ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಥರವಲ್ಲ ಸ್ವಾಮಿ ಥರವಲ್ಲ ಪ. ಥರವಲ್ಲ ಸ್ವಾಮಿ ಈ ತೆರನ ಮಾಡುವುದು ಕರುಣ ಸಾಗರನೆಂಬ ಬಿರುದಿನ್ನು ನಿಲದು ಅ.ಪ. ಊರೊಳಗಿಹ ಜನರೆಲ್ಲರು ಕೂಡಿ ವಾರಿಜಾಕ್ಷನ ದಾಸನೆಂದು ಕೊಂಡಾಡಿ ಸಾರಿಸಾರಿಗೆ ನಿನ್ನ ಕೀರ್ತನೆ ಮಾಡಿ ಪೋರ ಪೇಚಾಡುವನೆಂಬರು ಕೂಡಿ1 ಪಾರಾಯಣದ ಪುಸ್ತಕವ ಕಟ್ಟಿಟ್ಟು ವಾರಿಜನಾಭ ನಿನ್ನಯ ಪೂಜೆ ಬಿಟ್ಟು ಕಾರಿ ಕೆಮ್ಮುತ ಬಿದ್ದಿರುವ ದೊಡ್ಡ ಗುಟ್ಟು ಯಾರ ಮೇಲಿನ್ನು ತೋರಿಸಲೆನ್ನ ಸಿಟ್ಟು 2 ಮೋಹ ಪಾಶದಿ ಮುಸುಕಿ ಕಟ್ಟಿದರೆ ಬಹ ಪಾತಕಗಳಿಗೆಲ್ಲ ನಾನಿದಿರೆ ನೀ ಹದಿನಾಲ್ಕು ಲೋಕೇಶನೆಂದೊದರೆ ದೇಹವ ಬಳಲಿಸಿದರೆ ನಾನೇನ್ಹೆದರೆ 3 ನಂಬಿರೊ ಭಕ್ತ ಕುಟುಂಬಿಯನೆಂದು ಅಂಬುಜಸಂಭವನ್ಯಾಕೆಂದನಂದು ಹಂಬಲಿಸಿದರು ನೀ ದಯದೋರದಿಂದು ಬೊಂಬೆಯೆ ಸರಿಯೆಂದು ಜನರೆಂಬೊ ಕುಂದು 4 ಸರ್ವದೋಷಹರ ಸಾಗರಜೇಶ ನಿರ್ವೇದದಿಂದ ನಾ ನುಡಿದೆನಾಕ್ರೋಶ ಸರ್ವಕಾಲಕು ಸಲಹುವ ನೀನೆ ಶ್ರೀಶ ಶರ್ವಾದಿ ವಂದ್ಯ ಶೇಷಾಚಲವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
ಪುಂಡರೀಕಾಂಬಕ ಪರಮದಯಾಳೊ ಬ್ರ- ಹ್ಮಾಂಡರರಸನಾಥ ಬಿನ್ನಹ ಕೇಳೊ ಪ. ನಂಬಿದವನು ಬಲ್ಲೆ ನಿನ್ನ ಪಾದವನು ಇಂಬಾಗಿ ಸಲಹುವಿ ಎನ್ನ ಮಾನವನು ಕುಂಬಾರ ಜನರೆಂಬ ಕುಹಕದ ನುಡಿಯ ಶಂಭುವಂದಿತ ತಾಳಲಾರೆ ಎನ್ನೊಡೆಯ 1 ಅಜ ಭವೇಂದ್ರಾದಿ ಲೋಕೇಶರು ನಿನ್ನ ಭಜಿಸಿ ಪೊಂದಿಹರತ್ಯಧಿಕ ಭಾಗ್ಯವನ್ನು ಕುಜನರು ಕುತ್ಸಿತಾಹಂಕಾರವನ್ನು ತ್ಯಜಿಸುವಂದದಿ ಎನ್ನೊಳಾಗು ಪ್ರಸನ್ನ 2 ಗರುಡಗಮನ ಗಜರಾಜನ ಪೊರೆದಂತೆ ತ್ವರೆಯಿಂದೆನ್ನನು ಕಾಯ್ದರಹುದು ನಿಶ್ಚಿಂತೆ ಉರಗರಾಜೇಂದ್ರ ಶಿಖರ ಸನ್ನಿವಾಸ ಸಿರಿಯರಮಣ ಶುಭಕರ ಶ್ರೀನಿವಾಸ 3
--------------
ತುಪಾಕಿ ವೆಂಕಟರಮಣಾಚಾರ್ಯ
ಪುಣ್ಯ ದೊರಕುವುದು ಅನು ಗಣ್ಯವಾಗಿದ್ದ ಸತಿಯಿದ್ದ ಜನರಿಗೆ ಪ ಬಡತನವಿದ್ದರು ನೆರೆಹೊರೆ ಮನೆಯಲ್ಲಿ ನುಡಿ ಬಿಚ್ಚಿ ಪೇಳದೆ ಸೌಮ್ಯಳಾಗಿ ಬಿಡದೆ ಮಾಡುವ ಗೃಹಕೃತ್ಯಂಗಳು ಜಗ ಅನುದಿನ 1 ವಿಪರೀತ ಕಾಲಗಳಟ್ಟಿದ ಕಾಲಕ್ಕು ಸ್ವಪನಾದಿಯಪ ಕಳವಳಿಸದಲೇ ಪತಿ ಸೇವೆ ಅಫಲದಲ್ಲಿ ಮಾಡಿ ಒಲಿದೊಲಿದಾಡುವ2 ಲಾವಣ್ಯ ಪುರುಷರ ಕಂಡರು ಮನದಲ್ಲಿ ಭಾವಿಸಬೇಕು ಸಹೋದರರು ಎಂದು ವಿಭೂತಿ ರೂಪವ ನಿತ್ಯ 3 ಬಂದು ತಂದರೆ ಸಾವಿರ ಮಾಡಿ ಚಿಂತಿಸಿ ಇಂದಿರೇಶನೆ ಪತಿರೂಪವೆಂದು ಅಂದದದಲಿದ್ದ ವಿಭವಾನುಸಾರ ಆ ನಂದವಾಗಿ ಸಂಸಾರದೊಳಗಿರೆ 4 ಪತಿಯ ಜನಕ ಮಾತೃ ಮಿಗಿಲಾದ ಜನರಿಗೆ ಹಿತವಂತಳಾಗಿ ನುಡಿಸಿಕೊಳುತಾ ಗಾತ್ರ ಸರ್ವದಾ ಪ್ರತಿದಿನ ಸುವಿನುವಳಾ ನಾರಿ ಅಧಿಕಾರಿ 5 ಚಕೋರ ಚಂದ್ರಮನಲ್ಲಿ ಮನಸು ಇಟ್ಟು ಸುಖಬಡುವಂತೆ ನಾನಾ ಪ್ರಕಾರ ಕಕುಲಾತಿಯಿಂದ ಕಾಮುಕಳಾಗದೆ ಮಹಾ ಭಕುತಿಯಿಂದಲಿ ಗುರು ಹಿರಿಯರ ಸಮ್ಮತ 6 ಸಂತಜನರೆಂಬ ಕ್ಷೀರಾಂಬುಧಿ ಮಧ್ಯ ಸಂತತ ಮೀನಿನಂದದಿ ಬೀಳುತಾ ಪತಿ ಧರ್ಮವಹಿಸಿ ಶ್ರೀ ಕಾಂತನ ಗುಣಕಥೆ ಕೇಳಿ ಪೊಗಳಲಾಗಿ 7 ನಾಮ ಮೊದಲು ಮಾಡಿ ಪ್ರಕೃತಿಯ ಪರಿಯಂತ ಪ್ರೇಮದಿಂದಲಿ ಗುಣಗಳ ಗುಣಿಸೀ ಕಾಮಾದಿ ಚತುರ್ವಿಧÀ ಪುರುಷಾರ್ಥ ತನ್ನಯ ಸ್ವಾಮಿಯಲಿಂದಲಿ ಸಂಪಾದಿಸುತಿಪ್ಪಾ 8 ಆವಾವ ಪ್ರಯೋಜನ ಮಾಡಲು ಸರ್ವದ ದೇವದೇವೇಶನಾಧೀನವೆಂದೂ ಭಾವದಲಿ ತಿಳಿದನ್ಯ ಕರ್ಮವ ಬಿಟ್ಟು ಪಾವನ ವಿಜಯವಿಠ್ಠಲನ ಭಕುತಿಯಿಂದಾ 9
--------------
ವಿಜಯದಾಸ
ಮುತ್ತು ಕೊಳ್ಳಿರೋ ಉತ್ತುಮರೆಲ್ಲ ಧ್ರುವ ಜ್ಞಾನ ಸಮುದ್ರಲಿನ್ನು ಧ್ಯಾನವೆಂಬ ಸಿಂಪಿನೊಳು ಘನಗುರುಕರುಣದ ಮಳಿಯಾದ ಮುತ್ತು ಕೊಳ್ಳಿರೋ 1 ಪಿಂಡ ಬ್ರಹ್ಮಾಂಡವೆಂಬ ಗಡ್ಡೆಯೊಳಿನ್ನು ಪುಟ್ಟಿ ಭಕ್ತಿಭಾವ ಹಡಗದೊಳು ಬಂದ ಮುತ್ತು ಕೊಳ್ಳಿರೋ 2 ಸಾಧುಸಜ್ಜನರೆಂಬ ಮುತ್ತಿನ ಜೋಹರೇರ ಕೈಯ ನಿಜಹಸ್ತಸ್ಪರ್ಶವಾದು ನೀವು ಮುತ್ತು ಕೊಳ್ಳಿರೋ 3 ಅತ್ತಲಿತ್ತಲಾಗದೆ ಈ ಮುತ್ತು ಜತನಮಾಡಿ ನಿಮ್ಮ ಚಿತ್ತ ಮನದೊಳು ಇಟ್ಟುಕೊಳ್ಳಿರೋ 4 ತನುಮನಧನವನರ್ಪಿಸಿಕೊಂಡಿಹ ಮುತ್ತು ಮಹಿಪತಿ ಇಹರಪವಸ್ತು ಮುತ್ತು ಕೊಳ್ಳಿರೋ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀರಮಣನೆ ಕಾಯೊ ದಯಮಾಡು ರಂಗಶ್ರೀರಮಣನೆ ಕಾಯೊ ಏ ಕರುಣದಿ ಪ. ನೀರಜಭವಜನಕ ತಾರಿದೆ ಭವದಿಂದ ಏ ಮುರಹರೆಸೇರಿದೆ ನಿನ್ನ ಪದವ ಶ್ರೀರಮಣನೆ ಕಾಯೊ ಅ.ಪ. ಕರುಳ ಸಂಬಂಧವೆಂಬೊ ಎನ್ನ ಕೊರಳಿಗೆಉರುಳುಗಳನೆ ಸಿಲುಕಿ [ಸಿ]ಬರಿದೆ ಮದಗಳೆಂಬ ಈಕರಿಗಳ ಧುರತಗ್ಗದು ಹರಿಯೆ 1 ಅರಿಷಡ್ವರ್ಗವೆಂಬ ಈ ಮಹಾಉರಗಭಯಕೆ ಸಿಲುಕಿಬರಿದೆ ಮದಗಳೆಂಬ ಈ ಕರಿಗಳ ಧುರತಗ್ಗದು ಹರಿಯೆ 2 ಬಲುದುರ್ವಿಷಯಂಗಳ ಈ ಬಲೆಗಳಸಾಲಿಗೆ ಒಳಗಾದೆಕಲಾವತಿ ಜನರೆಂಬ ಈಖಳರ ಒಳಬಿದ್ದೆನೊ ಹರಿಯೆ3 ಜರೆನರೆಗಳು ಬಂದು ಇರುವಾಗಪರಸತಿಯರ ಕಾಟನರನಾಯಿಗಳಂತೆ ಈ-ಪರಿ ನೆರೆಹೊರೆಗಳ ಕೂಟ 4 ದಯವಿಲ್ಲದ ಸತಿಯು ಈ ದುರುಳರುನಯಹೀನರು ಸುತರುಭಯದಿಂದಲಿ ನೊಂದೆದಯಾಂಬುಧೇ ಹಯವದನ ನೀ ಬಂಧು 5
--------------
ವಾದಿರಾಜ
ಹರಿಪಾದ ತೀರ್ಥವನು ಕರದಿ ಪಿಡಿದವರೆಲ್ಲ ತಿರುನಾಮದವರೆನಲು ನಂಬಬಹುದೇ ಪ ಪರವಾಸುದೇವನನು ಮರೆತು ಸತಿಸುತರ ವರಾಭರಣವೇ ಹಿರಿದೆಂಬ ನರರಿಲ್ಲವೇ ಅ.ಪ ಹರಿನಿವೇದನಕಾಗಿ ಕರದಿ ಫಲಪುಷ್ಪಗಳ ತರುವವರು ದಕ್ಷಿಣೆಯ ಇರಿಸಿಹರೋ ಎಂದು ಪರಿಪರಿಯ ದೃಷ್ಟಿಯಲಿ ಪರಿಕಿಸುತ ಅಲ್ಲವೆಂ ದರಿತಾಗ ಕೋಪ ನಿಷ್ಠುರ ಗೈಯುವರು 1 ಈಶಾಯನಮಃ ಓಂ ಶ್ರೀಶಾಯ ನಮಃ ಪ ರೇಶಾಯ ನಮಃ ಎಂಬುದಕೆ ಬದಲು ಆಶೋತ್ತರವನಾಂತು ಕ್ಲೇಶಪೂರಿತರಾಗಿ ನಾಶವಾಗಲಿ ಕುಡದಜನರೆಂಬರಕಟಾ 2 ಮಾನವೋತ್ತಮ ಮಾತ್ರ ತಿರುನಾಮಧಾರಿ ಜ್ಞಾನಿ ಇಂಥವನಿಂದ ತೀರ್ಥವನು ಪಡೆದವರು ಶ್ರೀನಾಥ ಮಾಂಗಿರಿಯ ಭಕ್ತರೆನಿಸುವರು3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಆಶಾವಿಡಿದು ಬಂದಿಹೆ ದೇಶಿಗ ನಾನು ಅಭಿಲಾಷೆ ಪೂರಿಸೆಮ್ಮಯ್ಯ ಶೇಷಗಿರಿಯ ತಿಮ್ಮ್ಮಯ್ಯ ಪ.ಘೊರ ಭವಾರಣ್ಯದಲ್ಲಿ ದಾರಾಪತ್ಯಬಂಧು ಜನರೆಂಬಕ್ರೂರಮೃಗಾಸ್ಯಕೆ ಸಿಲುಕಿ ದಾರಿವರಿಯೆನಾರಸಿಂಹ ನಿನ್ನವರು ತೋರಿದರು ಶ್ರೀಮಂಗಳಮೂರುತಿಯ ಕಂಡು ಸುಖಸಾರಾಮೃತವುಣ್ಣಲಾಗಿ 1ಒಡಲಿಗೋಸುಗವೃತ್ತಿಹಿಡಿದು ತಡವರಿಸುತಕಡೆಗಾಣದೊರಲಿ ಅಂಜ್ಯೋಡುತಿರಲುಒಡೆಯ ನಿನ್ನಯ ಸಿರಿಸಡಗರ ನಾಮಕೇಳಿಹುಡುಕುತ ನಲಿವಿಂದ ಬಡತನ ಹಿಂಗಲೆಂದು 2ಈಗಿದೆÉೀ ವೈಕುಂಠವೆಂದುಭೋಗಿವಾಸುದೇವನೆಂದುಬಾಗಿಶ್ರುತಿಸ್ಮøತಿಗಳು ಕೂಗುತಲಿವೆಯೋಗಿಪ್ರಸನ್ವೆಂಕಟ ಭಾಗವತರ ಪ್ರಿಯನೆಂದುಹೀಗೆ ಘನಗೋಳಿಡುತ ನಾ ನೀಗುವೆ ಚಿಂತೆಯನೆಂದು 3
--------------
ಪ್ರಸನ್ನವೆಂಕಟದಾಸರು