ಎಂದಿಗೊ ಕಾಣೆ ಸುಖವು | ಜೀವಕೆ ಪ
ಬಂಧಕದೊಳು ಸಿಕ್ಕಿ ಬಾಧೆ ಪಡುತಿಹುದು ಅ.ಪ
ಜನರೂಢಿ ನೋಡಿದರೆ ಕೊನೆಗಾಣುವುದೇ ಇಲ್ಲ 1
ಗರ್ಭಯಾತನೆ ಎಂಬೋದÀರ್ಭುದವಾಗಿಹದು
ನಿರ್ಭರ ದುಃಖಗಳಾವಿರ್ಭೂತವಾಗುವುದೊ 2
ಬಾಳುವ ಕೌಮಾರದಿ ಬಹುಚಿಂತೆಯನುದಿನ 3
ಬದ್ಧ ಸಂಸಾರಕೆ ಮದ್ದು ಮಾಡುವರಾರು 4
ಯಾವಾವಸ್ಥೆಗಳಲ್ಲಿ ಜೀವಗೆ ಸುಖವಿಲ್ಲ
ಕಾವನು ಗುರುರಾಮವಿಠಲನೊಬ್ಬನೆ ಬಲ್ಲ 5