬುದ್ಧಿಗಳಿಂದ ಹೀನ ಜನರೊಡಗೂಡಿ ಙÁ್ಞನಿಗಳ ನಿಂದಿಸುವೆ 1 ಶ್ರೀಕಾಂತ ನಿನ್ನ ಸೇವೆಯನು ಮರೆದು ಬೇಕಾದ ವೈಷಿಕವ ಸ್ವೀಕರಿಸಿ ಲೋಕÀದೊಳು ಸಾಕಿದವರನು ನಾ ನಿರಾಕರಿಸಿ ಬಾಳುವೆನು 2 ಎನಗಿಂತ ಅಧಿಕರಾದವರ ಕೂಡ ದ್ವೇಷವನು ಅನುಗಾಲ ಮಾಡುವೆನೊ ಅನಿಮಿಷೇಶಾ ಎನಗೆ ಸರಿಯಾದವರ ಕಂಡು ಮತ್ಸರಿಸುವೆನು ಎನಗಿಂತ ನೀಚರನು ನಾ ನೋಡಿ ನಗುತಿಪ್ಪೆ 3 ಕಾಸಿನಾಸೆಗೆ ಪೋಗಿ ದಾಸವೇಷವÀ ಧರಿಸಿ ಮೋಸಮಾಡುವೆ ಜನರ ಪಾಶದಿಂದಾ ವಾಸುದೇವನೆ ಸರ್ವದೇಶ ಕಾಲಾದಿಗಳಿ ಗೀಶನೆಂದರಿಯದಲೆ ಮೋಸಹೋದೆನು ಸ್ವಾಮಿ 4 ಸಕಲ ದುರ್ಗುಣಕೆ ಆಗಾರ ನಾನವನಿಯೊಳು ಭಕುತಿ ವೈರಾಗ್ಯ ಪ್ರಸಕುತಿಯಿಲ್ಲಾ ಭಕುತವತ್ಸಲ ಗುರುಜಗನ್ನಾಥವಿಠಲನೆ ಅಕಳಂಕಮಹಿಮನೆ ಮುಕುತಾಮುಕುತರೊಡೆಯಾ 5
--------------
ಗುರುಜಗನ್ನಾಥದಾಸರು
ಕೋಲು ಕೋಲೆನ್ನಕೋಲೆ ಕೋಲು ಕೋಲೆನ್ನಕೋಲೆ ಸದ್ವಸ್ತುವಿನ ಬಲಗೊಂಬೆಕೋಲೆ ಧ್ರುವ ಕೋಲುನಿಕ್ಕುತ ಬನ್ನಿ ಬಾಲೇರೆಲ್ಲರು ಕೂಡಿ ಮ್ಯಾಲ್ಯೆ ಮಂದಿರದ ಹಾದೀಲಿ ಕೋಲೆ ಮ್ಯಾಲೆ ಮಂದಿರದೊಳು ಬಾಲಮುಕುಂದತಾನು ಲೋಲ್ಯಾಡುತ ಒಳಗಿದ್ದಾನೆ ಕೋಲೆ 1 ಆದಿಗಿಂತಲ್ಯದೆ ಹಾದಿ ಅನಾದಿಯು ಸಾಧಿಸ ಬನ್ನಿ ಒದಗಿನ್ನು ಕೋಲೆ ಸಾಧಿಸಿ ಬರಲಿಕ್ಕೆ ಸಾಧ್ಯವಾಗುತಲ್ಯಾದೆ ಭೇದಿಸಿ ನೋಡಿ ಮನದಲಿ ಕೋಲೆ 2 ಕಣ್ಣಿನೊಳಿಹ್ಯ ಬೊಂಬೆಕಾಣಬರುತ್ತದೆ ಜಾಣ್ಯೇರು ನೀವು ತಿಳಕೊಳ್ಳಿಕೋಲೆ ಜಾಣ್ಯೇರು ನೀವು ಕಾಣದೆ ಹೋಗಬ್ಯಾಡಿ ಜಾಣ್ರಿಸುತ್ಹಾನೆ ಸದ್ಗುರು ಕೋಲೆ 3 ಸದ್ಗುರುಪಾದಕೆ ಸದ್ಭಾವವಿಟ್ಟು ನೀವು ಸದ್ಭೋಧ ಕೇಳಿ ಸಾಧಿಸಿ ಕೋಲೆ ಸಾಧಿಸಿ ಕೇಳಿ ನೀವು ಬುಧಜನರೊಡಗೂಡಿ ಚದುರತನದಲಿ ಅತಿ ಬ್ಯಾಗೆ ಕೋಲೆ 4 ಅರಹುವೆಂದ ಸೀರೆಯನುಟ್ಟು ಕುರವ್ಹೆಂಬ ಕುಪ್ಪಸಲಿ ಇರವಂತಿ ಪುಷ್ಪಲಿ ಮುಡಿದಿನ್ನು ಕೋಲೆ ಮುಡಿದು ಬರಲು ಪೂರ್ಣ ಒಡಗೂಡಿ ಬರುತಾನೆ ಬಡವನಾ ಧಾರಿ ಬಲಗೊಂಬೆ ಕೋಲೆ5 ಬಲಗೊಂಬೆ ಸಾಧನವು ನೆಲೆಗೊಂಡು ಮಾಡಬೇಕು ವಲವ್ಹಾಂಗ ತಾನೆ ಶ್ರೀಹರಿ ಕೋಲೆ ಶ್ರೀಹರಿ ಮುಂದೆ ನೀವು ಸೋಹ್ಯ ತಿಳಿದುಬನ್ನಿ ಸಾಹ್ಯಮಾಡುವ ಇಹಪರಕೆ ಕೋಲೆ 6 ದಾತ ಮಹಿಪತಿಸ್ವಾಮಿ ಸಹಕಾರನೊಬ್ಬ ಶ್ರೀಪತಿಕೋಲೆ ಶ್ರೀಪತಿಸ್ತುತಿ ಕೊಂಡಾಡಲಿಕ್ಕೆ ಪೂರ್ಣ ಭುಕ್ತಿ ಮುಕ್ತಿಯ ನೀಡು ತಾನೆ ಕೋಲೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಚಿರಂಜೀವಿಯಾಗಿರೆಲೊ ಚಿಣ್ಣ ನೀನು ಪ ಪರಮ ಭಾಗವತರ ಪದಧೂಳಿ ಧರಿಸುತಲಿಅ.ಪ ಜರಿಯಬೇಡ ಹರಿಯ ಮರೆಯಬೇಡೆಂದೆಂದು ತಿರಿಯಬೇಡ ಖಳರ ಮನೆಗೆ ಪೋಗಿ ಬೆರೆಯಬೇಡ ಪರರ ಸತಿಯ ಸ್ವಪ್ನದಲೂ 1 ಲೋಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ ಶ್ರೀ ಕಾಂತ ಚರಿತೆಯನು ಕೇಳದಿರಬೇಡ ಪಾಕವನು ಮಾಡಿ ಏಕಾಂಗಿಯಾಗುಣಬೇಡ ಭೂಕಾಂತರನುಸರಿಸಿ ಬೆಸಗೊಳ್ಳಬೇಡ 2 ಸಾಲ ಮಾಡಲಿ ಬೇಡ ಸಾಲದೆಂದೆನಬೇಡ ನಾಳೆಗೆ ಹ್ಯಾಗೆಂಬ ಚಿಂತೆ ಬೇಡ ಖೂಳ ಜನರೊಡಗೂಡಿ ಕಂಗೆಡಲಿ ಬೇಡ ನೀ ಬಾಳುವರ ಸಂಗದಲಿ ಬಾಳೆಲವೊ ಬಾಲ 3 ಕಂಡವರಿಗೆಲ್ಲ ಕೌತುಕ ತೋರಲಿ ಹೆಂಡಿರು ಮಕ್ಕಳು ಅಳಿಯ ಸೊಸೆ ಮೊಮ್ಮಕ್ಕಳು ಉಂಡುಟ್ಟು ದ್ವಿಜರ ಸಹ ಗಂಡುಗಲಿಯಾಗೋ 4 ಮಂದಮತಿಗಳ ಕೂಡೆ ಮಾತಾಡಲಿ ಬೇಡ ನಿಂದಕರ ಕಣ್ಣೆತ್ತಿ ನೋಡಬೇಡ ಇಂದಿರೆಯರಸ ಶ್ರೀ ವಿಜಯವಿಠ್ಠಲನ ಚರಣ ದ್ವಂದ್ವದಲಿ ಮಸ್ತಕವ ನೀಡದಿರಬೇಡ5
--------------
ವಿಜಯದಾಸ
ಮಾನವ ಅಜಹರವಿನುತ ನಿಜಪಾದ ಅನುದಿನವು ಭಜಸಿಬದುಕೆಲೊ ಪ ತ್ಯಜಿಸಿ ಅವಗುಣ ಸುಜನರೊಡಗೂಡಿ ನಿಜಾನಂದದಿ ಸುಜನ ಭಜಗಶಯನನ ಅ.ಪ ಹಲವು ಭ್ರಾಂತಿಗಳ್ಯಾಕೆಲೊ ಸುಳ್ಳೆ ಸುಳ್ಳೆ ಸಂಸಾರ ಕೊಳಪಟ್ಟು ಕೆಡದಿರೆಲೊ ಮಲಿನಮನಸಿನ ಸರ್ವ ಹೊಲೆಯ ಯೋಚನೆ ಬಿಟ್ಟು ತಿಳಕೊಂಡು ನಿಜಸುಖ ಪದವಿಗೆ ನದರಿಟ್ಟು ಉಳಕೋ ಸಿಕ್ಕ್ಹೊತ್ತುಗಳೆಯದಲೆ ಶುನಕೆಲುವು ಕಡಿದಂತೆ ಅಳಿವ ಸುಖದಾಸೆಗೆಳಸಿ ಕೆಡಬೇಡ ಜಲಜನಾಭನ ಒಲಿಸಿ ನಲಿಯೊ 1 ಬರುವಾಗ್ಗೆ ಬೆನ್ನಿನ್ಹಿಂದೆ ಹೆಡತಲೆ ಮೃತ್ಯುವಿನ ಕರಕೊಂಡು ಧರೆಗೆ ಬಂದಿ ಅರಲವದ ಸುಖಕಾಗಿ ಮರೆದು ಎಲ್ಲವ ನೀನು ಮರುಳನಾದದ್ದು ಕಂಡು ನಗುತಿಪ್ಪ ಮೃತ್ಯವ ಹೊರಳಿನೋಡದೆ ದುರುಳತನದ ಸ್ಥಿರದ ಪ್ರಪಂಚ ಖರೆಯೆಂದೆನ್ವುದು ಸರಿಯಲ್ಲೆಲೊ ಇದು ನಿರುತದ್ಹರಿಪಾದ ಸ್ಮರಣಾನಂದದಿ ಮರೆಯೊ ಬಿಡದೆ 2 ಫಣೆಯ ಬಾಯೊಳಗಿರುವಂಥ ಕಪ್ಪೆಯು ಮುಂದಾಡ್ವ ನೊಣಕ್ಹವಣಿಸುತಿರುವಂತೆ ಒಣಭ್ರಾಂತಿ ಪಡದಿರು ಮನಸಿಗೆ ಬಂದಂತೆ ಕ್ಷಣತೋರಿ ಅಡಗುವ ಕನಸು ಜಗಸುಖ ಜನನ ಮ ರಣೆಂಬ ದಣಿವು ಕಳೆವಂಥ ಜನಕಜಾತೆಯ ಧಣಿಯ ಶ್ರೀರಾಮನೊನರುಹಂಘ್ರಿಯ ಘನವ ಪೊಗಳುತ ಕುಣಿ ಕುಣಿದು ಧನ್ಯವಾಗೆಲೊ 3
--------------
ರಾಮದಾಸರು
ಮುಕ್ಕೋಟ ದ್ವಾದಶಿಯ ದಿವಸ (ಮಾರ್ಗಶಿರ ಶುದ್ಧ ದ್ವಾದಶಿಯ ಉತ್ಸವ) ರಂಭೆ : ಮತಿವಂತೆ ಪೇಳೀತನ್ಯಾರೆ ದೇವ ವ್ರತತಿಯಧಿಪನಂತೆ ನೀರೆ ತೋರ್ಪ ಅತಿಶಯಾಗಮ ಬಗೆ ಬ್ಯಾರೆ ರತ್ನ ದ್ಯುತಿಯಾಭರಣವ ಶೃಂಗಾರ ಆಹಾ ಶ್ರುತಗೊಲಿಸೆನಗೆ ಆಶ್ರಿತ ರಕ್ಷಾರ್ಥಿತನ ಸಂ- ಗತಿ ಸ್ಮøತಿ ತತಿಗಳ ಮತಿಗಗೋಚರನಂತೆ 1 ಊರ್ವಶಿ : ಲಾಲಿಪುದೆಲೆಗೆ ಪೇಳುವೆನು ನೂತನವ ಲೋಲ ಲೋಚನನ ನಾಟಕ ಸತ್ಕಥನವ ಮೇಲಾಗಿ ಜಗದಿ ಶೋಭಿಪ ಶೇಷಾದ್ರಿಯಲಿ ಬಾಲಾರ್ಕಸದೃಶನೀತನು ಇರ್ಪನಲ್ಲಿ ನೀಲನಿಭಾಂಗನು ನೆನೆವರ ಪಾಪವ ಘೋಲುಘಡಿಸಲೆಂದೆನುತಲಿ ಭಾರ್ಗವ ಕೋಲಿಂದೆಸಗಿದ ಧರಣಿಗೆ ಬಂದು ಸ- ಲೀಲೆಗಳೆಸಗುವ ಜಾಲವಿದೆಲ್ಲ 2 ಸರಸಿಜಗಂಧಿ ಕೇಳ್ ದಿಟದಿ ತನ್ನ ಅರಮನೆಯಿಂದ ಸದ್ವಿಧದಿ ಈರ್ವ- ರರಸಿಯರ್ ಸಹಿತ ಮಿನಿಯದಿ ಅತಿ ಭರದಿಂದ ಸೂರ್ಯನುದಯದಿ ಆಹಾ ಉರುತರ ಹೇಮಪಲ್ಲಂಕಿಯೊಳಡರಿ ತ್ವರಿತದಿ ಪೋಗುವ ಭರವಿದೆಲ್ಲಿಗೆ ಪೇಳೆ3 ಊರ್ವಶಿ : ಮದ್ದಾನೆಗಾತ್ರೆ ಲಾಲಿಸಿ ಕೇಳು ಮಾತ ಬದ್ಧ ನೀ ಪೇಳ್ದ ಮನದ ಶಂಕಾವ್ರಾತ ತಿದ್ದಿಪೆ ಕೇಳು ಮಾರ್ಗಶಿರ ಮಾಸದೊಳು ಸೂರ್ಯ ಉದಯ ಕಾಲದೊಳು ಭದ್ರಭವನವನು ಪೊರಟು ವಿನೋದದಿ ಅದ್ರಿಧರನು ಸಜ್ಜನರೊಡಗೂಡಿ ಉ- ಪದ್ರಿತ ಪಾಪವ ಛಿದ್ರಿಪ ಸ್ನಾನಕೆ ರೌದ್ರಿತ ರಾಮಸಮುದ್ರದ ಬಳಿಗೆ 4 ರಂಭೆ : ಆರರೆ ಆಶ್ಚರ್ಯವಾಯ್ತೆನಗೆ ಅತಿ ಪರಮ ಮಹಿಮೆನೆಂದ ಮೇರೆಗೆ ಘನ- ತರ ಸ್ನಾನವೇನಿದು ಕಡೆಗೆ ವೃತ ದಿರವೋ ಉತ್ಸವವೋ ಪೇಳೆನಗೆ ಆಹಾ ತರುಣಿ ರನ್ನಳೆ ನಿನ್ನ ಚರಣಕ್ಕೆ ನಮಿಪೆ ಈ ಪರಿಗಳ ಸಾಂಗದಿಂದರುಹಬೇಕೆನಗಿನ್ನು 5 ಊರ್ವಶಿ : ಅಕುಟಿಲೆ ಬಾಲೆ ಯೌವನವಂತೆ ಕೇಳೆ ಸಕಲಾಂತರ್ಯಾತ್ಮನೀತನು ಸತ್ಯಶೀಲೆ- ಪ್ರಕಟ ವ್ರತವಿದಲ್ಲ ಅಂಜನಾದ್ರಿಯಲಿ ಭಕುತವತ್ಸಲನು ಉತ್ಸವಿಸುವನಲ್ಲಿ ವಿಕಳಹೃದಯ ನರನಿಕರಕಸಾಧ್ಯವೆಂ ದ್ಯುಕುತದಿ ಈ ಧರೆಯಲ್ಲಿ ಪ್ರತ್ಯೇಕದಿ ಅಖಿಳೋತ್ಸವ ಮಸ್ತಕಕಿದು ವೆಗ್ಗಳ ಮುಕುಟೋತ್ಸವವೆಂದೆನುತಲಿ ರಚಿಸುವ 6 ರಂಭೆ : ನಳಿನಾಕ್ಷಿ ಲಾಲಿಪುದಿನ್ನು ಸ್ನಾನ ವೊಲವಿಂದ ಗೈದ ಮೇಲಿವನು ತನ್ನ ರಮಣಿಯರ್ಸಹಿತಂದಣವನು ಏರಿ ನಿಲುನಿಲುತ್ಯಾಕೆ ಬರುವನು ಆಹಾ ಪೊಳಲೊಳಗಿಹ ಜನನಿಳಯದ ದ್ವಾರದಿ ಕಳಕಳವೇನಿದ ತಿಳುಪೆನಗೀ ಹದ7 ಊರ್ವಶಿ : ಕುಂದರದನೆ ಬಾಲೆ ಚದುರೆ ಸೈ ನೀನು ಮಿಂದು ತೋಷದಿ ಅಂದಣವನ್ನೇರಿ ತಾನು ಇಂದೀ ಪುರದೊಳಿರ್ಪ ಜನರ ದೋಷಗಳ ಕುಂದಿಸಲೆಂದವರವರ ದ್ವಾರದೊಳು ನಿಂದಿರುತಲ್ಲಿಯದಲ್ಲಿ ಆರತಿಗಳ ಚಂದದಿ ಕೊಳುತೊಲವಿಂದ ಕಾಣಿಕೆ ಜನ- ವೃಂದದಿ ಕೊಡುತಾನಂದ ಸೌಭಾಗ್ಯವ ಒಂದಕನಂತವ ಹೊಂದಿಸಿ ಕೊಡುವ 8 ರಂಭೆ : ಸರಸಿಜಾನನೆ ಮತ್ತೇನಿದನು ತನ್ನ ಅರಮನೆಯಲ್ಲಿ ಭೂದ್ವಿಜನರನು ಸರ್ವ ಪುರಜನ ಸಹಿತೊಳಗಿವನು ನಾನಾ ತರದಿ ಮೆರೆವ ಭೋಜನವನು ಆಹಾ- ಕರಿಸಿ ಆಮೇಲೆ ರಾತ್ರಿಯಲಿ ಸಾಲಿನಲಿ ವಿ- ಸ್ತರದ ಲಾಜದ ರಾಸಿಗಿರದೆ ಪೂಜಿಪುದ್ಯಾಕೆ 9 ಊರ್ವಶಿ : ಮಂಗಲಾನನೆ ಲೇಸು ನುಡಿದೆ ಕೇಳ್ ನೀನು ಗಂಗಾಜನಕ ತನ್ನ ಗೃಹದಿ ವಿಪ್ರರನು ಹಿಂಗದೆ ಕರೆಸಿ ವಿಪ್ರರನೆಲ್ಲ ಬರಿಸಿ ಸಂಗಾತದಲಿ ಆರೋಗಣೆ ಗೈದು ಮೆರೆಸಿ ಅಂಗಣದಲಿ ರಾತ್ರೆಯಲಿ ವಿನೋದದಿ ಕಂಗೊಳಿಸುವ ಉರಿದರಳ ಸಮೂಹಕೆ ರಂಗಪೂಜೆಯನುತ್ತಂಗವಿಸುವ ನಿಗ- ಮಂಗಳೊಡೆಯನು ವಿಹಂಗಮಾರೂಢ 10 ರಂಭೆ : ಅಮಮ ಮತ್ತೇನಿದ ಪೇಳು ಶ್ವೇತ- ಕುಮುದಾಪ್ತ ಠಾವಿನ ವೋಲು ಬಂದು ಆದರಿಸಲಿದರ ಮಧ್ಯದೊಳು ತನ್ನ ರಮಣಿಯರ್ ಸಹಿತ ತೋಷದೊಳು ಆಹಾ ವಿಮಲವನ್ನೇರಿನ್ನೆಲ್ಲಿಗೈದುವನೆಂಬಾ- ಗಮವ ಪೇಳೆನೆಗೆ ನೀ ನಮಿಪೆ ನಿನ್ನಂಘ್ರಿಯ 11 ಊರ್ವಶಿ : ಥೋರ ಕನಕುಂಭಕುಚಭಾರೆ ಕೇಳೆ ಶ್ರೀ ರಮಾರಮಣ ಪೂಜೆಯಗೊಂಡಾ ಮೇಲೆ ಚಾರು ಈ ಹೂವಿನ ತೇರನೇರುತಲಿ ಕೇರಿ ಕೇರಿಯೊಳಾರತಿಗೊಳ್ಳುತಲಿ ಭೋರಿಡುತಿಹ ವಾದ್ಯಧ್ವನಿ ಘನತರ ಭೇರಿ ಮೃದಂಗಾದ್ಯಖಿಳ ವಿನೋದದಿ ಸ್ವಾರಿಗೆ ತೆರಳುವ ಕ್ರೂರ ನರರ ಆ- ಘೋರ ಪಾಪ ಜರ್ಝರಿಸಲೆಂದು 12 ರಂಭೆ : ಅರವಿಂದಾಕ್ಷಿಯೆ ಮತ್ತೇನಿದನು ತನ್ನ ಅರಮನೆಯಿದಿರು ರಥವನು ತಾನು ಭರದೊಳಗಿಳಿದಂದಣವನು ಏರಿ ಮೆರೆವಾಲಯದ ಸುತ್ತುಗಳನು ಆಹಾ ತಿರುಗುವನ್ಯಾಕೆ ಭೂದ್ವಿಜರ ಘೋಷದಿ ವಾದ್ಯ- ಭರಿತ ಗಾಯನ ಭೇರಿ ಧ್ವನಿಗಳೇನಿದ ಪೇಳೆ13 ಊರ್ವಶಿ : ಕೃಷ್ಣಾಂಕ ವದನೆ ಕೇಳೆಲೆ ಪೇಳ್ವೆ ನಿನಗೇ ದುಷ್ಟಮರ್ದನ ರಥವಿಳಿವುತ್ತಲಾಗೇ ಅಷ್ಟದಿಗ್ಭಾಗದಿ ಗೃಹಸುತ್ತಿನೊಳಗೆ ಅಷ್ಟಾವಧಾನವ ರಚಿಸುತ್ತ ಕಡೆಗೆ ಶ್ರೇಷ್ಠನು ರತ್ನಾಸನದಿ ಗ್ರಹದಿ ಪರ ಮೇಷ್ಟಜನಕೆ ಸಂತೋಷಾನಂದದಿ ಸೃಷ್ಟಿಯ ಜನರ ಅನಿಷ್ಟವ ತ್ಯಜಿಸುತ ಇಷ್ಟವನೀವ ಯಥೇಷ್ಟ ದಯಾಬ್ಧ 14 ರಂಭೆ : ಅರಿತೆನಾ ಸ್ವಚ್ಛ ಚಿತ್ತದಲಿ ಇನ್ನು ಹರಿ ಏಕರೂಪನೆನ್ನುತಲಿ ಲಕ್ಷ್ಮೀ ಕರವೆನಿಸುವ ಕಾರ್ಕಳದಲಿ ಭಾಗ್ಯೋ- ದಯ ದೇವಾಲಯದ ಮಧ್ಯದಲಿ ಆಹಾ ತ್ವರಿತದಿ ನುತಿಸಿರೊ ಗುರು ನಾರಸಿಂಹ ಶ್ರೀ- ಕರ ವೆಂಕಟೇಶನ ಚರಣಕಮಲಗಳ 15
--------------
ತುಪಾಕಿ ವೆಂಕಟರಮಣಾಚಾರ್ಯ
ಮುಕ್ಕೋಟ ದ್ವಾದಶಿಯ ದಿವಸ(ಮಾರ್ಗಶಿರ ಶುದ್ಧ ದ್ವಾದಶಿಯ ಉತ್ಸವ)ವ್ರತತಿಯಧಿಪನಂತೆ ನೀರೆ ತೋರ್ಪಅತಿಶಯಾಗಮ ಬಗೆ ಬ್ಯಾರೆ ರತ್ನದ್ಯುತಿಯಾಭರಣವ ಶೃಂಗಾರ ಆಹಾಶ್ರುತಗೊಲಿಸೆನಗೆ ಆಶ್ರಿತ ರಕ್ಷಾರ್ಥಿತನ ಸಂ-ಗತಿಸ್ಮøತಿತತಿಗಳ ಮತಿಗಗೋಚರನಂತೆ1ಲೋಲಲೋಚನನ ನಾಟಕ ಸತ್ಕಥನವಮೇಲಾಗಿ ಜಗದಿ ಶೋಭಿಪ ಶೇಷಾದ್ರಿಯಲಿಬಾಲಾರ್ಕಸದೃಶನೀತನು ಇರ್ಪನಲ್ಲಿನೀಲನಿಭಾಂಗನು ನೆನೆವರ ಪಾಪವಘೋಲುಘಡಿಸಲೆಂದೆನುತಲಿಭಾರ್ಗವಕೋಲಿಂದೆಸಗಿದ ಧರಣಿಗೆ ಬಂದು ಸ-ಲೀಲೆಗಳೆಸಗುವ ಜಾಲವಿದೆಲ್ಲ 2ಸರಸಿಜಗಂಧಿ ಕೇಳ್ ದಿಟದಿ ತನ್ನಅರಮನೆಯಿಂದ ಸದ್ವಿಧದಿ ಈರ್ವ-ರರಸಿಯರ್ ಸಹಿತ ಮಿನಿಯದಿ ಅತಿಭರದಿಂದ ಸೂರ್ಯನುದಯದಿ ಆಹಾಉರುತರ ಹೇಮಪಲ್ಲಂಕಿಯೊಳಡರಿತ್ವರಿತದಿ ಪೋಗುವ ಭರವಿದೆಲ್ಲಿಗೆ ಪೇಳೆ 3ಬದ್ಧನೀ ಪೇಳ್ದ ಮನದ ಶಂಕಾವ್ರಾತತಿದ್ದಿಪೆ ಕೇಳು ಮಾರ್ಗಶಿರ ಮಾಸದೊಳುಶುದ್ಧ ದ್ವಾದಶಿಸೂರ್ಯಉದಯ ಕಾಲದೊಳುಭದ್ರಭವನವನು ಪೊರಟು ವಿನೋದದಿಅದ್ರಿಧರನು ಸಜ್ಜನರೊಡಗೂಡಿ ಉ-ಪದ್ರಿತ ಪಾಪವ ಛಿದ್ರಿಪ ಸ್ನಾನಕೆರೌದ್ರಿತ ರಾಮಸಮುದ್ರದ ಬಳಿಗೆ 4ರಂಭೆ : ಆರರೆ ಆಶ್ಚರ್ಯವಾಯ್ತೆನಗೆ ಅತಿಪರಮಮಹಿಮೆನೆಂದ ಮೇರೆಗೆ ಘನ-ತರ ಸ್ನಾನವೇನಿದು ಕಡೆಗೆ ವೃತದಿರವೋ ಉತ್ಸವವೋ ಪೇಳೆನಗೆ ಆಹಾತರುಣಿ ರನ್ನಳೆ ನಿನ್ನ ಚರಣಕ್ಕೆ ನಮಿಪೆ ಈಪರಿಗಳ ಸಾಂಗದಿಂದರುಹಬೇಕೆನಗಿನ್ನು 5ಸಕಲಾಂತರ್ಯಾತ್ಮನೀತನು ಸತ್ಯಶೀಲೆ-ಪ್ರಕಟ ವ್ರತವಿದಲ್ಲ ಅಂಜನಾದ್ರಿಯಲಿಭಕುತವತ್ಸಲನು ಉತ್ಸವಿಸುವನಲ್ಲಿವಿಕಳಹೃದಯ ನರನಿಕರಕಸಾಧ್ಯವೆಂದ್ಯುಕುತದಿ ಈ ಧರೆಯಲ್ಲಿ ಪ್ರತ್ಯೇಕದಿಅಖಿಳೋತ್ಸವ ಮಸ್ತಕಕಿದುವೆಗ್ಗಳಮುಕುಟೋತ್ಸವವೆಂದೆನುತಲಿ ರಚಿಸುವ 6ರಂಭೆ : ನಳಿನಾಕ್ಷಿ ಲಾಲಿಪುದಿನ್ನು ಸ್ನಾನವೊಲವಿಂದ ಗೈದ ಮೇಲಿವನು ತನ್ನರಮಣಿಯರ್ಸಹಿತಂದಣವನು ಏರಿನಿಲುನಿಲುತ್ಯಾಕೆ ಬರುವನು ಆಹಾಪೊಳಲೊಳಗಿಹ ಜನನಿಳಯದ ದ್ವಾರದಿಕಳಕಳವೇನಿದ ತಿಳುಪೆನಗೀ ಹದ 7ಮಿಂದು ತೋಷದಿ ಅಂದಣವನ್ನೇರಿ ತಾನುಇಂದೀ ಪುರದೊಳಿರ್ಪ ಜನರ ದೋಷಗಳಕುಂದಿಸಲೆಂದವರವರ ದ್ವಾರದೊಳುನಿಂದಿರುತಲ್ಲಿಯದಲ್ಲಿ ಆರತಿಗಳಚಂದದಿ ಕೊಳುತೊಲವಿಂದಕಾಣಿಕೆಜನ-ವೃಂದದಿ ಕೊಡುತಾನಂದ ಸೌಭಾಗ್ಯವಒಂದಕನಂತವ ಹೊಂದಿಸಿ ಕೊಡುವ 8ರಂಭೆ : ಸರಸಿಜಾನನೆ ಮತ್ತೇನಿದನು ತನ್ನಅರಮನೆಯಲ್ಲಿ ಭೂದ್ವಿಜನರನು ಸರ್ವಪುರಜನ ಸಹಿತೊಳಗಿವನು ನಾನಾತರದಿ ಮೆರೆವ ಭೋಜನವನು ಆಹಾ-ಕರಿಸಿ ಆಮೇಲೆ ರಾತ್ರಿಯಲಿ ಸಾಲಿನಲಿ ವಿ-ಸ್ತರದ ಲಾಜದ ರಾಸಿಗಿರದೆ ಪೂಜಿಪುದ್ಯಾಕೆ 9ಗಂಗಾಜನಕತನ್ನ ಗೃಹದಿ ವಿಪ್ರರನುಹಿಂಗದೆ ಕರೆಸಿ ವಿಪ್ರರನೆಲ್ಲ ಬರಿಸಿಸಂಗಾತದಲಿ ಆರೋಗಣೆ ಗೈದು ಮೆರೆಸಿಅಂಗಣದಲಿ ರಾತ್ರೆಯಲಿ ವಿನೋದದಿಕಂಗೊಳಿಸುವ ಉರಿದರಳ ಸಮೂಹಕೆರಂಗಪೂಜೆಯನುತ್ತಂಗವಿಸುವ ನಿಗ-ಮಂಗಳೊಡೆಯನು ವಿಹಂಗಮಾರೂಢ 10ರಂಭೆ : ಅಮಮ ಮತ್ತೇನಿದ ಪೇಳು ಶ್ವೇತ-ಕುಮುದಾಪ್ತ ಠಾವಿನ ವೋಲು ಬಂದುಆದರಿಸಲಿದರ ಮಧ್ಯದೊಳು ತನ್ನರಮಣಿಯರ್ ಸಹಿತ ತೋಷದೊಳು ಆಹಾವಿಮಲವನ್ನೇರಿನ್ನೆಲ್ಲಿಗೈದುವನೆಂಬಾ-ಗಮವ ಪೇಳೆನೆಗೆ ನೀ ನಮಿಪೆ ನಿನ್ನಂಘ್ರಿಯ 11ಶ್ರೀ ರಮಾರಮಣ ಪೂಜೆಯಗೊಂಡಾ ಮೇಲೆಚಾರುಈ ಹೂವಿನ ತೇರನೇರುತಲಿಕೇರಿ ಕೇರಿಯೊಳಾರತಿಗೊಳ್ಳುತಲಿಭೋರಿಡುತಿಹ ವಾದ್ಯಧ್ವನಿ ಘನತರಭೇರಿಮೃದಂಗಾದ್ಯಖಿಳ ವಿನೋದದಿಸ್ವಾರಿಗೆ ತೆರಳುವ ಕ್ರೂರ ನರರ ಆ-ಘೋರಪಾಪ ಜರ್ಝರಿಸಲೆಂದು12ರಂಭೆ : ಅರವಿಂದಾಕ್ಷಿಯೆ ಮತ್ತೇನಿದನು ತನ್ನಅರಮನೆಯಿದಿರು ರಥವನು ತಾನುಭರದೊಳಗಿಳಿದಂದಣವನು ಏರಿಮೆರೆವಾಲಯದ ಸುತ್ತುಗಳನು ಆಹಾತಿರುಗುವನ್ಯಾಕೆ ಭೂದ್ವಿಜರ ಘೋಷದಿ ವಾದ್ಯ-ಭರಿತ ಗಾಯನಭೇರಿಧ್ವನಿಗಳೇನಿದ ಪೇಳೆ13ದುಷ್ಟಮರ್ದನ ರಥವಿಳಿವುತ್ತಲಾಗೇಅಷ್ಟದಿಗ್ಭಾಗದಿ ಗೃಹಸುತ್ತಿನೊಳಗೆಅಷ್ಟಾವಧಾನವ ರಚಿಸುತ್ತ ಕಡೆಗೆಶ್ರೇಷ್ಠನು ರತ್ನಾಸನದಿ ಗ್ರಹದಿಪರಮೇಷ್ಟಜನಕೆ ಸಂತೋಷಾನಂದದಿಸೃಷ್ಟಿಯ ಜನರ ಅನಿಷ್ಟವ ತ್ಯಜಿಸುತಇಷ್ಟವನೀವ ಯಥೇಷ್ಟ ದಯಾಬ್ಧ 14ರಂಭೆ : ಅರಿತೆನಾ ಸ್ವಚ್ಛ ಚಿತ್ತದಲಿ ಇನ್ನುಹರಿಏಕರೂಪನೆನ್ನುತಲಿ ಲಕ್ಷ್ಮೀಕರವೆನಿಸುವ ಕಾರ್ಕಳದಲಿ ಭಾಗ್ಯೋ-ದಯ ದೇವಾಲಯದ ಮಧ್ಯದಲಿ ಆಹಾತ್ವರಿತದಿ ನುತಿಸಿರೊಗುರುನಾರಸಿಂಹ ಶ್ರೀ-ಕರವೆಂಕಟೇಶನ ಚರಣಕಮಲಗಳ15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ